ಲಕ್ನೋ(ಜು.14): ಮಕ್ಕಳ (Chindren) ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ನವಜಾತ ಶಿಶುವನ್ನು ಸಿಕ್ಕ ಸಿಕ್ಕಲ್ಲಿ ಎಸೆಯುವುದರಿಂದ ತೊಡಗಿ ಬೆಳೆದ ಮಕ್ಕಳ ಮೇಲೆ ದೈಹಿಕ (Physical) ಹಾಗೂ ಮಾನಸಿಕ ಘಾಸಿ ಮಾಡುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ತಾಯಿಯೊಬ್ಬರು (Mother) ಮಗಳ ಕೈ ಕಾಲನ್ನು ಕಟ್ಟಿ ಸುಡುವ ಬಿಸಿಲಿಗೆ ಟೆರೇಸ್ನಲ್ಲಿ ಮಲಗಿಸಿದ ಫೋಟೋ ವೈರಲ್ (Viral Photo) ಆಗಿತ್ತು. ಈಗ ಅಂಥದ್ದೇ ಘಟನೆಯೊಂದು ನಡೆದಿದ್ದು ಇದರಲ್ಲಿ ತಾಯಿ ಮಗಳ ಖಾಸಗಿ ಭಾಗಗಳಿಗೆ (Private Part) ಕುದಿಯುವ ಎಣ್ಣೆಯನ್ನು (Boiling Oil) ಸುರಿದು ಕ್ರೌರ್ಯ ತೋರಿಸಿದ್ದಾರೆ.
35 ವರ್ಷದ ಮಹಿಳೆಯೊಬ್ಬರು ದತ್ತು ಪಡೆದ 6 ವರ್ಷದ ಮಗಳ ಖಾಸಗಿ ಭಾಗಗಳಿಗೆ ಕುದಿಯುವ ಎಣ್ಣೆಯನ್ನು ಸುರಿದಿದ್ದಾರೆ. 35 ವರ್ಷದ ಮಹಿಳೆಯೊಬ್ಬರು ದತ್ತು ಪಡೆದ 6 ವರ್ಷದ ಮಗಳ ಖಾಸಗಿ ಭಾಗಗಳಿಗೆ ಕುದಿಯುವ ಎಣ್ಣೆಯನ್ನು ಸುರಿದಿದ್ದಾರೆ.35 ವರ್ಷದ ಮಹಿಳೆಯೊಬ್ಬರು ದತ್ತು ಪಡೆದ 6 ವರ್ಷದ ಮಗಳ ಖಾಸಗಿ ಭಾಗಗಳಿಗೆ ಕುದಿಯುವ ಎಣ್ಣೆಯನ್ನು ಸುರಿದಿದ್ದಾರೆ.ಕ್ರೌರ್ಯ ತೋರಿಸಿದ ಪೂನಂ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರಿಗೆ ದೂರು ಕೊಟ್ಟ ತಂದೆ
ಸಂತ್ರಸ್ತೆಯ ತಂದೆ ಅಜಯ್ ಕುಮಾರ್ ಎನ್ನುವವರು ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣವೇ ಮಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಅಜಯ್ ಕುಮಾರ್ ತಳ್ಳು ಗಾಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
6 ತಿಂಗಳ ಹಿಂದೆ ಬಾಲಕಿಯನ್ನು ದತ್ತು ಪಡೆದ ಪೋಷಕರು
ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಠಾಕೂರ್ಗಂಜ್, ಹರಿ ಶಂಕರ್ ಚಂದ್ರ ಸುದ್ದಿಗಾರರೊಂದಿಗೆ ಮಾತನಾಡಿ, ದಂಪತಿಗೆ ಯಾವುದೇ ಸ್ವಂತ ಮಗು ಇರಲಿಲ್ಲ. ಆರು ತಿಂಗಳ ಹಿಂದೆ ಕುಮಾರ್ ಹೆಣ್ಣು ಮಗುವನ್ನು 'ದತ್ತು' ಪಡೆದಿದ್ದಾರೆ ಎಂದು ಪೂನಂ ಹೇಳಿಕೊಂಡಿದ್ದಾರೆ.
ಆದರೆ ಆಕೆ ನಿರ್ಧಾರದಿಂದ ಸಂತೋಷವಾಗಿರಲಿಲ್ಲ. ಆಗಾಗ ಹುಡುಗಿಯ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಳು. ತನ್ನ ಪತ್ನಿ ಸಂತ್ರಸ್ತೆಯ ಖಾಸಗಿ ಭಾಗಗಳಿಗೆ ಬಿಸಿ ಎಣ್ಣೆಯನ್ನು ಹಾಕಿದ್ದಾಳೆ ಎಂದು ಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ.
ಪೋಷಕರೇ ಮಕ್ಕಳ ಪಾಲಿಗೆ ಶತ್ರುಗಳಾಗುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಕ್ರೌರ್ಯದ ಎಲ್ಲಾ ದಾಖಲೆಗಳನ್ನು ಮುರಿದು, ದೆಹಲಿಯ (Delhi) ಪೋಷಕರು (Parents) ತಮ್ಮ 5 ವರ್ಷದ ಬಾಲಕಿಯನ್ನು ಶಿಕ್ಷಿಸಲು ಕಠಿಣವಾಗಿ ವರ್ತಿಸಿದ್ದಾರೆ.
ಇದನ್ನೂ ಓದಿ: Delhi Parents: ಹೋಂವರ್ಕ್ ಮಾಡದ್ದಕ್ಕೆ 5 ವರ್ಷದ ಮಗುವನ್ನು ಬಿಸಿಲಲ್ಲಿ ಮಲಗಿಸಿದ ಪೋಷಕರು!
ಘೋರ ದೈಹಿಕ ಶಿಕ್ಷೆಯ ಪ್ರಕರಣದಲ್ಲಿ, ದೆಹಲಿಯಲ್ಲಿ 5 ವರ್ಷದ ಬಾಲಕಿಯನ್ನು ಹಗ್ಗದಿಂದ ಕಟ್ಟಿ, ತನ್ನ ಹೋಂವರ್ಕ್ ಮಾಡದಿದ್ದಕ್ಕಾಗಿ ಬಿಸಿಲಿನ ಬೇಗೆಯಲ್ಲಿ ನರಳಲು ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
1ನೇ ತರಗತಿಯ ಪುಟ್ಟ ಬಾಲಕಿ ಅವಳು
ಮಾಹಿತಿಯ ಪ್ರಕಾರ, ಅಪ್ರಾಪ್ತ ವಯಸ್ಕ ಬಾಲಕಿ 1 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ದೆಹಲಿಯ ಕರವಾಲ್ ನಗರದ ತುಖ್ಮೀರ್ಪುರದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾಳೆ. ಆಪಾದಿತ ವಿಡಿಯೋ ಇಂಟರ್ನೆಟ್ನಲ್ಲಿ ಹರಿದಾಡಲು ಪ್ರಾರಂಭಿಸಿದ ನಂತರ ದೆಹಲಿ ಪೊಲೀಸರು ಈ ವಿಷಯದಲ್ಲಿ ಕಾನೂನು ಕ್ರಮವನ್ನು ಪ್ರಾರಂಭಿಸಿದ್ದಾರೆ.
ಈಶಾನ್ಯ ದೆಹಲಿಯಲ್ಲಿ ಬುಧವಾರ ಬೆಳಗ್ಗೆ ಐದು ವರ್ಷದ ಬಾಲಕಿಯನ್ನು ಆಕೆಯ ತಾಯಿ ಕಟ್ಟಿಹಾಕಿ ಮನೆಯ ಮೇಲ್ಛಾವಣಿಯಲ್ಲಿ ಬಿಟ್ಟಿದ್ದಾಳೆ. ದೆಹಲಿಯ ಬಿಸಿಲಿನ ಕುರಿತು ವಿಶೇಷವಾಗಿ ಹೇಳಬೇಕಿಲ್ಲ ಅಲ್ಲವೇ?
ಇದನ್ನೂ ಓದಿ: Presidential Election: ರಾಷ್ಟ್ರಪತಿ ಚುನಾವಣೆಗೆ ಭರದ ಸಿದ್ಧತೆ, ಸ್ಟ್ರಾಂಗ್ ರೂಂನಲ್ಲಿ ಚುನಾವಣಾ ಸಾಮಾಗ್ರಿ ಭದ್ರ
ಹುಡುಗಿಯ ಮಣಿಕಟ್ಟು ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿದೆ ಎಂದು ವೀಡಿಯೊದಲ್ಲಿ ಕಾಣಬಹುದು. ವೀಡಿಯೋದಲ್ಲಿ ಮಗುವನ್ನು ತೋರಿಸಲಾಗಿದೆ. ಅವಳು ಉರಿಯುತ್ತಿರುವ ಸೂರ್ಯನ ಬಿಸಿಲಿನ ಕೆಳಗೆ ನರಳುತ್ತಿದ್ದಳು. ಅವರು ಕುಟುಂಬವನ್ನು ಪತ್ತೆಹಚ್ಚಿದ್ದಾರೆ ಮತ್ತು ಪೋಷಕರನ್ನು ತನಿಖೆ ಮಾಡಲು ಪ್ರಾರಂಭಿಸಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ