ಪಕ್ಷದ ಆಂತರಿಕ ರಾಜಕೀಯಕ್ಕೆ ಬೇಸತ್ತು ಕಾಂಗ್ರೆಸ್​ ತೊರೆದ ನಟಿ ಉರ್ಮಿಳಾ ಮತೋಂಡ್ಕರ್​​​

ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಪಕ್ಷದಲ್ಲಿನ ಆಂತರಿಕ ರಾಜಕೀಯ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

Seema.R | news18-kannada
Updated:September 10, 2019, 3:45 PM IST
ಪಕ್ಷದ ಆಂತರಿಕ ರಾಜಕೀಯಕ್ಕೆ ಬೇಸತ್ತು ಕಾಂಗ್ರೆಸ್​ ತೊರೆದ ನಟಿ ಉರ್ಮಿಳಾ ಮತೋಂಡ್ಕರ್​​​
ಉರ್ಮಿಳಾ ಮತೋಂಡ್ಕರ್​
  • Share this:
ನವದೆಹಲಿ (ಸೆ.10):  ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಸೇರಿದ್ದ ನಟಿ, ರಾಜಕಾರಣಿ ಉರ್ಮಿಳಾ ಮತೋಂಡ್ಕರ್​​ ಕೈಗೆ ಗುಡ್​ ಬೈ ಹೇಳಿದ್ದಾರೆ.

ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಪಕ್ಷದಲ್ಲಿನ ಆಂತರಿಕ ರಾಜಕೀಯ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಮೇ 16ರಂದು ಮುಂಬೈ ಕಾಂಗ್ರೆಸ್​ ಅಧ್ಯಕ್ಷ ಮಿಲಿಂಡ ಡಿಯೋರಾಗೆ ಪತ್ರ ಬರೆದಿರುವ ಅವರು, ಪಕ್ಷದಲ್ಲಿ ತಮ್ಮನ್ನು ಕಡೆಗಡಿಸಿದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.45 ವರ್ಷದ ಈ ನಟಿ, ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಉತ್ತರ ಮುಂಬಯಿನಿಂದ ಸ್ಪರ್ಧಿಸಿ ಸೋತಿದ್ದರು. ಈ ವೇಳೆ ಪಕ್ಷದಲ್ಲಿನ ದ್ರೋಹದ ಬಗ್ಗೆ ಕೂಡ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಧ್ವನಿ ಎತ್ತಿದ್ದರು.ಇನ್ನು ಪತ್ರದಲ್ಲಿ ತಮ್ಮ ಗೌರವ ಹಾಗೂ ಗೌಪ್ಯ ಸಂವಹನಗಳು ಮಾಧ್ಯಮದಲ್ಲಿ ಸೋರಿಕೆಯಾಗಿದೆ.  ದ್ರೋಹದ ಕಾರ್ಯ ನಡೆಯುತ್ತಿದೆ ಎಂದು ಉಲ್ಲೇಖಿಸಿದ್ದಾರೆ.

ಇದನ್ನು ಓದಿ: 81ರ ವೃದ್ಧನಂತೆ ವೇಷ ಮರೆಸಿಕೊಂಡು ಬಂದ 32 ವರ್ಷದ ಯುವಕ; ಹೌಹಾರಿದ ವಿಮಾನ ನಿಲ್ದಾಣದ ಸಿಬ್ಬಂದಿ

ನನ್ನ ರಾಜಕೀಯ ಮತ್ತು ಸಾಮಾಜಿಕ ಸೂಕ್ಷತೆಗಳನ್ನು ಪಕ್ಷದ ಆಂತರಿಕ ರಾಜಕೀಯದ ವಿರುದ್ಧ ಹೋರಾಡಲು ಸಾಧನವಾಗಿ ಬಳಸಿಕೊಳ್ಳಲು ಇಷ್ಟವಿಲ್ಲ. ಮುಂಬೈನ ಜನರಿಗಾಗಿ ನನ್ನ ಕೆಲಸ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಕಳೆದ ಮೇಯಂದು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಹುಲ್​ ಗಾಂಧಿ ಅಧ್ಯಕ್ಷತೆಯಲ್ಲಿ ಇವರು ಕಾಂಗ್ರೆಸ್​ ಸೇರಿದ್ದರು.

First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ