UPSC Results 2021: ಯುಪಿಎಸ್​ಸಿ ಫಲಿತಾಂಶ ಪ್ರಕಟ; ಮೊದಲ 4 ಸ್ಥಾನದಲ್ಲಿ ಗಳಿಸಿದ ಮಹಿಳೆಯರ ಮಿಂಚು!

ಶ್ರುತಿ ಶರ್ಮಾ ಮತ್ತು ಅಂಕಿತಾ ಅಗರ್ವಾಲ್ ನಂತರ, ಗಾಮಿನಿ ಸಿಂಗ್ಲಾ ಮೂರನೇ ಸ್ಥಾನ ಪಡೆದಿದ್ದು ಐಶ್ವರ್ಯಾ ವರ್ಮಾ ಅವರು ನಾಲ್ಕನೇ ಸ್ಥಾನಕ್ಕೆ ಭಾಜನರಾಗಿದ್ದಾರೆ. 

ಕೇಂದ್ರ ಲೋಕಸೇವಾ ಆಯೋಗ

ಕೇಂದ್ರ ಲೋಕಸೇವಾ ಆಯೋಗ

 • Share this:
  ದೆಹಲಿ: ಭಾರತೀಯ ಲೋಕಸೇವಾ ಆಯೋಗ (UPSC) ಇಂದು UPSC ಫಲಿತಾಂಶ 2021ರ ಪಟ್ಟಿಯನ್ನು ಬಿಡುಗಡೆ ಮಾಡಿದೆ. UPSC ಫಲಿತಾಂಶ 2021 ರಲ್ಲಿ ಶ್ರುತಿ ಶರ್ಮಾ ಅವರು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಭಾರತೀಯ ಲೋಕಸೇವಾ ಆಯೋಗ ಬಿಡುಗಡೆ ಮಾಡಿದ ಫಲಿತಾಂಶದ (UPSC Results 2021)  ಪ್ರಕಾರ ಅಂಕಿತಾ ಅಗರ್ವಾಲ್ ಅವರು ಎರಡನೇ ಸ್ಥಾನ ಗಳಿಸಿದ್ದಾರೆ. ಶ್ರುತಿ ಶರ್ಮಾ (Shruti Sharma) ಮತ್ತು ಅಂಕಿತಾ ಅಗರ್ವಾಲ್ ನಂತರ, ಗಾಮಿನಿ ಸಿಂಗ್ಲಾ ಮೂರನೇ ಸ್ಥಾನ ಪಡೆದಿದ್ದು ಐಶ್ವರ್ಯಾ ವರ್ಮಾ ಅವರು ನಾಲ್ಕನೇ ಸ್ಥಾನಕ್ಕೆ ಭಾಜನರಾಗಿದ್ದಾರೆ. 

  ವಿವಿಧ IAS ಟಾಪರ್‌ಗಳು, IPS ಟಾಪರ್‌ಗಳು, IFS ನಲ್ಲಿ ಉತ್ತೀರ್ಣರಾದ  ಹೆಸರುಗಳನ್ನು ಒಳಗೊಂಡಿರುವ UPSC ಟಾಪರ್‌ಗಳ 2021 ರ ಸಂಪೂರ್ಣ ಪಟ್ಟಿಯನ್ನು ಭಾರತೀಯ ಲೋಕಸೇವಾ ಆಯೋಗ ತನ್ನ ವೆಬ್​ಸೈಟ್​ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ.

  ಟಾಪರ್​ಗಳನ್ನು ಹೇಗೆ ಆಯ್ಕೆ ಮಾಡಲಾಗಿದೆ?
  ಭಾರತದ ಕೇಂದ್ರ ಸರ್ಕಾರದ ಅಡಿಯಲ್ಲಿ ಐಎಎಸ್, ಐಪಿಎಸ್, ಐಎಫ್‌ಎಸ್ ಮತ್ತು ನಾಗರಿಕ ಸೇವೆಗಳ ಇತರ ಹಲವು ಶಾಖೆಗಳಿಗೆ ಒಟ್ಟು 685 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿದ್ದಾರೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು UPSC ನಡೆಸಿದ ಸಂದರ್ಶನ ಸುತ್ತಿನ ಎಲ್ಲಾ ಮೂರು ಸುತ್ತುಗಳಲ್ಲಿ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಟಾಪರ್‌ಗಳನ್ನು ಆಯ್ಕೆ ಮಾಡಲಾಗಿದೆ.

  UPSC ಸಿವಿಲ್ ಸರ್ವೀಸಸ್ 2021 ಪರೀಕ್ಷೆಗಳು ಅಕ್ಟೋಬರ್ 10, 2021 ರಂದು ಪೂರ್ವಭಾವಿ ಪರೀಕ್ಷೆಯೊಂದಿಗೆ ಪ್ರಾರಂಭವಾಗಿತ್ತು. ಮೇನ್ಸ್ ಪರೀಕ್ಷೆಯನ್ನು ಜನವರಿ 7, 8, 9, 15 ಮತ್ತು 16, 2022 ರಂದು ನಡೆಸಲಾಗಿತ್ತು. ಅರ್ಹ ಅಭ್ಯರ್ಥಿಗಳು ನಂತರ ಏಪ್ರಿಲ್ 5 ರಿಂದ ಮೇ 26, 2022 ರ ಸಂದರ್ಶನವನ್ನು ಎದುರಿಸಿದ್ದರು.

  ಇದನ್ನೂ ಓದಿ: India's Largest Gold Reserve: ಭಾರತದ ಅತಿ ದೊಡ್ಡ ಚಿನ್ನದ ನಿಕ್ಷೇಪ! ಇಲ್ಲಿರುವ ಚಿನ್ನದ ಪ್ರಮಾಣವೇ ಹೌಹಾರಿಸುತ್ತೆ

  ಅಭ್ಯರ್ಥಿಗಳು UPSC ಸಿವಿಲ್ ಸರ್ವೀಸಸ್ ಟಾಪರ್ಸ್ 2021 ರ ಸಂಪೂರ್ಣ ಪಟ್ಟಿಯನ್ನು  ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

  ಮೊದಲ 10 ಸ್ಥಾನ ಗಳಿಸಿದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

  1. ಶ್ರುತಿ ಶರ್ಮಾ
  2. ಅಂಕಿತಾ ಅಗರ್ವಾಲ್
  3. ಗಾಮಿನಿ ಸಿಂಗ್ಲಾ
  4. ಐಶ್ವರ್ಯಾ ವರ್ಮಾ
  5. ಉತ್ಕರ್ಷ್ ದ್ವಿವೇದಿ
  6. ಯಕ್ಷ್ ಚೌಧರಿ
  7. ಸಮ್ಯಕ್ ಎಸ್ ಜೈನ್
  8. ಇಶಿತಾ ರಾಠಿ
  9. ಪ್ರೀತಂ ಕುಮಾರ್
  10. ಹರ್ಕೀರತ್ ಸಿಂಗ್ ರಾಂಧವಾ

  ಇದನ್ನೂ ಓದಿ: Aadhaar Card Update: ಆಧಾರ್​ ಕಾರ್ಡ್​ ಫೋಟೊವನ್ನು ಎಲ್ಲೆಂದರಲ್ಲಿ ಹಂಚಬೇಡಿ! ಮಾಸ್ಕ್ಡ್ ಆಧಾರ್ ಬಳಸಿ: ಹೀಗಂದ್ರೇನು?

  2020 ರಲ್ಲಿ, UPSC CSE ಅಂತಿಮ ಪರೀಕ್ಷೆಯಲ್ಲಿ 761 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು. ಅವರಲ್ಲಿ 545 ಪುರುಷರು ಮತ್ತು 216 ಮಹಿಳೆಯರಿದ್ದರು. ಹಿಂದಿನ ಬಾರಿಯ ಭಾರತೀಯ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಶುಭಂ ಕುಮಾರ್ ಪ್ರಥಮ, ಜಾಗೃತಿ ಅವಸ್ಥಿ ದ್ವಿತೀಯ, ಅಂಕಿತಾ ಜೈನ್ ತೃತೀಯ ಸ್ಥಾನ ಪಡೆದುಕೊಂಡಿದ್ದರು.

  ಫಲಿತಾಂಶ ಚೆಕ್ ಮಾಡುವುದು ಹೇಗೆ?
  UPSC ಸಿವಿಲ್ ಸರ್ವೀಸಸ್ 2021 ಅಂತಿಮ ಫಲಿತಾಂಶಗಳನ್ನು ಅಭ್ಯರ್ಥಿಗಳೊಂದೇ ಅಲ್ಲದೇ ಸಾರ್ವಜನಿಕರು ಸಹ ಪರಿಶಿಲಿಸಬಹುದಾಗಿದೆ. ಹೇಗೆ ಭಾರತೀಯ ಲೋಕಸೇವಾ ಆಯೋಗದ ಫಲಿತಾಂಶ ಪರಿಶೀಲನೆ ನಡೆಸುವುದು ಎಂಬ ಹಂತ ಹಂತದ ವಿವರ ಇಲ್ಲಿದೆ. ನೀವೂ ತಿಳಿದುಕೊಳ್ಳಿ.

  ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಇಲ್ಲಿ ಕ್ಲಿಕ್ ಮಾಡಿ 

  • ವೆಬ್​ಸೈಟ್​ನ ಮುಖಪುಟದಲ್ಲಿ - "UPSC ನಾಗರಿಕ ಸೇವೆಗಳ ಫಲಿತಾಂಶ 2021 - ಅಂತಿಮ ಫಲಿತಾಂಶ" ಎಂಬ ಬರಹದ ಮೇಲೆ ಕ್ಲಿಕ್ ಮಾಡಿ

  • ಆಯ್ದ ಅಭ್ಯರ್ಥಿಗಳ ವಿವರಗಳೊಂದಿಗೆ PDF ಫೈಲ್ ಅನ್ನು ಪ್ರದರ್ಶಿಸಲಾಗುತ್ತದೆ

  • ಅದನ್ನು ಡೌನ್‌ಲೋಡ್ ಮಾಡಿ

  Published by:guruganesh bhat
  First published: