• Home
  • »
  • News
  • »
  • national-international
  • »
  • Joe Biden: ಅಮೆರಿಕ ಅಧ್ಯಕ್ಷರಿಂದಲೂ ದೀಪಾವಳಿ ಆಚರಣೆ; ದೀಪ ಬೆಳಗಿಸಿ ಸಂಭ್ರಮಿಸಿದ ಜೋ ಬೈಡೆನ್

Joe Biden: ಅಮೆರಿಕ ಅಧ್ಯಕ್ಷರಿಂದಲೂ ದೀಪಾವಳಿ ಆಚರಣೆ; ದೀಪ ಬೆಳಗಿಸಿ ಸಂಭ್ರಮಿಸಿದ ಜೋ ಬೈಡೆನ್

ಜೋ ಬೈಡೆನ್ ದಂಪತಿಯ ದೀಪಾವಳಿ

ಜೋ ಬೈಡೆನ್ ದಂಪತಿಯ ದೀಪಾವಳಿ

ಭಾರತೀಯ ಸಾಂಪ್ರದಾಯಿಕ ಉಡುಗೆಗಳಾದ ಸೀರೆ, ಲೆಹೆಂಗಾ ಮತ್ತು ಶೇರ್ವಾನಿಗಳನ್ನು ಧರಿಸಿದ ಅತಿಥಿಗಳು ಕೆಲವು ಬಾಯಲ್ಲಿ ನೀರೂರಿಸುವ ಭಾರತೀಯ ಭಕ್ಷ್ಯಗಳನ್ನು ಸವಿದರು.

  • News18 Kannada
  • Last Updated :
  • New Delhi, India
  • Share this:

ವಾಷಿಂಗ್ಟನ್ ಡಿಸಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಹ ದೀಪಾವಳಿ ಹಬ್ಬವನ್ನು (Joe Biden Celebrated Deepavali) ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ತಮ್ಮ ಪತ್ನಿ, ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರ ಜೊತೆ ಸೋಮವಾರ ಶ್ವೇತಭವನದಲ್ಲಿ ದೀಪಾವಳಿ ಹಬ್ಬದ (Deepavali 2022) ಆಚರಣೆಯಲ್ಲಿ ಅವರು ಪಾಲ್ಗೊಂಡಿದ್ದಾರೆ. ಭಾರತ ಮತ್ತು ಅಮೆರಿಕಕ್ಕೆ (India-US Relationship) ಸಂಬಂಧಿಸಿದ ಕೆಲವು ಹೆಗ್ಗುರುತು ಘಟನೆಗಳಿಗೆ ಸಾಕ್ಷಿಯಾಗಿರುವ ಈಸ್ಟ್ ರೂಮ್‌ನಲ್ಲಿ ನಡೆದ ದೀಪಾವಳಿ ಹಬ್ಬದ ಆಚರಣೆಯಲ್ಲಿ 200 ಕ್ಕೂ ಹೆಚ್ಚು ಪ್ರಸಿದ್ಧ ಭಾರತೀಯ ಮೂಲದ ಅಮೆರಿಕನ್ನರು ಭಾಗವಹಿಸಿದ್ದರು.


ಸಿತಾರ್ ವಾದಕ ರಿಷಬ್ ಶರ್ಮಾ ಮತ್ತು ನೃತ್ಯ ತಂಡ ದಿ ಸಾ ಡ್ಯಾನ್ಸ್ ಕಂಪನಿಯ ಪ್ರದರ್ಶನಗಳು ಸೇರಿದಂತೆ ಕೆಲವು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಇದೇ ಸಂದರ್ಭದಲ್ಲಿ ನಡೆದಿವೆ. ಭಾರತೀಯ ಸಾಂಪ್ರದಾಯಿಕ ಉಡುಗೆಗಳಾದ ಸೀರೆ, ಲೆಹೆಂಗಾ ಮತ್ತು ಶೇರ್ವಾನಿಗಳನ್ನು ಧರಿಸಿದ ಅತಿಥಿಗಳು ಕೆಲವು ಬಾಯಲ್ಲಿ ನೀರೂರಿಸುವ ಭಾರತೀಯ ಭಕ್ಷ್ಯಗಳನ್ನು ಸವಿದರು.


ಓರ್ವ ಭಾರತೀಯ ಅಮೇರಿಕನಾಗಿ ಇಲ್ಲಿಗೆ ಬಂದಿರುವುದು ನನ್ನ ಸೌಭಾಗ್ಯ!
ದೀಪಾವಳಿ ಹಬ್ಬದ ಈ ಆಚರಣೆಗೆ ಈಸ್ಟ್ ಸ್ಟೇಟ್ ಡೈನಿಂಗ್ ರೂಂನ ತುಂಬಾ ಅತಿಥಿಗಳು ತುಂಬಿದ್ದಾರೆ. ಇದು ಭಾರತೀಯ ಅಮೇರಿಕನ್ ಸಮುದಾಯವು ಯುನೈಟೆಡ್ ಸ್ಟೇಟ್ಸ್​ನಲ್ಲಿ ಏನನ್ನೆಲ್ಲಾ ಸಾಧಿಸಿದೆ ಎಂಬುದರ ನಿಜವಾದ ಆಚರಣೆಯಾಗಿದೆ. ದೀಪಾವಳಿಯಂದು ನಮಗೆಲ್ಲರಿಗೂ ಆತಿಥ್ಯ ವಹಿಸಲು ಅಧ್ಯಕ್ಷರು ಮತ್ತು ಶ್ವೇತಭವನದಿಂದ ಇದು ಅದ್ಭುತವಾದ ಮನ್ನಣೆಯಾಗಿದೆ. ಓರ್ವ ಭಾರತೀಯ ಅಮೇರಿಕನಾಗಿ ಇಲ್ಲಿಗೆ ಬಂದಿರುವುದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ ಎಂದು ಯುಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಅಧ್ಯಕ್ಷ ಅತುಲ್ ಕೇಶಪ್ ಪಿಟಿಐಗೆ ಸ್ವಾಗತ ಸಮಾರಂಭದಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: Rishi Sunak: ಬ್ರಿಟನ್ ಪ್ರಧಾನಿಯಾದ ರಿಷಿ ಸುನಕ್, ಮಾವ ನಾರಾಯಣ ಮೂರ್ತಿ ಹೇಳಿದ್ದೇನು?


ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ತಮ್ಮ ಸರ್ಕಾರದ ವಿವಿಧ ಹಂತಗಳಲ್ಲಿ 130 ಕ್ಕೂ ಹೆಚ್ಚು ಇಂಡೋ-ಅಮೆರಿಕನ್ನರನ್ನು ದಾಖಲೆ ಸಂಖ್ಯೆಯಲ್ಲಿ ನೇಮಿಸಿದ್ದಾರೆ.


ಕಮಲಾ ಹ್ಯಾರಿಸ್ ಅವರಿಂದಲೂ ಭರ್ಜರಿ ದೀಪಾವಳಿ
ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (US Vice-President Kamala Harris) ಸಹ ವಾಷಿಂಗ್ಟನ್‌ನಲ್ಲಿರುವ ತಮ್ಮ ನಿವಾಸದಲ್ಲಿ ದೀಪಾವಳಿ ಹಬ್ಬವನ್ನು (Kamala Harris Deepavali) ಆಚರಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ವರದಿಗಳ ಪ್ರಕಾರ ನ್ಯೂಯಾರ್ಕ್‌ನ ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ದೀಪಾವಳಿ ಆಚರಣೆಗಳು ಪ್ರಾರಂಭವಾಗಿವೆ.


ಇದನ್ನೂ ಓದಿ: Rishi Sunak: ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿದ್ದ ಬ್ರಿಟನ್​ನ ಮೊದಲ ಸಂಸದ, ಹೀಗಿತ್ತು ರಿಷಿ ಸುನಕ್ ರಾಜಕೀಯ ಪಯಣ!


ಅಮೆರಿಕದ ಉಪಾಧ್ಯಕ್ಷರಲ್ಲದೆ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ತಮ್ಮ ನಿವಾಸದಲ್ಲಿ ದೀಪಾವಳಿ ಹಬ್ಬದ ಆಚರಣೆಯನ್ನು ನಡೆಸಿದ್ದಾರೆ. ಮುಂದಿನ ವರ್ಷದಿಂದ ನ್ಯೂಯಾರ್ಕ್ ನಗರದಲ್ಲಿ ದೀಪಾವಳಿ ಹಬ್ಬದಂದು ಸಾರ್ವಜನಿಕ ಶಾಲಾ ರಜೆ ಎಂದು ಗುರುವಾರ ಘೋಷಿಸಲಾಗಿದೆ.


ರಷ್ಯಾ-ಉಕ್ರೇನ್ ಯುದ್ಧ ಎಲ್ಲಿಯವರೆಗೆ ಬಂತು?
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಉಕ್ರೇನ್‌ನಲ್ಲಿ ಪರಮಾಣು ಅಸ್ತ್ರವನ್ನು ಬಳಸಿದರೆ ಅಮೆರಿಕವು ತಕ್ಕ ಪ್ರತಿಕ್ರಿಯೆ ನೀಡುತ್ತದೆ. ಇದಕ್ಕಾಗಿಯೇ ಯುಸ್‌ ಗೇಮ್‌ ಪ್ಲ್ಯಾನ್‌ ಅನ್ನು ಸಿದ್ಧವಾಗಿಸಿಕೊಂಡಿದೆ ಎಂದು ರಷ್ಯಾಗೆ ಅಧ್ಯಕ್ಷ ಜೋ ಬೈಡನ್ (Joe Biden) ಎಚ್ಚರಿಕೆ ರವಾನಿಸಿದ್ದಾರೆ. ಪುಟಿನ್ ಉಕ್ರೇನ್‌ನಲ್ಲಿ ಪರಮಾಣು ಸ್ಥಾವರಕ್ಕೆ ಬಾಂಬ್ ಹಾಕಿದರೆ ಅಥವಾ ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರವನ್ನು (Nuclear weapons) ಸ್ಥಾಪಿಸಿದರೆ ವಾಷಿಂಗ್ಟನ್ ಏನು ಮಾಡಬೇಕು ಎಂಬುದರ ಬಗ್ಗೆ ನಿರ್ಧರಿಸಿದೆ ಎಂದು ಜೋ ಬೈಡನ್ ಸುಳಿವು ನೀಡಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: