HOME » NEWS » National-international » UPSC RECRUITMENT 2021 APPLICATIONS INVITED FOR 249 POSTS HG

UPSC Recruitment 2021: 249 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವಿ ವಿದ್ಯಾರ್ಹತೆ ಪಡೆದವರಿಗೆ ಅವಕಾಶ

ವಿವಿಧ ಹುದ್ದೆಗಳಿಗೆ ಅನುಸಾರವಾಗಿ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

news18-kannada
Updated:January 25, 2021, 6:53 PM IST
UPSC Recruitment 2021: 249 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವಿ ವಿದ್ಯಾರ್ಹತೆ ಪಡೆದವರಿಗೆ ಅವಕಾಶ
ಸಾಂದರ್ಭಿಕ ಚಿತ್ರ
  • Share this:
ಕೇಂದ್ರ ಲೋಕ ಸೇವಾ ಆಯೋಗ ಖಾಲಿ ಇರುವ 249 ಜ್ಯೂನಿಯರ್ ಟೆಕ್ನಿಕಲ್ ಅಧಿಕಾರಿ, ಅಸಿಸ್ಟೆಂಟ್ ಡೈರೆಕ್ಟರ್, ಸ್ಪೆಷಲಿಸ್ಟ್ ಗ್ರೇಡ್ III ಅಸಿಸ್ಟೆಂಟ್ ಪ್ರೊಫೆಸರ್, ಲೆಕ್ಚರರ್, ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯುಟರ್ ಮತ್ತು ಡಾಟಾ ಪ್ರೊಸೆಸಿಂಟ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬಹುದಾಗಿ ತಿಳಿಸಿದೆ.

ಹುದ್ದೆಗಳ ವಿವರ:

ಜ್ಯೂನಿಯರ್ ಟೆಕ್ನಿಕಲ್ ಅಧಿಕಾರಿ - 6 ಹುದ್ದೆಗಳು

ಅಸಿಸ್ಟೆಂಟ್ ಡೈರೆಕ್ಟರ್ - 1 ಹುದ್ದೆ

ಸ್ಪೆಷಲಿಸ್ಟ್ ಗ್ರೇಡ್ III ಅಸಿಸ್ಟೆಂಟ್ ಪ್ರೊಫೆಸರ್ - 45 ಹುದ್ದೆಗಳು

ಲೆಕ್ಚರರ್ - 1 ಹುದ್ದೆ

ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯುಟರ್ - 80 ಹುದ್ದೆಗಳುಡಾಟಾ ಪ್ರೊಸೆಸಿಂಟ್ ಅಸಿಸ್ಟೆಂಟ್ - 116 ಹುದ್ದೆಗಳು

ವಿದ್ಯಾರ್ಹತೆ:  ಕೇಂದ್ರ ಲೋಕ ಸೇವಾ ಆಯೋಗ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ, ಬಿ.ಇ/ಬಿ.ಟೆಕ್, ಪಿಜಿ ಡಿಪ್ಲೋಮಾ, ಎಂಬಿಬಿಎಸ್, ಸ್ನಾತಕೋತ್ತರ ಪದವಿ ಮತ್ತು ಎಲ್‌ಎಲ್‌ಬಿ ವಿದ್ಯಾರ್ಹತೆಯನ್ನು ಪಡೆದಿರಬೇಕು. ಅಂತಹವರು ಅರ್ಜಿ ಸಲ್ಲಿಸಬಹುದಾಗಿ ತಿಳಿಸಿದೆ.

ವಯೋಮಿತಿ: ಹುದ್ದೆಗಳಿಗೆ ಅನುಸಾರವಾಗಿ ಗರಿಷ್ಟ 30, 35 ಮತ್ತು 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?: ವಿವಿಧ ಹುದ್ದೆಗಳಿಗೆ ಅನುಸಾರವಾಗಿ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಕೇಂದ್ರ ಲೋಕ ಸೇವಾ ಆಯೋಗ ನೇಮಕಾತಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕು. 25 ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

-ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:

ಆಸಕ್ತ ಅರ್ಹ ಅಭ್ಯರ್ಥಿಗಳು ಕೇಂದ್ರ ಲೋಕ ಸೇವಾ ಆಯೋಗದ ಅಧಿಕೃತ ವೆಬ್‌ಸೈಟ್‌ https://www.upsc.gov.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ಮಾಹಿತಿಯನ್ನು ಓದಿ ನಂತರ ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಫೆಬ್ರವರಿ 11,2021ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.
Published by: Harshith AS
First published: January 25, 2021, 6:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories