Man Sets Wifes Lover Ablaze: ಹೆಂಡತಿ ಜೊತೆ ಅಕ್ರಮ ಸಂಬಂಧ; ರೊಚ್ಚಿಗೆದ್ದು ಲವರ್​​ಗೆ ಗತಿ ಕಾಣಿಸಿದ ಗಂಡ!

ಅರ್ಚನಾ  ಮದುವೆಯಾಗಿದ್ದರೂ ಅಹಿರ್ವಾರ್ ಜೊತೆ ಡೇಟಿಂಗ್ ಮಾಡುತ್ತಿದ್ದಳಂತೆ. ಅರ್ಚನಾ ಮತ್ತು ಅಹಿರ್ವಾರ್ ಆಗಾಗ್ಗೆ ಭೇಟಿಯಾಗುತ್ತಿದ್ದರು. ಇತ್ತೀಚೆಗೆ ಇಂದೋರ್‌ಗೆ ಹೋಗಿದ್ದರು. ಹೆಂಡತಿ ತನಗೆ ವಂಚಿಸುತ್ತಿರುವ ಬಗ್ಗೆ ಶೇಖರ್​ಗೆ ಗೊತ್ತಾದ ಕೂಡಲೇ ಅಹಿರ್ವಾರ್ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗಂಡ-ಹೆಂಡತಿ ಅಂದ್ಮೇಲೆ ನೂರಾರು ವಿಷಯಗಳಿರುತ್ತೆ. ಪ್ರತಿಯೊಂದು ಸಂಸಾರದಲ್ಲೂ ಒಂದಲ್ಲ ಒಂದು ಸಮಸ್ಯೆ ಇರುತ್ತೆ. ಅನುಸರಿಸಿಕೊಂಡು ಹೋದರೇನೇ ಸಂಸಾರ ಅಂತಾರೆ ದೊಡ್ಡವರು. ಆದರೆ ಗಂಡ-ಹೆಂಡತಿ ಮಧ್ಯೆ ಮತ್ತೊಬ್ಬರ ನೆರಳು ಮಾತ್ರ ಇರಬಾರದು. ಇಲ್ಲಿ ಆಗಿದ್ದು ಅದೇ ಗಂಡ-ಹೆಂಡತಿಯ ಮಧ್ಯೆ ಅವನೊಬ್ಬ ಉದ್ಭವಿಸಿದ್ದ. ಗಂಡನ ಜೊತೆ ಬದುಕುತ್ತಿದ್ದ ಹೆಂಡತಿ ಮತ್ತೊಬ್ಬನ ಸಹವಾಸಕ್ಕೆ ಬಿದ್ದಿದ್ದಳು. ಅಲ್ಲಿಗೆ ಗಂಡ-ಹೆಂಡತಿ ಹಾಗೂ ಅವನು ಕಥೆ ಶುರುವಾಗಿತ್ತು. ಅಕ್ರಮ ಸಂಬಂಧಗಳ ಆಯಸ್ಸು ಚಿಕ್ಕದು ಅಂತಾರೆ. ಎಷ್ಟೇ ಬುದ್ಧಿವಂತಿಕೆ ಉಪಯೋಗಿಸಿದರು ಅಕ್ರಮದ ವಾಸನೆ ಸಂಗಾತಿಯ ಮೂಗಿಗೆ ಬಡಿಯದೇ ಇರದು. ಇಲ್ಲೂ ಹೆಂಡತಿಯ ಅಫೇರ್​ ಬಗ್ಗೆ ಗಂಡನಿಗೆ ಗೊತ್ತಾಗಿತ್ತು. ಮುಂದಾಗಿದ್ದೇ ರೋಷಾಗ್ನಿ.

ರೊಚ್ಚಿಗೆದ್ದ ಗಂಡ..!

ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದವನ ಮೇಲೆ ಗಂಡ ದಾಳಿ ಮಾಡಿದ್ದಾನೆ. ಮಾತನಾಡಬೇಕು ಬಾ ಎಂದು ಕರೆದು ಪೆಟ್ರೋಲ್​ ಸುರಿದು ಬೆಂಕಿ ಇಟ್ಟಿದ್ದಾರೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿ ಘಟನೆ ನಡೆದಿದೆ. ಹೆಂಡತಿಯ ಲವರ್​​ನ ದೇಹ ಶೇ.50ರಷ್ಟು ಸುಟ್ಟ ಗಾಯಗಳಾಗಿವೆ. ಗಾಯಾಳುವನ್ನು ಝಾನ್ಸಿಯ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದುವೆಯ ಬಳಿಕವೂ ಡೇಟಿಂಗ್​

ಗಾಯಾಳುವನ್ನು ಅರವಿಂದ ಅಹಿರ್ವಾರ್ ಎಂದು ಗುರುತಿಸಲಾಗಿದೆ. ಭೋಪಾಲ್ ಮೂಲದವನಾದ ಈ ವ್ಯಕ್ತಿ ಆರೋಪಿಯ ಪತ್ನಿ ಅರ್ಚನಾ ಜೊತೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ವರದಿಯ ಪ್ರಕಾರ, ಅರ್ಚನಾ  ಮದುವೆಯಾಗಿದ್ದರೂ ಅಹಿರ್ವಾರ್ ಜೊತೆ ಡೇಟಿಂಗ್ ಮಾಡುತ್ತಿದ್ದಳಂತೆ. ಅರ್ಚನಾ ಮತ್ತು ಅಹಿರ್ವಾರ್ ಆಗಾಗ್ಗೆ ಭೇಟಿಯಾಗುತ್ತಿದ್ದರು. ಇತ್ತೀಚೆಗೆ ಇಂದೋರ್‌ಗೆ ಹೋಗಿದ್ದರು. ಹೆಂಡತಿ ತನಗೆ ವಂಚಿಸುತ್ತಿರುವ ಬಗ್ಗೆ ಶೇಖರ್​ಗೆ ಗೊತ್ತಾದ ಕೂಡಲೇ ಅಹಿರ್ವಾರ್ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದರು.

ಗಂಡನ ಕೋಪಾಗ್ನಿಯಲ್ಲಿ ಬೆಂದ ಪ್ರಿಯಕರ

ಪತ್ನಿ ಅರ್ಚನಾ ಸಂಬಂಧ ಮಾತನಾಡಬೇಕು ಎಂದು ಪತಿ ಶೇಖರ್ ಪ್ರಿಯಕರ ಅಹಿರ್ವಾರ್​ನ ಕರೆದಿದ್ದಾರೆ. ಶೇಖರ್​ ಜೊತೆ ಮಾತನಾಡಲು ಬಂದ ಅಹಿರ್ವಾರ್​​ನ ಮುಕ್ತಕಾಶಿ ಮಂಚ್ ಹಿಂಭಾಗದ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದ ಶೇಕರ್​​ ತನ್ನ ಕೋಪಾಗ್ನಿಯನ್ನು ಹೊರ ಹಾಕಿದ್ದಾನೆ.  ಅಹಿರ್ವಾರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಮೆ, ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಹಿರ್ವಾರ್ ನ ಕಿರುಚಾಟ ಕೇಳಿ ಸ್ಥಳೀಯರಲ್ಲಿ ಕೆಲವರು ಆತನನ್ನು ರಕ್ಷಿಸಲು ಧಾವಿಸಿದರು. ಸ್ವಲ್ಪ ಸಮಯದ ನಂತರ, ಪೊಲೀಸರು ಆಗಮಿಸಿ ಗಾಯಾಳುವನ್ನು ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದಾರೆ.

ಗಂಡ ಹಾಗೂ ಹೆಂಡತಿ ಇಬ್ಬರ ಮೇಲೂ ಕೇಸ್​

ಗಾಯಾಳುವಿನ ಕುಟುಂಬದ ಸದಸ್ಯರು ಪೋಲಿಸರನ್ನು ಸಂಪರ್ಕಿಸಿ ಆರೋಪಿ ಮತ್ತು ಆತನ ಪತ್ನಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 307 ಮತ್ತು 326 ರ ಅಡಿಯಲ್ಲಿ ಅರ್ಚನಾ ಮತ್ತು ಶೇಖರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವೃತ್ತ ಅಧಿಕಾರಿ ರಾಜೇಶ್ ಕುಮಾರ್ ಸಿಂಗ್ ಪ್ರಕಾರ, ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಇದನ್ನೂ ಓದಿ: Delhi Child Rape Case| ದೆಹಲಿ ಪೂಜಾರಿಯಿಂದ ದಲಿತ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣ; ಪೊಲೀಸರಿಂದ ಮತ್ತೊಂದು ಚಾರ್ಜ್​ಶೀಟ್​!

ಅಕ್ರಮ ಸಂಬಂಧ ತಂದ ಸಂಕಷ್ಟ..!

ವಿವಾಹಿತಳ ಜೊತೆ ಪ್ರೀತಿ-ಪ್ರೇಮ ಎಂದು ಸುತ್ತಾಡಿದ ತಪ್ಪಿಗೆ ಅಹಿರ್ವಾರ್ ಜೀವನವೇ ಅರ್ಧ ಸುಟ್ಟು ಹೋಗಿದೆ. ವಿವಾಹಿತಳ ಮೋಹಕ್ಕೆ ಬಿದ್ದು ಬದುಕು ಮೂರಾಬಟ್ಟೆಯಾಗಿದೆ. ಶೇ.50ರಷ್ಟು ದೇಹ ಸುಟ್ಟು ಹೋಗಿದ್ದು  ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಜೀವನ ಪರ್ಯಂತ ಸುಟ್ಟ ಗಾಯಗಳು ಗುರುತು ದೇಹದ ಮೇಲೆ ಇರಲಿದೆ. ಇನ್ನು ಬೆಂಕಿಯಿಟ್ಟ ಪತಿರಾಯ ಕೋಪದ ಕೈಗೆ ಬುದ್ದಿ ಕೊಟ್ಟು ಈಗ ಕಂಬಿ ಹಿಂದೆ ನಿಂತಿದ್ದಾನೆ. ಗಂಡ-ಹೆಂಡತಿ ಮತ್ತು ಅವನು ಕಥೆ ಭೀಕರ ಅಪರಾಧದಲ್ಲಿ ಕೊನೆಯಾಗಿದೆ.
Published by:Kavya V
First published: