UP Polls: ಮತದಾರರಲ್ಲಿ ಜಾಗೃತಿ ವಾರಣಾಸಿಯಲ್ಲಿ Pink Rally; ಭಾನುವಾರ ಕ್ಷೇತ್ರಕ್ಕೆ PM Modi

ವಾರಣಾಸಿ ಕ್ಷೇತ್ರದಲ್ಲಿ ಕೊನೆಯ ಹಂತದ ಅಂದರೆ ಏಳನೇ ಹಂತದ ಚುನಾವಣೆ ನಡೆಯಲಿದೆ. ಮಾರ್ಚ್​​ 7ರಂದು ಕ್ಷೇತ್ರದ ಮತದಾರರು ಮತ ಚಲಾಯಿಸಲಿದ್ದಾರೆ. 

ಪಿಂಕ್​ ಜಾಥಾ

ಪಿಂಕ್​ ಜಾಥಾ

 • Share this:
  ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಐದನೇ ಹಂತದ ಮತದಾನಕ್ಕೆ ಮುನ್ನ, ವಾರಣಾಸಿಯಲ್ಲಿ (Varanasi) ಮಹಿಳೆಯರು ಪಿಂಕ್ ರಾಲಿ  (Pink Rally) ನಡೆಸಿ ಗಮನ ಸೆಳೆದರು. ಜನರಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಮತದಾನದ ಜಾಗೃತಿ ಮೂಡಿಸಲು ಅವರು ಈ ರಾಲಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ನೂರಾರು ಮಹಿಳೆರಯು ಈ ರಾಲಿ ನಡೆಸಿದರು. ಈ ವೇಳೆ ಮಹಿಳೆಯರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮನವಿ ಮಾಡಿದರು.

  10 ಕಿ.ಮೀ ಸಾಗಿದ ಜಾಥಾ
  ವಾರಣಾಸಿಯ ಪೊಲೀಸ್ ಲೈನ್ ಕ್ರಾಸ್‌ರೋಡ್‌ನಿಂದ ಪ್ರಾರಂಭವಾದ ಈ ಸ್ಕೂಟಿ ರಾಲಿಯು ಸುಮಾರು 10 ಕಿಲೋಮೀಟರ್‌ಗಳು ಸಾಗಿತು. ಪಿಂಕ್​ (ತಿಳಿ ಗುಲಾಬಿ) ಬಣ್ಣಧ ಉಡುಗೆ ಉಟ್ಟ ಶಿಕ್ಷಕರು ಸ್ಕೂಟಿಯಲ್ಲಿ ಈ ಜಾಗೃತಿ ಜಾಥಾ ನಡೆಸಿದರು. ಈ ವೇಳೆ ಮತದಾರರಿಗೆ, ವಿಶೇಷವಾಗಿ ಮಹಿಳಾ ಮತದಾರರಿಗೆ ಮತದಾನದ ಶಕ್ತಿಯ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದರು.

  ಮತದಾರರಲ್ಲಿ ಮತಚಲಾಯಿಸಲು ಅರಿವು
  ಈ ಜಾಗೃತಿ ಜಾಥಾ ಕುರಿತು ಮಾತನಾಡಿದ ಶಿಕ್ಷಕರೊಬ್ಬರು, ಮಹಿಳಾ ಮತದಾರರು ಸಾಮಾನ್ಯವಾಗಿ ಕಡಿಮೆ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ. ಆದ್ದರಿಂದ ಈ ಜಾಥಾ ಮೂಲಕ ಅವರಿಗೆ ಅರಿವು ಮೂಡಿಸುತ್ತಿದ್ದೇವೆ. ಈ ಮೂಲಕ ಮಹಿಳೆಯರನ್ನು ಹೊರಗೆ ಬಂದು ಮತದಾನ ಮಾಡಲು ಪ್ರೇರೇಪಿಸಲು ಬಯಸುತ್ತೇವೆ ಎಂದರು

  ಇದನ್ನೂ ಓದಿ : ವಾಯು ಪ್ರದೇಶ ಬಂದ್​; ದೆಹಲಿಗೆ ಹಿಂದಿರುಗಿದ ಏರ್ ​ಇಂಡಿಯಾ ವಿಮಾನ

  ಏಳನೇ ಹಂತದ ಚುನಾವಣೆಗೆ ಸಜ್ಜಾದ ವಾರಣಾಸಿ
  ಈಗಾಗಲೇ ನಾಲ್ಕು ಹಂತದ ಮತದಾನ ನಡೆದಿರುವ ಉತ್ತರ ಪ್ರದೇಶದಲ್ಲಿ ವಾರಣಾಸಿ ಕ್ಷೇತ್ರದಲ್ಲಿ ಕೊನೆಯ ಹಂತದ ಅಂದರೆ ಏಳನೇ ಹಂತದ ಚುನಾವಣೆ ನಡೆಯಲಿದೆ. ಮಾರ್ಚ್​​ 7ರಂದು ಕ್ಷೇತ್ರದ ಮತದಾರರು ಮತ ಚಲಾಯಿಸಲಿದ್ದಾರೆ.  ಇದಕ್ಕೂ ಮುನ್ನ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಳೆದ ತಿಂಗಳು ವಾರಣಾಸಿಯಲ್ಲಿ ಕಾರ್ಮಿಕರೊಂದಿಗೆ ಡಿಜಿಟಲ್ ಸಂವಾದ ನಡೆಸಿದ್ದರು.

  ಇದನ್ನೂ ಓದಿ: ಶಾಂತಿ ಹಾಗೂ ಸ್ಥಿರತೆ ಕಾಪಾಡುವಂತೆ ವಿಶ್ವಸಂಸ್ಥೆಯಲ್ಲಿ ಭಾರತ ಮನವಿ

  ಭಾನುವಾರ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಪ್ರವಾಸ
  ಈ ಎರಡು ದಿನಗಳ ಪ್ರವಾಸ ನಡೆಸಲಿರುವ ಪ್ರಧಾನಿ ಮೋದಿ ಸಾರ್ವಜನಿಕ ಸಭೆಗಳು ಮತ್ತು ರೋಡ್ ಶೋಗಳನ್ನು ನಡೆಸುವ ಸಾಧ್ಯತೆ ಇದೆ. ಪ್ರಧಾನಿ ಅವರನ್ನು ಸ್ವಾಗತಿಸಲು ಪಕ್ಷದ ಪದಾಧಿಕಾರಿಗಳು ಪ್ರದೇಶದಲ್ಲಿ ಜಮಾಯಿಸಲಿದ್ದಾರೆ. ಪ್ರಧಾನಿ ಭಾನುವಾರ ಸುಮಾರು 2200 ಕಾರ್ಮಿಕರೊಂದಿಗೆ ನೇರ ಸಂವಾದ ನಡೆಸಲಿ್ದಾರೆ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಬಹುದು ಎಂದು ವರದಿಯಾಗಿದೆ. ಪ್ರಧಾನಿ ಭೇಟಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದರು.

  ಇಂದು ವಾರಣಾಸಿಯಲ್ಲಿ ಅರವಿಂದ್​ ಕೇಜ್ರಿವಾಲ್​ ಪ್ರಚಾರ

  ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಇಂದು ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡಿದ್ದು, ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮತ್ತು ಸಾರ್ವಜನಿಕ ಸಭೆಗಳ ಮೂಲಕ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. ಉತ್ತರ ಪ್ರದೇಶದ ಎಎಪಿಯ ಚುನಾವಣಾ ಉಸ್ತುವಾರಿ ಅಭಿನವ್ ರೈ ಅವರು ಕಳೆದ ವಾರ ದೆಹಲಿ ಮುಖ್ಯಮಂತ್ರಿ ಅವರು ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ರಾಜ್ಯದ ಸಾರ್ವಜನಿಕರಲ್ಲಿ ಮನವಿ ಮಾಡಲಿದ್ದರು. ಈ ಹಿನ್ನಲೆ ಅವರು ಕ್ಷೇತ್ರದಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಇನ್ನು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಮಸೌಲಿ, ಜೈದ್‌ಪುರ, ಬಾರಾಬಂಕಿ ಸೇರಿದಂತೆ ಹಲವು ಕಡೆ ಬಿರುಸಿನ ಪ್ರಚಾರ ನಡೆಸಿದ್ದಾರೆ.
  Published by:Seema R
  First published: