• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Donald Trump: ಡೊನಾಲ್ಡ್ ಟ್ರಂಪ್​ಗೆ ಬಿಗ್ ಶಾಕ್: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೋಷಿ, ಭಾರೀ ದಂಡ!

Donald Trump: ಡೊನಾಲ್ಡ್ ಟ್ರಂಪ್​ಗೆ ಬಿಗ್ ಶಾಕ್: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೋಷಿ, ಭಾರೀ ದಂಡ!

ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್

ವಿಚಾರಣೆಯ ಸಮಯದಲ್ಲಿ, ನ್ಯಾಯಪೀಠದ ಒಂಬತ್ತು ಸದಸ್ಯರು ಇ ಜೀನ್ ಕ್ಯಾರೊಲ್ ಅವರ ಮೇಲಿನ ಅತ್ಯಾಚಾರದ ಆರೋಪವನ್ನು ವಜಾಗೊಳಿಸಿದ್ದವು. ಆದರೆ ಮೂರು ಗಂಟೆಗೂ ಕಡಿಮೆ ಅವಧಿಯ ಚರ್ಚೆಯ ವೇಳೆ ಈ ವಿಚಾರವನ್ನು ಸೂಕ್ಷ್ಮವಾಗಿ ಅವಲೋಕಿಸಿದ ನ್ಯಾಯಾಧೀಶರು ನಾಗರಿಕ ವಿಚಾರಣೆಯಲ್ಲಿ ಅವರ ಇತರ ದೂರುಗಳನ್ನು ಎತ್ತಿಹಿಡಿದರು.

ಮುಂದೆ ಓದಿ ...
  • Share this:

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಇಲ್ಲಿನ ನ್ಯಾಯಾಲಯವು ನಿಯತಕಾಲಿಕೆಯ ಮಾಜಿ ಅಂಕಣಕಾರರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹಾಗೂ ಮಾನಹಾನಿ ಮಾಡಿದ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿದೆ. ಅಲ್ಲದೇ 5 ಮಿಲಿಯನ್ ಡಾಲರ್ (ಭಾರತೀಯ ರೂಪಾಯಿಗಳಲ್ಲಿ ಸುಮಾರು 410 ಕೋಟಿ) ನಷ್ಟವನ್ನು ಪಾವತಿಸುವಂತೆಯೂ ಆದೇಶಿಸಿದೆ


ವಿಚಾರಣೆಯ ಸಮಯದಲ್ಲಿ, ನ್ಯಾಯಪೀಠದ ಒಂಬತ್ತು ಸದಸ್ಯರು ಇ ಜೀನ್ ಕ್ಯಾರೊಲ್ ಅವರ ಮೇಲಿನ ಅತ್ಯಾಚಾರದ ಆರೋಪವನ್ನು ವಜಾಗೊಳಿಸಿದ್ದವು. ಆದರೆ ಮೂರು ಗಂಟೆಗೂ ಕಡಿಮೆ ಅವಧಿಯ ಚರ್ಚೆಯ ವೇಳೆ ಈ ವಿಚಾರವನ್ನು ಸೂಕ್ಷ್ಮವಾಗಿ ಅವಲೋಕಿಸಿದ ನ್ಯಾಯಾಧೀಶರು ನಾಗರಿಕ ವಿಚಾರಣೆಯಲ್ಲಿ ಅವರ ಇತರ ದೂರುಗಳನ್ನು ಎತ್ತಿಹಿಡಿದರು.


ಟ್ರಂಪ್ ವಿರುದ್ಧದ ಪ್ರಕರಣದಲ್ಲಿ ತೀರ್ಪು ನೀಡಿರುವುದು ಇದೇ ಮೊದಲು. ಟ್ರಂಪ್ ದಶಕಗಳಷ್ಟು ಹಳೆಯದಾದ ಲೈಂಗಿಕ ಆರೋಪಗಳನ್ನು ಮತ್ತು ಡಜನ್​ನಷ್ಟು ಮಹಿಳೆಯರ ವಿರುದ್ಧ ದೌರ್ಜನ್ಯ ಆರೋಪ ಪ್ರಕರಣಗಳನ್ನು ಎದುರಿಸಿದ್ದಾರೆ. ಆದರೆ ಕ್ಯಾರೊಲ್ ಈ ಪ್ರಕರಣದಲ್ಲಿ ನಷ್ಟವನ್ನು ಕೋರಿ ಟ್ರಂಪ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.


ಇದನ್ನೂ ಓದಿ: ಹಿಂದೂ ದೇಗುಲಕ್ಕೆ 1 ಎಕರೆ ಜಮೀನು ಕೊಟ್ಟ ಮುಸ್ಲಿಂ ಕುಟುಂಬ! ತಂದೆಯ ಕೊನೆಯ ಆಸೆ ತೀರಿಸಿದ ಮಕ್ಕಳು


ಏನಿದು ಪ್ರಕರಣ?


ಅಮೆರಿಕದ ಪತ್ರಕರ್ತೆ, ಬರಹಗಾರ್ತಿ ಮತ್ತು ಅಂಕಣಕಾರ್ತಿ ಇ ಜೀನ್ ಕ್ಯಾರೊಲ್ (79) ಕಳೆದ ವರ್ಷ ಏಪ್ರಿಲ್‌ನಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆಯ ಸಂದರ್ಭದಲ್ಲಿ ದೇಶದ ಮಾಜಿ ಅಧ್ಯಕ್ಷರು ಐಷಾರಾಮಿ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದರು. 1996 ರಲ್ಲಿ ಗುರುವಾರ ಸಂಜೆ ಬರ್ಗ್‌ಡಾರ್ಫ್ ಗುಡ್‌ಮ್ಯಾನ್‌ನಲ್ಲಿ ಟ್ರಂಪ್ ತನ್ನನ್ನು ಭೇಟಿಯಾದರು ಎಂದು ಕ್ಯಾರೊಲ್ ಹೇಳಿದರು, ಅಲ್ಲಿ ಟ್ರಂಪ್ ಮಹಿಳೆಯರ ಒಳಉಡುಪುಗಳನ್ನು ಖರೀದಿಸಲು ಸಹಾಯ ಕೇಳಿದರು ಮತ್ತು ಬದಲಾಯಿಸುವ ಕೋಣೆಯಲ್ಲಿ ತನ್ನ ಮೇಲೆ ಅತ್ಯಾಚಾರ ಮಾಡಿದರು ಎಂದು ದೂರಿದ್ದಾರೆ.


ದಶಕಗಳಿಂದ ಅವರು ತಮ್ಮ ಇಬ್ಬರು ಸ್ನೇಹಿತರನ್ನು ಹೊರತುಪಡಿಸಿ ಈ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಟ್ರಂಪ್ ತನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ ಎಂದು ಹೆದರುತ್ತಿದ್ದು, ಅಂದು ನಡೆದದ್ದು ತನ್ನದೇ ತಪ್ಪಿನಿಂದ ಎಂದು ಅವರು ಭಾವಿಸಿದ್ದರು. ಈ ಬಗ್ಗೆ ಜನರು ತನ್ನನ್ನು ದೂಷಿಸುತ್ತಾರೆ ಎಂಬ ಭಯವೂ ಕಾಡುತ್ತಿತ್ತು ಎಂದು ಕ್ಯಾರೊಲ್ ಹೇಳಿದರು. ‘ಮೀ ಟೂ’ ಅಭಿಯಾನದ ನಂತರ ತಮಗಾದ ಸಂಕಷ್ಟವನ್ನು ಜನರಿಗೆ ತಿಳಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದರು.
ಈ ಆರೋಪಗಳನ್ನು ಟ್ರಂಪ್ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಮೇ 4 ರಂದು, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಿರುದ್ಧ ಬರಹಗಾರರೊಬ್ಬರು ಮಾಡಿದ ಅತ್ಯಾಚಾರದ ಆರೋಪಗಳನ್ನು 'ಅತ್ಯಂತ ಹಾಸ್ಯಾಸ್ಪದ ಮತ್ತು ಅಸಹ್ಯಕರ ಕಥೆ' ಎಂದು ಬಣ್ಣಿಸಿದ್ದರು. ಮೇ 3 ರಂದು ನ್ಯೂಯಾರ್ಕ್‌ನಲ್ಲಿ ವೀಡಿಯೋ ಮೂಲಕ ನ್ಯಾಯಪೀಠದೆದುರು ಟ್ರಂಪ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಆರೋಪಗಳು ಕೇವಲ ಕಟ್ಟುಕಥೆ, ತಾನು ಮ್ಯಾನ್‌ಹ್ಯಾಟನ್ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ಲೇಖಕಿ ಇ. ಜೀನ್ ಕ್ಯಾರೊಲ್ ಅವರನ್ನು ಎಂದಿಗೂ ಲೈಂಗಿಕವಾಗಿ ಬಳಸಿಕೊಂಡಿಲ್ಲ ಎಂದು ಹೇಳಿದ್ದರು.

top videos
    First published: