• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Vivek Ramaswamy: ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗ್ತಾರಾ ಭಾರತೀಯ? ನಾನೇ ಪ್ರಬಲ ಸ್ಪರ್ಧಿ ಎಂದ ವಿವೇಕ್ ರಾಮಸ್ವಾಮಿ

Vivek Ramaswamy: ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗ್ತಾರಾ ಭಾರತೀಯ? ನಾನೇ ಪ್ರಬಲ ಸ್ಪರ್ಧಿ ಎಂದ ವಿವೇಕ್ ರಾಮಸ್ವಾಮಿ

ವಿವೇಕ್ ರಾಮಸ್ವಾಮಿ

ವಿವೇಕ್ ರಾಮಸ್ವಾಮಿ

ಭಾರತೀಯ ಮೂಲದ ಕುಟುಂಬದಲ್ಲಿ ಬಂದಿರುವ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷರಾಗಿ ಸ್ಪರ್ಧಿಸಲು ಸನ್ನದ್ಧರಾಗಿದ್ದಾರೆ.

 • Trending Desk
 • 4-MIN READ
 • Last Updated :
 • Share this:

  ವಾಷಿಂಗ್ಟನ್ ಡಿಸಿ:  2024 ರ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ (US president in 2024) ಭಾರತೀಯ ಮೂಲದ ಅಮೇರಿಕನ್ ಸ್ಪರ್ಧಿಗಳು ಕಣಕ್ಕಿಳಿಯುತ್ತಿದ್ದು ಭರ್ಜರಿ ಪೈಪೋಟಿ ನಡೆಯಲಿದೆ ಎಂದು ವರದಿಯಾಗಿದೆ. ಭಾರತೀಯ ಮೂಲದ ರಿಪಬ್ಲಿಕನ್ ನಾಯಕಿ ನಿಮ್ರತ್ ರಾಂಧವಾ ಅಕಾ ನಿಕ್ಕಿ ಹ್ಯಾಲೆ ಚುನಾವಣಾ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಬೆನ್ನಲ್ಲೇ 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಇನ್ನೊಬ್ಬ ಭಾರತೀಯ-ಅಮೆರಿಕನ್ ಸ್ಪರ್ಧಿಸಲು (Vivek Ramaswamy) ಸಿದ್ಧತೆ ನಡೆಸಿದ್ದಾರೆ.


  ಅಧ್ಯಕ್ಷೀಯ ಚುನಾವಣೆಗೆ ಇನ್ನೊಬ್ಬ ಸ್ಪರ್ಧಿ
  ಭಾರತೀಯ ಮೂಲದ ಕುಟುಂಬದಲ್ಲಿ ಬಂದಿರುವ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷರಾಗಿ ಸ್ಪರ್ಧಿಸಲು ಸನ್ನದ್ಧರಾಗಿದ್ದಾರೆ. ರಾಮಸ್ವಾಮಿ ಸ್ಪರ್ಧಿಸುವುದು ಖಾತ್ರಿಯಾಗಿದ್ದು ಅಮೆರಿಕನ್ನರ ಉತ್ತಮ ಜನಜೀವನದ ಸುಧಾರಣೆಗೆ ಹಾಗೂ ಸಮಾಜಕ್ಕೆ ಅರ್ಹ ಯೋಗ್ಯ ಸಂಸ್ಕೃತಿಯನ್ನು ಪುನಃಸ್ಥಾಪಿಸಲು ಕಂಕಣಬದ್ಧರಾಗಿದ್ದಾರೆ ಎಂದು ಸುದ್ದಿಮಾಧ್ಯಮಗಳು ವರದಿ ಮಾಡಿವೆ.


  ವಿವೇಕ್ ರಾಮಸ್ವಾಮಿ ಯಾರು? ಅವರ ಹಿನ್ನೆಲೆಯ ಕುರಿತು ಇಲ್ಲಿದೆ ಪರಿಚಯ
  37 ರ ಹರೆಯದ ವಿವೇಕ್ ರಾಮಸ್ವಾಮಿ ನೈಋತ್ಯ ಓಹಿಯೋದಲ್ಲಿ ಭಾರತೀಯ ವಲಸಿಗರ ಪಾಲನೆಯಲ್ಲಿ ಓದಿ ಬೆಳೆದಿದ್ದಾರೆ.  ವಿವೇಕ್ ತಂದೆ ಜನರಲ್ ಎಲೆಕ್ಟ್ರಿಕ್‌ನಲ್ಲಿ ಇಂಜಿನಿಯರ್ ಹಾಗೂ ಪೇಟೆಂಟ್ ಅಟಾರ್ನಿ ಆಗಿದ್ದರೆ, ಅವರ ತಾಯಿ ಜೆರಿಯಾಟ್ರಿಕ್ ಮನೋವೈದ್ಯರಾಗಿದ್ದರು.


  ಜೀವಶಾಸ್ತ್ರ ಮತ್ತು ಕಾನೂನು ಪದವೀಧರ
  ರಾಮಸ್ವಾಮಿ ಹಾರ್ವರ್ಡ್‌ನಲ್ಲಿ ಪದವಿಪೂರ್ವ ವಿದ್ಯಾರ್ಥಿಯಾಗಿ ಜೀವಶಾಸ್ತ್ರವನ್ನು ಓದಿ ಯೇಲ್‌ನಿಂದ ಕಾನೂನು ಪದವಿಯನ್ನು ಗಳಿಸಿದರು. ಬಯೋಟೆಕ್‌ನಲ್ಲಿ ಹೂಡಿಕೆದಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಔಷಧಗಳನ್ನು ಸ್ವತಃ ತಯಾರಿಸಿದರು.
  ರಾಮಸ್ವಾಮಿ ಅವರು 2014 ರಲ್ಲಿ ಔಷಧೀಯ ಸಂಶೋಧನಾ ಸಂಸ್ಥೆ ರೋವಂಟ್ ಸೈನ್ಸಸ್ ಅನ್ನು ಸ್ಥಾಪಿಸಿದರು. ಅಲ್ಲದೇ, ವಿವೇಕ್ ಅವರು ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ತಪ್ಪಿಸಲು ವ್ಯವಹಾರಗಳನ್ನು ಮನವೊಲಿಸಲು ಪ್ರಯತ್ನಿಸುವ ಆಸ್ತಿ ನಿರ್ವಹಣಾ ಕಂಪನಿಯಾದ ಸ್ಟ್ರೈವ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.


  4,960 ಕೋಟಿ ಸಂಪತ್ತಿನ ಒಡೆಯ
  2016 ರಲ್ಲಿ ಫೋರ್ಬ್ಸ್ ವರದಿಯ ಪ್ರಕಾರ ರಾಮಸ್ವಾಮಿ ಅವರು 600 ಮಿಲಿಯನ್ ಡಾಲರ್ (ಅಂದಾಜು ಸುಮಾರು 4,960 ಕೋಟಿ ರೂ.) ನಿವ್ವಳ ಸಂಪತ್ತನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ರಾಮಸ್ವಾಮಿ ಅವರು 'Woke, Inc: Inside Corporate America's Social Justice Scam' ನ ಲೇಖಕರು ಕೂಡ ಹೌದು.


  ಇದನ್ನೂ ಓದಿ: Chicken Leg Pieces: ಶಾಲಾ ಬಿಸಿಯೂಟದಲ್ಲಿ ಚಿಕನ್​ ಲೆಗ್​ ಪೀಸ್​ ಮಾಯ! 6 ಶಿಕ್ಷಕರನ್ನು 4 ಗಂಟೆ ಕೂಡಿಹಾಕಿದ ಪೋಷಕರು!


  ಪೊಲಿಟಿಕೊ ಪ್ರಕಾರ ಅವರು ಪರಿಸರ, ಸಾಮಾಜಿಕ ಮತ್ತು ಆಡಳಿತದ ಕಾರ್ಯಕರ್ತರೆಂದೆನಿಸಿದ್ದು ಸಾಮಾಜಿಕವಾಗಿ ಲಾಭದಾಯಕ ಹೂಡಿಕೆಯ ಅಪಾಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ರಾಮಸ್ವಾಮಿ ಅವರು ಉತ್ತಮ ಭಾಷಣಕಾರರು ಕೂಡ ಹೌದು.  ವೋಕ್ ಕ್ಯಾಪಿಟಲಿಸಮ್ (woke capitalism) ವಿಷಯದ ಕುರಿತು ಸಹ  ಅವರು  ಧ್ವನಿ ಎತ್ತಿದ್ದಾರೆ. ಅವರ ಪ್ರಕಾರ ಈ ಅಂಶವನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಸ್ಯೆಗಳ ಮೇಲೆ ಲಾಭ ಮತ್ತು ನಾವೀನ್ಯತೆಗೆ ಆದ್ಯತೆ ನೀಡುವ ವ್ಯವಹಾರಗಳು ಎಂದು ಉಲ್ಲೇಖಿಸಿದ್ದಾರೆ.


  ನಿಕ್ಕಿ ಹ್ಯಾಲೆ ಯಾರು? ಈವರೆಗೆ ಕಾರ್ಯನಿರ್ವಹಿಸಿರುವ ಹುದ್ದೆಗಳ ವಿವರ ಇಲ್ಲಿದೆ
  ಅಧ್ಯಕ್ಷೀಯ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ 51 ರ ಹರೆಯದ ನಿಕ್ಕಿ ಹ್ಯಾಲೆ ಸೌತ್ ಕೆರೊಲಿನಾದ ಎರಡು ಅವಧಿಯಲ್ಲಿ ಗವರ್ನರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ವಿಶ್ವಸಂಸ್ಥೆಯ ಮಾಜಿ ಯುಎಸ್ ರಾಯಭಾರಿಯಾಗಿದ್ದಾರೆ.


  ಇದನ್ನೂ ಓದಿ: Sunny Leone: ಭೂಕಂಪ ಸಂತ್ರಸ್ತರ ನೆರವಿಗೆ ನಿಂತ ಸನ್ನಿ ಲಿಯೋನ್; ಟರ್ಕಿ, ಸಿರಿಯಾಗೆ ಶೇಷಮ್ಮನಿಂದ ದೇಣಿಗೆ


  ಹ್ಯಾಲಿ ದಕ್ಷಿಣ ಕೆರೊಲಿನಾದ ಬ್ಯಾಂಬರ್ಗ್‌ನಲ್ಲಿ ಭಾರತೀಯ ವಲಸಿಗರಿಗೆ ಜನಿಸಿದ ನಿಮ್ರತಾ ನಿಕ್ಕಿ ಅಕಾ ನಿಕ್ಕಿ ಹ್ಯಾಲೆ ಮೂಲತಃ ಸಿಖ್ ಸಂಪ್ರದಾಯವರಾಗಿದ್ದು 1996 ರಲ್ಲಿ ಮೈಕೆಲ್ ಹ್ಯಾಲಿಯನ್ನು ಮದುವೆಯಾದ ನಂತರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು