HOME » NEWS » National-international » US FACING FOUR HISTORIC CRISES AT ONCE SAYS JOE BIDEN MAK

ಅಮೆರಿಕ ಪ್ರಸ್ತುತ ಏಕ ಕಾಲದಲ್ಲಿ ನಾಲ್ಕು ಐತಿಹಾಸಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ; ಜೋ ಬೈಡೆನ್ ಆತಂಕ

ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್‌ ಅವರು 2021ರ ಜನವರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ, ಜೋ ಬಿಡನ್ ಅವರ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಹಂಗಾಮಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅಧಿಕೃತವಾಗಿ ಟ್ರಿಲಿಯನ್ ಡಾಲರ್ ಕೊರೋನಾ ವೈರಸ್ ಪರಿಹಾರ ಮತ್ತು ಸರ್ಕಾರದ ಖರ್ಚು ಮಸೂದೆಗೆ ಸಹಿ ಹಾಕಿದ್ದಾರೆ.

news18-kannada
Updated:December 28, 2020, 3:29 PM IST
ಅಮೆರಿಕ ಪ್ರಸ್ತುತ ಏಕ ಕಾಲದಲ್ಲಿ ನಾಲ್ಕು ಐತಿಹಾಸಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ; ಜೋ ಬೈಡೆನ್ ಆತಂಕ
ಜೋ ಬೈಡನ್
  • Share this:
ವಾಷಿಂಗ್ಟನ್ (ಡಿಸೆಂಬರ್​ 28); ಅಮೆರಿಕ ದೇಶ ಏಕ ಕಾಲದಲ್ಲಿ ನಾಲ್ಕು ಐತಿಹಾಸಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟನ್ನು ಶಮನಗೊಳಿಸುವ ಕೆಲಸದಲ್ಲಿ ನಾವು ಮತ್ತು ನಮ್ಮ ತಂಡ ಶ್ರಮಿಸುತ್ತಿದೆ ಎಂದು ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್​ ಇಂದು ತಿಳಿಸಿದ್ದಾರೆ. ಈ ಕುರಿತು ಟ್ವೀಟ್​ ಮೂಲಕ ಮಾಹಿತಿ ನೀಡಿರುವ ಜೋ ಬೈಡೆನ್​, "ಕೊರೋನಾ ಸಾಂಕ್ರಾಮಿಕ ರೋಗ, ಆರ್ಥಿಕ ಹಿಂಜರಿತ, ಹವಾಮಾನ ವೈಪರಿತ್ಯ ಮತ್ತು ಜನಾಂಗೀಯ ತಾರತಮ್ಯ ಈ ನಾಲ್ಕು ಐತಿಹಾಸಿಕ ಬಿಕ್ಕಟ್ಟುಗಳನ್ನು ಅಮೆರಿಕ ಏಕ ಕಾಲದಲ್ಲಿ ಎದುರಿಸುತ್ತಿದೆ. ಹೀಗಾಗಿ ನಾನು ಮತ್ತು ನನ್ನ ತಂಡ ಈ ಬಿಕ್ಕಟ್ಟುಗಳ ಶಮನಕ್ಕೆ ಮೊದಲ ದಿನದಿಂದಲೇ ಕಾರ್ಯಪ್ರವೃತ್ತರಾಗುತ್ತೇವೆ. ಈ ನಾಲ್ಕೂ ಬಿಕ್ಕಟ್ಟುಗಳನ್ನು ಬಗೆಹರಿಸಲು ಜನವರಿಯ ನಂತರ ತ್ವರಿತ ಕ್ರಮ ಕೈಗೊಳ್ಳುತ್ತೇವೆ. ಸಮಯವನ್ನು ವ್ಯರ್ಥ ಮಾಡುವುದಿಲ್ಲ" ಎಂದು ಜೋ ಬೈಡೆನ್​ ತಿಳಿಸಿದ್ದಾರೆ.ಅಮೆರಿಕದಾದ್ಯಂತ ವ್ಯಾಪಕವಾಗಿರುವ ಕೊರೊನಾ‌ ಸಾಂಕ್ರಾಮಿಕವು ಅಲ್ಲಿನ ಆರ್ಥಿಕತೆಯ ಹಿಂಜರಿತಕ್ಕೆ ಕಾರಣವಾಗಿದೆ. ಕಪ್ಪು ವರ್ಣೀಯರ ಮೇಲೆ ಅಮೆರಿಕದಲ್ಲಿ ನಡೆದ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಅಮೆರಿಕಾದಾದ್ಯಂತ ‘ಬ್ಲಾಕ್ ಲೈವ್ಸ್ ಮ್ಯಾಟರ್’ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರ್ಕಾರ ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದದಿಂದ ಹೊರಬಂದಿತ್ತು. ಈ ಎಲ್ಲಾ ಸಮಸ್ಯೆಯನ್ನೂ ಬಗೆಹರಿಸುವುದಾಗಿ ನೂತನ ಅಧ್ಯಕ್ಷರಾದ ಜೋ ಬೈಡನ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್‌ ಅವರು 2021ರ ಜನವರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ, ಜೋ ಬಿಡನ್ ಅವರ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಹಂಗಾಮಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅಧಿಕೃತವಾಗಿ ಟ್ರಿಲಿಯನ್ ಡಾಲರ್ ಕೊರೋನಾ ವೈರಸ್ ಪರಿಹಾರ ಮತ್ತು ಸರ್ಕಾರದ ಖರ್ಚು ಮಸೂದೆಗೆ ಸಹಿ ಹಾಕಿದ್ದಾರೆ ಎಂದು ದಿ ಹಿಲ್ ವರದಿ ಮಾಡಿದೆ.


ಶನಿವಾರ, ಜೋ ಬೈಡನ್ ಡೊನಾಲ್ಡ್ ಟ್ರಂಪ್ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಆರೋಪಿಸಿದ್ದರು. ಅಲ್ಲದೆ, ಅಧಿಕಾರವನ್ನು ತ್ಯಜಿಸುವ ಮೊದಲು ಬಾಕಿ ಇರುವ COVID-19 ಪರಿಹಾರ ಮಸೂದೆಗೆ ತಕ್ಷಣ ಸಹಿ ಹಾಕಿ ಹೊರ ನಡೆಯುವಂತೆ ಒತ್ತಡ ಹೇರಿದ್ದರು.

ಇದನ್ನೂ ಓದಿ : ಕಾಂಗ್ರೆಸ್​ ಸಂಸ್ಥಾಪನಾ ದಿನ ಸಮಾರಂಭಕ್ಕೆ ರಾಹುಲ್ ಗಾಂಧಿ ಗೈರು; ಕಾಲೆಳೆದ ಬಿಜೆಪಿ, ಸಮರ್ಥಿಸಿಕೊಂಡ ಕೈ ನಾಯಕರು!

"ಇದು ಕ್ರಿಸ್‌ಮಸ್‌ನ ನಂತರದ ದಿನ, ಮತ್ತು ಕಾಂಗ್ರೆಸ್ ಅನುಮೋದಿಸಿದ ಆರ್ಥಿಕ ಪರಿಹಾರ ಮಸೂದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಲು ನಿರಾಕರಿಸಿದ್ದರಿಂದ ಲಕ್ಷಾಂತರ ಕುಟುಂಬಗಳು ತಮ್ಮ ಉದ್ದೇಶಗಳನ್ನು ಪೂರೈಸಲು ಸಾಧ್ಯವಾಗುತ್ತದೆಯೇ ಎಂಬುದು ತಿಳಿದಿಲ್ಲ" ಎಂದು ಜೋ ಬೈಡನ್​ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2.3 ಟ್ರಿಲಿಯನ್ ಯುಎಸ್​ಡಿ ಪ್ಯಾಕೇಜ್​ಗಳಿಗೆ ಸಹಿ ಹಾಕುವಂತೆ ಎರಡೂ ಪಕ್ಷಗಳ ಸದಸ್ಯರು ಡೊನಾಲ್ಡ್ ಟ್ರಂಪ್ ಅವರನ್ನು ಒತ್ತಾಯಿಸಿದ್ದಾರೆ ಎಂದು ದಿ ಹಿಲ್ ವರದಿ ಮಾಡಿದೆ. ಈ ಮೊದಲು ಯುಎಸ್ ಕಾಂಗ್ರೆಸ್​ನಲ್ಲಿ ಉಭಯ ಪಕ್ಷೀಯ ಬೆಂಬಲದೊಂದಿಗೆ ಮಸೂದೆಯನ್ನು ಅಂಗೀಕರಿಸಲಾಯಿತು.
Published by: MAshok Kumar
First published: December 28, 2020, 3:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories