US Election 2020: ಮತದಾನ ಆರಂಭವಾಗುತ್ತಿದ್ದಂತೆ ಗೆಲುವಿನ ವಿಶ್ವಾಸವ್ಯಕ್ತಪಡಿಸಿದ ಟ್ರಂಪ್-ಬಿಡೆನ್​

US Presidential Election 2020; ಭಾರತೀಯ ಕಾಲಮಾನ ಪ್ರಕಾರ ಸಂಜೆ 4.30ರಿಂದ ಮತದಾನ ಆರಂಭವಾಗಿದೆ. ಈಗಾಗಲೇ 100 ಮಿಲಿಯನ್​ ಮತಚಲಾವಣೆಯಾಗಿದೆ.

US Presidential Election 2020; ಭಾರತೀಯ ಕಾಲಮಾನ ಪ್ರಕಾರ ಸಂಜೆ 4.30ರಿಂದ ಮತದಾನ ಆರಂಭವಾಗಿದೆ. ಈಗಾಗಲೇ 100 ಮಿಲಿಯನ್​ ಮತಚಲಾವಣೆಯಾಗಿದೆ.

US Presidential Election 2020; ಭಾರತೀಯ ಕಾಲಮಾನ ಪ್ರಕಾರ ಸಂಜೆ 4.30ರಿಂದ ಮತದಾನ ಆರಂಭವಾಗಿದೆ. ಈಗಾಗಲೇ 100 ಮಿಲಿಯನ್​ ಮತಚಲಾವಣೆಯಾಗಿದೆ.

  • Share this:
    ಜಗತ್ತಿನ ದೊಡ್ಡಣ್ಣ ಎನಿಸಿಕೊಂಡ ಅಮೆರಿಕದಲ್ಲಿ ಈಗ ಅಧ್ಯಕ್ಷೀಯ ಚುನಾವಣೆಯ ಮತದಾನ ಪ್ರಕ್ರಿಯೆ ಶುರುವಾಗಿದೆ. ಕೊರೋನಾ ಸೋಂಕಿನ ಕರಿನೆರಳಿನಲ್ಲಿಯೂ ನಡೆಯುತ್ತಿರುವ ಚುನಾವಣೆಯಲ್ಲಿ ಜನರು ತಮ್ಮ ಅಧ್ಯಕ್ಷರ ಆಯ್ಕೆಗೆ ಮುಂದಾಗಿದ್ದಾರೆ. ರಿಪಬ್ಲಿಕನ್​ ಪಕ್ಷದ ಡೊನಾಲ್ಡ್​ ಟ್ರಂಪ್​ ಆಯ್ಕೆ ಮಾಡಬೇಕಾ ಅಥವಾ ಡೆಮೊಕ್ರಾಟ್​ನ ಜೋ ಬಿಡನ್​ ಅವರನ್ನು ಶ್ವೇತಭವನಕ್ಕೆ ಕಳುಹಿಸುವುದ ಎಂಬ ಕುರಿತು ಅಮೆರಿಕನ್ನರು ನಿರ್ಧರಿಸಲಿದ್ದಾರೆ. ನ್ಯೂಯಾರ್ಕ್​, ನ್ಯೂ ಜೆರ್ಸಿ ಮತ್ತು ವರ್ಜೀನಿಯಾದಲ್ಲಿ ಮತದಾನ ಆರಂಭವಾಗಿದೆ. ಭಾರತೀಯ ಕಾಲಮಾನ ಪ್ರಕಾರ ಸಂಜೆ 4.30ರಿಂದ ಮತದಾನ ಆರಂಭವಾಗಿದೆ. ಈಗಾಗಲೇ 100 ಮಿಲಿಯನ್​ ಮತಚಲಾವಣೆಯಾಗಿದೆ. ಈ ಮತದಾನದಲ್ಲಿ ಕೆನಾಡದ ಸಮೀಪವಿರುವ ಕಾಡಿನ ಮಧ್ಯದ ಪುಟ್ಟ ಹಳ್ಳಿ ಡಿಕ್ಸ್​ವೆಲ್ಲೆ ನಾಚ್​ ಎಂಬ ಕುಗ್ರಾಮದ ಜನರು ಇದೇ ಮೊದಲ ಬಾರಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಕೇವಲ 12 ಮತಗಳು ಈ ಗ್ರಾಮದಲ್ಲಿದೆ.

    ಈ ಬಾರಿ ಸುಮಾರು 239 ಮಿಲಿಯನ್​ ಜನರು ಮತಚಲಾಯಿಸಲಿದ್ದಾರೆ. ಮತದಾನದ ಮುಕ್ತಾಗೊಂಡ ಕೆಲಗಂಟೆಗಳಲ್ಲಿಯೇ ಯಾರು ಅಧ್ಯಕ್ಷರಾಗಲಿದ್ದಾರೆ ಎಂಬ ಫಲಿತಾಂಶ ಕೂಡ ಹೊರಬೀಳಲಿದೆ.

    ಬರಾಕ್​ ಒಬಾಮ ಅವರ ಉಪಾಧ್ಯಕ್ಷರಾಗಿ ಎಂಟು ವರ್ಷಗಳ ಸೇವೆ ಸಲ್ಲಿಸಿದ್ದ 77 ವರ್ಷದ ಜೋ ಬಿಡೆನ್​ ಪರ ಮತದಾರರು ಒಲವು ವ್ಯಕ್ತಪಡಿಸಿದರೂ ಟ್ರಂಪ್​ ಮತ್ತೊಮ್ಮೆ ಆಯ್ಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಫ್ಲೋರಿರಾ ಮತ್ತಿ ಅರಿಜೋನಾ ಸೇರಿದಂತೆ ಪ್ರಮುಖ ರಾಜ್ಯದಲ್ಲಿ ಗೆಲುವಿನ ವಿಶ್ವಾಸವನ್ನು ಟ್ರಂಪ್​ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಎಲ್ಲ ಪ್ರಮುಖ ರಾಜ್ಯಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದಿದ್ದಾರೆ.

    ಜೋ ಬಿಡೆನ್​ ಪರ ವಿಶ್ವಾಸ ವ್ಯಕ್ತಪಡಿಸಿರುವ ಡೆಮಾಕ್ರಟಿಕ್​ ನಾಮ ನಿರ್ದೇಶನ ಉಪಾಧ್ಯಕ್ಷ ಕಮಲಾ ಹ್ಯಾರಿಸ್​, ವಿಭಿನ್ನ ಹಿನ್ನಲೆಯಿಂದ ಬಂದ ನಮ್ಮಿಬ್ಬರ ಮೌಲ್ಯಗಳು ಒಂದೇ ಆಗಿದೆ. ಕಠಿಣ ಪರಿಶ್ರಮ, ಪ್ರಮಾಣಿಕತೆ, ಸಭ್ಯತೆ ನಮ್ಮ ಮೌಲ್ಯಗಳು ಎಂದಿದ್ದಾರೆ.
    Published by:Seema R
    First published: