Russia-Ukraine War: ನಿಲ್ಲುತ್ತಿಲ್ಲ ಬಾಂಬ್ ಸ್ಫೋಟದ ಸದ್ದು! ಯುದ್ಧ ಭೂಮಿಯಲ್ಲಿ ಈವರೆಗೆ ಏನೇನಾಯ್ತು?

ರಷ್ಯಾ ಹಾಗೂ ಉಕ್ರೇನ್ ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಇದೀಗ ಯುದ್ಧ ಮೂರನೇ ದಿನಕ್ಕೆ ಕಾಲಿಟ್ಟಿದೆ. ಹಾಗಿದ್ರೆ ಇದುವರೆಗೂ ಯುದ್ದ ಭೂಮಿಯಲ್ಲಿ ಏನೇನಾಯ್ತು? ಇಲ್ಲಿದೆ ಓದಿ ಕಂಪ್ಲೀಟ್ ರಿಪೋರ್ಟ್...

ಯುದ್ಧದಲ್ಲಿ ಬಾಂಬ್ ಸ್ಫೋಟಗೊಂಡ ಚಿತ್ರ

ಯುದ್ಧದಲ್ಲಿ ಬಾಂಬ್ ಸ್ಫೋಟಗೊಂಡ ಚಿತ್ರ

  • Share this:
ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧ (War) ಮುಂದುವರೆದಿದೆ. ಉಭಯ ರಾಷ್ಟ್ರಗಳ ನಡುವಿನ ಯುದ್ಧ 3ನೇ ದಿನಕ್ಕೆ ಕಾಲಿಟ್ಟಿದೆ. ಫೆಬ್ರವರಿ 24ರ ಮುಂಜಾನೆ ಯುದ್ಧ ಆರಂಭಿಸಿದ್ದ ರಷ್ಯಾ, ಸದ್ಯಕ್ಕಂತೂ ದಣಿದಂತೆ ಕಾಣುತ್ತಿಲ್ಲ. ನಿನ್ನೆಯೂ ಕೂಡ ಉಕ್ರೇನ್ ರಾಜಧಾನಿ (Capital) ಕೈವ್ (Kyiv) ಸೇರಿದಂತೆ ಪ್ರಮುಖ ನಗರಗಳಲ್ಲಿ (City) ರಷ್ಯಾ ಸೇನೆ ದಾಳಿ ಮಾಡಿತ್ತು. ಕೈವ್ ಬಳಿ ಸರಣಿ ಸ್ಫೋಟಗಳನ್ನು (Blast) ರಷ್ಯಾ ಸೇನೆ ನಡೆಸಿದೆ. ಈಗಾಗಲೇ ರಾಜಧಾನಿ ಕೈವ್ ಅನ್ನು ರಷ್ಯಾ ಸೇನೆ ವಶಕ್ಕೆ ಪಡೆದಿದೆ. ಅಲ್ಲಿನ ಸರ್ಕಾರಿ (Government) ಕಟ್ಟಡಗಳ (Buildings) ಮೇಲೆ ರಷ್ಯನ್ ಧ್ವಜ (Flag) ಹಾರಾಡುತ್ತಿದೆ. ಇನ್ನು ಉಕ್ರೇನ್ ಅಧ್ಯಕ್ಷ (Ukraine President) ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ತಡರಾತ್ರಿ ಉಕ್ರೇನ್ ದೇಶದ ಜನತೆಗೆ ಸಂದೇಶ ಕಳಿಸಿದ್ದರು. "ದೇಶದ ಭವಿಷ್ಯವನ್ನು ಇದೀಗ ನಿರ್ಧರಿಸಲಾಗಿದೆ" ಅಂತ ವೊಲೊಡಿಮಿರ್ ಝೆಲೆನ್ಸ್ಕಿ, ಹೇಳಿದ್ದಾರೆ.

ಉಕ್ರೇನ್ ಅಧ್ಯಕ್ಷ ಹೇಳಿದ್ದೇನು?

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಿನ್ನೆ ರಾತ್ರಿ ತಮ್ಮ ಬಂಕರ್‌ನಿಂದ ಉಕ್ರೇನ್ ಜನತೆಗೆ ಸಂದೇಶ ಕಳಿಸಿದ್ದಾರೆ.  ಉಕ್ರೇನ್‌ನ ಅನೇಕ ನಗರಗಳು ರಷ್ಯಾ ದಾಳಿಗೆ ಒಳಗಾಗಿವೆ. ಉಕ್ರೇನ್‌ನಲ್ಲಿ ಬಿರುಗಾಳಿ ಬೀಸಲು ರಷ್ಯಾ ಸಜ್ಜಾಗಿದೆ. ಸಾವುನೋವುಗಳ ವರದಿಗಳ ನಡುವೆ, ಕೈವ್ನ ಸರ್ಕಾರಿ ಕಟ್ಟಡ,  ಅಪಾರ್ಟ್ಮೆಂಟ್ಗಳ ಮೇಲೂ ರಷ್ಯಾ ಸೇನಿಕರು ದಾಳಿ ಮಾಡಿದ್ದಾರೆ. ಸೇತುವೆಗಳು ಮತ್ತು ಶಾಲೆಗಳ ಮೇಲೂ ಶೆಲ್ ದಾಳಿ ನಡೆಸಲಾಗಿದೆ. ಉಕ್ರೇನ್ ಸರ್ಕಾರವನ್ನು ಉರುಳಿಸಲು ರಷ್ಯಾ ಬಯಸುತ್ತಿರುವ ಚಿಹ್ನೆಗಳು ಗೋಚರಿಸುತ್ತಿವೆ. ಉಕ್ರೇನ್ ಅನ್ನು ಹಾಳು ಮಾಡುವುದೇ ರಷ್ಯಾ ಅಧ್ಯಕ್ಷರ ಉದ್ದೇಶವಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಕ್ರೇನ್ ರಾಜಧಾನಿಯಲ್ಲೇ ಇರುವ ರಷ್ಯಾ ಸೇನೆ

ನಿನ್ನೆಯೇ ಉಕ್ರೇನ್ ರಾಜಧಾನಿ ಕೈವ್ ಅನ್ನು ರಷ್ಯಾ ಸೇನೆ ಬಹುತೇಕ ವಶಕ್ಕೆ ಪಡೆದಿದೆ. ಅಲ್ಲಿನ ಸರ್ಕಾರಿ ಕಟ್ಟಡಗಳ ಮೇಲೆ ರಷ್ಯನ್ ಧ್ವಜ ಹಾರಾಡುತ್ತಿದೆ. ಇದೀಗ ರಷ್ಯಾದ ಮಿಲಿಟರಿ ಪಡೆ ಕೈವ್ ಬಳಿ ಏರೋಡ್ರೋಮ್ ಅನ್ನು ವಶಪಡಿಸಿಕೊಂಡಿದೆ. ಆದರೆ ವಸತಿ ಪ್ರದೇಶಗಳ ಮೇಲೆ ನಾವು ದಾಳಿ ಮಾಡುವುದಿಲ್ಲ ಅಂತ ರಷ್ಯಾ ಸೇನಾ ಮುಖ್ಯಸ್ಥರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Kodagu: ಉಕ್ರೇನ್‌ನಲ್ಲಿ ಬಾಂಬ್ ಬೀಳುತ್ತಿದೆ ಎಂದ ಮಗ, ಇಲ್ಲಿ ಪುತ್ರನಿಗಾಗಿ ಕಣ್ಣೀರಿಟ್ಟ ತಂದೆ

ಉಕ್ರೇನ್ ಸರ್ಕಾರ ಕಿತ್ತೊಗೆಯಲು ಪುಟೀನ್ ಸಲಹೆ

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಸರ್ಕಾರ ಕಿತ್ತೊಗೆಯುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ‘ಉಕ್ರೇನ್ ರಾಷ್ಟ್ರವಾದಿಗಳು’ ರಷ್ಯಾದ ಸೇನೆಯನ್ನು ಕೆಣಕಲು ಪ್ರಮುಖ ನಗರಗಳ ವಸತಿ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸತ್ತಿದ್ದಾರೆ, ರಷ್ಯಾದ ಆಕ್ರಮಣದಿಂದ ನಾಗರಿಕರು ಸಾವು ನೋವುಗಳನ್ನು ಅನುಭವಿಸಿದ್ದಾರೆ ಎಂದು ಜನರಲ್ಲಿ ನಂಬಿಕೆ ಹುಟ್ಟಿಸಲು ಅವರು ಹಾಗೆ ಮಾಡುತ್ತಿದ್ದಾರೆ ಅಂತಲೂ ಪುಟಿನ್ ಹೇಳಿದರು. ‘ಅಧಿಕಾರವನ್ನು ನಿಮ್ಮ ಕೈಗೆ ತೆಗೆದುಕೊಳ್ಳಿ ಅಂತ ಉಕ್ರೇನ್ ಸೇನೆಗೆ ಆಗ್ರಹಿಸಿದ್ದಾರೆ.

ಸಾವು-ನೋವಿನ ಲೆಕ್ಕವೆಷ್ಟು?

ಉಕ್ರೇನ್‌ ವಿರುದ್ಧ ದಾಳಿ ಆರಂಭವಾದ ಎರಡು ದಿನಗಳಲ್ಲಿ ಆ ದೇಶದ 118 ಮಿಲಿಟರಿ ಆಸ್ತಿಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾ ಸೇನೆ ತಿಳಿಸಿದೆ. ''ಉಕ್ರೇನ್‌ನ 11 ವಾಯು ನೆಲೆ, 13 ಕಮಾಂಡ್‌ ಸೌಲಭ್ಯ, 36 ವಾಯು ರಕ್ಷಣಾ ರಡಾರ್‌, 14 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ, 5 ಯುದ್ಧವಿಮಾನ ಹಾಗೂ 18 ಟ್ಯಾಂಕ್‌ ಮತ್ತು ಯುದ್ಧನೌಕೆಗಳನ್ನು ನಾಶಪಡಿಸಲಾಗಿದೆ,'' ಎಂದು ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್‌ ಜನರಲ್‌ ಇಗೋರ್‌ ಕೊನಾಶೆಂಕೋವ್‌ ತಿಳಿಸಿದ್ದಾರೆ.

ಆದರೆ, ರಷ್ಯಾದ ಉಲ್ಲೇಖವನ್ನು ಬ್ರಿಟನ್‌ ಅಲ್ಲಗಳೆದಿದ್ದು, ''ಮಿಲಿಟರಿ ಹಾನಿ ಕುರಿತು ರಷ್ಯಾ ಮಾಡಿದ ಉಲ್ಲೇಖ ತಪ್ಪಾಗಿದೆ. ಸಂಪೂರ್ಣವಾಗಿ ದಾಳಿ ಮಾಡುವಲ್ಲಿ ವಿಫಲವಾದ ರಷ್ಯಾದ 450 ಸೈನಿಕರು ಸಹ ಹತರಾಗಿದ್ದಾರೆ,'' ಎಂದಿದೆ

ಇದನ್ನೂ ಓದಿ: Ukraine Crisis: ಭಾರತದ ಜನರನ್ನು ಕರೆತರಲು 4 ವಿಶೇಷ ವಿಮಾನ, ಸುರಕ್ಷೆ ಖಾತರಿ ಕೊಟ್ಟ ಪುಟಿನ್

ದಾಳಿ ನಿಲ್ಲಿಸುವಂತೆ ರಷ್ಯಾಕ್ಕೆ ಆಗ್ರಹ

ಉಕ್ರೇನ್ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಮತ್ತು ಎಲ್ಲಾ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಯುಎನ್ ಭದ್ರತಾ ಮಂಡಳಿಯಲ್ಲಿ ಮಾಡಲಾಗಿದೆ.

ನಿನ್ನೆ ನಡೆದ ಸಭೆಯಲ್ಲಿ ನಿರ್ಣಯದ  ಪರವಾಗಿ 11 ಮತಗಳು ಬಂದಿದ್ದವು. ರಷ್ಯಾ ಮತ ಹಾಕದೇ ದೂರ ಉಳಿದರೆ, ಚೀನಾ, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಟಸ್ಥವಾಗಿತ್ತು..
Published by:Annappa Achari
First published: