HOME » NEWS » National-international » UPSC RECRUITMENT 2021 APPLY NOW FOR 89 VACANCIES FOR ENGINEER PUBLIC PROSECUTOR AND OTHERS HG

UPSC Recruitment 2021: ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

news18-kannada
Updated:March 3, 2021, 4:41 PM IST
UPSC Recruitment 2021: ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಾಂದರ್ಭಿಕ ಚಿತ್ರ
  • Share this:
ಕೇಂದ್ರ ಲೋಕ ಸೇವಾ ಆಯೋಗ ಖಾಲಿ ಇರುವ 89 ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್, ಎಕನಾಮಿಕ್ ಆಫೀಸರ್ ಮತ್ತು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾರ್ಚ್ 18,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ತಿಳಿಸಿದೆ. 

ಹುದ್ದೆಗಳ ವಿವರ:

ಎಕನಾಮಿಕ್ ಆಫೀಸರ್ - 1

ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ - 10

ಪ್ರೋಗ್ರಾಮರ್ ಗ್ರೇಡ್.ಎ - 1

ಪಬ್ಲಿಕ್ ಪ್ರಾಸಿಕ್ಯುಟರ್ - 43

ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯುಟರ್ -26ಸೀನಿಯರ್ ಸೈಂಟಿಫಿಕ್ ಆಫೀಸರ್ -8

ಒಟ್ಟು- 89 ಹುದ್ದೆಗಳು

ವಿದ್ಯಾರ್ಹತೆ:

ಕಾನೂನು ಪದವಿ, ಸ್ನಾತಕೋತ್ತರ ಪದವಿ, ಪೋಸ್ಟ್ ಗ್ರಾಜುಯೇಶನ್, ಬಿ.ಇ, ಬಿ.ಟೆಕ್ ವಿದ್ಯಾರ್ಹತೆಯನ್ನು ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಹುದ್ದೆಗಳಿಗನುಸಾರ ಗರಿಷ್ಟ 30 ರಿಂದ 38 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗೆ?:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಆನ್​ಲೈನ್​ ಮೂಲಕ ಸಾಮಾನ್ಯ/ಓಬಿಸಿ ಅಭ್ಯರ್ಥಿಗಳು 25ರೂ ಪಾವತಿಸಬೇಕಿರುತ್ತದೆ.  ಆದರೆ ಪ.ಜಾ, ಪ.ಪಂ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?:

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ತೆರಳಿ. ಅಲ್ಲಿ ನೀಡಲಾಗಿರುವ ಮಾಹಿತಿಯನ್ನು ಓದಿ ನಂತರ ಭರ್ತಿ ಮಾಡಿಬೇಕು.  ಮಾರ್ಚ್ 18,2021 ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
Published by: Harshith AS
First published: March 3, 2021, 4:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories