• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Jill Biden: ಕಮಲಾ ಹ್ಯಾರಿಸ್‌ ಪತಿಯ ತುಟಿಗೆ ಚುಂಬಿಸಿದ ಅಮೆರಿಕ ಅಧ್ಯಕ್ಷರ ಪತ್ನಿ! ಜಾಗತಿಕ ಮಟ್ಟದಲ್ಲಿ ಸುದ್ದಿಯಾದ ಜಿಲ್ ಬೈಡನ್

Jill Biden: ಕಮಲಾ ಹ್ಯಾರಿಸ್‌ ಪತಿಯ ತುಟಿಗೆ ಚುಂಬಿಸಿದ ಅಮೆರಿಕ ಅಧ್ಯಕ್ಷರ ಪತ್ನಿ! ಜಾಗತಿಕ ಮಟ್ಟದಲ್ಲಿ ಸುದ್ದಿಯಾದ ಜಿಲ್ ಬೈಡನ್

ಕಮಲಾ ಹ್ಯಾರಿಸ್​ಗೆ ಪತಿಗೆ  ಚುಂಬಿಸಿದ ಜಿಲ್​ ಬೈಡನ್​

ಕಮಲಾ ಹ್ಯಾರಿಸ್​ಗೆ ಪತಿಗೆ ಚುಂಬಿಸಿದ ಜಿಲ್​ ಬೈಡನ್​

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಹಿಡಿತವನ್ನು ರಿಪಬ್ಲಿಕ್​ ಪಕ್ಷ ವಶಪಡಿಸಿಕೊಂಡ ನಂತರ, ವಿಭಜಿತ ಕಾಂಗ್ರೆಸ್‌ನ ಮುಂದೆ ಬೈಡನ್ ಸಾಂಪ್ರದಾಯದಂತೆ ತಮ್ಮ ಮೊದಲ ಭಾಷಣವನ್ನು ಮಾಡಿದ್ದರು. ಈ ವೇಳೆ ಜಿಲ್ ಬೈಡನ್ ಅವರು ಎಲ್ಲರನ್ನು ಮಾತನಾಡಿಸುವ ವೇಳೆ ಎಂಮಾಫ್​ಗೆ ಕಿಸ್ ಮಾಡಿದ್ದಾರೆ. ಇದು ಬಗ್ಗೆ ಟ್ವಿಟರ್​​ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • New Delhi, India
  • Share this:

ವಾಷಿಂಗ್ಟನ್: ಪಾಶ್ಮಿಮಾಥ್ಯ ರಾಷ್ಟ್ರಗಳಲ್ಲಿ ಎಲ್ಲೆಂದರಲ್ಲಿ ಚುಂಬಿಸುವುದು ಸಾಮಾನ್ಯ ಸಂಗತಿ, ಆದರೆ ತಮ್ಮ ಪ್ರೇಮಿಗಳಿಗೆ , ಗಂಡನಿಗೆ ಅಥವಾ ಲಿವಿಂಗ್ ಟುಗೆದರ್ ಪಾರ್ಟ್ನರ್​ಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಕಿಸ್ ಮಾಡಿರುವುದನ್ನು ಟಿವಿಯಲ್ಲೊ ಅಥವಾ ಸಾಮಾಜಿಕ ಜಾಲತಾಣದ ಫ್ಲಾಟ್​ಫಾರ್ಮ್​ನಲ್ಲೋ ನೋಡಿರುತ್ತೇವೆ. ಆದರೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ (Joe Biden)ಅವರ ಪತ್ನಿ ಹಾಗೂ ದೇಶದ ಪ್ರಥಮ ಮಹಿಳೆ ಜಿಲ್ ಬೈಡನ್ (Jill biden) ಕ್ಯಾಪಿಟಲ್ ಹಿಲ್‌ನಲ್ಲಿ ಸ್ಟೇಟ್ ಆಫ್ ಯೂನಿಯನ್ ಸಭೆಗೂ ಮುನ್ನ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಪತಿ ಡೌಗ್ ಎಂಹಾಫ್ ಅವರ ತುಟಿಗೆ ಸಭಿಕರ ಮುಂದೆ ಮುತ್ತಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಭಾರಿ ಚರ್ಚೆಗೀಡಾಗುತ್ತಿದೆ.


ಜೋ ಬೈಡನ್ ಪತ್ನಿಗೆ ತಮ್ಮ ಪತಿ ಎಂದುಕೊಂಡು ಕಮಲಾ ಹ್ಯಾರೀಸ್ ಪತಿಗೆ ಚುಂಬಿಸಿರಬಹುದೇ ಎಂದು ಟ್ರೋಲ್ ಮಾಡಲಾಗುತ್ತಿದೆ. ಫೆಬ್ರವರಿ 7ರಂದು ಮಂಗಳವಾರ ರಾಷ್ಟ್ರೀಯ ಕ್ಯಾಪಿಟಲ್‌ನಲ್ಲಿ, ಅಧ್ಯಕ್ಷ ಬೈಡೆನ್ ತಮ್ಮ ಎರಡನೇ ಸ್ಟೇಟ್ ಆಫ್ ಯೂನಿಯನ್​ ಸಭೆಗೂ ಮುನ್ನ ಈ ಮುಜುಗರದ ಘಟನೆ ನಡೆದಿದೆ. ಸ್ನೇಹಪರವಾಗಿ ಅಪ್ಪುಗೆಗೆ ಒಲವು ತೋರಿದ್ದಾರೆ. ಆದರೆ ಅವರಲ್ಲಿ ಇಬ್ಬರಲ್ಲಿ ಒಬ್ಬರು ತಪ್ಪಾಗಿ ಲೆಕ್ಕಾಚಾರ ಮಾಡಿದಂತೆ ಕಾಣುತ್ತದೆ, ಪರಿಣಾಮ ತುಟಿಗಳಿಗೆ ಮುತ್ತಿಟ್ಟಿದ್ದಾರೆ.


ಜಾಗತಿಕ ಮಟ್ಟದಲ್ಲಿ ಚರ್ಚೆ


ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಹಿಡಿತವನ್ನು ರಿಪಬ್ಲಿಕ್​ ಪಕ್ಷ ವಶಪಡಿಸಿಕೊಂಡ ನಂತರ, ವಿಭಜಿತ ಕಾಂಗ್ರೆಸ್‌ನ ಮುಂದೆ ಬೈಡನ್ ಸಾಂಪ್ರದಾಯದಂತೆ ತಮ್ಮ ಮೊದಲ ಭಾಷಣವನ್ನು ಮಾಡಿದ್ದರು. ಈ ವೇಳೆ ಜಿಲ್ ಬೈಡನ್ ಅವರು ಎಲ್ಲರನ್ನು ಮಾತನಾಡಿಸುವ ವೇಳೆ ಎಂಮಾಫ್​ಗೆ ಕಿಸ್ ಮಾಡಿದ್ದಾರೆ. ಇದು ಬಗ್ಗೆ ಟ್ವಿಟರ್​​ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.


ಇದನ್ನೂ ಓದಿ:  Syria Earthquake: ಪ್ಲೀಸ್​, ನನ್ನ ತಮ್ಮನನ್ನು ಕಾಪಾಡಿ, ನೀವು ಹೇಳಿದಂತೆ ಕೇಳ್ತೇನೆ, ಕುಸಿದ ಕಟ್ಟಡದಡಿ ಸಿಲುಕಿದ ಪುಟ್ಟ ಬಾಲಕಿ ಮನವಿ!


ಅಮೆರಿಕದಲ್ಲಿ ಕೋವಿಡ್​ ಕಡಿಮೆಯಾಗಿರಬಹುದು


ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಸಲಹೆಗಾರ ಕೆಲ್ಯನ್ನೆ ಕಾನ್ವೇ ಈ ವಿಡಿಯೋವನ್ನು ಹಂಚಿಕೊಂಡು " ಅಮೆರಿಕದಲ್ಲಿ ಕೋವಿಡ್ 19 ಸಂಪೂರ್ಣವಾಗಿ ಕಡಿಮೆ ಆಗಿದೆ ಎಂಬುದಕ್ಕೆ ಇದೆ ಸಾಕ್ಷಿ" ಎಂದು ವ್ಯಂಗ್ಯವಾಡಿದ್ದಾರೆ. ಮತ್ತೆ ಕೆಲವು ನೆಟ್ಟಿಗರು ಈ ಕಿಸ್ಸಿಂಗ್ ಸೀನ್‌ ಅನ್ನು ಹಲವು ಸಿನಿಮಾಗಳ ಕಿಸ್ಸಿಂಗ್ ಸೀನ್‌ಗಳಿಗೆ ಹೋಲಿಸಿ ಟ್ರೋಲ್ ಮಾಡುತ್ತಿದ್ದಾರೆ.




ಮಾಧ್ಯಮಗಳಲ್ಲೂ ಚರ್ಚೆ


ಅಮೆರಿಕದ ಮಾಧ್ಯಮಗಳಲ್ಲಿಯೂ ಜಿಲ್​ ಬೈಡನ್​ ಚುಂಬನದ ಬಗ್ಗೆ ಬಹಳ ಚರ್ಚೆಯಾಗುತ್ತಿದ್ದು, ನ್ಯೂಯಾರ್ಕ್‌ ಪೋಸ್ಟ್‌, ಸ್ಮೂಚ್‌ ಆಫ್‌ ದಿ ಯೂನಿಯನ್‌ ಎಂದು ಲೇವಡಿ ಮಾಡಿದೆ. ಜೊತೆಗೆ ಚುಂಬನದ ಫೋಟೋಗಳನ್ನು ಕೂಡ ಜೂಮ್‌ ಮಾಡಿ ಪ್ರಕಟಿಸಲಾಗಿದೆ. ಬೈಡನ್‌ ಆಡಳಿತದ ಕಡು ವಿಮರ್ಶಕರಾಗಿರುವ ಫಾಕ್ಸ್‌ ನ್ಯೂಸ್‌ ಯಾವುದೇ ಅನುಮಾನ ಇಲ್ಲದೇ ಬೈಡೆನ್‌ ಪತ್ನಿ, ಕಮಲಾ ಹ್ಯಾರಿಸ್‌ ಪತಿಯ ತುಟಿಗೆ ಮುತ್ತಿಟ್ಟಿದ್ದಾರೆ ಎಂದು ಉಲ್ಲೇಖಿಸಿದೆ.


ಚೀನಾಕ್ಕೆ ತಕ್ಕ ಉತ್ತರ ನೀಡಲಾಗುವುದು


ಅಮೆರಿಕ ಸಂಸತ್​ನಲ್ಲಿ ಉಬಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಜೋ ಬೈಡನ್​, ದೇಶದ ಸಾರ್ವಭಮತೆಗೆ ಚೀನಾ ಬೆದರಿಕೆಯೊಡ್ಡಿದರೆ, ಅಮೆರಿಕ ಅದಕ್ಕೆ ತಕ್ಕ ಉತ್ತರ ನೀಡುತ್ತದೆ ಎಂದು ತಿರುಗೇಟು ನೀಡಿದ್ದಾರೆ. ಅಟ್ಲಾಂಟಿಕ್ ಸಾಗರದ ಮೇಲೆ ಕಾಣಿಸಿಕೊಂಡಿದ್ದ ಚೀನಾದ ಬೇಹುಗಾರಿಕೆ ಬಲೂನ್​ನನ್ನು ಅಮೆರಿಕ ಹೊಡೆದುರುಳಿಸಿತ್ತು. ಇದು ಎರಡೂ ದೇಶಗಳ ನಡುವೆ ಮುಸುಕಿನ ಗುದ್ದಾಟಕ್ಕೆ ಎಡೆ ಮಾಡಿಕೊಟ್ಟಿದೆ.


ಜನಾಂಗೀಯ ಹಿಂಸೆ ತಡೆಯಲು ಕ್ರಮ


ಅಮೆರಿಕದಲ್ಲಿ ಜನಾಂಗೀಯ ಹಿಂಸೆ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿರುವ ಬೈಡೆನ್, ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನ ರಕ್ಷಣೆಗಾಗಿ ಪೊಲೀಸ್​ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುವುದು ಎಂದು ತಿಳಿಸಿದ್ದಾರೆ. ಉಕ್ರೇನ್​ ಮೇಲಿನ ರಷ್ಯಾ ದಾಳಿಯನ್ನು ಪ್ರಸ್ತಾಪಿಸಿ ಈ ಅತಿಕ್ರಮಣ ಜಗತ್ತಿನ ಪಾಲಿಗೆ ಒಂದು ಪರಿಕಲ್ಪನೆಯಾಗಿದೆ ಎಂದು ಹೇಳಿದ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Published by:Rajesha M B
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು