F-16 Fighter Jet: ಪಾಕ್​ಗೆ ಅಮೆರಿಕಾ ನೆರವು; F-16 ಫೈಟರ್ ಜೆಟ್ ದುರಸ್ಥಿಗೆ 450 ಮಿಲಿಯನ್ ಡಾಲರ್ ಅನುಮೋದನೆ

ಪಾಕಿಸ್ತಾನಕ್ಕೆ ಅಮೆರಿಕ ಅಧ್ಯಕ್ಷ ಬಿಡೆನ್ ಆಡಳಿತವು 450 ಮಿಲಿಯನ್ ಡಾಲರ್ ವೆಚ್ಚದ ಎಫ್-16 ಫೈಟರ್ ಜೆಟ್ ದುರಸ್ಥಿ ಸುಸ್ಥಿರ ಕಾರ್ಯಕ್ರಮವನ್ನು ಅನುಮೋದಿಸಿದೆ. ಅಧಿಸೂಚನೆಯಲ್ಲಿ, ರಾಜ್ಯ ಸಚಿವಾಲಯ 450 ಮಿಲಿಯನ್‍ಡಾಲರ್ ಅಂದಾಜು ವೆಚ್ಚದಲ್ಲಿ ಮಿಲಿಟರಿ ಉಪಕರಣಗಳ ಮಾರಾಟಕ್ಕೆ ಅನುವು ಮಾಡಿದೆ.

ಪಾಕ್‌ ಗೆ ಅಮೆರಿಕಾ ನೆರವು

ಪಾಕ್‌ ಗೆ ಅಮೆರಿಕಾ ನೆರವು

  • Share this:
ಅಟಾಟೋಪಗಳ ವಿರುದ್ಧ ಆಗಾಗ ಕಿಡಿಕಾರುವ ಅಮೆರಿಕ (America) ಸದ್ಯ ಭಯೋತ್ಪಾದನಾ ನಿಗ್ರಹ ಬೆದರಿಕೆಗಳನ್ನು ಎದುರಿಸಲು ಪಾಕ್‌ ಗೆ ಸಹಾಯಾಸ್ತ ನೀಡಿದೆ. ಕೆಲವು ವರ್ಷಗಳಿಂದ ಪಾಕಿಸ್ತಾನಕ್ಕೆ (Pakistan) ನಿಲ್ಲಿಸಿದ್ದ ರಕ್ಷಣಾ ಸಹಕಾರವನ್ನು ಮತ್ತೆ ಅಮೆರಿಕ ಆರಂಭಿಸಿದ್ದು, ಪಾಕಿಸ್ತಾನಕ್ಕೆ ಹಣಕಾಸಿನ ಮಿಲಿಟರಿ ಸಹಕಾರವನ್ನು (Financial military cooperation) ನೀಡಿದೆ. ಪ್ರಸ್ತುತ ಪಾಕಿಸ್ತಾನಕ್ಕೆ ಅಮೆರಿಕ ಅಧ್ಯಕ್ಷ ಬಿಡೆನ್ ಆಡಳಿತವು 450 ಮಿಲಿಯನ್ ಡಾಲರ್ ವೆಚ್ಚದ ಎಫ್-16 ಫೈಟರ್ ಜೆಟ್ (F-16 fighter jet) ದುರಸ್ಥಿ ಸುಸ್ಥಿರ ಕಾರ್ಯಕ್ರಮವನ್ನು ಅನುಮೋದಿಸಿದೆ. ಅಧಿಸೂಚನೆಯಲ್ಲಿ, ರಾಜ್ಯ ಸಚಿವಾಲಯ 450 ಮಿಲಿಯನ್‍ಡಾಲರ್ ಅಂದಾಜು ವೆಚ್ಚದಲ್ಲಿ ಮಿಲಿಟರಿ ಉಪಕರಣಗಳ (Military equipment) ಮಾರಾಟಕ್ಕೆ ಅನುವು ಮಾಡಿದೆ.

ಪಾಕ್‌ ಗೆ 450 ಮಿಲಿಯನ್ ಡಾಲರ್ ನೀಡಿದ ಅಮೆರಿಕಾ
ಪ್ರಸ್ತುತ ಮತ್ತು ಭವಿಷ್ಯದ ಭಯೋತ್ಪಾದನಾ ನಿಗ್ರಹ ಬೆದರಿಕೆಗಳನ್ನು ಎದುರಿಸಲು ಪಾಕಿಸ್ತಾನಕ್ಕೆ ಎಫ್-16 ಜೆಟ್‍ಗಳನ್ನು ಕೊಡುಗೆಯಾಗಿ ಅಮೆರಿಕಾ ಪಾಕ್‌ ಗೆ ನೀಡಿದೆ. ಡಿಫೆನ್ಸ್ ಸೆಕ್ಯುರಿಟಿ ಕೋಆಪರೇಷನ್ ಏಜೆನ್ಸಿ ಬುಧವಾರ ಈ ಸಂಭವನೀಯ ಮಾರಾಟದ ಬಗ್ಗೆ ಪ್ರಮಾಣೀಕರಣವನ್ನು ನೀಡಿದೆ. 2018 ರಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಫ್ಘಾನ್‍ನ ತಾಲಿಬಾನ್ ಮತ್ತು ಹಕ್ಕಾನಿ ನೆಟ್‌ವರ್ಕ್ ಭಯೋತ್ಪಾದಕ ಗುಂಪುಗಳನ್ನು ಹತ್ತಿಕ್ಕಲು ಸಾಧ್ಯವಾಗದ ಕಾರಣಕ್ಕಾಗಿ ಪಾಕಿಸ್ತಾನಕ್ಕೆ ಸುಮಾರು 2 ಶತಕೋಟಿ ಡಾಲರ್ ಭದ್ರತಾ ನೆರವನ್ನು ಸ್ಥಗಿತಗೊಳಿಸಿದ್ದರು ಮತ್ತು ರಕ್ಷಣ ಉತ್ಪನ್ನ ರಪ್ತು ನಿರ್ಬಂದಿಸಲಾಗಿತ್ತು.

ಇದನ್ನೂ ಓದಿ: Burning Man Show: 8 ಗಂಟೆ ಟ್ರಾಫಿಕ್ ಜಾಮ್! ಇದಕ್ಕೆ ಕಾರಣ ಇಷ್ಟು ಚಿಕ್ಕ ವಿಷಯ

ಇದೇ ಸಂದರ್ಭದಲ್ಲಿ ಇಸ್ಲಾಮಾಬಾದ್, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ತಮ್ಮೊಂದಿಗೆ ಪಾಲುದಾರನಲ್ಲ ಎಂದು ಆರೋಪಿಸಿ ಪಾಕಿಸ್ತಾನಕ್ಕೆ ಎಲ್ಲಾ ರಕ್ಷಣಾ ಮತ್ತು ಭದ್ರತಾ ನೆರವನ್ನು ನಿಲ್ಲಿಸುವುದಾಗಿ ಟ್ರಂಪ್ ಘೋಷಿಸಿದ ನಾಲ್ಕು ವರ್ಷಗಳ ಬಳಿಕ ಅಮೆರಿಕಾ ಪಾಕಿಸ್ತಾನಕ್ಕೆ ಮೊದಲ ಪ್ರಮುಖ ಭದ್ರತಾ ನೆರವು ನೀಡಿದೆ.

ಯುಎಸ್‌ ಸುಸ್ಥಿರ ಪ್ಯಾಕೇಜ್‌ಗಳನ್ನು ಒದಗಿತ್ತಿರುವ ಯುಎಸ್‌
"ಯುನೈಟೆಡ್ ಸ್ಟೇಟ್ಸ್ ಸರ್ಕಾರವು ಪಾಕಿಸ್ತಾನದ ವಾಯುಪಡೆಯ F-16 ಕಾರ್ಯಕ್ರಮವನ್ನು ಉಳಿಸಿಕೊಳ್ಳಲು ಉದ್ದೇಶಿತ ವಿದೇಶಿ ಮಿಲಿಟರಿ ಮಾರಾಟದ ಬಗ್ಗೆ ಕಾಂಗ್ರೆಸ್ಸಿಗೆ ಸೂಚಿಸಿದೆ. ಪಾಕಿಸ್ತಾನವು ಪ್ರಮುಖ ಭಯೋತ್ಪಾದನಾ ನಿಗ್ರಹ ಪಾಲುದಾರನೆಂದು ಪರಿಗಣಿಸಿ ಮತ್ತು ದೀರ್ಘಕಾಲದ ನೀತಿಯ ಭಾಗವಾಗಿ, ಯುನೈಟೆಡ್ ಸ್ಟೇಟ್ಸ್ ಮೂಲದ ಪ್ಲಾಟ್‌ಫಾರ್ಮ್‌ಗಳಿಗೆ ಸುಸ್ಥಿರ ಪ್ಯಾಕೇಜ್‌ಗಳನ್ನು ಒದಗಿಸುತ್ತದೆ,” ಎಂದು ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರರು ತಿಳಿಸಿದ್ದಾರೆ.

"ಈ ನೆರವಿನ ಕಾರ್ಯಕ್ರಮವು ಯುನೈಟೆಡ್ ಸ್ಟೇಟ್ಸ್ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧದ ಪ್ರಮುಖ ಭಾಗವಾಗಿದೆ. ಪ್ರಸ್ತಾವಿತ ಮಾರಾಟವು ತನ್ನ F-16 ಜೆಟ್ ಅನ್ನು ನಿರ್ವಹಿಸುವ ಮೂಲಕ ಪ್ರಸ್ತುತ ಮತ್ತು ಭವಿಷ್ಯದ ಭಯೋತ್ಪಾದನಾ ನಿಗ್ರಹ ಬೆದರಿಕೆಗಳನ್ನು ಎದುರಿಸಲು ಪಾಕಿಸ್ತಾನದ ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತದೆ.

F-16, ಪಾಕಿಸ್ತಾನಕ್ಕೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ಬೆಂಬಲಿಸಲು ಅನುವು ಮಾಡಿಕೊಡುತ್ತದೆ ಮತ್ತು ಪಾಕಿಸ್ತಾನವು ಎಲ್ಲಾ ಭಯೋತ್ಪಾದಕ ಗುಂಪುಗಳ ವಿರುದ್ಧ ನಿರಂತರ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ,”ಎಂದು ವಕ್ತಾರರು ತಿಳಿಸಿದ್ದಾರೆ. ಯುಎಸ್‌ ಕಾಂಗ್ರೆಷನಲ್ ಅಧಿಸೂಚನೆಯ ಪ್ರಕಾರ, ಪ್ರಸ್ತಾವಿತ ಮಾರಾಟವು ಯಾವುದೇ ಹೊಸ ಸಾಮರ್ಥ್ಯಗಳು, ಶಸ್ತ್ರಾಸ್ತ್ರಗಳು ಅಥವಾ ಯುದ್ಧಸಾಮಗ್ರಿಗಳನ್ನು ಒಳಗೊಂಡಿಲ್ಲ ಎಂದು ಹೇಳಿದೆ.

ಹಿಂದಿನ ನಿಯಮಗಳನ್ನು ಸಡಿಲಿಸುವ ಮೂಲಕ   ಪಾಕಿಸ್ತಾನಕ್ಕೆ ನೆರವು
ಈ ಉದ್ದೇಶಿತ ಮಾರಾಟವು ಯುನೈಟೆಡ್ ಸ್ಟೇಟ್ಸ್‌ನ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತಾ ಉದ್ದೇಶಗಳನ್ನು ಬೆಂಬಲಿಸುತ್ತದೆ. ನಡೆಯುತ್ತಿರುವ ಭಯೋತ್ಪಾದನಾ ನಿಗ್ರಹ ಪ್ರಯತ್ನಗಳಲ್ಲಿ ಮತ್ತು ಭವಿಷ್ಯದ ಆಕಸ್ಮಿಕ ಕಾರ್ಯಾಚರಣೆಗಳ ತಯಾರಿಯಲ್ಲಿ ಪಾಕಿಸ್ತಾನವು ಯುಎಸ್ ಮತ್ತು ಪಾಲುದಾರ ಪಡೆಗಳೊಂದಿಗೆ ಪರಸ್ಪರ ಕಾರ್ಯಸಾಧ್ಯತೆಯನ್ನು ಉಳಿಸಿಕೊಳ್ಳಲು ಇದು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ:  Rajnath Singh: ರಾಜನಾಥ್ ಸಿಂಗ್​ಗೆ ಮಂಗೋಲಿಯಾ ಕುದುರೆ ಉಡುಗೊರೆ! ಏನಿದರ ವಿಶೇಷತೆ?

ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪಾಕಿಸ್ತಾನದ ಭದ್ರತಾ ನೆರವನ್ನು ನಿಲ್ಲಿಸಿ ತನ್ನ ಎಲ್ಲಾ ಮಿಲಿಟರಿ ನೆರವನ್ನು ಹಿಂಪಡೆಯುವ ಮೂಲಕ ಅಮೆರಿಕಾ 2018ರಲ್ಲಿ ನಿರ್ಭಂಧ ಹೇರಿತ್ತು. ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನ ಸುಳ್ಳು ಮತ್ತು ಭಯೋತ್ಪಾದಕರನ್ನು ಭದ್ರಪಡಿಸುತ್ತಿದೆ ಎಂದು ಆರೋಪಿಸಿ ಈ ಕ್ರಮ ಕೈಗೊಂಡಿದ್ದರು. ಸದ್ಯ ಹಿಂದಿನ ನಿಯಮಗಳನ್ನು ಸಡಿಲಿಸುವ ಮೂಲಕ ಅಮೆರಿಕ ಅಧ್ಯಕ್ಷ ಬಿಡೆನ್ ಆಡಳಿತವು ಪಾಕಿಸ್ತಾನಕ್ಕೆ ನೆರವಾಗಿದೆ.
Published by:Ashwini Prabhu
First published: