ಪಬ್​​ಜಿಗೆ ಮತ್ತೊಂದು ಬಲಿ; ಆಟದಲ್ಲಿ ಮೈಮರೆತು ನೀರಿನ ಬದಲು ಕೆಮಿಕಲ್​ ಕುಡಿದು ಯುವಕ ಸಾವು

ಪಬ್​​ ಜಿ ಆಟದಲ್ಲಿ ಮುಳುಗಿ ಹೋಗಿದ್ದ ಸೌರಭ್, ನೀರು ಕುಡಿಯೋಕೆ ಸಂತೋಷ್ ಶರ್ಮಾನ ಬ್ಯಾಗ್​ನಲ್ಲಿದ್ದ ವಾಟರ್ ಬಾಟಲ್​​ಗೆ ಕೈಹಾಕಿದ್ದ. ಆದರೆ ವಾಟರ್ ಬಾಟಲ್ ಬದಲಿಗೆ ಚಿನ್ನಕ್ಕೆ ಪಾಲಿಶ್ ಮಾಡುವ ಕೆಮಿಕಲ್​​ ಬಾಟಲ್​ನ್ನು ಎತ್ತಿಕೊಂಡು ಗಟಗಟನೇ ಕುಡಿದಿದ್ದಾನೆ.

ಪಬ್​ಜಿ

ಪಬ್​ಜಿ

  • Share this:
ಅಂದು ಬ್ಲೂವೇಲ್, ಇಂದು ಪಬ್ ಜಿ. ಪಬ್​ ಜಿ ಗೇಮ್​ಗೆ​​ ಅಡಿಕ್ಟ್ ಆಗಿರುವ ಯುವ ಸಮೂಹದಲ್ಲಿ ಹಲವು ಮಂದಿ ಮಾನಸಿಕ ಖಿನ್ನತೆಗೆ ಒಳಗಾಗಿರುವವರನ್ನು ನಾವು ನೋಡಿದ್ದೇವೆ, ಆಟದಿಂದ ಸಾವಿಗೀಡಾದವರ ಬಗ್ಗೆಯೂ ಕೇಳಿದ್ದೇವೆ. ಅದೇ ರೀತಿ ಪಬ್​ಜಿ ಚಟಕ್ಕೆ ಬಿದ್ದಿದ್ದ ಯುವಕನೊಬ್ಬ ನೀರು ಯಾವುದು?ಕೆಮಿಕಲ್ ಯಾವುದು? ಅನ್ನೋದು ಗೊತ್ತಾಗದೇ ಪ್ರಾಣ ಬಿಟ್ಟಿದ್ದಾನೆ.

ಯುದ್ಧ ಭೂಮಿಯ ಆಟ.. ತಮಗೆ ಬೇಕಾದ ಪ್ರದೇಶ.. ಕೈಯಲ್ಲಿ ಶಸ್ತ್ರಾಸ್ತ್ರ ಹಿಡ್ಕೊಂಡು ಬೇಕಾದ ವಸ್ತುಗಳೊಂದಿಗೆ ಅಲ್ಲಿಗೆ ಹೋಗ್ಬೇಕು. ಅಲ್ಲಿದ್ದ ನೂರಾರು ಶತ್ರುಗಳ ಜೊತೆ ಕಾದಾಡಬೇಕು. ಹೋರಾಡಿ ಉಳಿದ್ರೆ ಗೆದ್ದಂತೆ, ಮೃತಪಟ್ಟರೆ ಸೋಲು.. ಇದು ಯುವ ಸಮೂಹ ಚಟಕ್ಕೆ ಬಿದ್ದಿರೋ ಪಬ್​​ ಜಿ ಆಟ.

ಈ ಪಬ್​​ ಜಿ ಆಟಕ್ಕೆ ಅಡಿಕ್ಟ್ ಆಗಿ ಮಾನಸಿಕ ರೋಗಿಗಳಾದ ಹಲವು ಜನರಿದ್ದಾರೆ. ಪಬ್​​ ಜಿ ಚಟಕ್ಕೆ ಬಿದ್ದಿದ್ದ ಹುಡುಗನೊಬ್ಬ ಸೇನಾ ಸಮವಸ್ತ್ರದಲ್ಲಿ ಪ್ಲಾಸ್ಟಿಕ್ ಗನ್ ಹಿಡ್ಕೊಂಡು ನಗರದ ಬೀದಿ ಬೀದಿ ಅಲೆದಾಡಿದ್ದ. ಮತ್ತೊಬ್ಬ ಪಬ್​ ಜಿ ಪಾಗಲ್, ಆಪರೇಷನ್ ಥಿಯೇಟರ್​ನಲ್ಲೇ ಹುಚ್ಚಾಟ ಮಾಡಿದ್ದ. ಮತ್ತೊಬ್ಬ ರಸ್ತೆಯಲ್ಲೇ ರಂಪಾಟ ಮಾಡಿದ್ದ. ಪುಟ್ಟ ಬಾಲಕನೊಬ್ಬ ನಿದ್ದೆಯಲ್ಲೂ ಪಬ್​ ಜಿ ಕನವರಿಸಿದ್ದ.

ಮಾಜಿ ಸ್ಪೀಕರ್​​​ ರಮೇಶ್​​ ಕುಮಾರ್​​ ಭೇಟಿಯಾದ ಶರತ್​​ ಬಚ್ಚೇಗೌಡ; ಕುತೂಹಲ ಮೂಡಿಸಿದ ಪಕ್ಷೇತರ ಶಾಸಕನ ನಡೆ

ಹೀಗೆ ಪಬ್​​ ಜಿ ಚಟಕ್ಕೆ ಬಿದ್ದು ಮಾನಸಿಕ ಖಿನ್ನತೆಗೆ ಒಳಗಾದವರು ಅದೆಷ್ಟೋ ಮಂದಿ ಇದ್ದಾರೆ. ಇದಕ್ಕಿಂತಲೂ ಘೋರ ಘಟನೆ ನಡೆದಿರೋದು ಉತ್ತರ ಪ್ರದೇಶದಲ್ಲಿ.. ಪಬ್​ ಜಿ ಆಟದಲ್ಲಿ ಮೈಮರೆತಿದ್ದ ಯುವಕನೊಬ್ಬ ನೀರು ಎಂದುಕೊಂಡು ಕೆಮಿಕಲ್ ಕುಡಿದು ಜೀವವನ್ನೇ ಬಿಟ್ಟಿದ್ದಾನೆ.

ಉತ್ತರ ಪ್ರದೇಶದ 20 ವರ್ಷದ ಯುವಕ ಸೌರಭ್ ಯಾದವ್, ತನ್ನ ಗೆಳೆಯ ಸಂತೋಷ್ ಶರ್ಮಾ ಎಂಬಾತನ ಜೊತೆ ರೈಲಿನಲ್ಲಿ ಆಗ್ರಾಕ್ಕೆ ಹೊರಟಿದ್ದ. ಸಂತೊಷ್​​​ ಚಿನ್ನಕ್ಕೆ ಪಾಲಿಶ್ ಮಾಡುವ ಉದ್ಯೋಗ ಮಾಡ್ತಿದ್ದಾನೆ. ಕೆಲಸಕ್ಕೆ ಸಂಬಂಧಿಸಿದಂರೆ ಸಂತೋಷ್ ಜೊತೆ ರೈಲಿನಲ್ಲಿ ಹೋಗುತ್ತಿರಬೇಕಾದರೆ ಸೌರಭ್ ಯಾದವ್ ತನ್ನ ಮೊಬೈಲ್​ನಲ್ಲಿ ಪಬ್​​ ಜಿ ಗೇಮ್ ಆಟ ಆಡುತ್ತಿದ್ದ. ಪಬ್​​ ಜಿ ಆಟದಲ್ಲಿ ಮುಳುಗಿ ಹೋಗಿದ್ದ ಸೌರಭ್, ನೀರು ಕುಡಿಯೋಕೆ ಸಂತೋಷ್ ಶರ್ಮಾನ ಬ್ಯಾಗ್​ನಲ್ಲಿದ್ದ ವಾಟರ್ ಬಾಟಲ್​​ಗೆ ಕೈಹಾಕಿದ್ದ. ಆದರೆ ವಾಟರ್ ಬಾಟಲ್ ಬದಲಿಗೆ ಚಿನ್ನಕ್ಕೆ ಪಾಲಿಶ್ ಮಾಡುವ ಕೆಮಿಕಲ್​​ ಬಾಟಲ್​ನ್ನು ಎತ್ತಿಕೊಂಡು ಗಟಗಟನೇ ಕುಡಿದಿದ್ದಾನೆ.

ಪ್ರಾಮಾಣಿಕತೆಗೆ ಮಾದರಿಯಾದ ಬೆಂಗಳೂರಿನ ಆಟೋ ಡ್ರೈವರ್​

ಕೆಮಿಕಲ್​ ಹೊಟ್ಟೆ ಸೇರುತ್ತಿದ್ದಂತೆ ಸೌರಭ್​​​ ರೈಲಿನಲ್ಲೇ ಕುಸಿದುಬಿದ್ದಿದ್ದ. ಆಗ್ರಾ ರೈಲ್ವೇ ನಿಲ್ದಾಣ ತಲುಪುವಷ್ಟರಲ್ಲಿ ಪ್ರಾಣಬಿಟ್ಟಿದ್ದಾನೆ. ಈ ಹಿಂದೆ ಬ್ಲೂವೇಲ್ ಅನ್ನೋ ಆಟ ಒಂದಷ್ಟು ಜನರನ್ನು ಬಲಿ ಪಡೆದಿತ್ತು. ಇದೀಗ ಪಬ್​ ಜಿ ಆಟ ಸಾವನ್ನು ತಂದೊಡ್ಡಿದೆ. ಯುವ ಸಮೂಹ ಪಬ್ ಜಿ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ ಎನ್ನುವ ರೀತಿ ವರ್ತಿಸುತ್ತಿರುವುದು ಮಾತ್ರ ದುರಂತ.
Published by:Latha CG
First published: