Viral News: ಮುಚ್ಚಿದ ಗಡಿಯಲ್ಲೇ ವಿವಾಹವಾದ ಜೋಡಿಗಳು: ಕಾರಣ ಕೇಳಿದ್ರೆ ಮುಖದಲ್ಲಿ ಮಂದಹಾಸ ಮೂಡುತ್ತದೆ..!

ಕರೆನ್ ಕುಟುಂಬವು ಮದುವೆಗೆ ಹಾಜರಾಗಲು ಸಾಧ್ಯವಾಗದ ಕಾರಣ, ದಂಪತಿಗಳು ಮದುವೆಯನ್ನು ಅವರ ಸಮ್ಮುಖದಲ್ಲಿಯೇ ಮಾಡಿಕೊಂಡರು. ಅದೂ ಕೂಡ ಗಡಿ ದಾಟದೇ ಎಂಬುದು ಇಲ್ಲಿ ವಿಶೇಷ.

ಯುಎಸ್-ಕೆನಡಾ ಗಡಿಯಲ್ಲಿ ಮದುವೆಯಾದ ಜೋಡಿ.

ಯುಎಸ್-ಕೆನಡಾ ಗಡಿಯಲ್ಲಿ ಮದುವೆಯಾದ ಜೋಡಿ.

  • Share this:
ಕೋವಿಡ್- 19 (COVID-19) ಮಹಾಮಾರಿ ಎಲ್ಲರ ಬದುಕನ್ನು ಹಿಂಡಿ  ಹಿಪ್ಪೆ ಮಾಡಿದೆ. ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡರು. ಇನ್ನು ಕೆಲವರು ಆರ್ಥಿಕ ದುಸ್ಥಿತಿ ಕಂಡು ಪ್ರಾಣವನ್ನೇ ಕಳೆದುಕೊಂಡರು. ಇನ್ನು ಎಷ್ಟೋ ಮದುವೆ- ಸಮಾರಂಭಗಳು ಮುರಿದು ಬಿದ್ದವು, ಕೆಲವು ಮುಂದೂಡಲ್ಪಟ್ಟವು ಹಾಗೂ ಮತ್ತೆ ಕೆಲವು ಸರಳವಾಗಿ ನಡೆದವು. ಇನ್ನು ಕೆಲವು ಕಡೆ ವಿಶೇಷವಾಗಿ ಹಲವು ಮದುವೆಗಳು (Special Marriage)  ನಡೆದವು. ಅವುಗಳಲ್ಲಿ ಈ ಮದುವೆಯೂ ಸಹ ಒಂದು.  ಹೌದು, ಕೋವಿಡ್ ಸಮಯದಲ್ಲಿ ಇಲ್ಲೊಂದು ಅಪರೂಪದ ವಿವಾಹ ಜರುಗಿದೆ. ಯುನೈಟೆಡ್ ಸ್ಟೇಟ್ಸ್‌ನ ಪ್ರೇಮಿಗಳಿಬ್ಬರು ಯುಎಸ್-ಕೆನಡಾದ ಮುಚ್ಚಿದ ಗಡಿಭಾಗದಲ್ಲಿ (US- Canada Closed Border) ವಿವಾಹವಾಗಿದ್ದಾರೆ. ಈ ಮೂಲಕ ವಧುವಿನ ಕೆನಡಿಯನ್ ಕುಟುಂಬವು ವಿವಾಹ ಸಮಾರಂಭದಲ್ಲಿ ಹಾಜರಾಗುವಂತೆ ನೋಡಿಕೊಂಡಿದ್ದಾರೆ.

ಕರೆನ್ ಮಹೋನಿ ಮತ್ತು ಆಕೆಯ ಭಾವಿ ಪತಿ ಬ್ರಿಯಾನ್ ರೇ, 35 ವರ್ಷಗಳ ಹಿಂದೆ ಸ್ಕಿಂಗ್ ಪ್ರವಾಸದ ವೇಳೆ ಪರಸ್ಪರ ಒಬ್ಬರನೊಬ್ಬರು ಭೇಟಿಯಾದರು. ಬಹಳ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಇವರು, ಆದಷ್ಟು ಬೇಗ ಮದುವೆಯಾಗಲು ನಿರ್ಧರಿಸಿದ್ದರು. ಕರೆನ್ ನ್ಯೂಯಾರ್ಕ್​ನಲ್ಲಿ ವಾಸಿಸುತ್ತಿದ್ದರೂ, ಆಕೆಯ ಕುಟುಂಬವು ಕೆನಡಾದ ಕ್ವಿಬೆಕ್‌ನಲ್ಲಿ ನೆಲೆ ನಿಂತಿದೆ. ಆದರೆ ಮದುವೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ, ಕರೆನ್ ಕುಟುಂಬಕ್ಕೆ ಕೋವಿಡ್ -19 ಸಾಂಕ್ರಾಮಿಕದ ನಡುವೆ ದೇಶಗಳ ನಡುವಿನ ನಿರ್ಬಂಧಗಳಿಂದಾಗಿ ಆಕೆಯ ಪೋಷಕರು ಮತ್ತು ಆಕೆಯ 96 ವರ್ಷದ ಅಜ್ಜಿ ಮದುವೆಗೆ ಹಾಜರಾಗುವುದು ಅಸಾಧ್ಯವೆಂದು ತೋರಿತು.

ಕರೆನ್‍ಗೆ ತನ್ನ ಪ್ರೀತಿಯ ಪೋಷಕರು ಹಾಗೂ ಅಜ್ಜಿ ಆಕೆಯ ಮದುವೆಯಲ್ಲಿ ಇರಬೇಕೆಂಬ ಆಸೆ. ಆದರೆ ಕೋವಿಡ್ ಕಾರಣದಿಂದ ಇದು ಸಾಧ್ಯವಾಗುವುದೋ ಇಲ್ಲವೋ ಎಂಬ ಭಯ. ಹಾಗಾಗಿ ನನ್ನ ಜೀವನದ ಅತ್ಯಂತ ಸಂತೋಷದಾಯಕ ದಿನದಲ್ಲಿ ಅವರ ಹಾಜರಾತಿ ಇರಬೇಕು ಎಂಬುದು ತನ್ನ ಕೋರಿಕೆಯಾಗಿತ್ತು ಎಂದು ಕರೆನ್ ಸಿಎನ್‍ಎನ್‍ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ನಾವು ಒಬ್ಬರಿಗೊಬ್ಬರು ಹೇಳಿದ ಭರವಸೆಗಳು ನಮಗೆ ನಮ್ಮ ಜೀವನದ ಪ್ರಮುಖ ಭಾಗ ಮತ್ತು ಈ ಮಹತ್ತರವಾದ ಭರವಸೆಯ ಬದುಕಿಗೆ ನನ್ನ ಪೋಷಕರು ಮತ್ತು ಅಜ್ಜಿ ಸಾಕ್ಷಿಯಾಗಬೇಕೆಂದು ನಾವು ಬಯಸಿದ್ದೇವು. ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಹಾಸನದ ವಧು, ತಮಿಳುನಾಡಿನ ವರನಿಗೆ ಚಾಮರಾಜನಗರ ಗಡಿಭಾಗದಲ್ಲಿ ಮದುವೆ

ಕರೆನ್ ಕುಟುಂಬವು ಮದುವೆಗೆ ಹಾಜರಾಗಲು ಸಾಧ್ಯವಾಗದ ಕಾರಣ, ದಂಪತಿಗಳು ಮದುವೆಯನ್ನು ಅವರ ಸಮ್ಮುಖದಲ್ಲಿಯೇ ಮಾಡಿಕೊಂಡರು. ಅದೂ ಕೂಡ ಗಡಿ ದಾಟದೇ ಎಂಬುದು ಇಲ್ಲಿ ವಿಶೇಷ. ಹೌದು, ಯಾರೂ ದೇಶದ ಗಡಿ ದಾಟಲಿಲ್ಲ, ಕೊರೋನಾ ನಿಯಮ ಉಲ್ಲಂಘಿಸಲಿಲ್ಲ. ಆದರೂ ವಿವಾಹಕ್ಕೆ ವಧುವಿನ ಕುಟುಂಬದವರು ಅವಳ ಇಚ್ಛೆಯಂತೆಯೇ ಹಾಜರಿದ್ದರು.

ಆಗಸ್ಟ್ ತಿಂಗಳಿನಲ್ಲಿ ದಂಪತಿಗಳು ತಮ್ಮ ಮದುವೆಯ ದಿನದಂದೇ ಅಂದರೆ ಸೆಪ್ಟೆಂಬರ್ 25 ರಂದೇ ಗಡಿಯನ್ನು ಮುಚ್ಚಲಾಗುವುದು ಎಂಬುದನ್ನು ಅರಿತುಕೊಂಡರು. ಆದರೆ, ಕರೆನ್ ನ ಬಾಲ್ಯದ ಗೆಳೆಯ ಗಡಿಯಲ್ಲಿ ವಿಶೇಷ ವಿವಾಹ ಮಾಡಿಕೊಳ್ಳಲು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಕುತೂಹಲಕಾರಿಯಾಗಿ, ಗಡಿ ಗಸ್ತು ಏಜೆಂಟ್ ಆಗಿದ್ದ ಕರೆನ್ ಸ್ನೇಹಿತನ ಹೆಸರು ಬಾರ್ಡರ್ ಬ್ರೈನ್'. ಸ್ನೇಹಿತನ ಸಹಾಯ ಕೇವಲ ಪದಗಳಲ್ಲಿ ವಿವರಿಸಲು ಸಾಧ್ಯವಾಗುವುದಿಲ್ಲ. ನನ್ನ ವಿವಾಹ ಸಮಯದಲ್ಲಿ ಕರ್ತವ್ಯದ ನಿಮಿತ್ತ ಹೊರಗಿದ್ದರು ಮತ್ತು ಕರ್ತವ್ಯದಲ್ಲಿದ್ದ ಇತರ ಏಜೆಂಟರಿಗೆ ಯಾವುದೇ ಅಡೆತಡೆಯಿಲ್ಲದಂತೆ ವಿವಾಹವಾಗುವಂತೆ ವ್ಯವಸ್ಥೆ ಮಾಡಿದರು" ಎಂದು ಕರೆನ್ ವಿವರಿಸಿದ್ದಾರೆ.

ಇದನ್ನು ಓದಿ: ಕೇರಳ - ತಮಿಳುನಾಡು ಗಡಿಯ ಸೇತುವೆ ಮೇಲೆ ದಾಂಪತ್ಯ ಸೇತುವೆ ನಿರ್ಮಿಸಿದ ನವಜೋಡಿ

ದಂಪತಿಗಳು ಬರ್ಕೆ, ನ್ಯೂಯಾರ್ಕ್ ಮತ್ತು ಕೆನಡಾದ ಕ್ವಿಬೆಕ್ ನಡುವಿನ ಜೇಮೀಸನ್ ಲೈನ್ ಬಾರ್ಡರ್ ಕ್ರಾಸಿಂಗ್‍ನಲ್ಲಿ ಪ್ರತಿಜ್ಞೆ ಮಾಡುವ ಮೂಲಕ ನವಜೀವನಕ್ಕೆ ಅಡಿಯಿಟ್ಟರು. ದಂಪತಿಗಳು ಪ್ರತಿಜ್ಞೆಯನ್ನು ಹೇಳಲು ನ್ಯೂಯಾರ್ಕ್ ಗಡಿಯಲ್ಲಿ ತಮ್ಮ ಮದುವೆಯ ಉಡುಪಿನಲ್ಲಿ ನಿಂತಿದ್ದರು. ಕರೆನ್ ಪೋಷಕರು ವಧು ವರರನ್ನು ಕೆನಡಾ ನೆಲದಿಂದ ವೀಕ್ಷಿಸಿ ಸಂತೋಷಪಟ್ಟಿದ್ದಾರೆ.
Published by:Anitha E
First published: