HOME » NEWS » National-international » US GOVT WELCOMES INDIAS AGRI REFORMS AND SUPPORTS FARMERS PEACEFUL PROTESTS SNVS

ಭಾರತದ ಕೃಷಿ ಸುಧಾರಣೆಗಳಿಗೆ ಅಮೆರಿಕ ಸ್ವಾಗತ; ರೈತರ ಶಾಂತಿಯುತ ಪ್ರತಿಭಟನೆಗೂ ಭರಪೂರ ಬೆಂಬಲ

ಜೋ ಬೈಡನ್ ನೇತೃತ್ವದ ಅಮೆರಿಕ ಸರ್ಕಾರ ಭಾರತದ ಕೃಷಿ ಕಾಯ್ದೆಗಳಿಗೆ ಬೆಂಬಲ ವ್ಯಕ್ತಪಡಿಸಿದೆ. ಹಾಗೆಯೇ, ರೈತರ ಶಾಂತಿಯುತ ಪ್ರತಿಭಟನೆಗಳು ಪ್ರಜಾಪ್ರಭುತ್ವದ ಆರೋಗ್ಯ ಉತ್ತಮ ಎಂದೂ ಅಭಿಪ್ರಾಯಪಟ್ಟಿದೆ.

news18
Updated:February 4, 2021, 1:21 PM IST
ಭಾರತದ ಕೃಷಿ ಸುಧಾರಣೆಗಳಿಗೆ ಅಮೆರಿಕ ಸ್ವಾಗತ; ರೈತರ ಶಾಂತಿಯುತ ಪ್ರತಿಭಟನೆಗೂ ಭರಪೂರ ಬೆಂಬಲ
ಪಂಜಾಬ್ ರೈತರ ಪ್ರತಿಭಟನೆ
  • News18
  • Last Updated: February 4, 2021, 1:21 PM IST
  • Share this:
ವಾಷಿಂಗ್ಟನ್: ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳು ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಹಾಗೆಯೇ, ಭಾರತ ಸರ್ಕಾರದ ಕೃಷಿ ಸುಧಾರಣಾ ಕ್ರಮಗಳೂ ಚರ್ಚೆಗೆ ಗ್ರಾಸವಾಗಿವೆ. ಈ ವಿಚಾರದಲ್ಲಿ ಸೆಲಬ್ರಿಟಿಗಳ ದಾಳಿ ಪ್ರತಿದಾಳಿಗಳ ಮಧ್ಯೆ ಅಮೆರಿಕದ ನೂತನ ಸರ್ಕಾರ ಭಾರತದ ಕೃಷಿ ಕಾಯ್ದೆಗಳನ್ನ ಸ್ವಾಗತಿಸಿದೆ. ಭಾರತದ ಮಾರುಕಟ್ಟೆಯ ಕ್ಷಮತೆ ಹಚ್ಚಿಸಲು ಮತ್ತು ಕೃಷಿ ಕ್ಷೇತ್ರಕ್ಕೆ ಖಾಸಗಿ ವಲಯದ ಬಂಡವಾಳ ಹರಿದುಬರಲು ಈ ಕಾಯ್ದೆಗಳು ಸಹಕಾರಿಯಾಗಲಿವೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ. ಹಾಗೆಯೇ, ರೈತರ ಶಾಂತಿಯುತ ಪ್ರತಿಭಟನೆಗಳು ಪ್ರಜಾತಂತ್ರ ವ್ಯವಸ್ಥೆಯ ಆರೋಗ್ಯಕ್ಕೆ ಒಳ್ಳೆಯದು ಎಂದೂ ಹೇಳಿದೆ.

ಭಾರತದ ಈ ಆಂತರಿಕ ಬೇಗುದಿ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿದ ವಿದೇಶಾಂಗ ಇಲಾಖೆ ವಕ್ತಾರರರೊಬ್ಬರು, ಯಾವುದೇ ವಿಚಾರದ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಅಮೆರಿಕದ ನಿಲುವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. “ಶಾಂತಿಯುತ ಪ್ರತಿಭಟನೆಯು ಅಪ್ಪಟ ಪ್ರಜಾತಂತ್ರ ವ್ಯವಸ್ಥೆಯ ಸಂಕೇತವಾಗಿದೆ. ಭಾರತದ ಸರ್ವೋಚ್ಚ ನ್ಯಾಯಾಲಯ ಕೂಡ ಇದನ್ನೇ ಪ್ರತಿಪಾದಿಸಿದೆ” ಎಂದು ಅಮೆರಿಕದ ಈ ವಕ್ತಾರರು ಹೇಳಿದ್ಧಾರೆ.

ಇದನ್ನೂ ಓದಿ: Farmers Protest: ಕಗ್ಗಂಟಾಗಿರುವ ಕೃಷಿ ಕಾನೂನುಗಳನ್ನು ಹಿಂಪಡೆಯುವ ವಿಚಾರ, ದೆಹಲಿ ಗಡಿಗಳು ಬಂದ್

ಇದೇ ವೇಳೆ, ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗಳಿಗೆ ಅಮೆರಿಕದ ಹಲವು ಜನಪ್ರತಿನಿಧಿಗಳು ಬೆಂಬಲ ನೀಡಿದ್ದಾರೆ. ಹಾಗೆಯೇ, ರೈತರ ಪ್ರತಿಭಟನೆಗಳನ್ನ ಹತ್ತಿಕ್ಕಲು ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಭಾರತದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ನಡೆಸಲಾಗುತ್ತಿರುವ ಶಾಂತಿಯುತ ಪ್ರತಿಭಟನೆಗಳ ವಿರುದ್ಧ ಸರ್ಕಾರ ತೆಗೆದುಕೊಳ್ಳುತ್ತಿದೆ ಎನ್ನಲಾದ ಕ್ರಮಗಳು ಕಳವಳಕಾರಿಯಾಗಿದೆ” ಎಂದು ಆತಂಕ ವ್ಯಕ್ತಪಡಿಸಿದ ಅಮೆರಿಕನ್ ಸಂಸದೆ ಹಾಲೇ ಸ್ಟೀವನ್ಸ್, ಪ್ರತಿಭಟನಾನಿರತ ರೈತರ ಜೊತೆ ಮೋದಿ ಸರ್ಕಾರ ಪರಿಣಾಮಕಾರಿ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಎಂದು ತಮ್ಮ ಹೇಳಿಕೆಯಲ್ಲಿ ಸಲಹೆ ನೀಡಿದ್ಧಾರೆ.

“ಭಾರತ ತನ್ನ ಮೂಲಭೂತ ಪ್ರಜಾತಂತ್ರೀಯ ಹಕ್ಕುಗಳನ್ನ ರಕ್ಷಣೆ ಮಾಡಬೇಕು. ಮಾಹಿತಿ ಸರಾಗವಾಗಿ ಹರಿದುಬರಬೇಕು. ಇಂಟರ್ನೆಟ್ ಕನೆಕ್ಷನ್ ಮರುಸ್ಥಾಪಿಸಬೇಕು. ಪ್ರತಿಭಟನೆಯ ಸುದ್ದಿ ಬಿತ್ತರಿಸಿದ ಕಾರಣಕ್ಕೆ ಬಂಧಿತರಾಗಿದ್ದ ಎಲ್ಲಾ ಪತ್ರಕರ್ತರನ್ನೂ ಬಿಡುಗಡೆ ಮಾಡಬೇಕು” ಎಂದು ಮತ್ತೊಬ್ಬ ಅಮೆರಿಕನ್ ಸಂಸದೆ ಇಲ್ಹನ್ ಒಮರ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕಡೆಗೂ ಗೆಲ್ಲುವವರು ರೈತರೇ, ಕೇಂದ್ರ ಸರ್ಕಾರ ಈಗಲೇ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಲಿ: ರಾಹುಲ್ ಗಾಂಧಿ

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಂಬಂಧಿ ಮೀನಾ ಹ್ಯಾರಿಸ್ ಅವರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಆಕ್ರಮಣಕ್ಕೊಳಗಾಗಿದೆ ಎಂದು ಹೇಳುತ್ತಾ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಭಾರತದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿರುವುದು ಹಾಗು ರೈತ ಪ್ರತಿಭಟನಾಕಾರರ ವಿರುದ್ಧ ಅರೆಸೇನಾಪಡೆ ನಡೆಸಿದ ಹಿಂಸಾಚಾರಗಳಿಂದ ನಾವೆಲ್ಲರೂ ವ್ಯಗ್ರಗೊಳ್ಳಬೇಕಿದೆ ಎಂದು ಮೀನಾ ಹ್ಯಾರಿಸ್ ಟ್ವೀಟ್ ಮಾಡಿದ್ದಾರೆ.
Published by: Vijayasarthy SN
First published: February 4, 2021, 1:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories