ವಾಷಿಂಗ್ಟನ್: ವಿಶ್ವ ಬ್ಯಾಂಕ್‌ನ (World Bank) ನೂತನ ಅಧ್ಯಕ್ಷ ಸ್ಥಾನಕ್ಕೆ ಭಾರತೀಯ ಮೂಲದ ಉದ್ಯಮಿ (Indian American Business man), ಮಾಸ್ಟರ್ ಕಾರ್ಡ್‌ನ (Master Card Ex CEO) ಮಾಜಿ ಸಿಇಒ ಅಜಯ್ ಬಂಗಾ (Ajay Banga) ಅವರ ಹೆಸರನ್ನು ಅಮೆರಿಕಾ ಅಧ್ಯಕ್ಷ ಜೊ ಬೈಡೆನ್ (Joe Biden) ಅವರು ಶಿಫಾರಸು ಮಾಡಿದ್ದಾರೆ. ವಿಶ್ವಬ್ಯಾಂಕ್‌ನ ಹಾಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಡೇವಿಡ್ ಮಾಲ್ಪಾಸ್ (David Malpass) ಅವರು ತಮ್ಮ ಅಧಿಕಾರಾವಧಿಗಿಂತ ಮುನ್ನವೇ ತಮ್ಮ ಸ್ಥಾನ ತೊರೆಯುವುದಾಗಿ ಘೋಷಣೆ ಮಾಡಿರುವ ಕಾರಣ, ಅವರ ಸ್ಥಾನಕ್ಕೆ ಉದ್ಯಮಿ ಅಜಯ್ ಬಂಗಾ ಹೆಸರನ್ನು ಶಿಫಾರಸು ಮಾಡಿರುವುದಾಗಿ ಬೈಡೆನ್ ಸರ್ಕಾರ (US Govt) ಘೋಷಣೆ ಮಾಡಿದ್ದು, ಈ ಬಗ್ಗೆ ಶ್ವೇತಭವನ ಅಧಿಕೃತ ಪ್ರಕಟಣೆ ಹೊರಡಿಸಿದೆ.
63 ವರ್ಷ ವಯಸ್ಸಿನ ಅಜಯ್ ಬಂಗಾ ಅವರು ಸದ್ಯ ಹೂಡಿಕೆ ಸಂಸ್ಥೆ ಆಗಿರುವ ಜನರಲ್ ಅಟ್ಲಾಂಟಿಕ್‌ನ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಹಿಂದೆ ಮಾಸ್ಟರ್ ಕಾರ್ಡ್ ಕಂಪೆನಿಯ ಸಿಇಒ ಆಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.
ಇದನ್ನೂ ಓದಿ: Jill Biden: ಕಮಲಾ ಹ್ಯಾರಿಸ್ ಪತಿಯ ತುಟಿಗೆ ಚುಂಬಿಸಿದ ಅಮೆರಿಕ ಅಧ್ಯಕ್ಷರ ಪತ್ನಿ! ಜಾಗತಿಕ ಮಟ್ಟದಲ್ಲಿ ಸುದ್ದಿಯಾದ ಜಿಲ್ ಬೈಡನ್
ವಿಶ್ವ ಬ್ಯಾಂಕ್‌ನ ನೂತನ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಬಂಗಾ ಅವರ ಹೆಸರನ್ನು ನಾಮ ನಿರ್ದೇಶನ ಮಾಡಿದ ಬಳಿಕ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್, ‘ಹವಾಮಾನ ಬದಲಾವಣೆ ಸೇರಿದಂತೆ ನಮ್ಮ ಕಾಲದಲ್ಲಿ ಎದುರಾಗುವ ಅತ್ಯಗತ್ಯ ತುರ್ತು ಸವಾಲುಗಳನ್ನು ನಿಭಾಯಿಸಲು ಮತ್ತು ಸಾರ್ವಜನಿಕ- ಖಾಸಗಿ ಸಂಪನ್ಮೂಲಗಳನ್ನು ಸಜ್ಜುಗೊಳಿಸುವ ನಿರ್ಣಾಯಕ ಅನುಭವವನ್ನು ಅಜಯ್ ಬಂಗಾ ಅವರು ಹೊಂದಿದ್ದಾರೆ’ ಎಂದು ಹೇಳಿದ್ದಾರೆ.
ಜಗತ್ತಿನ ಅನೇಕ ರಾಷ್ಟ್ರಗಳಿಗೆ ಅಭಿವೃದ್ಧಿ ಕಾರ್ಯಗಳಿಗಾಗಿ ಸಾಲ ನೀಡುವ ವಿಶ್ವ ಬ್ಯಾಂಕ್ ಇದೇ ಮಾರ್ಚ್ 29ನೇ ತಾರೀಕಿನ ತನಕ ಅಭ್ಯರ್ಥಿಗಳ ನಾಮ ನಿರ್ದೇಶನಗಳನ್ನು ಸ್ವೀಕರಿಸಲು ಆರಂಭ ಮಾಡಿದೆ. ವಿಶ್ವಬ್ಯಾಂಕ್‌ನ ಅಧ್ಯಕ್ಷರು ಬಹುತೇಕವಾಗಿ ಅಮೇರಿಕನ್ನರು ಆಗಿದ್ದರೆ, ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥರು ಸಾಂಪ್ರದಾಯಿಕವಾಗಿ ಯುರೋಪಿಯನ್ ಪ್ರಜೆಗಳು ಆಗಿರುತ್ತಾರೆ. ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಅಭ್ಯರ್ಥಿಗಳನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: Alaska: ಅಲಸ್ಕಾ ಪ್ರಾಂತ್ಯದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮತ್ತೊಂದು ವಸ್ತುವನ್ನು ಹೊಡೆದರುಳಿಸಿದ ಅಮೆರಿಕಾ!
ಹಾಲಿ ವಿಶ್ವಬ್ಯಾಂಕ್ ಹಾಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಡೇವಿಡ್ ಮಾಲ್ಪಾಸ್ ಅವರು 2019ರಲ್ಲಿ ಆಗಿನ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನಾಮ ನಿರ್ದೇಶನಗೊಂಡಿದ್ದರು. ಡೇವಿಡ್ ಮಾಲ್ಪಾಸ್ ಅವರು ತಮ್ಮ ಅಧಿಕಾರಾವಧಿ ಮುಗಿಯುವ ಒಂದು ವರ್ಷ ಮುಂಚಿತವಾಗಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುವುದಾಗಿ ಘೋಷಣೆ ಮಾಡಿರುವುದರಿಂದ ಇದೀಗ ಜೋ ಬೈಡೆನ್ ಅವರು ಅಜಯ್ ಬಂಗಾ ಅವರ ಹೆಸರನ್ನು ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿದ್ದಾರೆ.
ಹವಾಮಾನ ಬದಲಾವಣೆ ಕುರಿತು ತಾವು ಹೊಂದಿದ್ದ ನಿಲುವಿನ ಕಾರಣದಿಂದಾಗಿಯೇ ಡೇವಿಡ್ ಮಾಲ್ಪಾಸ್ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಾರೆ ಎಂದು ಹೇಳಲಾಗ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ