‘ಇರಾನ್’​ನಿಂದ ತೈಲ ವಸ್ತುಗಳ ಆಮದು ನಿಲ್ಲಿಸಿ: ‘ಭಾರತ, ಚೀನಾ’ಗೆ ಅಮೆರಿಕಾ ಆದೇಶ


Updated:June 27, 2018, 8:27 PM IST
‘ಇರಾನ್’​ನಿಂದ ತೈಲ ವಸ್ತುಗಳ ಆಮದು ನಿಲ್ಲಿಸಿ: ‘ಭಾರತ, ಚೀನಾ’ಗೆ ಅಮೆರಿಕಾ ಆದೇಶ

Updated: June 27, 2018, 8:27 PM IST
ನ್ಯೂಸ್​-18 ಕನ್ನಡ

ನವದೆಹಲಿ(ಜೂನ್​.27): ಇರಾನ್​ನಿಂದ ತೈಲ ವಸ್ತುಗಳನ್ನು ಆಮದು ಮಾಡಿಕೊಳ್ಳದಂತೆ ಭಾರತ, ಚೈನಾ ಸೇರಿದಂತೆ ಹಲವು ದೇಶಗಳಿಗೆ ವಿಶ್ವದ ದೊಡ್ಡಣ್ಣ ಅಮೆರಿಕಾ ಮತ್ತೊಮ್ಮೆ ಆದೇಶಿಸಿದೆ. ಇನ್ನು ಈಗಿನಿಂದಲೇ ತೈಲ ಆಮದು ಕಮ್ಮಿ ಮಾಡಿ ನವೆಂಬರ್​ ವೇಳೆಗೆ ಶೂನ್ಯಗೊಳಿಸುವಂತೆ ಭಾರತಕ್ಕೆ ಸೂಚಿಸಿದೆ ಎನ್ನಲಾಗಿದೆ.

ಭಾರತ ಮತ್ತು ಚೀನಾ ನಮ್ಮ ಆದೇಶಕ್ಕೆ ವಿರುದ್ಧವಾಗಿ ಹೋಗುತ್ತಿದೆ. ಹೀಗಾಗಿ ನವೆಂಬರ್​ ವೇಳೆಗೆ ಆಮದು ಪ್ರಕ್ರಿಯೆಯನ್ನು ಮುಗಿಸಿಕೊಳ್ಳಲ್ಲು ಸೂಚಿಸಿದ್ದೇವೆ. ಇರಾನ್​ನಿಂದ ಎರಡು ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿವೆ. ತೈಲ ಆಮದು ಮಾಡಿಕೊಳ್ಳುವಲ್ಲಿ ಭಾರತ ಎರಡನೇ ಸ್ಥಾನ ಹೊಂದಿದೆ ಎಂದು ಅಮೆರಿಕಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡಿದ ಅಧಿಕಾರಿಗಳು, ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸದೆ ನಮ್ಮ ಆದೇಶ ಪಾಲಿಸಬೇಕು. ಇರಾನ್ ಗೆ ಹರಿದು ಬರುತ್ತಿರು ಆದಾಯವನ್ನು ನಿಲ್ಲಿಸಬೇಕು. ಈ ಮೂಲಕ ನೆರೆ ರಾಷ್ಟ್ರಗಳ ಮೇಲೆ ನಡೆಸುತ್ತಿರುವ ದಬ್ಬಾಳಿಕೆಗೆ ಕಡಿವಾಣ ಹಾಕಬೇಕು ಎಂದರು.

ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರವೂ ಇರಾನ್​ ದಬ್ಬಾಳಿಕೆಯನ್ನು ಕೊನೆಗಾಣಿಸಲು ಮುಂದಾಗಿದೆ. ಈ ಪ್ರಯತ್ನಕ್ಕೆ ಒಕ್ಕೂಟದ ದೇಶಗಳು ಕೈಜೋಡಿಸ ಬೇಕು. ಇಂಧನದ ಅಗತ್ಯ ಕಾರಣದಿಂದ ಭಾರತ ಮತ್ತು ಚೀನಾ ಅಧಿಕ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿವೆ. ಈ ಹಿಂದೆಯೂ ಎರಡೂ ದೇಶದ ಕಂಪನಿಗಳಿಗೆ ನಿರ್ಬಂಧ ಹೇರಲಾಗಿತ್ತು ಎನ್ನಲಾಗಿದೆ.

ಈ ಕುರಿತು ಮುಂದಿನ ವಾರ ನಡೆಯಲಿರುವ ದ್ವಿಪಕ್ಷೀಯ ಮಾತುಕತೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯ ಪ್ರಸ್ತಾಪವಾಗಲಿದೆ. ಇಲ್ಲದೇ ಇದು ಪ್ರಮುಖವಾಗಿ ಚರ್ಚೆಯಾಗಲಿದ್ದು, ಇಬ್ಬರು ಸಚಿವರು ಮಾತುಕತೆಗಾಗಿ ಅಮೆರಿಕಾ ತೆರಳಲಿದ್ದಾರೆ ಎನ್ನುತ್ತಿವೆ ಮೂಲಗಳು.
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ