ಆಕೆ ನಿತ್ಯ ಸುಮಂಗಲಿ: 11 ಗಂಡಂದಿರು...ಲೆಕ್ಕವಿಲ್ಲದಷ್ಟು ಬಾಯ್​ಫ್ರೆಂಡ್ಸ್ ಜತೆ ಪ್ರೇಮದಾಟ​...!

ಆಕೆ ನಿತ್ಯ ಸುಮಂಗಲಿ... 11 ಮಂದಿ ಗಂಡಂದಿರು... ಸಾಲದಕ್ಕೆ ಲೆಕ್ಕವಿಲ್ಲದಷ್ಟು ಬಾಯ್​ಫ್ರೆಂಡ್ಸ್​ ಜತೆ ಪ್ರೇಮದಾಟ... ಹೌದು, ಇದು ಯಾವುದೋ ಸಿನಿಮಾದ ಕತೆಯಲ್ಲ, ನೈಜ ಘಟನೆ. ಹನ್ನೊಂದನೇ ಗಂಡ ತನ್ನ ಹೆಂಡತಿ ಕಾಣೆಯಾಗಿದ್ದಾರೆ ಎಂದು ನೀಡಿದ ದೂರಿನಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.

Anitha E | news18
Updated:January 5, 2019, 3:43 PM IST
ಆಕೆ ನಿತ್ಯ ಸುಮಂಗಲಿ: 11 ಗಂಡಂದಿರು...ಲೆಕ್ಕವಿಲ್ಲದಷ್ಟು ಬಾಯ್​ಫ್ರೆಂಡ್ಸ್ ಜತೆ ಪ್ರೇಮದಾಟ​...!
ಆಕೆ ನಿತ್ಯ ಸುಮಂಗಲಿ... 11 ಮಂದಿ ಗಂಡಂದಿರು... ಸಾಲದಕ್ಕೆ ಲೆಕ್ಕವಿಲ್ಲದಷ್ಟು ಬಾಯ್​ಫ್ರೆಂಡ್ಸ್​ ಜತೆ ಪ್ರೇಮದಾಟ... ಹೌದು, ಇದು ಯಾವುದೋ ಸಿನಿಮಾದ ಕತೆಯಲ್ಲ, ನೈಜ ಘಟನೆ. ಹನ್ನೊಂದನೇ ಗಂಡ ತನ್ನ ಹೆಂಡತಿ ಕಾಣೆಯಾಗಿದ್ದಾರೆ ಎಂದು ನೀಡಿದ ದೂರಿನಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.
  • News18
  • Last Updated: January 5, 2019, 3:43 PM IST
  • Share this:
ಹಣಕ್ಕಾಗಿ ಹೆಣ್ಣು ಮಕ್ಕಳನ್ನು ಮದುವೆಯಾಗಿ ಕೈಕೊಟ್ಟು ದೋಚಿಕೊಂಡು ಹೋದ ವಂಚಕರ ಬಗ್ಗೆ ಆಗಾಗ ಕೇಳುತ್ತಲೇ ಇರುತ್ತೀರಿ. ಆದರೆ ಅದೇ ಹೆಣ್ಣು ಮಗಳೊಬ್ಬರು ಚಿನ್ನಾಭರಣ ಹಾಗೂ ಹಣಕ್ಕಾಗಿ ಲೆಕ್ಕವಿಲ್ಲದಷ್ಟು ಹುಡುಗರೊಂದಿಗೆ ಪ್ರೇಮದಾಟವಾಡಿ, ಹನ್ನೊಂದು ಜನರನ್ನು ಮದುವೆಯಾಗಿ ದೋಚಿಕೊಂಡು ಪರಾರಿಯಾಗಿದ್ದಾರೆ ಅಂದರೆ ನಂಬುತ್ತೀರಾ..? ನಂಬಲೇ ಬೇಕು. ಇಂತಕ ಕಿಲಾಡಿ ವಂಚಕಿ ಈಗ ಉತ್ತರ ಪ್ರದೇಶದ ಪೊಲೀಸರ ಅತಿಥಿಯಾಗಿದ್ದಾರೆ.

ಆದರೆ ಲೆಕ್ಕವಿಲ್ಲದಷ್ಟು ಹುಡುಗರನ್ನು ತಮ್ಮ ಪ್ರೇಮ ಪಾಶದಲ್ಲಿ ಸಿಲುಕಿಸಿ, ಹನ್ನೊಂದು ಮಂದಿಯನ್ನು ವಿವಾಹವಾಗಿ ಚಾಲಾಕಿಯಾಗಿ ಪ್ರೀತಿಯ ಹೆಸರಲ್ಲಿ ಮೋಸ ಮಾಡಿದ ವಂಚಕಿಯ ಆಸಕ್ತಿಕರ ಕತೆ ಇಲ್ಲಿದೆ ಓದಿ...

ತನ್ನ ಹೆಂಡತಿ ಮೇಘಾ ಕಾಣೆಯಾಗಿದ್ದಾರೆ ಎಂದು ಲಾರೆನ್​ ಜಸ್ಟಿನ್​ ಎಂಬ ವ್ಯಕ್ತಿ ಇತ್ತೀಚೆಗಷ್ಟೆ ಕೇರಳದ ಕೊಚ್ಚಿಯಲ್ಲಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ಆರಂಭಿಸಿದ ಪೊಲೀಸರಿಗೆ ಪ್ರಾಥಮಿಕವಾಗಿ ಸಿಕ್ಕ ಮಾಹಿತಿ ಎಂದರೆ, ಮೇಘ ಕಾಣೆಯಾದ ದಿನದಿಂದ ಮನೆಯಲ್ಲಿದ್ದ 15 ಲಕ್ಷ ನಗದು ಹಣ ಹಾಗೂ ಚಿನ್ನಾಭರಣ ಸಹ  ಮಾಯವಾಗಿದೆ ಎಂಬುದು.

ಇದನ್ನೂ ಓದಿ: ಗೋವಾ ಬೀಚ್​ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ 70 ವರ್ಷದ ಕಾಮುಕ..!

ಈ ಸುಳಿವಿನ ಜಾಡಿನಲ್ಲೇ ತನಿಖೆ ನಡೆಸಿದ ಕೊಚ್ಚಿ ಪೊಲೀಸರಿಗೆ ಮುಂದೆ ಬಹಳ ಆಶ್ಚರ್ಯ ಕಾದಿತ್ತು. ಅದಕ್ಕಿಂತ ಹೆಚ್ಚಾಗಿ ಹೆಂಡತಿ ಕಾಣೆಯಾಗಿರುವುದಾಗಿ ದೂರು ನೀಡಿದ್ದ ಗಂಡ ಲಾರೆನ್​ಗೆ ದೊಡ್ಡ ಆಘಾತವೇ ಕಾದಿತ್ತು.

ಅದು ಹೆಂಡತಿಗೆ ತಾನೊಬ್ಬನೇ ಗಂಡ ಎಂದುಕೊಂಡಿದ್ದ ಲಾರೆನ್​ ಮೇಘಾರಿಗೆ ಹನ್ನೊಂದನೇ ಪತಿಯಾಗಿದ್ದರು. ಕೇರಳದಲ್ಲೇ ಈಕೆಯ ಪ್ರಮ ಪಾಶಕ್ಕೆ ಸಿಲುಕಿದ್ದ ನಾಲ್ವರು ಯುವಕರೂ ವಿವಾಹವಾಗಿ ಮೋಹ ಹೋಗಿದ್ದರು. ಪೊಲೀಸ್ ತನಿಖೆಯಿಂದ ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಉತ್ತರ ಪ್ರದೇಶಲ್ಲಿ ವಂಚಕಿ ಮೇಘಾ ಭಾರ್ಗವ ಬಂಧನವಾಗಿತ್ತು.

ನಂತರ ವಂಚಕಿ ಮೇಘಾರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. 'ನಾನು ನನ್ನ ಅಂದ-ಚೆಂದದಿಂದ ಮೊದಲು ಶ್ರೀಮಂತ ಹುಡುಗರನ್ನು ತನನ್ ಬಲೆಗೆ ಬೀಳಿಸಿಕೊಳ್ಳುತ್ತಿದ್ದೆ. ಇಂತಹ ಹುಡುಗಿ ಸಿಕ್ಕಿರುವುದು ನನ್ನ ಅದೃಷ್ಟ ಎನ್ನುವ ಮಟ್ಟಕ್ಕೆ ಹುಡುಗರನ್ನು ನಂಬಿಸುವಂತೆ ಪ್ರೀತಿಯ ನಾಟಕವಾಡುತ್ತಿದೆ. ನಂತರ ಮದುವೆ. ಇಲ್ಲಿಯವರೆಗೆ 11 ಮಂದಿಯನ್ನು ವಿವಾಹವಾಗಿದ್ದೇನೆ. ವಿವಾಹವಾಗಿ ಕೆಲ ಸಮಯದ ನಂತರ ಹಣ-ಚಿನ್ನಾಭರಣ ದೋಚಿಕೊಂಡು ಪರಾರಿಯಾಗುತ್ತಿದೆ. ಇನ್ನೂ ಲೆಕ್ಕವಿಲ್ಲದಷ್ಟು ಬಾಯ್​ಫ್ರೆಂಡಗಗಳಿಗೆ ವಿವಾಹವಾಗದೆಯೇ ವಂಚಿಸಿದ್ದೇನೆ' ಎಂದು ಮೇಘಾ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.ಇದನ್ನೂ ಓದಿ: ಯಶ್​-ಸುದೀಪ್​-ಪುನೀತ್​ರ​ ಹೆಗಲ ಮೇಲೆ ಬಂದೂಕು ಇರಿಸಿ ಹಾರಿಸಲಾಯಿತ ಈ ರಾಜಕೀಯ ಗುಂಡು ...?

ಅಷ್ಟೇ ಅಲ್ಲ ಈ ಕೆಲಸದಲ್ಲಿ ಮೇಘಾಗೆ, ಅವರ ತಂಗಿ ಹಾಗೂ ಭಾವ ಸಹಾಯ ಮಾಡುತ್ತಿದ್ದರಂತೆ. ಹುಗುಡರನ್ನು ಗುರುತಿಸಿದ ನಂತರ ಆತನನ್ನು ಹೇಗೆ ಖೆಡ್ಡಾಗೆ ಬೀಳಿಸುವುದು ಹಾಗೂ ವಂಚಿಸುವುದು ಎಂದು ಮಾಸ್ಟರ್​ಪ್ಲಾನ್​ ಮಾಡುತ್ತಿದ್ದರಂತೆ. ನಂತರ ಪ್ಲಾನ್​ ಪ್ರಕಾರ ಹುಡುಗರನ್ನು ವಂಚಿಸಲಾಗುತ್ತಿತ್ತಂತೆ.

ಸದ್ಯ ವಂಚಕಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಆಕೆಯಿಂದ ಮೋಸ ಹೋದ ಯುವಕರು ಹಾಗೂ ಅವರಿಂದ ದೋಚಲಾಗಿರುವ ಹಣ-ಚಿನ್ನಾಭರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

First published: January 5, 2019, 2:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading