2020ರಲ್ಲಿ ಕೊಲೆ-ಅಪಹರಣ ಸೇರಿದಂತೆ ಅತಿಹೆಚ್ಚು ಅಪರಾಧಗಳು ದಾಖಲಾದ ರಾಜ್ಯ ಉತ್ತರಪ್ರದೇಶ; NCRB ದಾಖಲೆ ಬಿಡುಗಡೆ

2020 ರಲ್ಲಿ ಉತ್ತರ ಪ್ರದೇಶದಲ್ಲಿ ಗರಿಷ್ಠ 3,779 ಕೊಲೆ ಪ್ರಕರಣಗಳು, 12,913 ಅಪಹರಣ ಪ್ರಕರಣಗಳು ದಾಖಲಾಗಿವೆ ಎಂದು NCRB ದಾಖಲೆ ಹೇಳಿದೆ. ಬಿಹಾರದಲ್ಲಿ 3,150 ಕೊಲೆ ಪ್ರಕರಣಗಳನ್ನು ವರದಿಯಾಗಿದ್ದು ಎರಡನೇ ಸ್ಥಾನದಲ್ಲಿದೆ.

ಯುಪಿ ಸಿಎಂ ಯೋಗಿ.

ಯುಪಿ ಸಿಎಂ ಯೋಗಿ.

 • Share this:
  ನವ ದೆಹಲಿ (ಸೆಪ್ಟೆಂಬರ್​ 16); ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬುಧವಾರ ಬಿಡುಗಡೆಯಾದ 2020 ರ ರಾಷ್ಟ್ರೀಯ ಅಪರಾಧಗಳ ದತ್ತಾಂಶಗಳ ಪ್ರಕಾರ, ಕಳೆದ ವರ್ಷ ವರದಿಯಾದ ಕೊಲೆ, ಅಪಹರಣಗಳ ಪ್ರಕರಣಗಳಲ್ಲಿ ಉತ್ತರ ಪ್ರದೇಶವು ದೇಶದ ಎಲ್ಲಾ ರಾಜ್ಯಗಳಿಗಿಂತ ಅಗ್ರಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ. 2020 ರಲ್ಲಿ ಉತ್ತರ ಪ್ರದೇಶದಲ್ಲಿ ಗರಿಷ್ಠ 3,779 ಕೊಲೆ ಪ್ರಕರಣಗಳು, 12,913 ಅಪಹರಣ ಪ್ರಕರಣಗಳು ದಾಖಲಾಗಿವೆ ಎಂದು NCRB ದಾಖಲೆ ಹೇಳಿದೆ. ಬಿಹಾರದಲ್ಲಿ 3,150 ಕೊಲೆ ಪ್ರಕರಣಗಳನ್ನು ವರದಿಯಾಗಿದ್ದು ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 2,163 ಕೊಲೆ ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಮಧ್ಯಪ್ರದೇಶದಲ್ಲಿ 2,101 ಮತ್ತು ಪಶ್ಚಿಮ ಬಂಗಾಳ 1,948 ಕ್ರಮವಾಗಿ ನಾಲ್ಕನೇ ಮತ್ತು ಐದನೆ ಸ್ಥಾನದಲ್ಲಿದೆ.

  ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ 9,309 ಪ್ರಕರಣಗಳೊಂದಿಗೆ ಪಶ್ಚಿಮ ಬಂಗಾಳ ಎರಡನೇ ಸ್ಥಾನದಲ್ಲಿದೆ ಎಂದು NCRB ಅಂಕಿಅಂಶಗಳು ಹೇಳಿವೆ. ಮಹಾರಾಷ್ಟ್ರದಲ್ಲಿ 8,103, ಬಿಹಾರದಲ್ಲಿ 7,889 ಮತ್ತು ಮಧ್ಯಪ್ರದೇಶದಲ್ಲಿ 7,320 ಪ್ರಕರಣಗಳೊಂದಿಗೆ ಮೂರನೇ, ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದೆ.

  ದೇಶದಲ್ಲಿ 2020 ರಲ್ಲಿ ದೈನಂದಿನವಾಗಿ ಸರಾಸರಿ 80 ಕೊಲೆಗಳನ್ನು ವರದಿಯಾಗಿದ್ದು, ಒಂದು ವರ್ಷದಲ್ಲಿ ಒಟ್ಟು 29,193 ಕೊಲೆಗಳು ಸಂಭವಿಸಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.1 ರಷ್ಟು ಹೆಚ್ಚಾಗಿದೆ. 2019 ರಲ್ಲಿ ಒಟ್ಟು 28,915 ಕೊಲೆಗಳು ದೇಶದಲ್ಲಿ ವರದಿಯಾಗದ್ದವು.

  SC/ST ಗಳ ವಿರುದ್ಧದ ಅಪರಾಧಗಳ ಸಂಖ್ಯೆ ಶೆ 9% ಹೆಚ್ಚಳ

  ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬುಧವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಪರಿಶಿಷ್ಟ ಜಾತಿಗಳ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ವಿರುದ್ಧದ ಅಪರಾಧಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ 2020 ರಲ್ಲಿ ಕ್ರಮವಾಗಿ ಶೇ. 9.4 ಮತ್ತು ಶೇ.9.3 ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ಆದರೆ ವರದಿಯು ಮಹಿಳೆಯರ ವಿರುದ್ಧದ ಅಪರಾಧಗಳು ಶೇ.8.3 ರಷ್ಟು ಇಳಿಮುಖವಾಗಿದೆ ತಿಳಿಸಿದೆ.

  ಇದನ್ನೂ ಓದಿ: Hydrabad Child Rape Case| 6 ವರ್ಷದ ಮಗುವನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆ!

  ಕಳೆದ ವರ್ಷ ಒಟ್ಟು 50,291 ಅಪರಾಧಗಳು ಎಸ್ಸಿಗಳ ವಿರುದ್ಧ ನಡೆದಿದೆ ಎಂದು ದಾಖಲಾಗಿದೆ. 2019 ರಲ್ಲಿ ಈ ಸಂಖ್ಯೆ 45,961 ಆಗಿತ್ತು. ಈ ಮಧ್ಯೆ, 2020 ರಲ್ಲಿ ST ಗಳ ವಿರುದ್ಧ 8,272 ಅಪರಾಧಗಳು ನಡೆದಿದ್ದು, 2019 ರಲ್ಲಿ ಈ ಸಂಖ್ಯೆ 7,570 ಪ್ರಕರಣಗಳು ದಾಖಲಾಗಿವೆ.
  Published by:MAshok Kumar
  First published: