ಸುಹಲೇದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಮುಖ್ಯಸ್ಥ ಮತ್ತು ಯೋಗಿ ಆದಿತ್ಯನಾಥ್ ಕ್ಯಾಬಿನೆಟ್‌ನ ಮಾಜಿ ಯುಪಿ ಮಂತ್ರಿ ಓಂ ಪ್ರಕಾಶ್ ರಾಜಭರ್ ಅವರು ಆಡಳಿತಾರೂಡ ಭಾರತೀಯ ಜನತಾ ಪಕ್ಷದ ಜೊತೆಗಿನ ನಿಕಟ ಸಂಬಂಧವನ್ನು ನಾನು ಹೊಂದಿಲ್ಲ ಎಂದು ಹೇಳಿದ್ದಾರೆ.
ಶನಿವಾರ ವಾರಣಾಸಿಯಲ್ಲಿದ್ದ ರಾಜಭರ್ ಅವರು ಬಿಜೆಪಿಯೊಂದಿಗಿನ ಯಾವುದೇ ಮೈತ್ರಿ ಮಾಡಿಕೊಳ್ಳಲಾಗುವುದು ಎನ್ನುವುದರ ಬಗ್ಗೆ ಊಹಾಪೋಹಗಳನ್ನು ನಿರಾಕರಿಸಿದರು ಮತ್ತು ಕಳೆದ ಮೂರು ವರ್ಷಗಳಿಂದ ತಾವು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಪುನರುಚ್ಚರಿಸುತ್ತಿರುವುದಾಗಿ ಹೇಳಿದರು. ಪಕ್ಷವು ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ರಾಜ್ಭರ್ ಇತ್ತೀಚೆಗೆ ಯುಪಿ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಅವರನ್ನು ಲಕ್ನೋದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿದ್ದರು, ಇದು ಹಿಂದಿನ ಮಿತ್ರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಾಗಿದೆ ಎನ್ನುವ ಊಹಾಪೋಹಗಳಿಗೆ ಉತ್ತೇಜನ ನೀಡಿತ್ತು.
ಯಾವುದಾದರು ಪಕ್ಷದ ಜೊತೆಗೆ ಒಟ್ಟಿಗೆ ಹೋಗಲು ಅವಕಾಶವಿದ್ದರೆ, ಎಸ್‌ಪಿ ಮೊದಲ ಸ್ಥಾನದಲ್ಲಿದೆ, ಬಿಎಸ್‌ಪಿ ಎರಡನೇ ಸ್ಥಾನದಲ್ಲಿದೆ ಮತ್ತು ಕಾಂಗ್ರೆಸ್ ಆದ್ಯತೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ನಾವು ಎಂದಿಗೂ ಬಿಜೆಪಿಯ ಸ್ನೇಹಿತರಾಗಲು ಸಾಧ್ಯವಿಲ್ಲ. ಹಿಂದುಳಿದ ಜಾತಿಗಳ ಜಾತಿವಾರು ಜನಗಣತಿಯ ಬಗ್ಗೆ ನಾವು ಬಿಜೆಪಿಯೊಂದಿಗೆ ಮಾತನಾಡಿದ್ದೇವೆ, ಆದರೆ ಎರಡು ವರ್ಷಗಳ ಕಾಲ ಕಾದರೂ ಅದು ಆಗಲಿಲ್ಲ. ಈಗ ಅವರು (ಬಿಜೆಪಿ) ನಮ್ಮ ಹಿಂದಿನ ಬೇಡಿಕೆಗಳೊಂದಿಗೆ ಹಿಂದುಳಿದ ಜಾತಿಯ ಸಿಎಂ ಎಂದು ಘೋಷಿಸಬೇಕು "ಎಂದು ರಾಜಭರ್ ಮಾಧ್ಯಮಗಳಿಗೆ ತಿಳಿಸಿದರು.
ಯುಪಿಯಲ್ಲಿ ಹಿಂದುಳಿದ ಜಾತಿಯ ಉಪ ಮುಖ್ಯಮಂತ್ರಿಯ ಬಗ್ಗೆ ಪ್ರಶ್ನಿಸಿದಾಗ, ರಾಜಭರ್ ಉತ್ತರಿಸಿದರು, "ಉಪ ಮುಖ್ಯಮಂತ್ರಿ ಕೂಲಿಯವನೇ ಹೊರತು, ಮಾಲೀಕನಲ್ಲ. ಗ್ರಾಮೀಣ ಭಾಗದಲ್ಲಿ ‘ಡೆಪ್ಯೂಟಿ ಯಾನಿ ಚುಪ್’ (ಡೆಪ್ಯೂಟಿ ಎಂದರೆ ಮೌನ) ಎಂಬ ಮಾತಿದೆ. ದೇಶದಾದ್ಯಂತ ಆಂದೋಲನದ ನಂತರ, ನೀಟ್‌ನಲ್ಲಿ ಮೀಸಲಾತಿಯನ್ನು ಬಿಜೆಪಿ ಬಲವಂತವಾಗಿ ಜಾರಿಗೊಳಿಸಿತು. ಅವರು ನ್ಯಾಯಾಲಯದ ಆದೇಶದ ನಂತರ ಈ ಕೆಲಸ ಮಾಡಿತೆ ಹೊರತು, ಅವರು ಅದನ್ನು ತಮ್ಮ ಸ್ವಂತ ಇಚ್ಛೆಯಿಂದ ಇದನ್ನು ಜಾರಿಗೊಳಿಸಲಿಲ್ಲ.
ಬ್ರಾಹ್ಮಣ ಮತಗಳನ್ನು ನಂಬಿಕೊಂಡು ಪ್ರಚಾರ ಮಾಡುತ್ತಿರುವ ಬಿಜೆಪಿಯ ಮೇಲೆ ದಾಳಿ ಮಾಡಿದ ರಾಜಭರ್, "ಬ್ರಾಹ್ಮಣರು ತಮ್ಮ ಪಕ್ಷದಲ್ಲಿಯೇ ಉಳಿಯುತ್ತಾರೆ ಎಂದು ಬಿಜೆಪಿ ಒಪ್ಪಂದ ಮಾಡಿಕೊಂಡಿದೆಯೇ?. ಬ್ರಾಹ್ಮಣರು ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್ ಜೊತೆಗಿದ್ದಾರೆ ಮತ್ತು ನಮ್ಮೊಂದಿಗಿದ್ದಾರೆ. 'ಹಿಂದುತ್ವ' ವಿಚಾರದಲ್ಲಿ ಬಿಜೆಪಿಯ ಮೇಲೆ ದಾಳಿ ಮಾಡಿದ ರಾಜಭರ್, "ದೆಹಲಿಯಿಂದ ಯುಪಿಯವರೆಗೆ ಬಿಜೆಪಿ ಅಧಿಕಾರದಲ್ಲಿದೆ, ಹಾಗಾದರೆ ಹಿಂದುತ್ವ ಏಕೆ ಅಪಾಯದಲ್ಲಿದೆ? ನೀವು ಯಾಕೆ ಭದ್ರತೆ ನೀಡಬಾರದು ನಿಮ್ಮ ಹಿಂದುತ್ವಕ್ಕೆ ? ಕಾಂಗ್ರೆಸ್ ನಾಶಕ್ಕೆ ಕಾರಣ ಗ್ರಾಮವನ್ನು ಬಿಟ್ಟು ದೆಹಲಿಯ ರಾಜಕೀಯ ಮಾಡಲು ಹೊರಟಿದ್ದು, ಪ್ರಿಯಾಂಕಾ ಹಳ್ಳಿ ಹಳ್ಳಿಗೆ ಹೋದರೆ ಪಕ್ಷವು ಮತ್ತೆ ಬಲಗೊಳ್ಳುತ್ತದೆ.
ಇತ್ತೀಚೆಗೆ ಲಕ್ನೋದಲ್ಲಿ ಇರುವ ಯುಪಿ ಬಿಜೆಪಿ ಮುಖ್ಯಸ್ಥರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ನಂತರ, ರಾಜಭರ್ ಹೀಗೆ ಹೇಳಿದ್ದರು, "ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿಯು ಸೌಜನ್ಯದ ಭೇಟಿಯಾಗಿದ್ದರೂ, ರಾಜಕೀಯದಲ್ಲಿ ಕಾಲಕಾಲಕ್ಕೆ ಎಲ್ಲವನ್ನು ಗಣನೆಗೆ ತೆಗೆದುಕೊಳ್ಳಬೇಕು. ಇಬ್ಬರು ದೊಡ್ಡ ನಾಯಕರು ವೈಯಕ್ತಿಕ ಸಭೆ ಕೂಡ ನಡೆಸಿದರೆ ತಪ್ಪೇನು. ಮಮತಾ ಬ್ಯಾನರ್ಜಿ ಮತ್ತು ಸೋನಿಯಾ ಗಾಂಧಿ ಭೇಟಿ, ಮಾಯಾವತಿ ಮತ್ತು ಅಖಿಲೇಶ್ ಭೇಟಿ, ಹೀಗೆ ರಾಜಕೀಯದಲ್ಲಿ ಏನು ಬೇಕಾದರೂ ಸಾಧ್ಯ ಎಂದರು.
ಈ ಹಿಂದೆ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದರು ಮತ್ತು ಅಖಿಲೇಶ್ ಯಾದವ್ ಚಿಕ್ಕಪ್ಪ ಮತ್ತು ಪಿಎಸ್‌ಪಿಎಲ್ ಮುಖ್ಯಸ್ಥ ಶಿವಪಾಲ್ ಸಿಂಗ್ ಯಾದವ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರು ಇತ್ತೀಚೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ