Nuclear Power: ಚಂದ್ರನ ಮೇಲೆಯೇ ಅಣುಬಾಂಬ್ ಬಳಸಲು ಯೋಚಿಸಿದ್ದೇಕೆ ಅಮೇರಿಕಾ?

ಅಮೆರಿಕದ ಅಡ್ವಾನ್ಸ್ಡ್ ಏರೋಸ್ಪೇಸ್ ಥ್ರೆಟ್ ಐಡೆಂಟಿಫಿಕೇಷನ್ ಪ್ರೋಗ್ರಾಮ್‌ (AATIP) ಘಟಕದ ಅಧಿಕಾರಿಗಳು ಈಗಾಗಲೇ ಕೆಲವು ಪರೀಕ್ಷಿಸಲಾರದ ಅಸಾಮಾನ್ಯ ಎಂದೆನ್ನಬಹುದಾದ ಪ್ರಸ್ತಾವನೆಗಳ ಪರಿಶೀಲನೆ ನಡೆಸಿರುವುದಾಗಿ ಹೇಳಿದೆ. ಇದರಲ್ಲಿ ಬಾಹ್ಯಾಕಾಶಕ್ಕೆ (Space) ಅಣು ಬಾಂಬ್‌ಗಳನ್ನು (Nuclear Bomb) ಹೊತ್ತೊಯ್ಯುವಂತಹ ಪರೀಕ್ಷೆಗಳೂ ಸಹ ಅಡಕವಾಗಿದ್ದವು ಎಂದು ಸುದ್ದಿ ಮಾಧ್ಯಮವು ಉಲ್ಲೇಖ ಮಾಡಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬಹುತೇಕ ರಾಷ್ಟ್ರಗಳು ತಮ್ಮ ದೇಶದ ಸುರಕ್ಷತೆ ಹಾಗೂ ರಕ್ಷಣೆಗಾಗಿ ಎಲ್ಲ ರೀತಿಯಿಂದಲೂ ಸಿದ್ಧವಾಗಿರುವಂತೆ ಮುಂಜಾಗ್ರತಾ ಕ್ರಮಗಳನ್ನು (Precaution) ತೆಗೆದುಕೊಂಡಿರುತ್ತವೆ. ಇಲ್ಲಿ ಸುರಕ್ಷತೆ ಎಂದಾಗ ಕೇವಲ ಎರಡು ದೇಶಗಳ (Nations) ಮಧ್ಯೆ ಉಂಟಾಗಬಹುದಾದ ಯುದ್ಧ ಎಂದೇ ಭಾವಿಸಬೇಕಾಗಿಲ್ಲ, ಒಮ್ಮೊಮ್ಮೆ ಅನಿರೀಕ್ಷಿತವಾಗಿ ಬಾಹ್ಯಾಕಾಶದಿಂದಲೂ ಏನಾದರೂ ಅಪಾಯ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಹಾಗಾಗಿ, ಜಗತ್ತಿನ ಸೂಪರ್ ಪವರ್ (Super Power) ಎಂದೆನಿಸಿಕೊಂಡಿರುವ ಅಮೆರಿಕ (America) ಈಗಾಗಲೇ ಈ ನಿಟ್ಟಿನಲ್ಲೂ ಕೆಲಸ ಕೈಗೊಂಡಿದೆ.

ದಿ ಸನ್ ಎಂಬ ವಿದೇಶಿ ಮಾಧ್ಯಮವೊಂದು (Foriegn Media) ವರದಿ ಮಾಡಿರುವಂತೆ ಅಮೆರಿಕದ ಅಡ್ವಾನ್ಸ್ಡ್ ಏರೋಸ್ಪೇಸ್ ಥ್ರೆಟ್ ಐಡೆಂಟಿಫಿಕೇಷನ್ ಪ್ರೋಗ್ರಾಮ್‌ (AATIP) ಘಟಕದ ಅಧಿಕಾರಿಗಳು ಈಗಾಗಲೇ ಕೆಲವು ಪರೀಕ್ಷಿಸಲಾರದ ಅಸಾಮಾನ್ಯ ಎಂದೆನ್ನಬಹುದಾದ ಪ್ರಸ್ತಾವನೆಗಳ ಪರಿಶೀಲನೆ ನಡೆಸಿರುವುದಾಗಿ ಹೇಳಿದೆ. ಇದರಲ್ಲಿ ಬಾಹ್ಯಾಕಾಶಕ್ಕೆ (Space) ಅಣು ಬಾಂಬ್‌ಗಳನ್ನು (Nuclear Bomb) ಹೊತ್ತೊಯ್ಯುವಂತಹ ಪರೀಕ್ಷೆಗಳೂ ಸಹ ಅಡಕವಾಗಿದ್ದವು ಎಂದು ಸುದ್ದಿ ಮಾಧ್ಯಮವು ಉಲ್ಲೇಖ ಮಾಡಿದೆ.

ಬಾಹ್ಯಾಕಾಶ ವಿದ್ಯಮಾನದ ಪರಿಶೀಲನೆ

ಅಮೆರಿಕದ ಸರ್ಕಾರಿ ಒಡೆತನದ AATIP ಘಟಕದ ಅಧಿಕಾರಿಗಳು ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಾರುವ ತಟ್ಟೆ (Unidentified Flying Object), ವಿವರಿಸಲಾಗದ ಬಾಹ್ಯಾಕಾಶ ವಿದ್ಯಮಾನ (Unexplained Aerial Phenomenon) ಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದ್ದು ಅದನ್ನು ವರ್ಗೀಕರಿಸದ ವಿಭಾಗದಲ್ಲಿರಿಸಿದ್ದಲ್ಲದೆ ಪ್ರಕಟಿಸಿಯೂ ಇರಲಿಲ್ಲ ಎಂದು ಮಾಧ್ಯಮದ ವರದಿಯಲ್ಲಿ ತಿಳಿಸಲಾಗಿದೆ.

2007 ರಲ್ಲೇ ಅನುದಾನ ನೀಡಲು ಪ್ರಾರಂಭ

ವರದಿಯಲ್ಲಿ ಉಲ್ಲೇಖಿಸಿರುವಂತೆ, ಅಮೆರಿಕವು ತನ್ನ ಈ ಬಾಹ್ಯಾಕಾಶ ಅಭಿಯಾನಕ್ಕೆ 2007 ರಲ್ಲೇ ಅನುದಾನ ನೀಡಲು ಪ್ರಾರಂಭಿಸಿ ಇದು ಮುಂದಿನ ಐದು ವರ್ಷಗಳ ಕಾಲ ಅಂದರೆ 2012ರ ವರೆಗೆ ನಡೆಯಿತು. ಈ ಕಾರ್ಯಕ್ರಮಕ್ಕೆಂದು ಅಮೆರಿಕ 22 ಮಿಲಿಯನ್ ಡಾಲರ್ ಅನುದಾನ ನೀಡಿರುವುದಾಗಿ ತಿಳಿದುಬಂದಿದೆ. ಅಂತಿಮವಾಗಿ ಅಮೆರಿಕ ಈ ಕಾರ್ಯಕ್ರಮದ ಬಗ್ಗೆ ಡಿಸೆಂಬರ್ 16, 2017 ರಂದು ವಿವರಣೆಗಳನ್ನು ಸಾರ್ವಜನಿಕ ಗೊಳಿಸಿತು ಎನ್ನಲಾಗಿದೆ.

ಚಂದ್ರನಿಗೆ ಅಣುಬಾಂಬ್..?

ಸಾರ್ವಜನಿಕಗೊಳಿಸಲಾದ ವರದಿಯ ಪ್ರಕಾರ, ಈ ಅಭಿಯಾನದ ಭಾಗವಾಗಿ ಚಂದ್ರನ ಮೇಲೆ ಅಣು ಬಾಂಬ್ ಹಾಕುವ ಪ್ರಸ್ತಾವನೆಯೊಂದಿತ್ತೆನ್ನಲಾಗಿದೆ. ಚಂದ್ರನ ಹೊರಪದರದಲ್ಲಿ ಅತಿ ಹಗುರವಾದ ವಸ್ತುವನ್ನು ಹುಡುಕಲು ಪ್ರಸ್ತಾವನೆಯಲ್ಲಿ "ನಕಾರಾತ್ಮಕ ವಸ್ತುವನ್ನು ಗಣಿಗಾರಿಕೆ ಮಾಡಲು, ಸೂರ್ಯ ಹಾಗೂ ಬಿಸಿ ಕರಗಿದ ಹೊರಪದರ ಹೊಂದಿರುವ ಎಲ್ಲಾ ಗ್ರಹಗಳನ್ನು ಹೊರತುಪಡಿಸಿ ಆ ನೆಗೆಟಿವ್ ಮ್ಯಾಟರ್ ಎಂಬುದು ಅಲ್ಲಿ ಅಸ್ತಿತ್ವದಲ್ಲಿರಬೇಕು.

ಇದನ್ನೂ ಓದಿ: ಬ್ರೆವರ್ಡ್ ಪ್ರಾಣಿ ಸಂಗ್ರಹಾಲಯಕ್ಕೆ ಹೊಸ ಸದಸ್ಯನ ಆಗಮನ, ಅಳಿವಿನಂಚಿನಲ್ಲಿವೆ ಈ ಸ್ಪೈಡರ್ ಕೋತಿಗಳು

ಈ ನಿಟ್ಟಿನಲ್ಲಿ ಚಂದ್ರನನ್ನು ಇದಕ್ಕಾಗಿ ಪರಿಗಣಿಸಬಹುದಾಗಿದೆ. ಆದರೂ, ಭೂಮಿಯ ಸಮೀಪವಿರುವ ಆಳವಾದ ಸಾಮರ್ಥ್ಯವನ್ನು ಚಂದ್ರ ಹೊಂದಬಹುದಾಗಿದ್ದು, ಅದರ ಮಧ್ಯದಲ್ಲಿ ಉಪಸ್ಥಿತವಿರುವ ಬಿಸಿ ಬಂಡೆಗಳನ್ನು ಸುಧಾರಿತ ಪರಮಾಣು ಗಣಿಗಾರಿಕೆ ತಂತ್ರಜ್ಞಾನದಿಂದ ಪ್ರವೇಶಿಸಿ ತಾತ್ವಿಕವಾಗಿ ಚಂದ್ರನ ಮೂಲಕ ಸುರಂಗವನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ" ಎಂದು ಉಲ್ಲೇಖಿಸಲಾಗಿತ್ತೆನ್ನಲಾಗಿದೆ.

ಗೋಳಾಕಾರದ ಬದಲು ಸಿಲಿಂಡರಿನ ಆಕಾರ

ಚಂದ್ರನ ಮೇಲೆ ಸುರಂಗವನ್ನು ಮಾಡಲು, ಗೋಳಾಕಾರದ ಬದಲು ಸಿಲಿಂಡರಿನ ಆಕಾರದ, ಪುಡಿಮಾಡಿದ ಬಂಡೆಗಳ ಪರಿಮಾಣವನ್ನು ಉತ್ತಮ ಎನ್ನಲಾಗಿದ್ದು ಪ್ರಸ್ತಾವನೆಯು ಥರ್ಮೋನ್ಯೂಕ್ಲಿಯರ್ ಆಕಾರದ ಚಾರ್ಜ್ ಅಥವಾ ಸ್ಫೋಟಕ ಮಸೂರವು ಬಂಡೆಗಳನ್ನು ಛಿದ್ರಗೊಳಿಸಲು ಹೆಚ್ಚು ಸೂಕ್ತವೆಂದು ಸೂಚಿಸಿದೆ ಎಂದು ತಿಳಿದುಬಂದಿದೆ.

ಸಮರ್ಥನೆ

ಥರ್ಮೋ ನ್ಯೂಕ್ಲಿಯರ್ ಸ್ಫೋಟಕಗಳಿಂದ ಚಂದ್ರನ ಹೊರಪದರವನ್ನು ಸ್ಫೋಟಿಸುವ ಕಾರಣವನ್ನು ಡಾಕ್ಯುಮೆಂಟ್ “ಚಂದ್ರನ ಮಧ್ಯದಲ್ಲಿ ಶತಕೋಟಿ ವರ್ಷಗಳಿಂದ ಗಮನಾರ್ಹ ಪ್ರಮಾಣದ ಋಣಾತ್ಮಕ ವಸ್ತುವು ಸಂಗ್ರಹವಾಗಿದ್ದರೆ, ಈ ವಸ್ತುವು ಅಲ್ಟ್ರಾ-ಲೈಟ್ ರೂಪದಲ್ಲಿರುವ ಸಾಧ್ಯತೆ ಹೆಚ್ಚು. ಈಗಾಗಲೇ ಸ್ವೀಡಿಷ್ ಸಂಶೋಧನಾ ತಂಡವೊಂದು ಡ್ಯೂಟೇರಿಯಂನ ಅತಿ-ದಟ್ಟವಾದ ಹಂತದಲ್ಲಿ ಅಸ್ತಿತ್ವದಲ್ಲಿರುವುದಕ್ಕೆ ಪುರಾವೆಗಳನ್ನು ಕಂಡುಕೊಂಡಿದೆ. ಇದು ನೀರಿಗಿಂತ ಸುಮಾರು 100,000 ಪಟ್ಟು ಹೆಚ್ಚು ದಟ್ಟವಾಗಿರುತ್ತದೆ ಹಾಗೂ ಚಂದ್ರನ ಮಧ್ಯಭಾಗದಲ್ಲಿ ಋಣಾತ್ಮಕ ವಸ್ತುವಿನ ಶೇಖರಣೆಯು ಉಕ್ಕಿಗಿಂತ 100,000 ಪಟ್ಟು ಹಗುರವಾದ ವಸ್ತುವಿನ ರೂಪ ಹೊಂದಿರಬಹುದಾದರೂ ಆ ವಸ್ತುವಿನ ಬಲ ಉಕ್ಕಿನ ಬಲಕ್ಕೆ ಸಮಾನವಾಗಿದೆ.

ಇದನ್ನೂ ಓದಿ: Vladimir Putin ಆರೋಗ್ಯದ ಬಗ್ಗೆ ಹಲವು ಅನುಮಾನ: ಪಾರ್ಕಿನ್ಸನ್‌ ಕಾಯಿಲೆಯಿಂದ ಬಳಲುತ್ತಿದ್ದಾರಾ ರಷ್ಯಾ ಅಧ್ಯಕ್ಷ?

ಈಗಾಗಲೇ ಅಂದುಕೊಂಡಂತೆ ಇದು ಋಣಾತ್ಮಕ-ಧನಾತ್ಮಕ ಸಮೂಹ ಮಧ್ಯದಲ್ಲುಂಟಾಗುವ ದ್ವಂದ್ವತೆಯಲ್ಲ. ಆದರೆ ಇದರಿಂದ ಮುಂದೆ ಬಾಹ್ಯಾಕಾಶ ಯಾನಕ್ಕೆ ಅತ್ಯಂತ ಸಹಾಯವಾಗಲಿದೆ. ಏಕೆಂದರೆ ಇದು ಅಂತಹ ಅಲ್ಟ್ರಾ-ಲೈಟ್ ವಸ್ತುಗಳಿಂದ ಮಾಡಿದ ಬಾಹ್ಯಾಕಾಶ ನೌಕೆಯನ್ನು ವೇಗಗೊಳಿಸಲು ಶಕ್ತಿಯ ಅವಶ್ಯಕತೆಗಳನ್ನು ನಾಟಕೀಯವಾಗಿ ಕಡಿಮೆ ಮಾಡುತ್ತದೆ'' ಎಂದು ಉಲ್ಲೇಖಿಸಲಾಗಿತ್ತೆನ್ನಲಾಗಿದೆ.

Key Words: America, Moon, Nuke, AATIP, ಅಮೆರಿಕ, ಅಣುಶಕ್ತಿ, ಚಂದ್ರ

Story Link :

Vijaykumar M
Published by:Divya D
First published: