Drought in the US: ಅಮೆರಿಕದಲ್ಲಿ ತೀವ್ರ ಬರ, ಹಲವು ರಾಜ್ಯಗಳಿಗೆ ನೀರು 'ಕಡಿತ', ಮೆಕ್ಸಿಕೋದಲ್ಲೂ ಹೆಚ್ಚಿದ ಬಿಕ್ಕಟ್ಟು!

Drought in the US: ವರದಿಯ ಪ್ರಕಾರ, ನೀರಿನ ಬಿಕ್ಕಟ್ಟಿನ ಮಧ್ಯೆ ಕೊಲೊರಾಡೋ ನದಿಯಿಂದ ಅರಿಜೋನಾದ ರಾಜ್ಯದ ಪಾಲು 2023 ರಲ್ಲಿ ಶೇಕಡಾ 21 ರಷ್ಟು ಕಡಿತಗೊಳಿಸಲಾಗಿದೆ. ಅಂತೆಯೇ ನೆವಾಡಾದ ಹಂಚಿಕೆ ಎಂಟು ಮತ್ತು ಮೆಕ್ಸಿಕೋ ಪಾಲು ಶೇಕಡಾ 7ಕ್ಕಿಳಿಯಲಿದೆ.

ಅಮೆರಿಕದಲ್ಲಿ ತೀವ್ರ ಬರ

ಅಮೆರಿಕದಲ್ಲಿ ತೀವ್ರ ಬರ

  • Share this:
ವಾಷಿಂಗ್ಟನ್(ಆ.17): ಐತಿಹಾಸಿಕ ಬರಗಾಲ (Drought in the US) ಎದುರಿಸುತ್ತಿರುವ ಅಮೆರಿಕದಲ್ಲಿ ಸದ್ಯ ಕೆಲವು ರಾಜ್ಯ ಮತ್ತು ಮೆಕ್ಸಿಕೋಗೆ (Mexico) ನೀರು ಸರಬರಾಜು ಕಡಿತಗೊಳಿಸಿದೆ. ಅಧಿಕಾರಿಗಳ ಪ್ರಕಾರ, ಕೊಲೊರಾಡೋ ನದಿಯಲ್ಲಿ (Colorado River) ನೀರಿನ ಕೊರತೆಯಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. AFP ಪ್ರಕಾರ, ಸರಾಸರಿಗಿಂತ ಕಡಿಮೆ ಮಳೆಯಿಂದಾಗಿ, ಪಶ್ಚಿಮ US ನ ಜೀವನಾಡಿಯಾದ ಕೊಲೊರಾಡೋ ನದಿಯಲ್ಲಿ ನೀರಿನ ಮಟ್ಟ ಅತ್ಯಂತ ವೇಗವಾಗಿ ಕಡಿಮೆಯಾಗಲಾರಂಭಿಸಿದೆ. ಇದೇ ಸಮಯದಲ್ಲಿ, ಯುಎಸ್ ಸರ್ಕಾರದ (US Govt) ಆದೇಶದ ಬಳಿಕವೂ ನದಿಯನ್ನು ಅವಲಂಬಿಸಿರುವ ರಾಜ್ಯಗಳು ಅವುಗಳ ಬಳಕೆಯನ್ನು ಕಡಿತಗೊಳಿಸುವ ಯೋಜನೆಗೆ ಒಪ್ಪಿಗೆ ಸೂಚಿಸಿಲ್ಲ.

ಕ್ಷೀಣಿಸುತ್ತಿರುವ ನದಿ ನೀರಿನ ಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ US ಆಂತರಿಕ ಇಲಾಖೆಯ ಜಲ ಮತ್ತು ವಿಜ್ಞಾನದ ಸಹಾಯಕ ಕಾರ್ಯದರ್ಶಿ ತಾನ್ಯಾ ಟ್ರುಜಿಲ್ಲೊ, ರಾಜ್ಯಗಳು ಈಗ ನದಿಗಳ ಮೇಲೆ ಅವಲಂಬಿತವಾಗಿ ನೀರಿನ ಬಳಕೆಯನ್ನು ಕಡಿಮೆ ಮಾಡಲು ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು. ಅಮೆರಿಕದ ಬರಗಾಲದಿಂದಾಗಿ ಹಲವು ರಾಜ್ಯಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ವರದಿಯ ಪ್ರಕಾರ, ನೀರಿನ ಬಿಕ್ಕಟ್ಟಿನ ಮಧ್ಯೆ ಕೊಲೊರಾಡೋ ನದಿಯಿಂದ ಅರಿಜೋನಾದ ರಾಜ್ಯದ ಪಾಲು 2023 ರಲ್ಲಿ 21 ಪ್ರತಿಶತದಷ್ಟು ಇಳಿಯುತ್ತದೆ, ಇದೇ ವೇಳೆ ನೆವಾಡಾದ ಹಂಚಿಕೆಯು ಎಂಟು ಮತ್ತು ಮೆಕ್ಸಿಕೊ ಪಾಲು ಏಳು ಪ್ರತಿಶತದಷ್ಟು ಇಳಿಯಲಿದೆ.

ನದ ನೀರಿನ ಮೇಲೆ ಕೆಟ್ಟ ಪರಿಣಾಮ

ಆದಾಗ್ಯೂ, ಕ್ಯಾಲಿಫೋರ್ನಿಯಾ, ನದಿ ನೀರಿನ ಅತಿ ಹೆಚ್ಚು ಬಳಕೆದಾರ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಹೆಚ್ಚು ಜನಸಂಖ್ಯೆಯು ಈ ಕಡಿತದಿಂದ ಪ್ರಭಾವಿತಗೊಳ್ಳುವುದಿಲ್ಲ. ಕೊಲೊರಾಡೋ ನದಿಯು ರಾಕಿ ಪರ್ವತಗಳಲ್ಲಿ ಹುಟ್ಟುತ್ತದೆ ಮತ್ತು ಕೊಲೊರಾಡೋ, ಉತಾಹ್, ಅರಿಜೋನಾ, ನೆವಾಡಾ, ಕ್ಯಾಲಿಫೋರ್ನಿಯಾ ಮತ್ತು ಉತ್ತರ ಮೆಕ್ಸಿಕೊ ಮೂಲಕ ಕ್ಯಾಲಿಫೋರ್ನಿಯಾ ಕೊಲ್ಲಿಗೆ ಹರಿಯುತ್ತದೆ. ಈಗ ಕಡಿಮೆ ಮಳೆಯಾಗಿರುವುದರಿಂದ ಮತ್ತು ಹೆಚ್ಚು ಹಿಮಪಾತವಾಗದ ಕಾರಣ ನದಿಯ ನೀರಿನ ಮಟ್ಟದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿದೆ.

ಹವಾಮಾನ ಬದಲಾವಣೆ

ಉಪ ಆಂತರಿಕ ಕಾರ್ಯದರ್ಶಿ ಟಾಮಿ ಬ್ಯೂಡ್ರೊ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತನ್ಇನ ಲಾಖೆ ಯುಎಸ್ ನೀರು ಸರಬರಾಜು ನೋಡಿಕೊಳ್ಳುತ್ತದೆ - "ಲಭ್ಯವಿರುವ ಪ್ರತಿಯೊಂದು ಸಂಪನ್ಮೂಲದ ಮೂಲಕ ನೀರನ್ನು ಸಂರಕ್ಷಿಸಲು ಯತ್ನಿಸುತ್ತಿದ್ದೇವೆ. ನೀರಾವರಿದಾರರು, ಬುಡಕಟ್ಟು ಜನರು ಮತ್ತು ಪಕ್ಕದ ಸಮುದಾಯಗ:ಇಂದ ನೆರವು ಪಡೆದುಕೊಳ್ಳುತ್ತಿದ್ದೇವೆ" ಎಂದು ಹೇಳಿದರು.

"ಕೊಲೊರಾಡೋ ನದಿಯ ಜಲಾನಯನ ಪ್ರದೇಶದ ಮೇಲೆ ಪ್ರಭಾವ ಬೀರುತ್ತಿರುವ ಬರಗಾಲದ ಬಿಕ್ಕಟ್ಟು ತೀವ್ರತರವಾದ ಶಾಖ ಮತ್ತು ಕಡಿಮೆ ಮಳೆ ಸೇರಿದಂತೆ ಹವಾಮಾನ ಬದಲಾವಣೆಯ ಪರಿಣಾಮಗಳಿಂದ uಂಟಾಗುತ್ತದೆ" ಎಂದು ಅವರು ಹೇಳಿದರು.

"ಪ್ರತಿಯಾಗಿ, ತೀವ್ರ ಬರ ಪರಿಸ್ಥಿತಿ, ಕಾಡ್ಗಿಚ್ಚಿನ ಅಪಾಯ ಮತ್ತು ಪರಿಸರ ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ, ಸಮುದಾಯಗಳು ಮತ್ತು ನಮ್ಮ ಭೂದೃಶ್ಯಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತವೆ" ಎಂದಿದ್ದಾರೆ.

ಸತತ 23ನೇ ವರ್ಷವೂ ಪಶ್ಚಿಮ ಯುನೈಟೆಡ್ ಸ್ಟೇಟ್ಸ್ ಬರಗಾಲದಿಂದ ಬಳಲುತ್ತಿದ್ದು, ಇದು ಕಳೆದ 1,000 ವರ್ಷಗಳಿಗಿಂತ ಹೆಚ್ಚು ಕಾಲದ ಅತ್ಯಂತ ಕೆಟ್ಟ ಸಂಚಿಕೆಯಾಗಿದೆ. ಆ ಬರವು ದೇಶದ ಪ್ರದೇಶಗಳನ್ನು ಒಣಗಿಸಿದೆ ಮತ್ತು ವಿನಾಶಕಾರಿ ಕಾಳ್ಗಿಚ್ಚುಗಳಿಗೆ ಗುರಿಯಾಗುವಂತೆ ಮಾಡಿದೆ. ಹೀಗಿರುವಾಗ ಲಾಸ್ ಏಂಜಲೀಸ್ ಸೇರಿದಂತೆ ಕೊಲೊರಾಡೋ ನದಿಯಿಂದ ಸೇವೆ ಸಲ್ಲಿಸುವ ಸಮುದಾಯಗಳಿಗೆ ನೀರನ್ನು ಉಳಿಸಲು ಆದೇಶಿಸಲಾಗಿದೆ, ಹೊರಾಂಗಣ ನೀರಿನ ಮೇಲೆ ಬಳಕೆಗೂ ನಿರ್ಬಂಧಗಳಿವೆ.
Published by:Precilla Olivia Dias
First published: