ಲಕ್ನೋ: ಸಾಮಾನ್ಯವಾಗಿ ಶಾಲೆಗಳಲ್ಲಿ ಮಕ್ಕಳಿಗೆ ಬೆಳಗಿನ ಪ್ರಾರ್ಥನೆ (Prayer) ಕಡ್ಡಾಯ. ಹಿಂದೆ ಗುರುಕುಲಗಳಲ್ಲಿ ತರಗತಿ ಪ್ರಾರಂಭಿಸುವ ಮುನ್ನ ಗುರುಗಳು ದೇವರ ಪ್ರಾರ್ಥನಾ ಗೀತೆಯನ್ನು ಮಕ್ಕಳಿಗೆ (Children's) ಹಾಡಿಸಿ ನಂತರ ಪಾಠ ಆರಂಭಿಸುತ್ತಿದ್ದರು. ಇದೇ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬರಲಾಗಿದೆ. ಜೊತೆಗೆ ಸರ್ಕಾರ ಶಾಲೆಯಲ್ಲಿ (Government School) ರಾಷ್ಟ್ರೀಯ ಗೀತೆಯನ್ನು ಕೂಡ ಹಾಡುವ ನಿಯಮವನ್ನು ಜಾರಿಗೆ ತಂದಿದೆ. ಈ ನಡುವೆ ಉತ್ತರ ಪ್ರದೇಶದ (Uttar Pradesh) ಬರೇಲಿ ಜಿಲ್ಲೆಯಲ್ಲಿರುವ (Bareilly) ಸರ್ಕಾರಿ ಶಾಲೆಯಲ್ಲಿ ಮಕ್ಕಳು ಉರ್ದು ಭಾಷೆಯ (Urdu Language) ಪ್ರಾರ್ಥನಾ ಗೀತೆಯನ್ನು ಹಾಡಿದ್ದಕ್ಕೆ ಪ್ರಾಂಶುಪಾಲರನ್ನು ರಾಜ್ಯದ ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ. ಈ ಬಗ್ಗೆ ಬಲಪಂಥಿಯ ಗುಂಪುಗಳು ಪೊಲೀಸರಿಗೆ (Police) ದೂರು ನೀಡಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ, ಆದರೆ ಯಾರನ್ನೂ ಇದುವರೆಗೂ ಬಂಧಿಸಿಲ್ಲ.
Two teachers in UP's Bareilly were suspended and booked under IPC sections 298, 153 after a purported video of a school in Faridpur area where students can be heard reciting "Mere Allah, burai se bachana mujhko" during morning prayers, surafaced.
Video via @KanwardeepsTOI pic.twitter.com/DUIYyZLX8H
— Piyush Rai (@Benarasiyaa) December 23, 2022
ಮೇರೆ ಅಲ್ಲಾ ಬುರೈ ಸೆ ಬಚಾನಾ ಮುಜ್ಕೋ ಪ್ರಾರ್ಥನಾ ಗೀತೆ
ಶಾಲೆಯ ಬೆಳಗಿನ ಪ್ರಾರ್ಥನೆ ವೇಳೆ ಮಕ್ಕಳು ಜನಪ್ರಿಯ ಉರ್ದು ಭಾಷೆಯ “ಲ್ಯಾಬ್ ಪೆ ಆತಿ ಹೈ ದುವಾ ಬಂಕೆ ತಮನ್ನಾ ಮೇರಿ”, “ಮೇರೆ ಅಲ್ಲಾ ಬುರೈ ಸೆ ಬಚಾನಾ ಮುಜ್ಕೋ” ಎಂದು ಪ್ರಾರ್ಥನಾ ಗೀತೆಯನ್ನು ಹಾಡಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಶಾಲೆಯ ಪ್ರಾಂಶುಪಾಲರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಕ್ಕಳು "ಮೇರೆ ಅಲ್ಲಾ ಬುರೈ ಸೆ ಬಚಾನಾ ಮುಜ್ಕೋ" ಎಂಬ ಸಾಲುಗಳನ್ನು ಹೇಳುತ್ತಾ ಗೀತೆಯನ್ನು ಹಾಡಿರುವುದನ್ನು ನಾವು ಕೇಳಬಹುದಾಗಿದೆ.
ಪ್ರಾಂಶುಪಾಲರನ್ನು ಅಮಾನತುಗೊಳಿಸಿದ ಶಿಕ್ಷಣ ಇಲಾಖೆ
ಈ ಪ್ರಾರ್ಥನೆಯು ಸರ್ಕಾರಿ ಶಾಲೆಗಳ ದೈನಂದಿನ ಪ್ರಾರ್ಥನಾ ವೇಳಾಪಟ್ಟಿಯಲ್ಲಿ ಇಲ್ಲ. ಆದರೆ ಧರ್ಮವನ್ನು ಬಿಂಬಿಸಿ ಹಾಡಿರುವುದರಿಂದ ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಇದಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಪ್ರಾರ್ಥನೆಯು ಅನುಮೋದಿತ ಪಟ್ಟಿಯ ಭಾಗವಾಗಿರಲಿಲ್ಲ ಮತ್ತು ಸಮುದಾಯಕ್ಕೆ ಸಂಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಈ ಘಟನೆ ಸಂಬಂಧ ದೊರೆತ ಮಾಹಿತಿ ಮೇರೆಗೆ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಪ್ರಾರ್ಥನಾ ಗೀತೆ 1902 ರಲ್ಲಿ ಉರ್ದು ಕವಿ ಮೊಹಮ್ಮದ್ ಇಕ್ಬಾಲ್ರಿಂದ ರಚನೆ
ಈ ಪ್ರಾರ್ಥನಾ ಗೀತೆಯನ್ನು 1902 ರಲ್ಲಿ ಉರ್ದು ಕವಿ ಮೊಹಮ್ಮದ್ ಇಕ್ಬಾಲ್ ಬರೆದಿದ್ದಾರೆ ಮತ್ತು ಇವರು ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ" ಎಂಬ ಪ್ರಸಿದ್ಧ ಹಾಡನ್ನು ಸಹ ಇವರೇ ರಚಿಸಿದ್ದು.
ಇದನ್ನೂ ಓದಿ: Udupi: ಹೋರಾಟಕ್ಕೆ ಸಜ್ಜಾಗ್ತಿದ್ದಾರೆ ಸಮುದ್ರದ ಮಕ್ಕಳು! ಉಡುಪಿ ಮೀನುಗಾರರ ಜೀವಕ್ಕೆ ಬೇಕಿದೆ ರಕ್ಷಣೆ
ಇದೇ ರೀತಿ 2019 ರಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಉರ್ದು ಗೀತೆ ಹಾಡಿದ್ದಕ್ಕೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಮುಖ್ಯೋಪಾಧ್ಯಾಯರೊಬ್ಬರನ್ನು ಅಮಾನತುಗೊಳಿಸಲಾಗಿತ್ತು. ಈ ಕುರಿತಂತೆ ವಿಶ್ವ ಹಿಂದೂ ಪರಿಷತ್ ಸ್ಥಳೀಯ ಘಟಕ ನೀಡಿದ ದೂರಿನ ಮೇರೆಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು.
ಕಳೆದ ತಿಂಗಳು ಉಡುಪಿಯಲ್ಲಿ 'ಆಝಾನ್' ಪ್ರದರ್ಶನ
ಕಳೆದ ತಿಂಗಳು ಉಡುಪಿ ಜಿಲ್ಲೆಯಲ್ಲಿ ಬಲಪಂಥೀಯ ಕಾರ್ಯಕರ್ತರು ಖಾಸಗಿ ಶಾಲೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ “ಆಝಾನ್” ಅನ್ನು ಪ್ರದರ್ಶಿಸಿದ್ದರು. ಶಂಕರನಾರಾಯಣ ಗ್ರಾಮದ ಮದರ್ ತೆರೇಸಾ ಸ್ಮಾರಕ ಶಾಲೆಯಲ್ಲಿ ಈ ಘಟನೆ ನಡೆದಿತ್ತು. ನಂತರ ಈ ಬಗ್ಗೆ ಕಾರ್ಯಕರ್ತರು ಪ್ರಶ್ನಿಸಿದಕ್ಕೆ ಬಳಿಕ ಶಾಲಾ ಅಧಿಕಾರಿಗಳು ಕ್ಷಮೆಯಾಚಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ