ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾದ ದೇಶದ ನ್ಯಾಯಾಲಯಗಳ 6 ವಿವಾದಾತ್ಮಕ ತೀರ್ಪುಗಳಿವು..!

ನ್ಯಾಯಾಲಯಗಳು ವಿವಾದಾತ್ಮಕ ತೀರ್ಪುಗಳನ್ನು ನೀಡುತ್ತಿರುವುದು ಇದು ಮೊದಲನೆಯ ಬಾರಿ ಏನಲ್ಲಾ, ಇಂತಹುದೇ ವಿವಾದಾತ್ಮಕ ತೀರ್ಪುಗಳ ಕುರಿತು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಗುವಾಹಟಿಯ ನ್ಯಾಯಾಲಯವು ಇತ್ತೀಚೆಗೆ ಐಐಟಿ ಬಿಟೆಕ್ ವಿದ್ಯಾರ್ಥಿಯು ತನ್ನ ಸಹಪಾಠಿಯ ಮೇಲೆ ಎಸಗಿದ್ದ ಲೈಂಗಿಕ ದೌರ್ಜನ್ಯದ ಆಪಾದನೆ ಪರಿಶೀಲಿಸಿದ ನ್ಯಾಯಾಲಯವು ಅಪರಾಧಿಯು ಪ್ರತಿಭಾವಂತ ವಿದ್ಯಾರ್ಥಿ ಹಾಗೂ ಅಸ್ಸಾಂ ರಾಜ್ಯದ ಭವಿಷ್ಯದ ಆಸ್ತಿ ಎಂಬುದನ್ನು ಪರಿಗಣಿಸಿ ಆತನಿಗೆ ಜಾಮೀನು ಮಂಜೂರು ಮಾಡಿತ್ತು. ಈ ತೀರ್ಪನ್ನು ಖಂಡಿಸಿ ಸಾಮಾಜಿಕ ತಾಣದಲ್ಲಿ ಹೆಚ್ಚಿನ ಬಳಕೆದಾರರು ಭಾರತದಲ್ಲಿ ಕೂಡ ಬ್ರೋಕ್ ಟರ್ನರ್ ಸಿದ್ಧಾಂತ ಪುನರಾವರ್ತನೆಯಾಗುತ್ತಿದೆ ಎಂದು ಖಂಡಿಸಿ ಟೀಕೆಗಳನ್ನು ನಡೆಸಿದ್ದರು. ಅಪರಾಧಿ ಎಷ್ಟೇ ಪ್ರತಿಭಾವಂತನಾಗಿರಲಿ ಅಥವಾ ಆತನ ನಡತೆ ಎಷ್ಟೇ ಒಳ್ಳೆಯದಾಗಿದ್ದರೂ ಕಾನೂನಿನ ಕಣ್ಣಿನಲ್ಲಿ ಅಪರಾಧವೆಸಗಿದವನು ಶಿಕ್ಷೆಗೆ ಅರ್ಹನಾಗಿರುತ್ತಾನೆ. ಇಂತಹ ಕ್ಷುಲ್ಲಕ ಆಧಾರದ ಮೇರೆಗೆ ತಪ್ಪಿತಸ್ಥನಿಗೆ ಜಾಮೀನು ನೀಡುವುದು ಇಲ್ಲವೇ ಶಿಕ್ಷೆಯ ಪ್ರಮಾಣವನ್ನು ತಗ್ಗಿಸುವುದು ಆತನಿಗೆ ಇನ್ನೂ ಹೆಚ್ಚಿನ ಅಪರಾಧವೆಸಗಲು ಕುಮ್ಮಕ್ಕು ಕೊಟ್ಟಂತಾಗುವುದಿಲ್ಲವೇ ಎಂದು ಜನಸಾಮಾನ್ಯರು ಪ್ರಶ್ನಿಸಿದ್ದರು.


ಈಗ ಇಂತಹುದ್ದೇ ಇನ್ನೊಂದು ಘಟನೆ ಛತ್ತೀಸ್‌ಗಢದಲ್ಲಿ ನಡೆದಿದ್ದು ನೊಂದವರಿಗೆ ನ್ಯಾಯ ನೀಡದೇ ನ್ಯಾಯಾಲಯವು ಅಪರಾಧವೆಸಗಿದವರಿಗೆ ಬೆಂಬಲವಾಗಿ ನಿಂತಿದೆ. ಛತ್ತೀಸ್‌ಗಢದ ಪ್ರಕರಣ ಗುವಾಹಟಿಗಿಂತ ಕೊಂಚ ಭಿನ್ನವಾಗಿದ್ದು ಇಲ್ಲಿನ ನ್ಯಾಯಾಲಯವು ವೈವಾಹಿಕ ಅತ್ಯಾಚಾರವೆಸಗಿದ ವ್ಯಕ್ತಿಯನ್ನು ನಿರ್ದೋಷಿ ಎಂದು ಘೋಷಿಸಿದೆ. ವಿವಾಹಿತ ಪತಿ ಹಾಗೂ ಪತ್ನಿಯ ನಡುವಿನ ಲೈಂಗಿಕ ಸಂಭೋಗವು ಪತ್ನಿಯ ಇಚ್ಛೆಗೆ ವಿರುದ್ಧವಾಗಿ ನಡೆದಿದ್ದರೂ ಅದು ಅತ್ಯಾಚಾರವಲ್ಲ ಎಂದು ನ್ಯಾಯಾಲಯ ತೀರ್ಪಿತ್ತಿದೆ. ಪತ್ನಿಯು 18 ವಯಸ್ಸಿಗಿಂತ ಕಡಿಮೆ ವಯಸ್ಸಿನವಳಾಗಿರದಿದ್ದರೆ ಆಕೆಯ ಇಚ್ಛೆಯ ವಿರುದ್ಧವಾಗಿ ನಡೆಸುವ ಲೈಂಗಿಕ ಕ್ರಿಯೆಯು ಅತ್ಯಾಚಾರವಲ್ಲವೆಂದು ಛತ್ತೀಸ್‌ಗಢದ ನ್ಯಾಯಾಲಯ ತೀರ್ಪಿತ್ತಿದೆ.


ಇಲ್ಲಿ ನಾವು ಗಮನಿಸಬೇಕಾದ ಒಂದು ಅಂಶವೆಂದರೆ ಅತ್ಯಾಚಾರವೆಂಬುದು ಸ್ತ್ರೀ ಇಚ್ಛೆಗೆ ವಿರುದ್ಧವಾಗಿ ನಡೆಯುವಂತಹ ಪ್ರಕ್ರಿಯೆಯಾಗಿದೆ. ಅದು ಪತಿಯೇ ಆಗಿರಲಿ ಇಲ್ಲವೇ ಬೇರೆ ಪುರುಷನೇ ಆಗಿರಲಿ ಪತ್ನಿಯ ಇಲ್ಲವೇ ಒಬ್ಬ ಹೆಣ್ಣಿನ ಇಚ್ಛೆಗೆ ವಿರುದ್ಧವಾಗಿ ಆತ ನಡೆಸುವ ಲೈಂಗಿಕ ಸಂಭೋಗವು ಅತ್ಯಾಚಾರವಾಗುತ್ತದೆ ಹಾಗೂ ಕಾನೂನಿನ ಕಣ್ಣಿನಲ್ಲಿ ಇದು ಅಪರಾಧವಾಗಿದೆ.


ಅತ್ಯಾಚಾರ, ವೈವಾಹಿಕ ಹಿಂಸೆ, ಲೈಂಗಿಕ ದೌರ್ಜನ್ಯಗಳ ವಿಚಾರಣೆಯ ಸಮಯದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ನ್ಯಾಯಾಲಯವು ಕಾನೂನಿನ ಚೌಕಟ್ಟಿನಲ್ಲಿಯೇ ವಿಷದವಾಗಿ ವಿಶ್ಲೇಷಣೆ ನಡೆಸಿ ತೀರ್ಪು ನೀಡುತ್ತಿದ್ದೆಯೇ ಎಂಬುದು ಇಲ್ಲಿ ಪ್ರಶ್ನಾರ್ಥಕವಾಗಿದೆ. ಈ ರೀತಿಯ ತೀರ್ಪು ನೀಡಿ ವಿವಾದ ಸೃಷ್ಟಿಸುತ್ತಿರುವ ನ್ಯಾಯಾಲಯಗಳಿಗೆ ಜನರು ಟೀಕಾಸ್ತ್ರಗಳನ್ನು ನಡೆಸುತ್ತಿದ್ದರೂ ತೀರ್ಪು ನೀಡುವ ನ್ಯಾಯಾಧೀಶರು ಕಣ್ಣಿಗೆ ಬಟ್ಟೆ ಕೊಂಡಿದ್ದಾರೆಯೇ ಎಂಬ ಭಾವನೆ ನಮ್ಮಲ್ಲಿ ವ್ಯಕ್ತವಾಗುತ್ತದೆ.


ಇದನ್ನೂ ಓದಿ:Karnataka CET Exam: ಕರ್ನಾಟಕದಲ್ಲಿ ನಾಳೆಯಿಂದ ಸಿಇಟಿ ಪರೀಕ್ಷೆ; 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೊಂದಣಿ

ನ್ಯಾಯಾಲಯಗಳು ವಿವಾದಾತ್ಮಕ ತೀರ್ಪುಗಳನ್ನು ನೀಡುತ್ತಿರುವುದು ಇದು ಮೊದಲನೆಯ ಬಾರಿ ಏನಲ್ಲಾ, ಇಂತಹುದೇ ವಿವಾದಾತ್ಮಕ ತೀರ್ಪುಗಳ ಕುರಿತು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.


1. ಗುವಾಹಟಿಯ ಲೈಂಗಿಕ ದೌರ್ಜನ್ಯದ ಪ್ರಕರಣ:


ಗುವಾಹಟಿಯ ನ್ಯಾಯಾಲಯವು ಐಐಟಿ ಬಿಟೆಕ್ ವಿದ್ಯಾರ್ಥಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ನೀಡಿದ್ದು ವಿದ್ಯಾರ್ಥಿಯು ಪ್ರತಿಭಾವಂತನಾಗಿದ್ದು ಹಾಗೂ ಆತನ ಮುಂದಿನ ಭವಿಷ್ಯಕ್ಕೆ ಇದರಿಂದ ತೊಂದರೆಯಾಗಬಹುದೆಂಬ ನಿಟ್ಟಿನಲ್ಲಿ ತನ್ನ ತೀರ್ಪನ್ನು ಸಮರ್ಥಿಸಿಕೊಂಡಿದೆ. ಇಲ್ಲಿ ಸಂತ್ರಸ್ತೆಗಾದ ಅನ್ಯಾಯಕ್ಕೆ ಯಾರು ಹೊಣೆ ಎಂಬುದನ್ನು ನ್ಯಾಯಾಧೀಶರೇ ಹೇಳಬೇಕು. ಸಾಮಾಜಿಕ ಮಾಧ್ಯಮದಲ್ಲಿ ಜನಸಾಮಾನ್ಯರು ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ತೀರ್ಪನ್ನು ಬ್ರೋಕ್ ಟರ್ನರ್ ಸಿದ್ಧಾಂತಕ್ಕೆ ಹೋಲಿಸಿ ಕಟುವಾಗಿ ಜರೆದಿದ್ದಾರೆ.


2. ಕರ್ನಾಟಕ ಉಚ್ಛ ನ್ಯಾಯಾಲಯದ ಪ್ರಕರಣ:


ಜೂನ್ 2020ರಲ್ಲಿ ಅತ್ಯಾಚಾರ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದ್ದ ಉಚ್ಛ ನ್ಯಾಯಾಲಯವು ಮಹಿಳೆಯದ್ದೇ ತಪ್ಪು ಎಂಬಂತೆ ಆಕೆಯನ್ನು ದೂಷಿಸಿತ್ತು. ವಿವಾಹದ ಸುಳ್ಳು ಭರವಸೆ ನೀಡಿ ಲೈಂಗಿಕ ಕೃತ್ಯವೆಸಗಿದ್ದ ಆರೋಪಿಯನ್ನು ನಿರ್ದೋಷಿ ಎಂದು ಪರಿಗಣಿಸಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಕೃತ್ಯದ ನಂತರ ಆಕೆ ದಣಿದಿದ್ದಳು ಹಾಗೂ ನಿದ್ರೆಗೆ ಜಾರಿದ್ದಳು ಎಂಬ ಸಂತ್ರಸ್ತೆಯ ಹೇಳಿಕೆ ಗಮನಿಸಿದ ನ್ಯಾಯಾಲಯವು ಇದು ಭಾರತೀಯ ಮಹಿಳೆಗೆ ಸೂಕ್ತವಾದುದಲ್ಲ ಹಾಗೂ ಒಬ್ಬ ಮಹಿಳೆ ಅತ್ಯಾಚಾರಕ್ಕೆ ಒಳಗಾದಾಗ ಈ ರೀತಿ ಪ್ರತಿಕ್ರಿಯಿಸುವುದಿಲ್ಲವೆಂದು ನ್ಯಾಯಾಲಯವು ತೀರ್ಪು ನೀಡಿತ್ತು. ಮಹಿಳೆಯ ಬೆಂಬಲದೊಂದಿಗೆ ಲೈಂಗಿಕ ಕ್ರಿಯೆ ನಡೆದಿರುವುದನ್ನು ನ್ಯಾಯಾಲಯ ಸಮ್ಮತಿಸಿದ್ದು ಸಂತ್ರಸ್ತೆಯು ಅಪರಾಧಿಯ ಕಚೇರಿಯಲ್ಲಿ ಉದ್ಯೋಗದಲ್ಲಿದ್ದರು ಹಾಗೂ ಅಪರಾಧಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂಬುದನ್ನು ಎತ್ತಿಹಿಡಿದಿತ್ತು.


3. ಮಹಿಳೆಯು ಇಲ್ಲ ಎಂದು ಹೇಳಿದರೆ ಅದು ಹೌದು ಎಂಬ ಒಳಾರ್ಥ ಹೊಂದಿದೆ: ಸುಪ್ರೀಂ ಕೋರ್ಟ್


ಜನವರಿ 2018 ರಲ್ಲಿ ಪೀಪ್ಲಿ-ಲೈವ್ ಸಹ ನಿರ್ದೇಶಕ ಮಹಮ್ಮದ್ ಫಾರೂಕಿಯವರನ್ನು ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಗೊಳಿಸುವ ಸಂದರ್ಭದಲ್ಲಿ ತನ್ನ ತೀರ್ಪನ್ನು ಸರಿ ಎಂದು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್, ಮಹಿಳೆಯರ ವರ್ತನೆಗಳು ಒಮ್ಮೊಮ್ಮೆ ತರ್ಕಕ್ಕೆ ನಿಲುಕದ್ದು ಹಾಗೂ ಅವರು ಎಷ್ಟೋ ಸಂದರ್ಭಗಳಲ್ಲಿ ಬೇಡ ಎಂದು ಹೇಳಿದರೆ ಅದು ಬೇಕು ಎಂದಾಗಿರುತ್ತದೆ ಹಾಗೂ ಬೇಕು ಎಂದು ಹೇಳಿದಲ್ಲಿ ಅದು ಬೇಡ ಎಂದಾಗಿರುತ್ತದೆ ಎಂಬುದಾಗಿ ವಿವಾದಾತ್ಮಕ ತೀರ್ಪು ನೀಡಿತ್ತು.


ಇದನ್ನೂ ಓದಿ:Explained: ಅಫ್ಘಾನಿಸ್ತಾನ ಬಾಂಬ್ ಸ್ಫೋಟ ಪ್ರಕರಣ: ISIS-K ಅಂದ್ರೆ ಏನು..? ಇವರಿಗೂ ತಾಲಿಬಾನಿಗಳಿಗೂ ಸಂಬಂಧವಿದೆಯಾ..? ಇಲ್ಲಿದೆ ವಿವರ..

4. ಲೈಂಗಿಕ ದೌರ್ಜನ್ಯ ಕುರಿತು ಬಾಂಬೆ ಉಚ್ಛ ನ್ಯಾಯಾಲಯ ತೀರ್ಪು:


ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣೆ (ಪೋಕ್ಸೋ) ಕಾಯ್ದೆಯಡಿ ವ್ಯಾಖ್ಯಾನಿಸಿರುವಂತೆ ಲೈಂಗಿಕ ಸಂಪರ್ಕಕ್ಕೆ ಒಳಗಾಗದೆಯೇ ದೇಹ ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯವಲ್ಲ ಎಂದು ನ್ಯಾಯಮೂರ್ತಿ ತೀರ್ಪಿತ್ತಿದ್ದಾರೆ. ಲೈಂಗಿಕ ಸಂಪರ್ಕ ನಡೆಸುವುದುನ್ನು ಲೈಂಗಿಕ ದೌರ್ಜನ್ಯವೆಂದು ಕರೆಯಲಾಗುತ್ತದೆ ಎಂದು ಬಾಂಬೆ ಹೈಕೋರ್ಟ್‌ನ ನಾಗಪುರ ನ್ಯಾಯಪೀಠವು ತೀರ್ಪು ನೀಡಿದೆ. ಹೊಡೆಯುವುದು ಇಲ್ಲವೇ ಅಪ್ರಾಪ್ತೆಯ ಖಾಸಗಿ ಭಾಗವನ್ನು ದಿರಿಸಿನ ಮೇಲ್ಭಾಗದಿಂದ ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯವಲ್ಲವೆಂದು ನ್ಯಾಯಾಲಯ ವಾದಿಸಿದೆ.


5. ಮೇಲ್ಜಾತಿಯ ಪುರುಷರು ಕೆಳಜಾತಿಯ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವುದಿಲ್ಲ: ರಾಜಸ್ಥಾನ ನ್ಯಾಯಾಲಯ


1992ರಲ್ಲಿ ರಾಜಸ್ಥಾನದಲ್ಲಿ ನಡೆದ ಭನ್ವರಿ ದೇವಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಯಿತು. ಕುಂಬಾರ ಜಾತಿಗೆ ಸೇರಿದ ಹಾಗೂ ರಾಜ್ಯ ಸರಕಾರದ ಮಹಿಳೆಯರ ಅಭಿವೃದ್ಧಿ ಕಾರ್ಯಕ್ರಮದ ಸಾಥಿನ್ (ಸ್ನೇಹಿತೆ) ಆಗಿ ಕಾರ್ಯನಿರ್ವಹಿಸುತ್ತಿದ್ದ ಭನ್ವರಿ ದೇವಿಯ ಮೇಲೆ ಶ್ರೀಮಂತ ಗುಜ್ಜರ್ ಜಾತಿಗೆ ಸೇರಿದ ಐವರು ಪುರುಷರು ಅತ್ಯಾಚಾರವೆಸಗಿದ್ದರು. ಈ ಕುರಿತು ಸಂತ್ರಸ್ತೆ ದೂರು ನೀಡಿದಾಗ ರಾಜಸ್ಥಾನ ನ್ಯಾಯಾಲಯವು ಮೇಲ್ಜಾತಿಯ ಪುರುಷರು ಕೆಳಜಾತಿಯ ಮಹಿಳೆಯರ ಮೇಲೆ ಅತ್ಯಾಚಾರವೆಸಗುವುದಿಲ್ಲವೆಂದು ತೀರ್ಪು ನೀಡಿತು.


6. ತರುಣ್ ತೇಜ್‌ಪಾಲ್ ಪ್ರಕರಣ


2013ರಲ್ಲಿ ಸಾರ್ವಜನಿಕವಾಗಿ ಗಮನ ಸೆಳೆದ ಪ್ರಕರಣ ಇದಾಗಿದ್ದು ಆರೋಪಿಯು ಸಮಾಜದಲ್ಲಿ ಗಣ್ಯ ಸ್ಥಾನವನ್ನಲಂಕರಿಸಿದ ವ್ಯಕ್ತಿಯಾಗಿದ್ದರು. ತೆಹಲ್ಕಾ ನಿಯತಕಾಲಿಕೆಯ ಮುಖ್ಯ ಸಂಪಾದಕನಾದ ತರುಣ್ ತೇಜ್‌ಪಾಲ್ ವಿರುದ್ಧ ಅತ್ಯಾಚಾರವೆಸಗಿದ ಪ್ರಕರಣದ ಕುರಿತು ಗಂಭೀರ ಆರೋಪ ಮಾಡಲಾಯಿತು. ನಿಯತಕಾಲಿಕೆಯ ಥಿಂಕ್ ಫೆಸ್ಟ್ ಕಾರ್ಯಕ್ರಮವನ್ನು ಗೋವಾದಲ್ಲಿ ಆಯೋಸಿದ ಸಂದರ್ಭದಲ್ಲಿ ತರುಣ್ ಲಿಫ್ಟ್‌ನಲ್ಲಿ ಅತ್ಯಾಚಾರವೆಸಗಿದ್ದಾರೆ ಎಂಬುದಾಗಿ ಪ್ರಕರಣ ದಾಖಲಿಸಲಾಯಿತು. ಭಾರತೀಯ ಕಾಯ್ದೆ 53ಎ ಅನ್ವಯ ಈ ಸಂದರ್ಭದಲ್ಲಿ ದೂರು ನೀಡಿದ ವ್ಯಕ್ತಿಯ ಹಿಂದಿನ ಇತಿಹಾಸವನ್ನು ಪ್ರಕರಣದ ತನಿಖೆಯ ಸಮಯದಲ್ಲಿ ಉಲ್ಲೇಖಿಸಬಾರದು ಎಂಬುದನ್ನು ತಿಳಿಸಿದೆ.
ಆದರೆ ಈ ಪ್ರಕರಣದಲ್ಲಿ ಸಂತ್ರಸ್ತೆಯ ಬಳಿ ಸಿಗರೇಟು ಇಲ್ಲವೇ ಮದ್ಯಸೇವನೆಯ ಕುರಿತು ಪ್ರಶ್ನಿಸಲಾಯಿತು. ಲೈಂಗಿಕತೆಯಲ್ಲಿ ಆಕೆಗೂ ಆಸಕ್ತಿ ಇತ್ತೇ ಇಲ್ಲವೇ, ಈ ಕುರಿತ ಸಂಭಾಷಣೆಗಳಲ್ಲಿ ಆಕೆ ತೊಡಗಿದ್ದರೇ ಎಂಬುದನ್ನು ಪರಿಶೀಲಿಸಲಾಯಿತು. ಈ ಎಲ್ಲಾ ಸಾಕ್ಷ್ಯಗಳನ್ನು ಗಮನಿಸಿದ ನ್ಯಾಯಾಲಯವು ಆಪಾದಿತ ದೋಷಮುಕ್ತ ಹಾಗೂ ಸಂತ್ರಸ್ತೆಯೇ ಆಪಾದಿತನಿಗೆ ಕೃತ್ಯವೆಸಗಲು ಕುಮ್ಮಕ್ಕು ನೀಡಿದ್ದಾರೆ ಎಂದು ತೀರ್ಪು ನೀಡಿ ತರುಣ್ ತೇಜ್‌ಪಾಲ್‌ಗೆ ಜಾಮೀನು ನೀಡಿತು.

Published by:Latha CG
First published: