UPSC 2019: ಐಎಫ್​ಎಸ್​ ಮುಖ್ಯ ಪರೀಕ್ಷೆ ಬಗ್ಗೆ ಇಲ್ಲಿದೆ ಹೊಸ ಅಪ್ಡೇಟ್​​

ಯುಪಿಎಸ್​ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪ್ರಮುಖ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿದ್ದು, ಇದೇ ಡಿಸೆಂಬರ್​ 1 ರಿಂದ 8ರ ವರೆಗೆ ಪರೀಕ್ಷೆ ನಡೆಯಲಿದೆ.

news18-kannada
Updated:November 9, 2019, 12:25 PM IST
UPSC 2019: ಐಎಫ್​ಎಸ್​ ಮುಖ್ಯ ಪರೀಕ್ಷೆ ಬಗ್ಗೆ ಇಲ್ಲಿದೆ ಹೊಸ ಅಪ್ಡೇಟ್​​
ಪರೀಕ್ಷೆ
news18-kannada
Updated: November 9, 2019, 12:25 PM IST
ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್​ಸಿ) 2019ನೇ ಸಾಲಿನ ಭಾರತ ಅರಣ್ಯ ಸೇವೆ (ಐಎಫ್​ಎಸ್​) ಪ್ರಮುಖ ಪರೀಕ್ಷೆಯ ಪ್ರವೇಶ ಪತ್ರವನ್ನು ಪ್ರಕಟಿಸಿದೆ. ಆಯೋಗದ ವೆಬ್​ಸೈಟ್​ನಲ್ಲಿ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟಗೊಂಡಿದ್ದು, ಅಭ್ಯರ್ಥಿಗಳು ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ.

ಯುಪಿಎಸ್​ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪ್ರಮುಖ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿದ್ದು, ಇದೇ ಡಿಸೆಂಬರ್​ 1 ರಿಂದ 8ರ ವರೆಗೆ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಡಿಸೆಂಬರ್​ 8, 2019 ರ ವರೆಗೆ ಪ್ರವೇಶ ಪತ್ರವನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದು.

ಪ್ರವೇಶ ಪತ್ರ ಪಡೆಯುವ ವಿಧಾನ:

ಹಂತ 1- ಯುಪಿಎಸ್​​ಸಿ ಅಧಿಕೃತ ವೆಬ್​ಸೈಟ್​  www.upsc.gov.in/ಗೆ ಭೇಟಿ ನೀಡಿ

ಹಂತ 2- ಹೋಂ ಪೇಜ್​ನ ಬಲಭಾಗದಲ್ಲಿ ಕಾಣುವ e-admit card: Indian forest service main examination,2019 ಮೇಲೆ ಕ್ಲಿಕ್​ ಮಾಡಿ.

ಹಂತ 3- ಹೊಸ ಪುಟದಲ್ಲಿ ಕಾಣುವ click here ಆಯ್ಕೆಯನ್ನು ಒತ್ತಿರಿ

ಹಂತ 4- ನಂತರ ಡೌನ್​ಲೋಡ್​​ ಇ-ಅಡ್ಮಿಟ್​​ ಕಾರ್ಡ್​ ಕೆಳಗೆ ಇರುವ ಆಯ್ಕೆಯನ್ನು ಕ್ಲಿಕ್​ ಮಾಡಿ
Loading...

ಹಂತ 5- ನಂತರ ರೋಲ್​ ನಂಬರ್​ ಮತ್ತು ರಿಜಿಸ್ಟ್ರೇಷನ್​​ ಐಡಿ ನೀಡಿ ಲಾಗಿನ್​ ಮಾಡಿ ಪ್ರವೇಶ ಪತ್ರವನ್ನು ಡೌನ್​ಲೋಡ್​ ಮಾಡಬಹುದು.

ಇದನ್ನು ಓದಿ: Ayodhya Verdict: ಇಂದು ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಇದನ್ನು ಓದಿ: Ayodhya Verdict: ಅಯೋಧ್ಯೆ ತೀರ್ಪು ಯಾರೋಬ್ಬರ ಸೋಲು-ಗೆಲುವಿನ ಪ್ರಶ್ನೆಯಲ್ಲ; ಶಾಂತಿ ಸುವ್ಯಸವ್ಥೆ ಕಾಪಾಡಿ – ಪ್ರಧಾನಿ ಮೋದಿ

ಇದನ್ನು ಓದಿ: Ayodhya Verdict: ಅಯೋಧ್ಯೆ ವಿವಾದದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಸಂಪೂರ್ಣ ಇತಿಹಾಸ

First published:November 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...