TamilNadu Election: ತಮಿಳುನಾಡು ಚುನಾವಣೆಯಲ್ಲಿ ಸೀಟು ಹಂಚಿಕೆಯಲ್ಲಿ ಭಿನ್ನಮತ; AIADMK-BJP ಮೈತ್ರಿಯಿಂದ ಹೊರನಡೆದ DMDK

ಕಳೆದ ವಾರ, ಎಐಎಡಿಎಂಕೆ ತನ್ನ ಮಿತ್ರ ಪಕ್ಷವಾದ ಬಿಜೆಪಿಗೆ 234 ಸ್ಥಾನಗಳಲ್ಲಿ 20 ಸ್ಥಾನಗಳನ್ನು ನೀಡಿತ್ತು. ಮತ್ತೊಂದು ಮಿತ್ರಪಕ್ಷವಾದ ಪಿಎಂಕೆಗೆ 23 ಸ್ಥಾನಗಳನ್ನು ನೀಡಿತ್ತು. ಆದರೆ, ಡಿಎಂಡಿಕೆಗೆ ಅದಕ್ಕಿಂತ ಕಡಿಮೆ ಸ್ಥಾನ ನೀಡಲು ಮುಂದಾದದ್ದೆ ಮೈತ್ರಿ ಮುರಿದು ಬೀಳಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಡಿಎಂಡಿಕೆ ಪಕ್ಷದ ಮುಖ್ಯಸ್ಥ ಮತ್ತು ನಟ ವಿಜಯಕಾಂತ್​.

ಡಿಎಂಡಿಕೆ ಪಕ್ಷದ ಮುಖ್ಯಸ್ಥ ಮತ್ತು ನಟ ವಿಜಯಕಾಂತ್​.

  • Share this:
    ಚೆನ್ನೈ (ಮಾರ್ಚ್​ 09); ತಮಿಳುನಾಡು ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಕಳೆದ ಒಂದು ವರ್ಷದಿಂದ ಎಲ್ಲಾ ಪ್ರಮುಖ ಪಕ್ಷಗಳೂ ತಮಿಳುನಾಡಿನಲ್ಲಿ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದರೂ, ಚುನಾವಣಾ ಆಯೋಗ ಚುನಾವಣಾ ದಿನಾಂಕದ ಘೋಷಣೆ ಮಾಡಿದಾಗಿನಿಂದ ಪ್ರಬಲ ಪಕ್ಷಗಳಾದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಮಿತ್ರ ಪಕ್ಷಗಳ ನಡುವೆ ಸೀಟು ಹಂಚಿಕೆ ಎಂಬುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಈ ಬಾರಿಯೂ ತಮಿಳುನಾಡಿನಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲೇಬೇಕು ಎಂದು ಪಣ ತೊಟ್ಟಿರುವ ಎಐಎಡಿಎಂಕೆ ಈಗಾಗಲೇ ಬಿಜೆಪಿ (BJP)ಜೊತೆಗೆ ಮೈತ್ರಿ ಸಾಧಿಸಿ 20 ಸೀಟುಗಳನ್ನು ಬಿಟ್ಟುಕೊಟ್ಟಿದೆ. ಅಲ್ಲದೆ, ದಕ್ಷಿಣ ತಮಿಳುನಾಡು ಭಾಗದಲ್ಲಿನ ಮತಗಳನ್ನು ಸೆಳೆಯುವ ಸಲುವಾಗಿ ನಟ ವಿಜಯಕಾಂತ್​ ಅವರ ಡಿಎಂಡಿಕೆ (DMDK) ಪಕ್ಷದ ಜೊತೆಗೂ ಮೈತ್ರಿಗೆ ಮುಂದಾಗಿತ್ತು. ಆದರೆ, ಮೈತ್ರಿಯಲ್ಲಿ ತಮಗೆ ಸಾಕಷ್ಟು ಸೀಟುಗಳನ್ನು ನೀಡಲಾಗಿಲ್ಲ ಎಂದು ಮುನಿಸಿಕೊಂಡಿರುವ ನಟ ವಿಜಯಕಾಂತ್ ನೇತೃತ್ವದ DMDK ಪಕ್ಷ ಇಂದು ಅಧೀಕೃತವಾಗಿ AIADMK-BJP ಮೈತ್ರಿಕೂಟದಿಂದ ಹಿಂದೆ ಸರಿದಿದೆ. ಈ ಬೆಳವಣಿಗೆ ಸಾಮಾನ್ಯವಾಗಿ ಆಡಳಿರೂಢ ಮೈತ್ರಿಕೂಟಕ್ಕೆ ಹಿನ್ನಡೆಯಾಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.



    ನಟ, ರಾಜಕಾರಣಿ ವಿಜಯಕಾಂತ್ ಅವರ ದೇಸಿಯಾ ಮುರ್ಪೊಕ್ಕು ದ್ರಾವಿಡ ಕಳಗಂ (DMDK) ವಿಧಾನಸಭಾ ಚುನಾವಣೆಗೆ ಇನ್ನೊಂದು ತಿಂಗಳು ಇರುವಾಗ ಎಐಎಡಿಎಂಕೆ-ಬಿಜೆಪಿ ಮೈತ್ರಿ ತ್ಯಜಿಸಿದೆ. ಆಡಳಿತಾರೂಢ AIADMK ಯೊಂದಿಗೆ ಸ್ಥಾನ ಹಂಚಿಕೆ ಮಾತುಕತೆ ವಿಫಲವಾದ ನಂತರ ಡಿಎಂಡಿಕೆ ಹಠಾತ್ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಚುನಾವಣೆಗಾಗಿ ಎಐಎಡಿಎಂಕೆ ಮತ್ತು ಬಿಜೆಪಿ ತಮ್ಮ ಸ್ಥಾನ ಹಂಚಿಕೆ ಒಪ್ಪಂದವನ್ನು ಕಳೆದ ವಾರ ಪ್ರಕಟಿಸಿತ್ತು. ಡಿಎಂ‌ಡಿಕೆಗೆ ನಿರೀಕ್ಷಿತ ಕ್ಷೇತ್ರಗಳನ್ನು ಹಂಚಿಕೆ ಮಾಡದಿರುವುದು ಅವರು ಮೈತ್ರಿ ತೊರೆಯಲು ಕಾರಣವೆಂದು ಉಲ್ಲೇಖಿಸಲಾಗಿದೆ.

    ವರ್ಚಸ್ವಿ ಮತ್ತು ಪ್ರಬಲ ನಾಯಕಿ ಜೆ.ಜಯಲಲಿತಾ ಅವರ ನಿಧನದ ನಂತರ ಆಡಳಿತಾರೂ AIADMK ಗೆ ಇದು ಮೊದಲ ವಿಧಾನಸಭಾ ಚುನಾವಣೆಯಾಗಿದೆ. ಪ್ರತಿಪಕ್ಷ ಡಿಎಂಕೆ-ಕಾಂಗ್ರೆಸ್ 2019 ರ ರಾಷ್ಟ್ರೀಯ ಚುನಾವಣೆಯಲ್ಲಿ AIADMKಗೆ ದೊಡ್ಡ ಪೆಟ್ಟು ನೀಡಿತ್ತು. ಹೀಗಾಗಿ ಈ ಫಲಿತಾಂಶ ರಾಜ್ಯ ಚುನಾವಣೆಯಲ್ಲಿಯೂ ಮುಂದುವರೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    2019 ರ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವು ರಾಜ್ಯದ 39 ಸ್ಥಾನಗಳ ಪೈಕಿ 38 ಸ್ಥಾನಗಳಲ್ಲಿ ಸೋಲನುಭವಿಸಿತ್ತು. ಬಿಜೆಪಿ - ದಕ್ಷಿಣ ರಾಜ್ಯಗಳಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುವ ಬಗ್ಗೆ ಆಶಾವಾದ ಹೊಂದಿತ್ತಾದರೂ ತಾನು ಸ್ಪರ್ಧಿಸಿದ ಎಲ್ಲಾ ಐದು ಸ್ಥಾನಗಳನ್ನು ಕಳೆದುಕೊಂಡಿತ್ತು.

    ಕಳೆದ ವಾರ, ಎಐಎಡಿಎಂಕೆ ತನ್ನ ಮಿತ್ರ ಪಕ್ಷವಾದ ಬಿಜೆಪಿಗೆ 234 ಸ್ಥಾನಗಳಲ್ಲಿ 20 ಸ್ಥಾನಗಳನ್ನು ನೀಡಿತ್ತು. ಮತ್ತೊಂದು ಮಿತ್ರಪಕ್ಷವಾದ ಪಿಎಂಕೆಗೆ 23 ಸ್ಥಾನಗಳನ್ನು ನೀಡಿತ್ತು. ಆದರೆ, ಡಿಎಂಡಿಕೆಗೆ ಅದಕ್ಕಿಂತ ಕಡಿಮೆ ಸ್ಥಾನ ನೀಡಲು ಮುಂದಾದದ್ದೆ ಮೈತ್ರಿ ಮುರಿದು ಬೀಳಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

    ಇದನ್ನೂ ಓದಿ: West Bengal Election: ಪ.ಬಂಗಾಳದಲ್ಲಿ 8 ಹಂತದ ಮತದಾನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾ ಮಾಡಿದ ಸುಪ್ರೀಂ

    ಸದ್ಯಕ್ಕೆ, ಡಿಎಂಡಿಕೆ ಪಕ್ಷಕ್ಕೆ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮೈತ್ರಿ ಮಾಡಿಕೊಳ್ಳಲು ಎಎಂಎಂಕೆ ಅಥವಾ ಎಂಎನ್‌ಎಂ ಮಾತ್ರ ಇವೆ. ಆದರೆ, ಈಗಾಗಲೇ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ (ಎಂಎನ್‌ಎಂ) ತನ್ನ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ.

    ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ 154 ಸ್ಥಾನಗಳಿಗೆ ಸ್ಪರ್ಧಿಸಲಿದ್ದರೆ, ಉಳಿದ 80 ಸ್ಥಾನಗಳನ್ನು ಎಂಎನ್‌ಎಂನ ಮೈತ್ರಿ ಪಾಲುದಾರರಾದ ಅಖಿಲ ಭಾರತ ಸಮತುವಾ ಮಕ್ಕಳ್ ಕಚ್ಚಿ (ಎಐಎಸ್‌ಎಂಕೆ) ಮತ್ತು ಇಂಡಿಯಾ ಜನನಾಯಕ ಕಚ್ಚಿ (ಐಜೆಕೆ)ಗೆ ನೀಡಲಾಗಿದೆ.
    Published by:MAshok Kumar
    First published: