UPSC Civil Services Result 2019: ಯುಪಿಎಸ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಪ್ರದೀಪ್​​ ಸಿಂಗ್ ಟಾಪರ್​

UPSC Civil Services final result 2019: ಟಾಪ್- 10 ಪಟ್ಟಿಯಲ್ಲಿ ಮೂವರು ಮಹಿಳೆಯರು ಮತ್ತು ಟಾಪ್ -25 ಶ್ರೇಯಾಂಕಗಳಲ್ಲಿ ಕನಿಷ್ಠ ಒಂಬತ್ತು ಮಂದಿ ಇದ್ದಾರೆ. 2019 ಸಾಲಿನಲ್ಲಿ ಒಟ್ಟು 829 ಅಭ್ಯರ್ಥಿಗಳು ವಿವಿಧ ನಾಗರೀಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.

ಯುಪಿಎಸ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಯುಪಿಎಸ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ

  • Share this:
    ನವದೆಹಲಿ(ಆಗಸ್ಟ್​.04): ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್​ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2019ನೇ ಸಾಲಿನ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಪ್ರದೀಪ್​​ ಸಿಂಗ್​ ಮೊದಲ ಸ್ಥಾನ, ಜತಿನ್ ಕಿಶೋರ್ ಮತ್ತು ಪ್ರತಿಭಾ ವರ್ಮಾ ನಂತರದ ಸ್ಥಾನದಲ್ಲಿದ್ದಾರೆ.

    ಟಾಪ್- 10 ಪಟ್ಟಿಯಲ್ಲಿ ಮೂವರು ಮಹಿಳೆಯರು ಮತ್ತು ಟಾಪ್ -25 ಶ್ರೇಯಾಂಕಗಳಲ್ಲಿ ಕನಿಷ್ಠ ಒಂಬತ್ತು ಮಂದಿ ಇದ್ದಾರೆ. 2019 ಸಾಲಿನಲ್ಲಿ ಒಟ್ಟು 829 ಅಭ್ಯರ್ಥಿಗಳು ವಿವಿಧ ನಾಗರೀಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.

    ಐಎಎಸ್​ಗೆ(ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್) 180, ಐಎಫ್​ಎಸ್ (ಇಂಡಿಯನ್ ಫಾರಿನ್ ಸರ್ವೀಸ್) 24, ಐಪಿಎಸ್ (ಇಂಡಿಯನ್ ಪೊಲೀಸ್ ಸರ್ವೀಸ್) 150, ಕೇಂದ್ರ ಸರ್ಕಾರದ ಎ ಗ್ರೂಪ್ ಹುದ್ದೆಗೆ 438 ಹಾಗೂ ಬಿ ಗ್ರೂಪ್ ಹುದ್ದೆಗೆ 135 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. 11 ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.

    ಇದನ್ನೂ ಓದಿ : Siddaramaiah: ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲೆಂದು ಹಾರೈಸಿದ ವಿವಿಧ ನಾಯಕರು

    ಸಾಮಾನ್ಯ ವರ್ಗ - 304 ಅಭ್ಯರ್ಥಿಗಳು, ಆರ್ಥಿಕವಾಗಿ ಹಿಂದುಳಿದ ವರ್ಗ -78 ಅಭ್ಯರ್ಥಿಗಳು,  ಹಿಂದುಳಿದ ವರ್ಗ - 251 ಅಭ್ಯರ್ಥಿಗಳು, ಪರಿಶಿಷ್ಟ ಜಾತಿ - 129 ಅಭ್ಯರ್ಥಿಗಳು,  ಪರಿಶಿಷ್ಟ ಪಂಗಡ - 67 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

    ಕರ್ನಾಟದಿಂದ 37 ಅಭ್ಯರ್ಥಿಗಳು ಆಯ್ಕೆ

    829 ಅಭ್ಯರ್ಥಿಗಳಲ್ಲಿ ಕರ್ನಾಟಕದಿಂದ 37 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ  ಯಶಸ್ವಿನಿ. ಬಿ ಅವರು 71 ರ‍್ಯಾಂಕ್ ಪಡೆಯುವ ಮೂಲಕ ಕರ್ನಾಟಕದವರಲ್ಲಿ ಟಾಪರ್ ಆಗಿದ್ದಾರೆ. ಎಚ್. ವಿನೋದ್ ಪಾಟೀಲ್ ಅವರು 132 ನೇ ಸ್ಥಾನ ಪಡೆದಿದ್ದಾರೆ. ಎಚ್.ಎಸ್.ಕೀರ್ತನಾ 167ನೇ ರ‍್ಯಾಂಕ್ ಪಡೆದು ಕೊಂಡಿದ್ದಾರೆ.

    ಕಳೆದ ಸೆಪ್ಟೆಂಬರ್​ನಲ್ಲಿ ನಡೆದ ಲಿಖಿತ ಪರೀಕ್ಷೆ ಮತ್ತು 2020ರ ಫೆಬ್ರವರಿ-ಆಗಸ್ಟ್​ನಲ್ಲಿ ನಡೆದ ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಆಧಾರದ ಮೇಲೆ ಇಂದು ಅಂತಿಮ ಫಲಿತಾಂವನ್ನು ಪ್ರಕಟಿಸಲಾಗಿದೆ.



    ಪ್ರಸಕ್ತ 2020ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆ ಮೇ 31ರಂದು ನಡೆಯಬೇಕಿತ್ತು. ಆದರೆ, ಕರೊನಾ ವೈರಸ್​ ಬಿಕ್ಕಟ್ಟಿನಿಂದಾಗಿ ಅಕ್ಟೋಬರ್​ 4ಕ್ಕೆ ವೇಳಾಪಟ್ಟಿ ಮರು ನಿಗದಿಪಡಿಸಲಾಗಿದೆ. ಐಎಎಸ್‌, ಐಎಫ್‌ಎಸ್, ಐಪಿಎಸ್‌ ಸೇರಿದಂತೆ ಕೇಂದ್ರ ನಾಗರಿಕ ಸೇವಾ ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿ ಪರೀಕ್ಷೆ ನಡೆಸುತ್ತದೆ.
    Published by:G Hareeshkumar
    First published: