ಮೋದಿ ಟ್ರಂಪ್​ ಭೇಟಿ; ಅಮೆರಿಕಾದ ಪ್ರಮುಖ ವ್ಯಾಪಾರ ವಹಿವಾಟು ದೇಶಗಳ ಪಟ್ಟಿಯಲ್ಲಿ ಮತ್ತೆ ಭಾರತಕ್ಕೆ ಸ್ಥಾನ ಸಿಗುವ ಸಾಧ್ಯತೆ?

ಅಮೆರಿಕಾದ ವಸ್ತುಗಳಿಗೆ ಭಾರತ ಸರ್ಕಾರ ಇಲ್ಲಿ ಹೆಚ್ಚಿನ ಪ್ರಮಾಣದ ತೆರಿಗೆ ವಿಧಿಸುತ್ತಿದೆ ಎಂದು ಆರೋಪಿಸಿದ್ದ ಅಮೆರಿಕ, ಈ ಹಿನ್ನೆಲೆಯಲ್ಲಿ ತನ್ನ ದೇಶದ ಪ್ರಮುಖ ವಾಣೀಜ್ಯಿಕ ರಾಷ್ಟ್ರಗಳ ಪಟ್ಟಿಯಿಂದ ಭಾರತದ ಹೆಸರನ್ನು ಕಳೆದ ಜೂನ್ ತಿಂಗಳಲ್ಲಿ ಹಠಾತ್ ಕೈಬಿಟ್ಟಿತ್ತು.

MAshok Kumar | news18-kannada
Updated:September 19, 2019, 7:16 PM IST
ಮೋದಿ ಟ್ರಂಪ್​ ಭೇಟಿ; ಅಮೆರಿಕಾದ ಪ್ರಮುಖ ವ್ಯಾಪಾರ ವಹಿವಾಟು ದೇಶಗಳ ಪಟ್ಟಿಯಲ್ಲಿ ಮತ್ತೆ ಭಾರತಕ್ಕೆ ಸ್ಥಾನ ಸಿಗುವ ಸಾಧ್ಯತೆ?
ನರೇಂದ್ರ ಮೋದಿ ಮತ್ತು ಡೋನಾಲ್ಡ್​ ಟ್ರಂಪ್​​
  • Share this:
ವಾಣಿಜ್ಯ ವಹಿವಾಟಿನ ಅಡಿಯಲ್ಲಿ ಹತ್ತಾರು ಸವಲತ್ತುಗಳನ್ನು ಪಡೆಯಲು ಅನುವಾಗುವ ಅಮೆರಿಕಾ ದೇಶದ ಪ್ರಮುಖ ವಾಣೀಜ್ಯಿಕ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮತ್ತೆ ಸ್ಥಾನ ಪಡೆಯುವ ಎಲ್ಲಾ ಸಾಧ್ಯತೆಗಳು ಇದೆ. ಅಮೆರಿಕ ಮಾರುಕಟ್ಟೆಯಲ್ಲಿ ಈ ವಿಶೇಷ ಸ್ಥಾನಮಾನ ಪಡೆಯಲು ಅವಶ್ಯಕವಾದ ಎಲ್ಲಾ ಅರ್ಹತೆಗಳು ಭಾರತಕ್ಕೆ ಇದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಅಮೆರಿಕ ಪ್ರವಾಸದಲ್ಲಿದ್ದು, ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದ್ದು, ಇದು ಭಾರತಕ್ಕೆ ಪೂರಕವಾಗಿರಲಿದೆ ಎಂದು ಹೇಳಲಾಗುತ್ತಿದೆ.

ಭಾರತದಿಂದ ಅಮೆರಿಕಾಗೆ ನೂರಾರು ವಸ್ತುಗಳನ್ನು ರಫ್ತು ಮಾಡಲಾಗುತ್ತಿದೆ. ಕಳೆದ ಜೂನ್ ತಿಂಗಳ ವರೆಗೆ ಅಮೆರಿಕಾದ ಪ್ರಮುಖ ವಾಣಿಜ್ಯ ಮತ್ತು ವ್ಯಾಪಾರ ದೇಶಗಳ ಪಟ್ಟಿಯಲ್ಲಿ ಭಾರತ ಖಾಯಂ ಸದಸ್ಯ ರಾಷ್ಟ್ರವಾಗಿತ್ತು. ಹೀಗಾಗಿ ಭಾರತಕ್ಕೆ ಸಾಕಷ್ಟು ಅನುಕೂಲಗಳು ಲಭ್ಯವಾಗುತ್ತಿತ್ತು. ಇದರ ಅಡಿಯಲ್ಲಿ 2017-18 ರ ಅವಧಿಯಲ್ಲಿ ಮಾತ್ರ ಅಮೆರಿಕದಲ್ಲಿ ಭಾರತ 39 ಸಾವಿರ ಕೋಟಿ ತೆರಿಗೆ ವಿನಾಯಿತಿ ಪಡೆದಿತ್ತು.

ಆದರೆ, ಅಮೆರಿಕಾದ ವಸ್ತುಗಳಿಗೆ ಭಾರತ ಸರ್ಕಾರ ಇಲ್ಲಿ ಹೆಚ್ಚಿನ ಪ್ರಮಾಣದ ತೆರಿಗೆ ವಿಧಿಸುತ್ತಿದೆ ಎಂದು ಆರೋಪಿಸಿದ್ದ ಅಮೆರಿಕ, ಈ ಹಿನ್ನೆಲೆಯಲ್ಲಿ ತನ್ನ ದೇಶದ ಪ್ರಮುಖ ವಾಣೀಜ್ಯಿಕ ರಾಷ್ಟ್ರಗಳ ಪಟ್ಟಿಯಿಂದ ಭಾರತದ ಹೆಸರನ್ನು ಕಳೆದ ಜೂನ್ ತಿಂಗಳಲ್ಲಿ ಹಠಾತ್ ಕೈಬಿಟ್ಟಿತ್ತು.

ಅಮೆರಿಕ ದೇಶದ ಈ ತೀರ್ಮಾನ ಎರಡೂ ದೇಶಗಳ ವ್ಯಾಪಾರ ವಹಿವಾಟಿನ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮ ಬೀರಿತ್ತು. ಹೀಗಾಗಿ ಈ ವಿಚಾರವನ್ನು ಬಗೆಹರಿಸಬೇಕು ಎಂದು ಅಮೆರಿಕ ದೇಶದ ಸಂಸದರು ಅಲ್ಲಿನ ಸರ್ಕಾರವನ್ನು ಕಳೆದ ಕೆಲ ತಿಂಗಳುಗಳಿಂದ ಒತ್ತಾಯಿಸುತ್ತಿದ್ದಾರೆ.

ಪರಿಣಾಮ ಅಮೆರಿಕ ಸರ್ಕಾರ ಭಾರತವನ್ನು ಮತ್ತೆ ತನ್ನ ದೇಶದ ಪ್ರಮುಖ ವಾಣಿಜ್ಯೀಕ ರಾಷ್ಟ್ರಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದು ಬಹುತೇಕ ಖಚಿತವಾಗಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸ್ತುತ ಅಮೆರಿಕ ಪ್ರವಾಸ ಸಹ ಈ ವಿಚಾರದಲ್ಲಿ ಪರಿಣಾಮಕಾರಿಯಾದ ಪಾತ್ರ ನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಪ್ರತಿ ಕಾಶ್ಮೀರಿಗಳನ್ನು ಪ್ರೀತಿಯಿಂದ ಕಾಣಬೇಕು, ಕಣಿವೆ ರಾಜ್ಯದಲ್ಲಿ ಹೊಸ ಸ್ವರ್ಗವನ್ನು ನಿರ್ಮಿಸಬೇಕು: ಪ್ರಧಾನಿ ನರೇಂದ್ರ ಮೋದಿ ಕರೆ
First published:September 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading