ಅಮೆರಿಕ ಅಧ್ಯಕ್ಷೀಯ ಚುನಾವಣೆ: ಜೋ ಬಿಡೆನ್ ಪಾಲಾದ ಶೇ.69 ರಷ್ಟು ಮುಸ್ಲಿಮರ ಮತ; ಸಮೀಕ್ಷೆ ವರದಿ

ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಮುಸ್ಲಿಂ ಸಮುದಾಯವು ವಹಿಸುವ ಪಾತ್ರವನ್ನು ನಿರಾಕರಿಸುವಂತಿಲ್ಲ ಎಂದು CAIR ಸರ್ಕಾರಿ ವ್ಯವಹಾರಗಳ ನಿರ್ದೇಶಕ ರಾಬರ್ಟ್ ಎಸ್ ಮೆಕ್‌ಕಾವ್ ಅಭಿಪ್ರಾಯಪಟ್ಟಿದ್ದಾರೆ.

ಜೋ ಬಿಡೆನ್.

ಜೋ ಬಿಡೆನ್.

 • Share this:
  ವಾಷಿಂಗ್ಟನ್​ (ನವೆಂಬರ್​ 11); ಕೊರೋನಾ ಬಿಕ್ಕಟ್ಟಿನ ನಡುವೆಯೂ ಬಹು ನಿರೀಕ್ಷಿತ ಅಮೇರಿಕಾ ಅಧ್ಯಕ್ಷೀಯ ಚುನಾವಣೆ ನಡೆದಿದ್ದು, ಇಂದು ಮತ ಎಣಿಕೆ ಪ್ರಾರಂಭವಾಗಿದೆ. ಮತ ಎಣಿಕೆಯಲ್ಲಿ ಜೋ ಬಿಡೆನ್​ ಮುಂಚೂಣಿಯಲ್ಲಿದ್ದಾರೆ ಎನ್ನುತ್ತಿವೆ ಅಂತಾರಾಷ್ಟ್ರೀಯ ವರದಿಗಳು. ಈ ನಡುವೆ ಅಮೆರಿಕ ಚುನಾವಣೆಯಲ್ಲಿ ಸುಮಾರು ಶೇ.69 ಪ್ರತಿಶತದಷ್ಟು ಮುಸ್ಲಿಂ ಮತದಾರರು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಪರ ಮತ ಚಲಾಯಿಸಿದ್ದು, ಶೇ.17 ರಷ್ಟು ಜನ ಮಾತ್ರ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿದ್ದಾರೆ ಎಂದು ಮುಸ್ಲಿಂ ನಾಗರಿಕ ಸ್ವಾತಂತ್ರ್ಯ ಮತ್ತು ವಕಾಲತ್ತು ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

  ದೇಶದ ಅತಿದೊಡ್ಡ ಮುಸ್ಲಿಂ ನಾಗರಿಕ ಹಕ್ಕುಗಳು ಮತ್ತು ವಕಾಲತ್ತು ಸಂಘಟನೆ, ಕೌನ್ಸಿಲ್ ಆನ್ ಅಮೇರಿಕನ್-ಇಸ್ಲಾಮಿಕ್ ರಿಲೇಶನ್ಸ್ (CAIR) ತನ್ನ 2020 ಮುಸ್ಲಿಂ ಮತದಾರರ ಅಧ್ಯಕ್ಷೀಯ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳನ್ನು ಮಂಗಳವಾರ ಬಿಡುಗಡೆ ಮಾಡಿತು. ದಾಖಲೆಯ ಶೇಕಡ 84 ರಷ್ಟು ಮುಸ್ಲಿಮರು ಮತಚಲಾವಣೆ ಮಾಡಿದ್ದಾರೆ ಎಂದು CAIR ನ ಸಮೀಕ್ಷೆ ತಿಳಿಸಿದೆ.

  CAIR ರಾಷ್ಟ್ರೀಯ ಕಾರ್ಯನಿರ್ವಾಹಕ ನಿರ್ದೇಶಕ ನಿಹಾದ್ ಅವದ್, “ರಾಷ್ಟ್ರಪತಿ ಚುನಾವಣೆ ಸೇರಿದಂತೆ ಈ ದೇಶದಾದ್ಯಂತ ಹಲವಾರು ಫಲಿತಾಂಶಗಳ ಮೇಲೆ ಪರಿಣಾಮ ಬೀರುವ ಮುಸ್ಲಿಂ ಸಮುದಾಯದ ಮಹತ್ವದ ಸಾಮರ್ಥ್ಯವನ್ನು ರಾಷ್ಟ್ರೀಯವಾಗಿ ಗುರುತಿಸಲಾಗಿದೆ” ಎಂದು ಹೇಳಿದರು.

  ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಮುಸ್ಲಿಂ ಸಮುದಾಯವು ವಹಿಸುವ ಪಾತ್ರವನ್ನು ನಿರಾಕರಿಸುವಂತಿಲ್ಲ ಎಂದು CAIR ಸರ್ಕಾರಿ ವ್ಯವಹಾರಗಳ ನಿರ್ದೇಶಕ ರಾಬರ್ಟ್ ಎಸ್ ಮೆಕ್‌ಕಾವ್ ಅಭಿಪ್ರಾಯಪಟ್ಟಿದ್ದಾರೆ.

  “ಎಲ್ಲಾ ಅಮೆರಿಕನ್ನರ ನಾಗರಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ಎತ್ತಿಹಿಡಿಯಲಾಗಿದೆ ಮತ್ತು ರಕ್ಷಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ಚುನಾಯಿತ ರಾಜಕಾರಣಿಗಳನ್ನು ಜವಾಬ್ದಾರಿಯುತವಾಗಿ ಆಯ್ಕೆ ಮಾಡುವ ಸಮಯ ಇದು” ಎಂದು ಮೆಕ್‌ಕಾವ್ ಹೇಳಿದರು.

  ಇದನ್ನೂ ಓದಿ : ರಿಪಬ್ಲಿಕ್​ ಟಿವಿಯ ಅರ್ನಾಬ್​ ಗೋಸ್ವಾಮಿ ಬಂಧನ; ಸಾಮಾಜಿಕ ಜಾಲತಾಣಗಳಲ್ಲಿ ಗರಿಗೆದರಿದ ಪರ-ವಿರೋಧ ಚರ್ಚೆ

  2016 ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಟ್ರಂಪ್‌ಗೆ ಆಗ ಶೇಕಡ 13 ರಷ್ಟು ಮುಸ್ಲಿಮರ ಬೆಂಬಲ ಇತ್ತು. 2020ರಲ್ಲಿ ಇದು ಶೇಕಡ 4 ರಷ್ಟು ಹೆಚ್ಚಿದ್ದು, ಈಗ 17 ರಷ್ಟಾಗಿದೆ.

  ಪ್ಯೂ ರಿಸರ್ಚ್ ಸೆಂಟರ್ ಪ್ರಕಾರ, 2017 ರಲ್ಲಿ ಅಮೇರಿಕಾದಲ್ಲಿ ಸುಮಾರು 3.45 ಮಿಲಿಯನ್ ಮುಸ್ಲಿಮರು ವಾಸಿಸುತ್ತಿದ್ದು, ಅಲ್ಲಿನ ಒಟ್ಟು ಜನಸಂಖ್ಯೆಯ ಶೇ.1.1 ರಷ್ಟಿದ್ದಾರೆ.
  Published by:MAshok Kumar
  First published: