US Drone Attack: ಯುಎಸ್​​ ಸೇನೆಯಿಂದ ಸಿರಿಯಾದಲ್ಲಿ ವೈಮಾನಿಕ ದಾಳಿ​: ಏರ್ ಸ್ಟ್ರೈಕ್ ನಲ್ಲಿ ಅಲ್ ಖೈದಾ ಹಿರಿಯ ನಾಯಕನ ಹತ್ಯೆ

US Drone Attack: ಯುಎಸ್​ ಸೇನೆ(US Army) ನಡೆಸಿದ ಡ್ರೋಣ್​ ದಾಳಿ(Drone Strike)ಯಲ್ಲಿ ಅಲ್​ ಖೈದಾ(Al Qaeda) ಉಗ್ರಸಂಘಟನೆಯ ಹಿರಿಯ ನಾಯಕ(Senior Leader) ಅಬ್ದುಲ್​ ಹಮೀದ್​ ಅಲ್​ ಮತಾರ್​ (Abdul Hamid al-Matar) ಬಲಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಸಿರಿಯಾ(Syria)ದಲ್ಲಿ ಯುಎಸ್​ ಸೇನೆ(US Army) ನಡೆಸಿದ ಡ್ರೋಣ್​ ದಾಳಿ(Drone Strike)ಯಲ್ಲಿ ಅಲ್​ ಖೈದಾ(Al Qaeda) ಉಗ್ರಸಂಘಟನೆಯ ಹಿರಿಯ ನಾಯಕ(Senior Leader) ಅಬ್ದುಲ್​ ಹಮೀದ್​ ಅಲ್​ ಮತಾರ್​ (Abdul Hamid al-Matar) ಬಲಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ವಾಯುವ್ಯ ಸಿರಿಯಾದಲ್ಲಿ ಅಲ್-ಖೈದಾ ಹಿರಿಯ ನಾಯಕ ಅಬ್ದುಲ್ ಹಮೀದ್ ಅಲ್-ಮತಾರ್​ನನ್ನು ವೈಮಾನಿಕ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಈ ಬಗ್ಗೆ ಅಮೆರಕದ ಸೆಂಟ್ರಲ್​ ಕಮಾಂಡ್​ ವಕ್ತಾರ ಮಾಹಿತಿ ನೀಡಿದ್ದಾರೆ. ದಕ್ಷಿಣ ಸಿರಿಯಾದಲ್ಲಿರುವ ಯುಎಸ್​ ಔಟ್​​ಪೋಸ್ಟ್(US Outpost)​ ಮೇಲೆ ಅಲ್​-ಖೈದಾ ದಾಳಿ(Attack) ನಡೆಸಿದ ಎರಡೇ ದಿನದಲ್ಲಿ ಯುಎಸ್ ಸೇನೆ ಪ್ರತಿದಾಳಿ ನಡೆಸಿದೆ. ಈ ಮೂಲಕ ಅಲ್​-ಖೈದಾ ಅವರ ಆಟಾಟೋಪಕ್ಕೆ ತಿರುಗೇಟು ನೀಡಿದ್ದಾರೆ. ಎಂಕ್ಯೂ-9(MQ-9) ವಿಮಾನವನ್ನು ಬಳಸಿ ಈ ವೈಮಾನಿಕ ದಾಳಿಯನ್ನು ಯುಎಸ್ ಸೇನೆ ನಡೆಸಿದೆ.  ನಾಗರಿಕ ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ದಾಳಿ ಬಗ್ಗೆ ಮಾಹಿತಿ ನೀಡಿದ ಮೇಜರ್​ ಜಾನ್​

ಯುಎಸ್ ಸೇನೆಯ ಮೇಜರ್ ಜಾನ್ ರಿಗ್ಸ್ಬೀ ವೈಮಾನಿಕ ದಾಳಿ ಬಗ್ಗೆ ವಿವರಣೆ ನೀಡಿದ್ದಾರೆ. ಅಲ್​-ಖೈದಾ ಹಿರಿಯ ನಾಯಕನಾಗಿದ್ದ ಹಮೀದ್​ ಹತ್ಯೆಯಿಂದ ನಿಜವಾಗಲೂ ಆ ಉಗ್ರ ಸಂಘಟನೆಗೆ ಭಾರೀ ಹಿನ್ನಡೆಯಾಗುತ್ತೆ ಎಂದು ಹೇಳಿದರು.ಅಷ್ಟೇ ಅಲ್ಲದೇ ಇತ್ತೀಚಿಗೆ ಅಲ್​-ಖೈದಾ ಉಗ್ರಸಂಘಟನೆ ಮತ್ತೊಂದು ಜಾಗತಿಕ ದಾಳಿಗೆ ಸಜ್ಜಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಯುಎಸ್​ ಸೇನೆಯ ಮೇಜರ್​ ಜಾನ್ ರಿಗ್ಸ್ಬೀ ಮಾಹಿತಿ ನೀಡಿದರು. ಸುಖಾಸುಮ್ಮನೆ ಉಗ್ರರು ನಮ್ಮ ನಾಗರಿಕರಿಗೆ, ನಮ್ಮ ಸಹಭಾಗಿ ದೇಶಗಳ ಜನರಿಗೆ, ಹಾಗೂ ಮುಗ್ಧ ನಾಗರಿಕರಿಗೆ ತೊಂದರೆ ಕೊಡುತ್ತಿದ್ದರು. ಇನ್ನು ಮುಂದೆ ಆ ರೀತಿಯ ಘಟನೆಗಳು ನಡೆಯಲ್ಲ. ಯಾಕಂದರೆ ನಾವು ಅವರ ನಾಯಕನನ್ನು ಕೊಂದು ಹಾಕಿದ್ದೇವೆ. ಮತ್ತೆ ತೊಂದರೆ ಮಾಡಿದರೆ ನಮ್ಮ ದಾಳಿ ಮುಂದುವರೆಯುತ್ತೆ ಅಂತ ವಾರ್ನಿಂಗ್​ ಕೊಟ್ಟಿದ್ದಾರೆ.

ಇದನ್ನು ಓದಿ : ಜಮ್ಮು-ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ; 4 ಉಗ್ರರ ಹತ್ಯೆ!

ಅಲ್​-ಖೈದಾಗೆ ಅಮೆರಿಕ ವಾರ್ನಿಂಗ್

ಈ ಹಿಂದೆಯಿಂದಲೂ ಅಮೆರಿಕ ನಾಗರಿಕರ ಮೇಲೆ ಅಲ್​-ಖೈದಾ ದಾಳಿ ನಡೆಸಿಕೊಂಡು ಬರುತ್ತಲೇ ಇದೆ. ಯುಎಸ್​​ ಸೇನೆಯೆವರು ಪ್ರತ್ಯುತ್ತರ ನೀಡಿಕೊಂಡು ಬಂದಿದೆ. ಆದರೆ ಅಲ್-ಖೈದಾ ಪುನರ್ನಿರ್ಮಾಣ ಮಾಡಲು, ಬಾಹ್ಯ ಅಂಗಸಂಸ್ಥೆಗಳೊಂದಿಗೆ ಕಾರ್ಯಾಚರಣೆಗಳನ್ನು ಯೋಜಿಸಲು ಸುರಕ್ಷಿತ ತಾಣವಾಗಿ ಸಿರಿಯಾವನ್ನು ಬಳಸುತ್ತಿದೆ. ಸಿರಿಯಾ, ಇರಾಕ್ ನಲ್ಲಿ ಅಲ್-ಖೈದಾ ಪ್ರಾಬಲ್ಯಕ್ಕೆ ಯತ್ನಿಸಿದ್ದು, .ಅಮೆರಿಕಕ್ಕೆ ಹಾನಿ ಮಾಡುವ ಉದ್ದೇಶ ಹೊಂದಿರುವ ಅಲ್-ಖೈದಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳ ಸದಸ್ಯರನ್ನು ಸದೆಬಡಿಯುವ ಕಾರ್ಯಾಚರಣೆಯನ್ನು ಯುಎಸ್ ಮುಂದುವರಿಸುತ್ತದೆ ಎಂದು  ಹೇಳಿದ್ದಾರೆ.

ಡಮಾಸ್ಕಸ್‌ನಲ್ಲಿ ಸೇನಾ ಬಸ್ ಮೇಲೆ ಐಸಿಸ್​ ಬಾಂಬ್ ದಾಳಿ

ಇನ್ನೂ ಅಕ್ಟೋಬರ್ 20ರಂದು ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿ ಸೇನಾ ಬಸ್‌ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 14 ಜನರು ಸಾವನ್ನಪ್ಪಿದ್ದರು. ಸಿರಿಯಾ ರಾಜಧಾನಿಯಲ್ಲಿ ನಾಲ್ಕು ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತುಎರಡು ಸ್ಫೋಟಕ ಸಾಧನಗಳನ್ನು ಬಳಸಿ ಈ ದಾಳಿ ಎಸಗಲಾಗತ್ತು.

ಇದನ್ನು ಓದಿ: ಇಸ್ಲಾಂಗೆ ಮತಾಂತರವಾಗಿ, ಇಲ್ಲ ದೇಶ ಬಿಟ್ಟು ಹೋಗಿ : ಆಫ್ಘನ್​ ಸಿಖ್ಖರಿಗೆ ತಾಲಿಬಾನ್​ ವಾರ್ನಿಂಗ್​!

ಈ ವರ್ಷ ಸಿರಿಯಾ ಸೇನೆ ಹಾಗೂ ನಾಗರಿಕರನ್ನು ಗುರಿಯಾಗಿಸಿ ಅನೇಕ ದಾಳಿಗಳು ನಡೆದಿವೆ. ಮುಖ್ಯವಾಗಿ ಸೇನಾ ವಾಹನಗಳನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿವೆ. ಐಸಿಸ್ ಉಗ್ರರು ಈ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಐಸಿಸ್ ಸಂಘಟನೆ ಈಗಲೂ ಅನೇಕ ಭಾಗಗಳಲ್ಲಿ ಸಕ್ರಿಯವಾಗಿದೆ.
Published by:Vasudeva M
First published: