ಒಡಲಲ್ಲಿ ಕಂದನನ್ನು ಹೊತ್ತ ಪ್ರತಿ ಹೆಣ್ಣು ಬಯಸುವುದು ಮಗು ಸುರಕ್ಷಿತವಾಗಿರಲಿ ಅಂತ. ಆರೋಗ್ಯವಂತ ಮಗು ಹುಟ್ಟಲಿ ಅನ್ನೋದು ಪ್ರತಿ ಪೋಷಕರ ಆಸೆ. ಹೆರಿಗೆ ವೇಳೆ ತಾಯಿ-ಮಗು ಸುರಕ್ಷಿತವಾಗಿರಲಿ ಅಂತ ಬೇಡಿಕೊಳ್ಳುತ್ತಾರೆ. ಆದರೆ ಕೆಲವು ಬಾರಿ ಹಲವು ಕಾರಣಗಳಿಂದ ಹೆರಿಗೆ ವೇಳೆ ಸಮಸ್ಯೆಗಳು ಉಂಟಾಗುತ್ತದೆ. ಇತ್ತೀಚೆಗೆ ಸಹಜ ಹೆರಿಗೆಗಿಂತ ಸಿ-ಸೆಕ್ಷನ್ ಅಥವಾ ಸಿಸೇರಿಯನ್ ಹೆರಿಗೆಗಳೇ ಹೆಚ್ಚಾಗಿದೆ. ಈ ಪ್ರಕರಣದಲ್ಲಿ ಸಿಸೇರಿಯನ್ ಮಗುವಿನ ಪಾಲಿಗೆ ಎಂದು ಮಾಸದ ಗಾಯದಂತಾಗಿದೆ. ಅಮೆರಿಕಾದಲ್ಲಿ ಸಿಸೇರಿಯನ್ ವೇಳೆ ಮಗುವಿಗೆ ತೀವ್ರತರನಾದ ಗಾಯವಾಗಿದೆ.
ಅಮೆರಿಕಾದ ವಿಲಿಯಮ್ಸ್ ದಂಪತಿಯ ಮಗುವಿನ ಮುಖದ ಮೇಲೆ 13 ಹೊಲಿಗೆಗಳನ್ನು ಹಾಕಲಾಗಿದೆ. ವಿಲಿಯಮ್ಸ್ ದಂಪತಿ ಸಹಜ ಹೆರಿಗೆಗೆ ಒಲವು ತೋರಿದ್ದರು. ಆದರೆ ಮಗುವಿನ ಹೃದಯ ಬಡಿತ ಗೊತ್ತಾಗದ ಹಿನ್ನೆಲೆಯಲ್ಲಿ ತುರ್ತಾಗಿ ವೈದ್ಯರು ಸಿಸೇರಿಯನ್ ಮೊರೆ ಹೋಗಿದ್ದರು. ಸಿಸೇರಿಯನ್ ವೇಳೆ ಹೊಟ್ಟೆಯನ್ನು ಕತ್ತರಿಸುವಾಗ ಮಗುವಿನ ಕೆನ್ನೆಯೂ ಕಟ್ ಆಗಿದೆ. ಹೊಟ್ಟೆಯನ್ನು ಕತ್ತರಿಸುವ ಜಾಗಕ್ಕೆ ಸರಿಯಾಗಿ ಒಳಗಡೆ ಮಗುವಿನ ಮುಖ ಇದ್ದಿದ್ದರಿಂದ ಅನಾಹುತ ಸಂಭವಿಸಿದೆ.
ವೈದ್ಯರು ಹೇಳಿರುವ ಪ್ರಕಾರ ಪ್ರೆಸೆಂಟಾಗೆ ಹತ್ತಿರದಲ್ಲಿ ಮಗುವಿನ ಮುಖ ಇತ್ತು. ಹೀಗಾಗಿ ತಾಯಿಯ ಹೊಟ್ಟೆ ಕಟ್ ಮಾಡುವಾಗ ಮಗುವಿಗೆ ಗಾಯವಾಗಿದೆ ಎಂದು ತಿಳಿಸಿದ್ದಾರೆ. ಕೂಡಲೇ ಮಗುವನ್ನು ಹೊರ ತೆಗೆದು ಕೆನ್ನೆಗೆ ಹೊಲಿಗೆಗಳನ್ನು ಹಾಕಲಾಗಿದೆ. ಆಗ ತಾನೆ ಜನಿಸಿದ ಕಂದಮ್ಮ 13 ಹೊಲಿಗೆಗಳ ನೋವನ್ನು ಅನುಭವಿಸುವಂತಾಗಿದೆ. ಘಟನೆ ಬಗ್ಗೆ ನೋವನ್ನು ಹೊರ ಹಾಕಿರುವ ತಂದೆ, ವೈದ್ಯರು ಹೊಲಿಗೆ ಹಾಕಿದ್ದೇವೆ ಎಂದು ಹೇಳಿದ್ದಾರೆ. ಘಟನೆ ಹೇಗೆ ನಡೆಯಿತು ಎಂದು ವಿವರಿಸಿದ್ದಾರೆ. ಪ್ಲಾಸ್ಟಿಕ್ ಸರ್ಜರಿಯ ಮೂಲಕ ಎಲ್ಲಾ ಸರಿ ಮಾಡುವುದಾಗಿ ಹೇಳಿದ್ದಾರೆ. ಆದರೂ ಸಿಸೇರಿಯನ್ ಬಗ್ಗೆ ನನಗೆ ಅರ್ಥವಾಗದ ಸಂಗತಿ ಇದೆ ಎನಿಸುತ್ತಿದೆ ಎಂದಿದ್ದಾರೆ.
ಇದುವರೆಗೆ ಎಂದಿಗೂ ನಾನು ಇಂಥ ಸುದ್ದಿ ಕೇಳಿಲ್ಲ. ಸಿಸೇರಿಯನ್ನಿಂದ ಮಗುವಿಗೆ ಗಾಯವಾಗಿರೋದನ್ನು ನಾನು ಕೇಳಿಯೇ ಇಲ್ಲ ಎಂದು ತಂದೆ ಬೇಸರ ವ್ಯಕ್ತಪಡಿಸಿದ್ದಾರೆ. ಮಗುವಿನ ಅಜ್ಜ ಕೂಡ ನೊಂದಿದ್ದಾರೆ. ನಮ್ಮ ಕುಟುಂಬಕ್ಕೆ ಹೊಸ ಸದಸ್ಯೆಯ ಸೇರ್ಪಡೆ ಖುಷಿಗೆ ಈ ಘಟನೆ ಅಡ್ಡಿ ಆಗಿದೆ. ಇಡೀ ಘಟನೆ ಕೋಪ ತರಿಸುತ್ತದೆಯಾದರೂ ಏನೂ ಮಾಡುವಂತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: 30ರ ಅಸುಪಾಸಿನಲ್ಲಿ ಮದುವೆಯಾಗುವ ಮಹಿಳೆಯರು ಎಷ್ಟು ವರ್ಷದೊಳಗೆ ಮಕ್ಕಳು ಮಾಡಿಕೊಂಡರೆ ಉತ್ತಮ?
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ