US military: ರಾತ್ರೋ ರಾತ್ರಿ ಅಫ್ಘಾನ್​ನ​ ಬಾಗ್ರಾಮ್ ವಾಯುನೆಲೆ​ ತೊರೆದ ಅಮೆರಿಕ ಸೇನಾಪಡೆ; ಕಾರಣವೇನು?

ಅಮೆರಿಕ ಸೇನಾ ಪಡೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗಿದ್ದು, ಆಫ್ಘನ್ನರಿಗೆ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಬಿಟ್ಟು ಹೋಗಿದ್ದಾರೆ

ಅಮೆರಿಕ ಸೇನಾ ಪಡೆ ಬಿಟ್ಟು ಹೋದ ಶಸ್ತ್ರಗಳ ಪರಿಶೀಲನೆ ನಡೆಸುತ್ತಿರುವ ಅಫ್ಘಾನಿಸ್ತಾನ ಸೈನಿಕ

ಅಮೆರಿಕ ಸೇನಾ ಪಡೆ ಬಿಟ್ಟು ಹೋದ ಶಸ್ತ್ರಗಳ ಪರಿಶೀಲನೆ ನಡೆಸುತ್ತಿರುವ ಅಫ್ಘಾನಿಸ್ತಾನ ಸೈನಿಕ

 • Share this:
  ಅಪಘಾನಿಸ್ತಾನದ ಬಾಗ್ರಾಮ್​ನ ಏರ್​ಫೀಲ್ಡ್​ನಲ್ಲಿ ಬೀಡು ಬಿಟ್ಟಿದ್ದ ಅಮೆರಿಕದ ಸೇನಾಪಡೆಯನ್ನು ರಾತ್ರೋ ರಾತ್ರಿ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಅಪಘಾನ್​ ಅವರಿಗೆ ತಿಳಿಯದಂತೆ ಸೇನಾಪಡೆ ಮರಳಿದೆ ಎಂದು ಸೇನಾ ನೆಲೆಯ ಹೊಸ ಕಮಾಂಡರ್​ ತಿಳಿಸಿದ್ದಾರೆ. ಶುಕ್ರವಾರ ಇಲ್ಲಿನ ಸ್ಥಳೀಯ ಕಾಲಾಮಾನದಂತೆ ಬೆಳಗಿನ ಹೊತ್ತು 3 ಗಂಟೆ ಸರಿಸುಮಾರಿನಲ್ಲಿ ಬಾಗ್ರಾಮ್​ನಿಂದ ಯುಎಸ್​ ಮಿಲಿಟರಿ ಪಡೆ ಹೊರಟಿದೆ. ಇನ್ನು ಈ ಬಾಗ್ರಾಮ್​ನಲ್ಲಿ ಜೈಲಿದ್ದು ಇಲ್ಲಿ 5 ಸಾವಿರ ತಾಲಿಬಾನಿ ಖೈದಿಗಳು ಇದ್ದಾರೆ ಎಂದು ತಿಳಿದು ಬಂದಿದೆ. ಅಮೆರಿಕ ಸೇನಾ ಪಡೆ ಹಿಂದಿರುಗುತ್ತಿದ್ದಂತೆ ಅಪ್ಘಾನಿಸ್ತಾದಲ್ಲಿ ತಾಲಿಬಾನರು ಸಕ್ರಿಯರಾಗಿದ್ದಾರೆ. ಈ ಹಿನ್ನಲೆ ಅಫ್ಘಾನಿಸ್ತಾನದ ಸೇನಾ ಪಡೆ ಬಾಗ್ರಾಮದಲ್ಲಿರುವ ತಾಲಿಬಾನಿಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಜನರಲ್​ ಕೊಹಿಸ್ತಾನಿ ತಿಳಿಸಿದ್ದಾರೆ

  ಈಗಾಗಲೇ ಸೇನಾಪಡೆಗಳು ಗ್ರಾಮೀಣ ಪ್ರದೇಶಗಳಲ್ಲಿ ಚಲನವಲನ ಶುರು ಮಾಡಿದೆ. ಅಮೆರಿಕದ ಜೊತೆ ನಮ್ಮ ಹೋಲಿಕೆ ಮಾಡುವುದು ದೊಡ್ಡ ವ್ಯತ್ಯಾಸ ಆದರೆ, ಸಾಮರ್ಥ್ಯದ ಅನುಸಾರ ನಾವು ಪ್ರಯತ್ನ ನಡೆಸಲಿದ್ದೇವೆ. ಸಾಧ್ಯವಾದಷ್ಟು ಮಟ್ಟಿಗೆ ಜನರನ್ನು ರಕ್ಷಿಸಿ, ಸೇವೆ ಮಾಡುತ್ತೇವೆ ಎಂದಿದ್ದಾರೆ.

  ತನ್ನ ಸೇನಾನೆಲೆಯನ್ನು ವಾಪಸ್​ ಕರೆಸಿಕೊಂಡ ಕುರಿತು ಶುಕ್ರವಾರ ತಿಳಿಸಿದ್ದ ಅಮೆರಿಕ, ತನ್ನ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸಿದ ಹಿನ್ನಲೆ ಬಾಗ್ರಾಮ್ ಅನ್ನು ಖಾಲಿ ಮಾಡಿರುವುದಾಗಿ ಹೇಳಿತ್ತು

  ಇದನ್ನು ಓದಿ: ಸುಲಭ, ಸಹಜ ಹೆರಿಗೆಗಾಗಿ ಈ ಐದು ಆಸನ ಮಾಡುವುದು ಉತ್ತಮ

  ಅಮೆರಿಕ ಸೇನಾ ಪಡೆ ಹತ್ತಾರು ಸಾವಿರ ಬಾಟಲಿಗಳು ನೀರು, ಶಕ್ತಿ ಪಾನೀಯಗಳು ಮತ್ತು ಮಿಲಿಟರಿ ಸಿದ್ದ ಆಹಾರ ಸೇರಿದಂತೆ ಕೀಲಿಗಳಿಲ್ಲದ ನೂರಾರು ಶಸ್ತ್ರಸಜ್ಜಿತ ವಾಹನಗಳನ್ನು ಸಹ ಅವರು ಸಾವಿರಾರು ನಾಗರಿಕ ವಾಹನಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

  ಇದನ್ನು ಓದಿ: ಮೃತ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ನೀಡುವಂತೆ ಹೈ ಕೋರ್ಟ್​ ಸೂಚನೆ

  ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗಿದ್ದು, ಆಫ್ಘನ್ನರಿಗೆ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಜನರಲ್ ಕೊಹಿಸ್ತಾನಿ ತಿಳಿಸಿದ್ದಾರೆ.

  ರಾತ್ರೋ ರಾತ್ರಿ ತಮ್ಮ ಸೇನಾಪಡೆಯನ್ನು ಹಿಂದೆ ಕರೆಸಿಕೊಂಡ ಕುರಿತು ಮಾತನಾಡಿರುವ ಅಮೆರಿಕ ಮಿಲಿಟರಿ ವಕ್ತಾರ ಕರ್ನಲ್​ ಸೋನಿ ಲೆಗ್ಗೆಟ್​, ಯುಎಸ್ ಪಡೆಗಳು ಅಫ್ಘಾನ್​ ನಾಯಕರೊಂದಿಗೆ ವಿವಿಧ ನೆಲೆಗಳಿಂದ ನಿರ್ಗಮಿಸಲು ಸಮನ್ವಯ ಸಾಧಿಸಿವೆ ಎಂದಿದ್ದಾರೆ.
  ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ವಿರುದ್ಧದ ಹೋರಾಟಕ್ಕೆ ಅಫ್ಘಾನಿಸ್ತಾನದ ಸರ್ಕಾರಿ ಪಡೆಗಳಿಗೆ ನೆರವಾಗಲು ಅಮೆರಿಕ ಅಧ್ಯಕ್ಷ ಜೊ ಬೈಡೆನ್​ ಅಮೆರಿಕ ಸೇನಾ ಪಡೆಯನ್ನು ಬಾರ್ಗಾನ್​ಗೆ ಕಳುಹಿಸಿದ್ದರು. ಅಫ್ಘಾನ್​ ಅಧ್ಯಕ್ಷ ಅಶ್ರಫ್​ ಘನಿ ಅವರ ಆಹ್ವಾನದ ಮೇರೆಗೆ ಅಮೆರಿಕ ಸೇನೆ ಇಲ್ಲಿ ಬಿಡು ಬಿಟ್ಟಿತ್ತು.
  Published by:Seema R
  First published: