ಉ. ಕೊರಿಯಾದ ಭಯಕ್ಕೆ ಮನೆಯೊಳಗೇ ಸುರಂಗ ಕೊರೆದ ಕೋಟ್ಯಾಧಿಪತಿ, ಬಳಿಕ ಮಾಡಿದ್ದೇನು ಗೊತ್ತಾ?


Updated:June 3, 2018, 4:21 PM IST
ಉ. ಕೊರಿಯಾದ ಭಯಕ್ಕೆ ಮನೆಯೊಳಗೇ ಸುರಂಗ ಕೊರೆದ ಕೋಟ್ಯಾಧಿಪತಿ, ಬಳಿಕ ಮಾಡಿದ್ದೇನು ಗೊತ್ತಾ?

Updated: June 3, 2018, 4:21 PM IST
ನ್ಯೂಸ್ 18 ಕನ್ನಡ

ವಾಷಿಂಗ್ಟನ್(ಜೂ. 06): ಅಮೆರಿಕಾದ ಕೋಟ್ಯಾಧಿಪತಿಯೊಬ್ಬ ತನ್ನ ಮನೆಯೊಳಗೆ ಸುರಂಗ ನಿರ್ಮಿಸುತ್ತಿದ್ದ ಕಾರ್ಮಿಕನನ್ನು ಹತ್ಯೆಗೈದ ಆರೋಪದಡಿಯಲ್ಲಿ ಜೈಲು ಪಾಲಾಗಿದ್ದಾನೆ. ಈ ವ್ಯಕ್ತಿಯು ಉತ್ತರ ಕೊರಿಯಾದ ಭಯದಿಂದ ರಾಜಧಾನಿ ವಾಷಿಂಗ್ಟನ್​ ಬಳಿಯಲ್ಲಿರುವ ತನ್ನ ಮನೆಯೊಳಗೆ ಸುರಂಗ ನಿರ್ಮಿಸುತ್ತಿದ್ದ ಎನ್ನಲಾಗಿದೆ.

'WRC- TV' ನೀಡಿರುವ ವರದಿಯಲ್ಲಿ ಆರೋಪಿ ಡೇನಿಯಲ್​ ಬೇಕ್ವಿಟ್ ಓರ್ವ ಕೋಟ್ಯಾಧಿಪತಿ ಹಾಗೂ ಉದ್ಯಮಿಯಾಗಿದ್ದರು. ಇವರು ನ್ಯಾಯಾಲಯದಲ್ಲಿ ಒಂದು ಲಕ್ಷ ಡಾಲರ್ ದಂಡ ಕಟ್ಟಿ ಸೋಮವಾರ ಬೆಳಗ್ಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆಂದು ಹೇಳಲಾಗಿದೆ.

ವರದಿಯನ್ವಯ 27 ವರ್ಷದ ಬೆಕ್ವಿಟ್ ವಿರುದ್ಧ 2017ರ ಸೆಪ್ಟೆಂಬರ್​ನಲ್ಲಿ 21 ವರ್ಷದ ಅಸ್ಕಿಯಾ ಖಾಫ್ರಾ ಹತ್ಯೆಗೆ ಸಂಬಂಧಿಸಿದಂತೆ ಸೆಕೆಂಡ್​ ಡಿಗ್ರಿ ಮರ್ಡರ್​ ಹಾಗೂ ಉದ್ದೇಶಪೂರ್ವಕವಾಗಿ ಮಾಡಿದ ಕೊಲೆ ಪ್ರಕರಣದಡಿಯಲ್ಲಿ ಕೇಸ್​ ದಾಖಲಾಗಿತ್ತು.

ಬೇಕ್ವಿಟ್ ವಾಷಿಂಗ್ಟನ್​ನ ಉಪನಗರ ಮೇರಿಲ್ಯಾಂಡ್​ನ ಮೆಥೆಸೆಡಾದಲ್ಲಿ ವಾಸವಾಗಿದ್ದರು. ಇನ್ನು ಅದೇ ಮನೆಯಲ್ಲಿ ಸುರಂಗ ಮಾರ್ಗ ಕೊರೆಯುತ್ತಿದ್ದ ಖಾಫ್ರಾ ಗುಂಡೇಟು ತಗುಲಿ ಸಾವನ್ನಪ್ಪಿದ್ದ ಎಂದು ತಿಳಿದು ಬಂದಿದೆ.
First published:June 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...