• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಉತ್ತರಪ್ರದೇಶದಲ್ಲಿ ನಾಮಪತ್ರ ಸಲ್ಲಿಸಲು ತೆರಳಿದ್ದ ಸಮಾಜವಾದಿ ಪಕ್ಷದ ಕಾರ್ಯಕರ್ತೆಯ ಸೀರೆ ಎಳೆದ ದುಷ್ಕರ್ಮಿಗಳು

ಉತ್ತರಪ್ರದೇಶದಲ್ಲಿ ನಾಮಪತ್ರ ಸಲ್ಲಿಸಲು ತೆರಳಿದ್ದ ಸಮಾಜವಾದಿ ಪಕ್ಷದ ಕಾರ್ಯಕರ್ತೆಯ ಸೀರೆ ಎಳೆದ ದುಷ್ಕರ್ಮಿಗಳು

ಮಹಿಳೆಯ ಸೀರೆಯನ್ನು ಎಳೆಯುತ್ತಿರುವ ದುಷ್ಕರ್ಮಿಗಳು.

ಮಹಿಳೆಯ ಸೀರೆಯನ್ನು ಎಳೆಯುತ್ತಿರುವ ದುಷ್ಕರ್ಮಿಗಳು.

ಸ್ಥಳೀಯ ಚುಣಾವಣೆಗೆ ನಾಮಪತ್ರ ಸಲ್ಲಿಸಲು ಹೋಗುತ್ತಿದ್ದ ಮಹಿಳಾ ಕಾರ್ಯಕರ್ತೆಯು ಆಕ್ರಮಣಕ್ಕೆ ಒಳಗಾಗಿದ್ದು, ಪ್ರತಿಪಕ್ಷದ ಇಬ್ಬರು ಗಂಡಸರು ಆಕೆಯ ಸೀರೆಯನ್ನು ಎಳೆದಿರುವ ಹೇಯ ಘಟನೆ ಬೆಳಕಿಗೆ ಬಂದಿದೆ.

  • Share this:

    ಲಖನೌ: ಇಡೀ ಭಾರತದಲ್ಲೇ ಅತ್ಯಂತ ಕೀಳುಮಟ್ಟದ ರಾಜಕೀಯಕ್ಕೆ ಉತ್ತರಪ್ರದೇಶವೇ ಮೇಲುಗೈ. ಇದಕ್ಕೆ ಈ ಹಿಂದಿನ ಅನೇಕ ಘಟನೆಗಳು ಸಾಕ್ಷಿ ನುಡಿದಿವೆ. ಈ ಸಾಲಿಗೆ ಇಂದು ಮತ್ತೊಂದು ಹೇಸಿಗೆಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಕಳೆದ ಕೆಲ ದಿನಗಳಿಂದ ಉತ್ತರಪ್ರದೇಶದಲ್ಲಿ ಸ್ಥಳೀಯ ಚುನಾವಣೆಗಳು ನಡೆಯುತ್ತಿದ್ದು, ಇತ್ತೀಚೆಗೆ ಫಲಿತಾಂಶ ಸಹ ಹೊರಬಿದ್ದು, ಸದ್ದು ಮಾಡಿತ್ತು. ಈ ನಡುವೆ ಗುರುವಾರ ಸ್ಥಳೀಯ ಚುಣಾವಣೆಗೆ ನಾಮಪತ್ರ ಸಲ್ಲಿಸಲು ಹೋಗುತ್ತಿದ್ದ ಮಹಿಳಾ ಕಾರ್ಯಕರ್ತೆಯು ಆಕ್ರಮಣಕ್ಕೆ ಒಳಗಾಗಿದ್ದು, ಪ್ರತಿಪಕ್ಷದ ಇಬ್ಬರು ಗಂಡಸರು ಆಕೆಯ ಸೀರೆಯನ್ನು ಎಳೆದಿರುವ ಹೇಯ ಘಟನೆ ಬೆಳಕಿಗೆ ಬಂದಿದೆ.



    ಹಲ್ಲೆಗೆ ಒಳಗಾದ ಮಹಿಳೆ ಸಮಾಜವಾದಿ ಪಕ್ಷದ ಬೆಂಬಲಿಗರು ಎಂದು ತಿಳಿದುಬಂದಿದ್ದು, ಅವರು ಬ್ಲಾಕ್ ಪಂಚಾಯತ್‌ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಭ್ಯರ್ಥಿಯೊಬ್ಬರ ಜೊತೆಗೆ ತೆರಳಿದ್ದರು. ಆದರೆ, ಈ ವೇಳೆ ಪ್ರತಿಪಕ್ಷದ ಕೆಲ ದುಷ್ಕರ್ಮಿಗಳು ಮಹಿಳೆಯ ಮೇಲೆ ಆಕ್ರಮಣ ಮಾಡುತ್ತಿರುವುದು ಕ್ಯಾಮಾರದಲ್ಲಿ ಸೆರೆಯಾಗಿದೆ. ಪ್ರಸ್ತುತ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.


    ಇದಲ್ಲದೆ, ಗುರುವಾರ ರಾಜ್ಯದ 14 ಸ್ಥಳಗಳಲ್ಲಿ ಚುನಾವಣೆ ಸಂಬಂಧ ಘರ್ಷಣೆಗಳು ನಡೆದಿದೆ ಎಂದು ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.


    ಇದನ್ನೂ ಓದಿ: Petrol Price Today| ದಿನೇ ದಿನೇ ದುಬಾರಿಯಾಗುತ್ತಿದೆ ಪೆಟ್ರೋಲ್; ರಾಜಸ್ಥಾನದಲ್ಲಿ112ಕ್ಕೇರಿದ ತೈಲ ಬೆಲೆ!


    "825 ಬ್ಲಾಕ್‌ ಪಂಚಾಯತ್ ಮುಖಂಡರನ್ನು ಆಯ್ಕೆ ಮಾಡುವ ಚುನಾವಣೆಯು ಶನಿವಾರ ನಡೆಯಲಿದೆ. ನಾಮಪತ್ರ ಸಲ್ಲಿಸಲು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಅದಾಗ್ಯೂ 14 ಪ್ರದೇಶಗಳಲ್ಲಿ ಹಿಂಸಾಚಾರ ನಡೆದಿದೆ. ಗುಂಪುಗಳ ನಡುವೆ ನಡೆದಿರುವ ಘರ್ಷಣೆಯ ವರದಿಗಳು ನಮ್ಮಲ್ಲಿವೆ. ಹಿಂಸಾಚಾರದಲ್ಲಿ ಭಾಗಿಯಾಗಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶಾಂತ್‌ ಕುಮಾರ್ ಹೇಳಿದ್ದಾರೆ.


    ಇದನ್ನೂ ಓದಿ: ಮಧ್ಯ ಪ್ರದೇಶದಲ್ಲಿ ನಿದ್ದೆ ಮಾಡುವಾಗ ಪತಿಯ ಕೊಲೆ: ಪತ್ನಿಯ ಮೇಲೆ ಪೊಲೀಸರಿಗೆ ಅನುಮಾನ..!


    ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಈ ಚುನಾವಣೆಯು ಸಾಕಷ್ಟು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಭಾರಿ ಅಂತರದಲ್ಲಿ ಗೆದ್ದಿತ್ತು. ಬ್ಲಾಕ್‌ ಪ್ರಮುಖ್‌ ಚುನಾವಣೆಗಳು ವಿಧಾನಸಭಾ ಚುನಾವಣೆಗೂ ಮುಂಚೆ ನಡೆಲಿರುವ ಕೊನೆಯ ಗ್ರಾಮೀಣ ಚುನಾವಣೆಯಾಗಿದೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    Published by:MAshok Kumar
    First published: