US Visa: ಅಮೆರಿಕ ಈ ಬಾರಿ ತಾನು ನೀಡುವ ವಿದ್ಯಾರ್ಥಿ ವೀಸಾ ನೀತಿಯಲ್ಲಿ ಮಾಡಿದ ಬದಲಾವಣೆ ಏನು?

ಕಳೆದ ಬಾರಿಗಿಂತಲೂ ಹೆಚ್ಚಿನ ಫ್ರೆಶ್ ವೀಸಾ ನೀಡಲು ನಾವು ಬಯಸಿದ್ದು ಅದಕ್ಕಾಗಿ ಮಾಡಬೇಕಾಗಿರುವ ಇನ್ನೊಂದು ಕಾರ್ಯವೆಂದರೆ ಈ ಮೊದಲೇ ವಿದ್ಯಾರ್ಥಿ ವೀಸಾ ನಿರಾಕರಿಸಲ್ಪಟ್ಟ ಜನರನ್ನು ಬ್ಲಾಕ್ ಮಾಡುವುದಾಗಿ  ಎಂದು ಹೇಳಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಭಾರತದಲ್ಲಿ (India) ಬಹುತೇಕ ಪ್ರತಿಯೊಬ್ಬ ತಾಂತ್ರಿಕ ವಿದ್ಯಾರ್ಥಿ (Students) ವಿದೇಶದಲ್ಲಿ ಅದರಲ್ಲೂ ವಿಶೇಷವಾಗಿ ಅಮೆರಿಕ (America) ದೇಶದಲ್ಲಿ ತಮ್ಮ ಉನ್ನತ ಶಿಕ್ಷಣ (Higher Studies) ಮಾಡಲು ಹಾತೊರೆಯುತ್ತಿರುತ್ತಾರೆ. ಅದಕ್ಕಾಗಿ ಮೊದಲಿನಿಂದಲೇ ಸಾಕಷ್ಟು ತಯಾರಿಗಳನ್ನು ಮಾಡುತ್ತಾರೆ. ಈಗಾಗಲೇ ಅಮೆರಿಕದಲ್ಲಿ ಹಲವು ವಿವಿಗಳು ಭಾರತೀಯ ಮೂಲದ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಪ್ರತಿ ವರ್ಷ ನೀಡುತ್ತವೆ. ಆದರೆ, ಅಮೆರಿಕಕ್ಕೆ ಹೆಚ್ಚಿನ ಶಿಕ್ಷಣಕ್ಕಾಗಿ ಹೋಗುವುದು ಅಷ್ಟೊಂದು ಸುಲಭವಲ್ಲ. ಅದಕ್ಕಾಗಿ ಸ್ಟುಡೆಂಟ್ ವೀಸಾ ಪಡೆಯುವುದು ಅವಶ್ಯಕವಾಗಿದ್ದು ಅದಕ್ಕೆಂದೇ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಕೌನ್ಸೆಲರ್ ಗಳಿಂದ ವೀಸಾ ಅನುಮೋದನೆಗೆ ಸಂಬಂಧಿಸಿದಂತೆ ಸಂದರ್ಶನ ನಡೆಸಲಾಗುವುದು ಸಾಮಾನ್ಯ. ಅಮೆರಿಕ, ಸಾಮಾನ್ಯವಾಗಿ ತಾನು ನೀಡುವ ವಿದ್ಯಾರ್ಥಿ ವೀಸಾಗೆ ಸಂಬಂಧಿಸಿದಂತೆ ತನ್ನದೆ ಆದ ನೀತಿ-ನಿಯಮ ಹೊಂದಿದ್ದು ಸದ್ಯ ಅದರ ನೀತಿಯಲ್ಲಿ ಒಂದು ಮಹತ್ತರ ಬದಲಾವಣೆ ಮಾಡಿದೆ ಎಂದು ತಿಳಿದುಬಂದಿದೆ.

  ವಿದ್ಯಾರ್ಥಿ ವೀಸಾದ ನೀತಿಯಲ್ಲಿ ಬದಲಾವಣೆ

  ಈ ಸಂಬಂಧ ಮಾಧ್ಯಮದಲ್ಲಿ ಈ ಹಿಂದೆ ಸುದ್ದಿ ಬ್ರೆಕ್ ಆಗಿತ್ತು. ಈಗ, ಚೆನ್ನೈನಿಂದ ಅಮೆರಿಕದ ರಾಯಭಾರ ಕಚೇರಿಯ ಅಧಿಕೃತ ಫೇಸ್‍ಬುಕ್ ಪುಟದ ಮೂಲಕ ಲೈವ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅಮೆರಿಕದ ರಾಯಭಾರ ಕಚೇರಿಯ ಕಾನ್ಸೂಲರ್ ವ್ಯವಹಾರಗಳ ಸಚಿವ ಡೊನಾಲ್ಡ್ ಎಲ್ ಹೆಫ್ಲಿನ್ ಅವರು ಅಮೆರಿಕ ಅನುಮೋದಿಸುವ ವಿದ್ಯಾರ್ಥಿ ವೀಸಾದ ನೀತಿಯಲ್ಲಿ ಮಾಡಲಾಗಿರುವ ಮಹತ್ತರ ಬದಲಾವಣೆಯ ಕುರಿತು ಹೇಳಿದ್ದಾರೆ.

  ಇದನ್ನೂ ಓದಿ: Supreme Court: ಕೋರ್ಟ್​​ಗೇ ಪಾಠ ಹೇಳಬೇಡಿ, ಅಬು ಸಲೇಂ ಪ್ರಕರಣದಲ್ಲಿ ಕೇಂದ್ರಕ್ಕೆ ಸುಪ್ರೀಂ ಚಾಟಿ!

  ಹೊಸ ಬದಲಾವಣೆ ಏನು? 

  ಅವರು, ಮೊದಲ ಬಾರಿಗೆ ಯುಎಸ್ ತೆರಳಲು ವೀಸಾ ನಿರಾಕರಿಸಲ್ಪಟ್ಟ ಅಥವಾ ವೀಸಾ ತಿರಸ್ಕರಿಸಿದ ವಿದ್ಯಾರ್ಥಿಗಳಿಗೆ ಮತ್ತೆ ಎರಡನೇ ಅಥವಾ ಮೂರನೇ ಸಂದರ್ಶನದಲ್ಲಿ ವೀಸಾ ಪಡೆಯುವುದು ಅತ್ಯಂತ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ಅವರು ಹೀಗೆ ಪ್ರತಿಕ್ರಯಿಸಿದ್ದಾರೆ, "ನಾನು ವೀಸಾಸಂಬಂಧ ನನ್ನ ಹೇಳಿಕೆಯಿಂದ ಈಗಾಗಲೇ ಸುದ್ದಿ ಪತ್ರಿಕೆಗಳಲ್ಲಿ ಸುದ್ದಿ ಮಾಡಿದ್ದು ಅದಕ್ಕೆ ಸಂಬಂಧಿಸಿದಂತೆ ನಮ್ಮ ನೀತಿಯಲ್ಲಾದ ಬದಲಾವಣೆ ಬಗ್ಗೆ ಹೇಳಬಯಸುತ್ತಿದ್ದೇನೆ. ಈ ಬಾರಿ ನಾವು ಎಲ್ಲ ಫ್ರೆಶ್ ವಿದ್ಯಾರ್ಥಿ ವೀಸಾಗಳನ್ನು ಮೊದಲ ಬಾರಿಗೆ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳ ಬಯಸುತ್ತಿರುವ ವಿದ್ಯಾರ್ಥಿಗಳಿಗೆ ನೀಡಲು ಉತ್ಸುಕರಾಗಿದ್ದೇವೆ. ಕಳೆದ ಬಾರಿಗಿಂತಲೂ ಹೆಚ್ಚಿನ ಫ್ರೆಶ್ ವೀಸಾ ನೀಡಲು ನಾವು ಬಯಸಿದ್ದು ಅದಕ್ಕಾಗಿ ಮಾಡಬೇಕಾಗಿರುವ ಇನ್ನೊಂದು ಕಾರ್ಯವೆಂದರೆ ಈ ಮೊದಲೇ ವಿದ್ಯಾರ್ಥಿ ವೀಸಾ ನಿರಾಕರಿಸಲ್ಪಟ್ಟ ಜನರನ್ನು ಬ್ಲಾಕ್ ಮಾಡುವುದಾಗಿ  ಎಂದು ಹೇಳಿದ್ದಾರೆ.

  ಸಂದರ್ಶನ ಪಡೆಯುವುದು ಅತ್ಯಂತ ಕಠಿಣವಾಗಿದೆ

  ಕಳೆದ ಬೇಸಿಗೆಯಲ್ಲಿ ಯುಎಸ್ ರಾಯಭಾರ ಕಚೇರಿ ಹಾಗೂ ಕಾನ್ಸೂಲೇಟ್ ಗಳು ಭಾರತದಲ್ಲಿ ವೀಸಾ ಅನುಮೋದನೆ ಸಂದರ್ಶನಗಳನ್ನು ವಿಳಂಬವಾಗಿ (ಜೂನ್ 14) ಆರಂಭಿಸಿತ್ತು, ಕಾರಣ ಕೋವಿಡ್ ಪರಿಸ್ಥಿತಿ. ಆ ಸಂದರ್ಭದಲ್ಲಿ ನಾವು ಅತಿ ಹೆಚ್ಚು ವಿದ್ಯಾರ್ಥಿ ವೀಸಾಗಳಿಗೆ ಅನುಮೋದನೆ ನೀಡಿದ್ದು ಅದರ ಸಂಖ್ಯೆ ಸುಮಾರು 62,000 ಗಳಷ್ಟಾಗಿತ್ತು, ಈ ಬಾರಿ ನಾವು ವಿಸಾ-ಸಂದರ್ಶನ ಪ್ರಕ್ರಿಯೆಯನ್ನು ಮೇ ಮಧ್ಯದಿಂದಲೇ ಮಾಡುತ್ತಿದ್ದು ಈ ಬಾರಿಯೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ವಿಸಾ ನೀಡಲು ಮುಂದಾಗಿದ್ದು ಅದಕ್ಕಾಗಿ ಈ ಹಿಂದೆ ವೀಸಾ ನಿರಾಕರಿಸಿದ್ದ ಅಥವಾ ನಿರಾಕರಿಸಲ್ಪಟ್ಟಿದ್ದ ಜನರು ಈ ಬಾರಿ ಎರಡನೇ ಅಥವಾ ಮೂರನೇ ಸಂದರ್ಶನ ಪಡೆಯುವುದು ಅತ್ಯಂತ ಕಠಿಣವಾಗಿದೆ ಎಂದು ಡೋನ್ಲಾಡ್ ಹೇಳಿದ್ದಾರೆ.

  ಈ ಸಂದರ್ಭದಲ್ಲಿ ಡೋನಾಲ್ಡ್ ಅವರು ತಮ್ಮ ನೀತಿಯ ಮಹತ್ವ ಕುರಿತು ಕ್ರಿಕೆಟ್ ಉದಾಹರಣೆ ಮೂಲಕ ತಿಳಿಸಿದ್ದು ಅದಕ್ಕಾಗಿ ಹೀಗೆ ಹೇಳಿದ್ದಾರೆ, "ನೀವು ಕ್ರಿಕೆಟ್ ಮೈದಾನದ ಕ್ರೀಸ್ ಮೇಲೆ ಕಾಲಿಡುವ ಮುಂಚೆಯೇ ಹಲವು ಯುವ ಕ್ರಿಕೆಟಿಗರು ತಾವು ಬೋಲ್ಡ್ ಆಗುವ ಬಗ್ಗೆ ಚಿಂತಿಸುತ್ತಿದ್ದಾರೆ. ಆದರೆ ಹಲವು ಯುವ ಕ್ರಿಕೆಟಿಗರು ತಾವು ಪಾದಾರ್ಪಣೆ ಮಾಡಿದ ಸಂದರ್ಭದಲ್ಲೇ ಮೊದಲ ಸಂದರ್ಶನದಲ್ಲೇ ಸಿಕ್ಸ್ ಬಾರಿಸಿ ಬಿಡುತ್ತಾರೆ, ಅದು ನಿಮಗೆ ವಿಸಾ ದೊರಕಲು ಉತ್ತಮ ಅವಕಾಶವಾಗಿರುತ್ತದೆ, ಹಾಗಾಗಿ ನಿಮಗೆ ಎರಡನೇ ಅಥವಾ ಮೂರನೇ ಅವಕಾಶ ಸಿಗಬಹುದೆಂಬುದರ ಕುರಿತು ಹೆಚ್ಚು ಚಿಂತಿಸಬೇಡಿ" ಎಂದಿದ್ದಾರೆ.

  ಈ ಸಂದರ್ಭದಲ್ಲಿ ಅವರು ಭಾರತದಲ್ಲಿ ಹೆಚ್ ಮತ್ತು ಎಲ್ ಕೆಟಗರಿಗಳ ವಿಸಾಗಳಿಗೆ ಸಂಬಂಧಿಸಿದಂತೆ ಸಂದರ್ಶನ ಹಾಗೂ ಡ್ರಾಪ್ ಬಾಕ್ಸ್ ಕುರಿತು ಮಾಹಿತಿ ನೀಡಿದರು. ಮೊದಲ ಬಾರಿ ವಿಸಾಗೆ ಅರ್ಜಿ ಸಲ್ಲಿಸುವವರಿಗಾಗಿ B-1 ಮತ್ತು B-2 ವಿಸಾ ಸಂಬಂಧಿತ ಸಂದರ್ಶನಾದಿಗಳನ್ನು ಸೆಪ್ಟಂಬರ್ ಒಂದರಿಂದ ಆರಂಭಿಸಲಾಗುವುದೆಂದು ಡೋನಾಲ್ಡ್ ಹೇಳಿದ್ದಾರೆ. ಮುಂದಿನ ವರ್ಷದವರೆಗೆ ಅಮೆರಿಕವು ಸುಮಾರು 80,000 ವಿಸಾಗಳನ್ನು ಅನುಮೋದಿಸಲಿದ್ದು 2023 ರ ಮಧ್ಯದಿಂದ ಈ ಪ್ರಮಾಣ ಮತ್ತೆ ಈ ಹಿಂದೆ ಕೋವಿಡ್ ಪೂರ್ವದಲ್ಲಿದ್ದ ಗಾತ್ರಕ್ಕೆ ಶತಪ್ರತಿಶತದಷ್ಟು ಮರಳಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
  Published by:Kavya V
  First published: