HOME » NEWS » National-international » US MAN WAS IN JAIL FOR 20 YEARS FOR STEALING TWO SHIRTS SESR

ಕೇವಲ 2 ಶರ್ಟ್ ಕದಿದ್ದಕ್ಕೆ 20 ವರ್ಷ ಜೈಲು; ಬಿಡುಗಡೆಯಾಗುವಷ್ಟರಲ್ಲಿ ಪತ್ನಿ-ಮಗನನ್ನು ಕಳೆದುಕೊಂಡಿದ್ದ ನತದೃಷ್ಟ!

23 ವರ್ಷಗಳ ಶಿಕ್ಷೆಯನ್ನು ಕಡಿತಗೊಳಿಸುವಷ್ಟರಲ್ಲಿ ಫ್ರಾಂಕ್ 20 ವರ್ಷಗಳ ಕಾಲ ಜೈಲಿನಲ್ಲಿ ಕಳೆದಾಗಿತ್ತು. ಕೇವಲ 3 ವರ್ಷಗಳ ಶಿಕ್ಷೆಯಿಂದ ಮಾತ್ರ ಪಾರಾಗಿದ್ದಾರೆ.

news18-kannada
Updated:April 15, 2021, 6:19 PM IST
ಕೇವಲ 2 ಶರ್ಟ್ ಕದಿದ್ದಕ್ಕೆ 20 ವರ್ಷ ಜೈಲು; ಬಿಡುಗಡೆಯಾಗುವಷ್ಟರಲ್ಲಿ ಪತ್ನಿ-ಮಗನನ್ನು ಕಳೆದುಕೊಂಡಿದ್ದ ನತದೃಷ್ಟ!
ಫ್ರಾಂಕ್​​
  • Share this:
ನ್ಯೂಯಾರ್ಕ್ (ಏ. 15): ಬಟ್ಟೆಯಂಗಡಿಯೊಂದರಲ್ಲಿ ಕೇವಲ 2 ಶರ್ಟ್ ಕದ್ದ ಅಪರಾಧಕ್ಕೆ ವ್ಯಕ್ತಿಯೊಬ್ಬರು ಬರೋಬ್ಬರಿ 20 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿರುವ ಕರುಣಾಜನಕ ಘಟನೆ ಅಮೆರಿಕಾದಲ್ಲಿ ನಡೆದಿದೆ. ಫ್ರಾಂಕ್ ಎಂಬಾತ ಸಣ್ಣ ತಪ್ಪಿಗೆ ಸುದೀರ್ಘ ಕಾಲ ಜೈಲುವಾಸ ಅನುಭಿವಿಸಿ ಈಗ ಬಿಡುಗಡೆಯಾಗಿದ್ದಾರೆ. ಕೆಲ ಪ್ರಜ್ಞಾವಂತರು ಪ್ರಾಂಕ್​​ಗೆ ವಿಧಿಸಿದ್ದ ಅಮಾನವೀಯ ಶಿಕ್ಷೆಯನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಿ ಜಯಗಳಿಸಿದ್ದಾರೆ. 23 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಕೋರ್ಟ್ ಕೊನೆಯ 3 ವರ್ಷಗಳ ಜೈಲುವಾಸವನ್ನು ರದ್ದುಗೊಳಿಸಿದೆ. ಕಡು ಬಡವನಾಗಿದ್ದ ಫ್ರಾಂಕ್​ಗೆ ಪತ್ನಿ, ಒಬ್ಬ ಮಗನಿದ್ದ. ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಕಳ್ಳತನಗಳನ್ನು ಮಾಡುತ್ತಿದ್ದರು. ಆದರೆ, ಎಂದೂ ಯಾರನ್ನೂ ಹೆದರಿಸಿ ಲೂಟಿ ಮಾಡುತ್ತಿರಲಿಲ್ಲ. ಸೂಪರ್ ಮಾರ್ಕೆಟ್, ಬಟ್ಟೆ ಶಾಪ್​ಗಳಲ್ಲಿ ಯಾರಿಗೆ ತಿಳಿಯದಂತೆ ಒಂದೆರೆಡು ವಸ್ತುಗಳನ್ನು ಕಳವು ಮಾಡುತ್ತಿದ್ದರು. ಇದೇ ರೀತಿ ಕಳವು ಮಾಡಿ ಸಿಕ್ಕಿಬಿದ್ದಿದ್ದರು.

ಆಫ್ರಿಕನ್-ಅಮೆರಿಕನ್ ಆಗಿದ್ದ ಫ್ರಾಂಕ್​ ಅನ್ನು 2000 ಇಸವಿಯ ಸೆಪ್ಟೆಂಬರ್​ನಲ್ಲಿ ಬಂಧಿಸಲಾಗಿತ್ತು. ಆಗ 47 ವರ್ಷದ ಫ್ರಾಂಕ್​ಗೆ ಅಲ್ಲಿನ ಕೋರ್ಟ್ 23 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು.

ಬಡ ಕುಟುಂಬ ಫ್ರಾಂಕ್​ಗಾಗಿ ಉತ್ತಮ ಕಾನೂನು ಸೌಲಭ್ಯ ನೀಡಲು ಸಾಧ್ಯವಾಗಲಿಲ್ಲ. ಇದರಿಂದ ಫ್ರಾಂಕ್ ಜೈಲಿನಲ್ಲೇ ತಮ್ಮ ಜೀವನವನ್ನು ಸವೆಸುವಂತಾಯಿತು. ಫ್ರಾಂಕ್ ಪ್ರಕರಣವನ್ನು ಗಮನಿಸಿದ ಅಮೆರಿಕಾದ ಕೆಲ ಪ್ರಜ್ಞಾವಂತರು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದರು. ಸಣ್ಣ ಅಪರಾಧಕ್ಕಾಗಿ ಇಷ್ಟು ಕಠಿಣ ಶಿಕ್ಷೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ಅಮೆರಿಕಾದಲ್ಲಿ ಬಡ ಕಪ್ಪ ವರ್ಣಿಯರ ಮೇಲಾಗುತ್ತಿರುವ ಶೋಷಣೆಯಿದು.

ಇದನ್ನು ಓದಿ: ಸೋನು ನಿಮಗ್ಯಾರು ಸಮ..? ಮತ್ತೆ ಕೊರೋನಾ ಕಷ್ಟದಲ್ಲಿ ಅಪತ್ಭಾಂದವನಾದ ಹೃದಯವಂತ ನಟ

ಬಿಳಿಯರಿಗೆ ಇದೇ ರೀತಿ ಕಠಿಣ ಶಿಕ್ಷೆಗಳನ್ನು ನೀಡಿದ ಉದಾಹರಣೆಗಳೇ ಇಲ್ಲ. ನ್ಯಾಯ ಎಂಬುವುದು ವರ್ಣದ ಮೇಲೆ ನಿರ್ಧಾರವಾಗಬಾರದು ಎಂದು ಆಕ್ರೋಶ ವ್ಯಕ್ತಡಿಸಿದ್ದರು.
ಹೋರಾಟದ ಫಲವಾಗಿ ಕೋರ್ಟ್ ತನ್ನ ಶಿಕ್ಷೆಯನ್ನು ಕಡಿತಗೊಳಿಸಿ ಫ್ರಾಂಕ್​ನ ಬಿಡುಗಡೆ ಮಾಡಿದೆ. 23 ವರ್ಷಗಳ ಶಿಕ್ಷೆಯನ್ನು ಕಡಿತಗೊಳಿಸುವಷ್ಟರಲ್ಲಿ ಫ್ರಾಂಕ್ 20 ವರ್ಷಗಳ ಕಾಲ ಜೈಲಿನಲ್ಲಿ ಕಳೆದಾಗಿತ್ತು. ಕೇವಲ 3 ವರ್ಷಗಳ ಶಿಕ್ಷೆಯಿಂದ ಮಾತ್ರ ಪಾರಾಗಿದ್ದಾರೆ. ಫ್ರಾಂಕ್ ಜೈಲಿನಿಂದ ಬಿಡುಗಡೆ ಆಗುವಷ್ಟರಲ್ಲಿ ಆತನ ಪತ್ನಿ, ಮಗ, ಇಬ್ಬರು ಸೋದರರು ಮೃತಪಟ್ಟಿದ್ದರು.

ಫ್ರಾಂಕ್​ನ ಕುಟುಂಬವೇ ಸಾವಿನ ಮನೆ ಸೇರಿಯಾಗಿತ್ತು. 67 ವರ್ಷದ ಫ್ರಾಂಕ್ ಜೈಲಿನಿಂದ ಬಿಡುಗಡೆಯಾದರೂ ಒಬ್ಬಂಟಿ. ಕೇವಲ 2 ಶರ್ಟ್ ಕದ್ದ ಅಪರಾಧಕ್ಕೆ ಫ್ರಾಂಕ್ ತನ್ನದೆಲ್ಲವನ್ನೂ ಕಳೆದುಕೊಂಡಿದ್ದಾರೆ.(ವರದಿ: ಕಾವ್ಯಾ ವಿ)
Published by: Seema R
First published: April 15, 2021, 6:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories