ಕೊನೆಯದಾಗಿ ಅಫ್ಘನ್​​ನಿಂದ ಹಾರಿದ ಅಮೆರಿಕಾದ ವಿಮಾನದಲ್ಲಿ ಕುರಿಮಂದೆಯಂತೆ ಪ್ರಯಾಣ.. ವಿಶ್ವದ ಮನಕಲುಕಿದ ಫೋಟೋ

Afghans in US Plane Photo: ನಿನ್ನೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಆಫ್ಘನ್ನರು ನೆರೆದಿದ್ದರು. ಅವರಲ್ಲಿ 600 ಕ್ಕೂ ಹೆಚ್ಚು ಜನರು ಕೊನೆಯ ಕ್ಷಣದಲ್ಲಿ ಯುಎಸ್ ಏರ್ ಫೋರ್ಸ್ ಸಾರಿಗೆ ವಿಮಾನದಲ್ಲಿ ಹಾರಲು ಯಶಸ್ವಿಯಾದರು. ತುಂಬಿದ ಬಸ್​, ರೈಲುಗಳಲ್ಲಿ ನಿಂತಂತೆ ವಿಮಾನದಲ್ಲಿ ನಿಂತು ಹೆಂಗಸರು-ಮಕ್ಕಳು ಪ್ರಯಾಣಿಸಿರುವ ಫೋಟೋ ಕರುಳು ಹಿಂಡುವಂತಿದೆ.

ವಿಮಾನದಲ್ಲಿ ಕಿಕ್ಕಿರಿದ ಅಫ್ಘನ್ನರು

ವಿಮಾನದಲ್ಲಿ ಕಿಕ್ಕಿರಿದ ಅಫ್ಘನ್ನರು

  • Share this:
 Afghanistan: ಅಫ್ಘಾನಿಸ್ತಾನವನ್ನು ತಾಲಿಬಾನಿ ಉಗ್ರರರು ವಶಕ್ಕೆ ಪಡೆಯುತ್ತಿದ್ದಂತೆ ಆತಂಕಕ್ಕೊಳಗಾದ ಅಫ್ಘನ್​ ಪ್ರಜೆಗಳು ಸಿಕ್ಕ ವಿಮಾನದಲ್ಲಿ ದೇಶ ತೊರೆಯಲು ಮುಂದಾಗಿದ್ದರು. ನಿನ್ನೆ ವಿಮಾನ ನಿಲ್ದಾಣದಲ್ಲಿ ನೂಕುನುಗ್ಗಲು ನಡೆಸಿದ್ದು, ವಿಮಾನವೇರಲು ಹರಸಾಹಸಪಟ್ಟ ದೃಶ್ಯ ವಿಶ್ವದ ನೆನಪಿನಿಂದ ಮಾಸಲು ವರ್ಷಗಳೇ ಹಿಡಿಯಬಹುದು. ಕೊನೆಯದಾಗಿ ಕಾಬೂಲ್​ನ ವಿಮಾನ ನಿಲ್ದಾಣದಿಂದ ಹೊರಟ್ಟಿದ್ದ ಅಮೆರಿಕಾದ ವಿಮಾನವೇರಲು ಜನ ಮುಗಿಬಿದ್ದಿದ್ದರು. ಚಕ್ರಗಳ ಮೇಲೆ ಕುಳಿತು ಪ್ರಯಾಣಿಸಲು ಯತ್ನಿಸಿದ ಇಬ್ಬರು ವಿಮಾನ ಟೇಕ್​​ ಆಫ್​ ಆಗುತ್ತಲೇ ಕೆಳಗೆ ಉದುರಿಬಿದ್ದು ಪ್ರಾಣ ಬಿಟ್ಟರು. ಈ ಭಯಾನಕ ದೃಶ್ಯ ಕಣ್ಣ ಮುಂದೆ ಇರುವಾಗಲೇ ಮತ್ತಷ್ಟು ಮನಕಲಕುವ ವಿಡಿಯೋ, ಫೋಟೋಗಳು ಬಯಲಾಗಿವೆ.

ನಿನ್ನೆ ಕೊನೆಯದಾಗಿ ಕಾಬೂಲ್​ನಿಂದ  ಕತಾರ್​​ಗೆ  ಹೊರಟ ಅಮೆರಿಕಾದ ವಿಮಾನದಲ್ಲಿ 600ಕ್ಕೂ ಹೆಚ್ಚು ಅಫ್ಘನ್ನರು ಪ್ರಯಾಣಿಸಿದ್ದಾರೆ. ಕುರಿಮಂದೆಯಂತೆ ವಿಮಾನದಲ್ಲಿ ಕುಳಿತುಕೊಂಡು ಅಮೆರಿಕಾಗೆ ಪಲಾಯನ ನಡೆಸಿದ್ದಾರೆ.  ತುಂಬಿದ ಬಸ್​, ರೈಲುಗಳಲ್ಲಿ ನಿಂತಂತೆ ವಿಮಾನದಲ್ಲಿ ಹೆಂಗಸರು-ಮಕ್ಕಳು ನಿಂತು ಪ್ರಯಾಣಿಸಿರುವ ಫೋಟೋ ಕರುಳು ಹಿಂಡುವಂತಿದೆ.

ನಿನ್ನೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಆಫ್ಘನ್ನರು ನೆರೆದಿದ್ದರು. ಅವರಲ್ಲಿ 600 ಕ್ಕೂ ಹೆಚ್ಚು ಜನರು ಕೊನೆಯ ಕ್ಷಣದಲ್ಲಿ ಯುಎಸ್ ಏರ್ ಫೋರ್ಸ್ ಸಾರಿಗೆ ವಿಮಾನದಲ್ಲಿ ಹಾರಲು ಯಶಸ್ವಿಯಾದರು. ವಾಯುಪಡೆಯ ಸಿ -17 ಗ್ಲೋಬ್‌ಮಾಸ್ಟರ್ III ರ ಫೋಟೋಗಳಲ್ಲಿ ನೂರಾರು ಆಫ್ಘನ್ನರು ವಿಮಾನದಲ್ಲಿ ಕುಳಿತಿರುವುದನ್ನು ನೋಡಬಹುದು.  ವೈರಲ್ ಆದ ಫೋಟೋದಲ್ಲಿ ಯಾವುದೇ ಸಾಮಾನುಗಳಿಲ್ಲದ ಮಹಿಳೆಯರು ಮತ್ತು ಮಕ್ಕಳು ತಾಲಿಬಾನ್‌ನಿಂದ ಪಲಾಯನ ಮಾಡುತ್ತಿರುವುದನ್ನು ಕಾಣಬಹುದುದಾಗಿದೆ.

ಸಾರಿಗೆ ವಿಮಾನದಲ್ಲಿ ಒಟ್ಟು 640 ಅಫ್ಘಾನ್ನರು ಪ್ರಯಾಣಿಸಿದ್ದಾರೆ. ಇದೇ ಮೊದಲ ಬಾರಿಗೆ C-17 ವಿಮಾನ ಇಷ್ಟೊಂದು ಪ್ರಯಾಣಿಕರನ್ನು ಹೊತ್ತು ಪ್ರಯಾಣಿಸಿರುವುದು ಎಂದು ತಿಳಿದು ಬಂದಿದೆ. ವಿಮಾನವು ಕತಾರ್‌ಗೆ ಹಾರಿತು, ಅಲ್ಲಿ ಕೆಲ ಆಫ್ಘನ್ನರು ಇಳಿದರು ಎಂದು ವರದಿ ತಿಳಿಸಿದೆ.

ಇನ್ನು ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಎಲ್ಲೆ ಮೀರುತ್ತಿದೆ. ನಿನ್ನೆ ಸಂಸತ್​​ನೊಳಗೆ ಬಂದೂಕುಗಳೊಂದಿಗೆ ಪ್ರವೇಶಿಸಿದ್ದ ಉಗ್ರರು ಅಧ್ಯಕ್ಷರ ಕುರ್ಚಿಯಲ್ಲಿ ಕೂತಿದ್ದರು. ಸಂಸತ್ತಿನಲ್ಲಿ ಎಲ್ಲಂದರಲ್ಲಿ ಉಗ್ರರು ಕುಳಿತಿರುವ ಫೋಟೋಗಳು ವೈರಲ್​ ಆಗಿದ್ದವು. ಇನ್ನು ಇಂದು ಉಗ್ರರು ಅಮ್ಯೂಸ್​ಮೆಂಟ್​ ಪಾರ್ಕ್​​ಗಳಿಗೆ ನುಗ್ಗಿ ಮೋಜುಮಸ್ತಿಯಲ್ಲಿ ತೊಡಗಿರುವ ವಿಡಿಯೋಗಳು ಹರಿದಾಡುತ್ತಿವೆ. ಅಫ್ಘಾನಿಸ್ತಾನದಲ್ಲಿ ಸೃಷ್ಟಿಯಾಗಿರುವ ಅರಾಜಕತೆಗೆ ಈ ವಿಡಿಯೋಗಳು ಪುರಾವೆ ಒದಗಿಸುತ್ತಿವೆ.

ಇದನ್ನೂ ಓದಿ: ನಮ್ಮನ್ನು ಕೊಂದು, ಮಾಂಸವನ್ನು ನಾಯಿಗಳಿಗೆ ಹಾಕುತ್ತಾರೆ: ತಾಲಿಬಾನಿಗಳ ಕ್ರೌರ್ಯವನ್ನು ಬಿಚ್ಚಿಟ್ಟ ಅಫ್ಘಾನಿಸ್ತಾನದ ಮಹಿಳೆ

ತಾಲಿಬಾನ್ ದಂಗೆಕೋರರು ಅಫ್ಘಾನಿಸ್ತಾನದ ರಾಜಧಾನಿಯನ್ನು ವಶಪಡಿಸಿಕೊಂಡ ಒಂದು ದಿನದ ನಂತರ ಕಾಬೂಲ್‌ನ ಬೀದಿಗಳು ನಿರ್ಜನವಾಗಿವೆ. ಆದರೆ ವಿಮಾನ ನಿಲ್ದಾಣವು ತುಂಬಿಹೋಗಿದ್ದು, ನೂರಾರು ನಾಗರಿಕರು ಅಲ್ಲಿಂದ ಪಲಾಯನ ಮಾಡಲು ಯತ್ನಿಸಿದ್ದಾರೆ.  ಸರ್ಕಾರಿ ಕಚೇರಿಗಳು ಖಾಲಿಯಾಗಿವೆ ಎಂದು ಅಲ್ಲಿನ ನಿವಾಸಿಗಳು ಹೇಳಿದ್ದಾರೆ. ವಜೀರ್ ಅಕ್ಬರ್ ಖಾನ್ ರಾಯಭಾರ ಜಿಲ್ಲೆಯು ಬಹುತೇಕ ಎಲ್ಲಾ ರಾಜತಾಂತ್ರಿಕರು ಮತ್ತು ಅವರ ಕುಟುಂಬಗಳೊಂದಿಗೆ ನಗರದಿಂದ ಹೊರಹೋಗಿದ್ದು ಅಥವಾ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದಾರೆ. ಸಾಮಾನ್ಯವಾಗಿ ಹೆಚ್ಚು ಭದ್ರತೆಯಿಂದ ಕೂಡಿದ್ದ ಪ್ರದೇಶಗಳ ಚೆಕ್‌ಪೋಸ್ಟ್‌ಗಳಲ್ಲಿ ಕೆಲವು ಗಾರ್ಡ್‌ಗಳು ಉಳಿದಿದ್ದರು. ಕೆಲವು ವಾಹನ ಚಾಲಕರು ತಮ್ಮ ಕಾರುಗಳಿಂದ ಇಳಿದು ಚೆಕ್‌ಪೋಸ್ಟ್‌ಗಳಲ್ಲಿ ತಡೆಗೋಡೆಗಳನ್ನು ಎತ್ತುವ ಮೂಲಕ ಹೊರಡುತ್ತಿದ್ದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: