ದಲಿತ ಮಹಿಳೆ ಅಡುಗೆ ಮಾಡಿದರೆಂದು ಮಧ್ಯಾಹ್ನದ ಬಿಸಿ ಊಟ ಬೇಡವೆಂದ ಮಕ್ಕಳು

news18
Updated:September 8, 2018, 5:30 PM IST
ದಲಿತ ಮಹಿಳೆ ಅಡುಗೆ ಮಾಡಿದರೆಂದು ಮಧ್ಯಾಹ್ನದ ಬಿಸಿ ಊಟ ಬೇಡವೆಂದ ಮಕ್ಕಳು
  • News18
  • Last Updated: September 8, 2018, 5:30 PM IST
  • Share this:
ನ್ಯೂಸ್​ 18 ಕನ್ನಡ

ಉತ್ತರ ಪ್ರದೇಶ (ಸೆ. 08): ಪರಿಶಿಷ್ಟ ಜಾತಿಯವರು ಅಡುಗೆ ಮಾಡಿದರು ಎಂದ ಪ್ರಾಥಮಿಕ ಶಾಲೆಯ ಮಕ್ಕಳು ಮಧ್ಯಾಹ್ನದ ಬಿಸಿ ಊಟವನ್ನು ಬಹಿಷ್ಕರಿಸಿರುವ ಘಟನೆ ಉತ್ತರ ಪ್ರದೇಶದ ಸೀತಾಪುರ್​ ಜಿಲ್ಲೆಯ ಪಲ್ಹರಿಯಾ ಗ್ರಾಮದಲ್ಲಿ ನಡೆದಿದೆ,

ಯಾದವ ಮತ್ತು ಬ್ರಾಹ್ಮಣ ಸಮುದಾಯದ ಜನರು ಹೆಚ್ಚಾಗಿರುವ ಈ ಪ್ರದೇಶದಲ್ಲಿ ದಲಿತ ಮಹಿಳೆ ಮಕ್ಕಳಿಗೆ ಬಿಸಿಊಟ ತಯಾರಿ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಮಕ್ಕಳ ಪೋಷಕರು ಶಾಲೆ ಬಳಿ ಆಗಮಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ ಎಂದು ಫಸ್ಟ್​ ಪೋಸ್ಟ್​ ವರದಿ ಮಾಡಿದೆ.

76ಜನ ವಿದ್ಯಾರ್ಥಿಗಳಲ್ಲಿ ಕೇವಲ 6 ಜನ ವಿದ್ಯಾರ್ಥಿಗಳು ಮಾತ್ರ ಈ ಆಹಾರವನ್ನು ಸೇವಿಸಿದ್ದಾರೆ. ಉಳಿದ ಊಟವನ್ನು ಬಿಸಡಲಾಗಿದೆ.

ಯಾದವ ಸಮುದಾಯಕ್ಕೆ ಸೇರಿದ ಅಡುಗೆ ಸಿಬ್ಬಂದಿ ರಜೆ ಹಾಕಿದ ಹಿನ್ನಲೆ ಅರ್ಕ ಜಾತಿಗೆ ಸೇರಿದ ಮಹಿಳಾ ತಾತ್ಕಲಿಕವಾಗಿ ಅಡುಗೆಗೆ ನೇಮಿಸಲಾಗಿದೆ ಎಂದು ಶಾಲೆಯ ಮುಖ್ಯೋಪಧ್ಯಾಯ ಮನೋಜ್​ ಕುಮಾರ್​ ಪೋಷಕರಿಗೆ ಸಮಜಾಷಿಸಿ ನೀಡಲು ಮುಂದಾದರೂ ಪ್ರಯೋಜನವಾಗಿಲ್ಲ.

ಈ ಘಟನೆಯನ್ನು ಖಂಡಿಸಿರುವ ಮಾಜಿ ಐಪಿಎಸ್​ ಅಧಿಕಾರಿ ಮತ್ತು ಸಾಮಾಜಿಕ ಹೋರಾಟಗಾರ ಎಸ್​ಆರ್​ ದರಪುರಿ ಈ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್​ ತೀರ್ಪನ್ನು ಉಲ್ಲಂಘಿಸಿ ಉತ್ತರ ಪ್ರದೇಶ ಸರ್ಕಾರ ಅಡುಗೆಯವರನ್ನು ಅಕ್ರಮವಾಗಿ ನೇಮಕಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
First published: September 8, 2018, 5:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading