ಷರತ್ತುಗಳಿಗೆ ತಾಲಿಬಾನ್ ಒಪ್ಪಿದರೆ 14 ತಿಂಗಳಲ್ಲಿ ಎಲ್ಲಾ ಅಮೆರಿಕ ಸೇನೆ ಆಫ್ಘಾನಿಸ್ತಾನದಿಂದ ವಾಪಸ್

ಅಮೆರಿಕದ ಹಿತಾಸಕ್ತಿ ಇರುವ ಆಸ್ತಿ ಪಾಸ್ತಿ ಮೇಲೆ ಆಕ್ರಮಣ ಮಾಡಲು ಆಫ್ಘಾನಿಸ್ತಾನದ ನೆಲವನ್ನು ಬಳಕೆ ಮಾಡಬಾರದು; ಆಫ್ಘಾನಿಸ್ತಾನದ ಸರ್ಕಾರದೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು; ಆಫ್ಘಾನಿಸ್ತಾನದ ಮಹಿಳೆಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಾರದು ಎಂಬಿತ್ಯಾದಿ ಷರತ್ತುಗಳನ್ನ ತಾಲಿಬಾನ್​ಗೆ ಅಮೆರಿಕ ವಿಧಿಸಿದೆ.

news18
Updated:February 29, 2020, 7:10 PM IST
ಷರತ್ತುಗಳಿಗೆ ತಾಲಿಬಾನ್ ಒಪ್ಪಿದರೆ 14 ತಿಂಗಳಲ್ಲಿ ಎಲ್ಲಾ ಅಮೆರಿಕ ಸೇನೆ ಆಫ್ಘಾನಿಸ್ತಾನದಿಂದ ವಾಪಸ್
ಆಫ್ಘಾನಿಸ್ತಾನ
  • News18
  • Last Updated: February 29, 2020, 7:10 PM IST
  • Share this:
ಕಾಬೂಲ್(ಫೆ. 29): ಆಫ್ಘಾನಿಸ್ತಾನದಲ್ಲಿ ಶಾಂತಿ ಮರಳಿಸಲು ಪ್ರಯತ್ನಿಸುತ್ತಿರುವ ಅಮೆರಿಕ ಸೇನೆ ಇದೀಗ ತಾಲಿಬಾನ್ ಉಗ್ರ ಸಂಘಟನೆ ಜೊತೆ ಸಂಧಾನ ಮಾಡಿಕೊಂಡಿದೆ. ಕೆಲವು ಷರುತ್ತುಗಳೊಂದಿಗೆ ಆಫ್ಘಾನಿಸ್ತಾನವನ್ನು ತೊರೆಯಲು ಅಮೆರಿಕ ನಿರ್ಧರಿಸಿದೆ. ತಾನು ವಿಧಿಸಿರುವ ಷರುತ್ತುಗಳಿಗೆ ತಾಲಿಬಾನ್ ಸಮ್ಮತಿಸಿದರೆ 14 ತಿಂಗಳಲ್ಲಿ ಆಫ್ಘಾನಿಸ್ತಾನದಿಂದ ತನ್ನ ಎಲ್ಲಾ ಸೇನೆಗಳನ್ನು ವಾಪಸ್ ಕರೆಸಿಕೊಳ್ಳಲೂ ಅಮೆರಿಕ ನಿರ್ಧರಿಸಿದೆ. ಇವತ್ತು ಈ ಸಂಬಂಧ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ.

ಇವತ್ತು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಅಮೆರಿಕ ತನ್ನ ಸೇನೆಗಳನ್ನ ವಾಪಸ್ ಕರೆಸುವ ಪ್ರಕ್ರಿಯೆ ಆರಂಭಿಸಲಿದೆ. ಮೊದಲ ಹಂತವಾಗಿ 135 ದಿನಗಳಲ್ಲಿ ಒಟ್ಟು 8,600 ಅಮೆರಿಕನ್ ಸೈನಿಕರು ತವರಿಗೆ ಮರಳಲಿದ್ದಾರೆ. 14 ತಿಂಗಳ ಒಳಗೆ ಆಫ್ಘಾನಿಸ್ತಾದಲ್ಲಿರುವ ಎಲ್ಲಾ ಅಮೆರಿಕನ್ ಸೇನೆಗಳೂ ಕೂಡ ತಮ್ಮ ದೇಶಕ್ಕೆ ಹಿಂದಿರುಗಲಿವೆ. ಅಮೆರಿಕ ಮತ್ತು ಆಫ್ಘಾನಿಸ್ತಾನ ದೇಶಗಳು ಜಂಟಿ ಹೇಳಿಕೆಯಲ್ಲಿ ಇದನ್ನು ಸ್ಪಷ್ಟಪಡಿಸಿವೆ.

ಇದನ್ನೂ ಓದಿ: ದೆಹಲಿ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ಯೋಧ ಮೊಹಮ್ಮದ್ ಅನೀಸ್​ಗೆ ಮನೆ ಕಟ್ಟಿಕೊಡಲಿರುವ ಭಾರತೀಯ ಸೇನೆ

ಆಫ್ಘಾನಿಸ್ತಾನದಲ್ಲಿ 19 ವರ್ಷಗಳಿಂದಲೂ ಅಮೆರಿಕದ ಸೇನೆಗಳು ನೆಲಸಿವೆ. ಅಲ್ಲಿಯ ತಾಲಿಬಾನ್ ಉಗ್ರರೊಂದಿಗೆ ನಿರಂತರ ಸಂಘರ್ಷದಲ್ಲಿದೆ. ಆಫ್ಘಾನಿಸ್ತಾನದಲ್ಲಿ ಸದ್ಯಕ್ಕೆ ಅಮೆರಿಕಾ ಸ್ನೇಹಿ ಸರ್ಕಾರವೇ ಅಸ್ತಿತ್ವದಲ್ಲಿದೆ. ಆದರೆ, ಅಮೆರಿಕದ ಇರುವಿಕೆಯನ್ನು ಆಕ್ಷೇಪಿಸಿ ತಾಲಿಬಾನ್ ಸಂಘಟನೆ ಕಳೆದ ಒಂದು ವರ್ಷದಿಂದ ನಿರಂತರ ಬಾಂಬ್ ಸ್ಫೋಟಗಳನ್ನು ಮಾಡುತ್ತಾ ಬಂದಿದೆ. ಆಫ್ಘಾನಿಸ್ತಾನದಲ್ಲಿ ಶಾಂತಿ ಮರುಸ್ಥಾಪಿಸುವ ಅಮೆರಿಕ ಪ್ರಯತ್ನಗಳು ನೀರಿನಲ್ಲಿ ಹೋಮ ಮಾಡಿದಂತಾಗಿವೆ. ಇದೀಗ ತಾಲಿಬಾನ್ ಜೊತೆ ಅಮೆರಿಕ ಶಾಂತಿ ಮಾತುಕತೆ ಆರಂಭಿಸಿದಾಗಿನಿಂದ ಆಫ್ಘಾನಿಸ್ತಾನದಲ್ಲಿ ಹಿಂಸಾಚಾರಗಳು ಬಹುತೇಕ ನಿಂತಿವೆ. ಆಫ್ಘಾನಿಸ್ತಾನದಿಂದ ಅಮೆರಿಕ ಸಂಪೂರ್ಣವಾಗಿ ಕಾಲ್ತೆಗೆಯಬೇಕು ಎಂಬುದು ತಾಲಿಬಾನ್ ಒಡ್ಡುತ್ತಿರುವ ಪ್ರಮುಖ ಬೇಡಿಕೆಯಾಗಿದೆ.

ಅಮೆರಿಕದ ಹಿತಾಸಕ್ತಿ ಇರುವ ಆಸ್ತಿ ಪಾಸ್ತಿ ಮೇಲೆ ಆಕ್ರಮಣ ಮಾಡಲು ಆಫ್ಘಾನಿಸ್ತಾನದ ನೆಲವನ್ನು ಬಳಕೆ ಮಾಡಬಾರದು; ಆಫ್ಘಾನಿಸ್ತಾನದ ಸರ್ಕಾರದೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು; ಆಫ್ಘಾನಿಸ್ತಾನದ ಮಹಿಳೆಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಾರದು ಎಂಬಿತ್ಯಾದಿ ಷರತ್ತುಗಳನ್ನ ತಾಲಿಬಾನ್​ಗೆ ಅಮೆರಿಕ ವಿಧಿಸಿದೆ. ಈ ಷರತ್ತುಗಳಿಗೆ ತಾಲಿಬಾನ್ ಬದ್ಧವಾಗಿರಬೇಕು. ಇಲ್ಲದಿದ್ದರೆ ಅಮೆರಿಕ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯುವುದು ಅನುಮಾನಾಸ್ಪದ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:February 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading