HOME » NEWS » National-international » UP WOMAN KILLS BOYFRIEND FOR SPEAKING WITH ANOTHER GIRL ON PHONE SNVS

Love Dhoka - ಬೇರೆ ಹುಡುಗಿ ಜೊತೆ ಫೋನಲ್ಲಿ ಮಾತಾಡುತ್ತಿದ್ದ ಪ್ರಿಯಕರನ ಕತ್ತು ಸೀಳಿದ ಮಹಿಳೆ

ತನಗಿಂತ ಏಳು ವರ್ಷ ಚಿಕ್ಕವನಾದ ಹುಡುಗನೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯೊಬ್ಬಳು ಇದೀಗ ಆತ ಬೇರೊಬ್ಬ ಹುಡುಗಿ ಜೊತೆ ಮಾತನಾಡಿದ್ದಕ್ಕೆ ಕೊಲೆ ಮಾಡಿದ್ದಾಳೆ. ಉತ್ತರ ಪ್ರದೇಶದ ಸೀತಾಪುರ್​ನಲ್ಲಿ ಘಟನೆ ನಡೆದಿದೆ.

news18-kannada
Updated:April 29, 2021, 11:55 AM IST
Love Dhoka - ಬೇರೆ ಹುಡುಗಿ ಜೊತೆ ಫೋನಲ್ಲಿ ಮಾತಾಡುತ್ತಿದ್ದ ಪ್ರಿಯಕರನ ಕತ್ತು ಸೀಳಿದ ಮಹಿಳೆ
ಸಾಂದರ್ಭಿಕ ಚಿತ್ರ.
  • Share this:
ಲಕ್ನೋ: ಫೋನಲ್ಲಿ ಬೇರೆ ಹುಡುಗಿ ಜೊತೆ ಮಾತನಾಡುತ್ತಿದ್ದ ತನ್ನ ಬಾಯ್ ಫ್ರೆಂಡ್​ನನ್ನು ಮಹಿಳೆಯೊಬ್ಬರು ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಸೀತಾಪುರ್​ನಲ್ಲಿ ನಡೆದಿದೆ. ಪ್ರಿಯಕರನ ಕತ್ತು ಸೀಳಿ ಕೊಂದ ವಿಚಾರವನ್ನು ಆಕೆಯೂ ಒಪ್ಪಿಕೊಂಡಿದ್ದಾಳೆ. ಸೀತಾಪುರ್ ಪೊಲೀಸರು ಇದೀಗ ಆ ಆರೋಪಿ ಮಹಿಳೆಯನ್ನು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಮಹಿಳೆಯನ್ನು 35 ವರ್ಷದ ರಜಿನಿ ಎಂಬ ಮಾಹಿತಿ ಲಭ್ಯವಿದೆ. ಕೊಲೆಯಾದ ಆಕೆಯ ಪ್ರಿಯಕರ 28 ವರ್ಷದ ರಾಜೇಶ್ ಎನ್ನಲಾಗಿದೆ. ಇಬ್ಬರೂ ಕೂಡ 3 ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ತನಗಿಂತ 7 ವರ್ಷ ದೊಡ್ಡವಳಾದ ರಜಿನಿಗೆ ಆಗಾಗ್ಗೆ ದುಬಾರಿ ಉಡುಗೊರೆಗಳನ್ನ ಕೊಟ್ಟು ರಮಿಸುತ್ತಿದ್ದನೆನ್ನಲಾಗಿದೆ.

ಮೊನ್ನೆ ಮಂಗಳವಾರದಂದು, ರಾಜೇಶ್ ಫೋನಲ್ಲಿ ಬೇರೊಬ್ಬ ಹುಡುಗಿ ಜೊತೆ ಮಾತನಾಡುತ್ತಿದ್ದುದನ್ನು ರಜಿನಿ ಕಂಡಿದ್ಧಾಳೆ. ಇದರಿಂದ ಕೋಪಗೊಂಡ ಆಕೆ, ಫೋನಲ್ಲಿ ಯಾರ ಜೊತೆ ಮಾತನಾಡುತ್ತಿದ್ದೀಯ ಎಂದು ಎರಡು ಬಾರಿ ಆತನನ್ನು ಕೇಳಿದ್ದಾಳೆ. ಆದರೆ, ತಾನು ಯಾರ ಜೊತೆ ಮಾತನಾಡುತ್ತಿದ್ದೇನೆಂದು ಆತ ಸರಿಯಾಗಿ ವಿವರ ನೀಡದೇ ಹೋದಾಗ ಸಿಟ್ಟಿನ ಭರದಲ್ಲಿ ರಜಿನಿ ಚಾಕು ತೆಗೆದುಕೊಂಡು ಆತನ ಕುತ್ತಿಗೆ ಸೀಳಿದ್ದಾಳೆ. ರಾಜೇಶ್ ಸ್ಥಳದಲ್ಲೇ ಕುಸಿದು ಬೀಳುತ್ತಾನೆ. ರಕ್ತದ ಕೋಡಿಯೇ ಹರಿಯುತ್ತದೆ.

ಇದನ್ನೂ ಓದಿ: ಚಿತಾಗಾರಗಳಲ್ಲಿ ಕೊರೋನಾದಿಂದ ಸತ್ತವರ ನಿರಂತರ ದಹನ; ವಾಸನೆ ತಾಳಲಾರದೆ ಸ್ಥಳೀಯರ ನರಳಾಟ!

ಗ್ರಾಮಸ್ಥರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸುತ್ತಾರೆ. ಆದರೆ, ಮಾರ್ಗಮಧ್ಯೆಯೇ ರಾಜೇಶ್ ಕೊನೆಯುಸಿರೆಳೆದಿದ್ದಾನೆ ಎಂದು ಸೀತಾಪುರ್ ಠಾಣಾಧಿಕಾರಿ ಹೇಳಿದ್ದಾರೆ.

ರಾಜೇಶ್ ಕುಟುಂಬದವರ ದೂರಿನ ಆಧಾರದ ಮೇಲೆ ರಜಿನಿ ವಿರುದ್ಧ ಕೊಲೆ ಆರೋಪ ಇರುವ ಪ್ರಕರಣ ದಾಖಲಿಸಲಾಗಿದೆ. ಕೊಲೆ ಮಾಡಲು ಬಳಸಲಾಗಿದ್ದ ಚಾಕು ಹಾಗೂ ಫಿಂಗರ್ ಪ್ರಿಂಟ್​ಗಳನ್ನ ಸಂಗ್ರಹಿಸಲಾಗಿದೆ. ಆರೋಪಿ ರಜಿನಿ ಕೂಡ ತಾನೇ ಕೊಲೆ ಮಾಡಿದ್ದು ಎಂದು ವಿಚಾರವಣೆ ವೇಳೆ ಬಾಯಿಬಿಟ್ಟಿದ್ದಾಳೆ.
Published by: Vijayasarthy SN
First published: April 29, 2021, 11:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories