ಲಕ್ನೋ(ಜ.19): ಪ್ರಗತಿಶೀಲ ಸಮಾಜವಾದಿ ಪಕ್ಷ ಲೋಹಿಯಾ ಸಂಸ್ಥಾಪಕ ಮತ್ತು ಸಮಾಜವಾದಿ ಪಕ್ಷದ (Samajwadi party) ಶಾಸಕ ಶಿವಪಾಲ್ ಸಿಂಗ್ ಯಾದವ್ (Shivpal Singh Yadav) ಅವರು ಸೋದರಳಿಯ ಅಖಿಲೇಶ್ ಯಾದವ್ (Akhilesh Yadav) ಅವರನ್ನು ತಮ್ಮ ನಾಯಕನನ್ನಾಗಿ ಒಪ್ಪಿಕೊಂಡಿದ್ದಾರೆ ಮತ್ತು ಎಸ್ಪಿ ಅವರ ಪಕ್ಷವಾಗಿದೆ ಎಂದು ಬುಧವಾರ ಹೇಳಿದ್ದಾರೆ. ಎಸ್ಪಿ ಹುದ್ದೆ ಇನ್ನೂ ಸಿಕ್ಕಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಾದವ್, 'ಅಖಿಲೇಶ್ ಯಾದವ್ ನನ್ನ ಸೋದರಳಿಯ ಮತ್ತು ಎಸ್ಪಿ ಅಧ್ಯಕ್ಷ. ಅವರನ್ನು ನಾಯಕನನ್ನಾಗಿ ಸ್ವೀಕರಿಸಿದ್ದೇನೆ. ಅವರಂತೆ ನಾನು ಕೂಡ ಎಸ್ಪಿ ಶಾಸಕ. ಎಸ್ಪಿ ನನ್ನ ಪಕ್ಷವಾಗಿದ್ದು, ನಾನು ಈ ಹಿಂದೆಯೂ ಈ ಹುದ್ದೆಗಳನ್ನು ನಿಭಾಯಿಸಿದ್ದೇನೆ ಎಂದಿದ್ದಾರೆ.
ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಸಂಕಲ್ಪವನ್ನು ಎಸ್ಪಿ ನಾಯಕ ಶಿವಪಾಲ್ ಸಿಂಗ್ ಯಾದವ್ ವ್ಯಕ್ತಪಡಿಸಿದ್ದು, ಪಕ್ಷದ ಜನತೆ ಹೋರಾಟದ ಹಾದಿಯಲ್ಲಿ ಸಾಗಲಿಲಿದ್ದೇವೆ, ಹೀಗಿರುವಾಗ ಲಂಕೆ ಹೊತ್ತಿ ಉರಿಯುವುದು ನಿಶ್ಚಿತ ಎಂದರು. 2024 ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷಗಳ ವೇದಿಕೆ ರಚಿಸುವ ಪ್ರಶ್ನೆಗೆ ಉತ್ತರಿಸಿದ ಶಿವಪಾಲ್ ಉತ್ತರ ಪ್ರದೇಶದಿಂದ ಬಿಜೆಪಿಯನ್ನು ತೊಡೆದುಹಾಕಲು ಎಸ್ಪಿ ಮಾತ್ರ ಸಮರ್ಥವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Lalu Prasad Yadav: ಲಾಲು ಪ್ರಸಾದ್ ಯಾದವ್ಗೆ ಮಗಳಿಂದಲೇ ಕಿಡ್ನಿ ದಾನ: ಬಿಜೆಪಿ ನಾಯಕರ ಶ್ಲಾಘನೆ
ಬುಧವಾರ ರಾತ್ರಿ ಜಿಲ್ಲೆಯ ಫೆಫ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ನಾಯಕ ಮತ್ತು ಶಾಸಕ ಯಾದವ್, ಎಸ್ಪಿಯನ್ನು ಶ್ರೀರಾಮ ಮತ್ತು ಕೃಷ್ಣನ ಅನುಯಾಯಿ ಎಂದು ಬಣ್ಣಿಸಿದರು. ನಾವು ಶ್ರೀರಾಮ ಮತ್ತು ಕೃಷ್ಣನನ್ನು ನಂಬಿ ಅವರ ಚಿಂತನೆಗಳನ್ನು ಪಾಲಿಸುವ ಜನರು, ಎಸ್ಪಿ ಜನರು ಹೋರಾಟದ ಹಾದಿಯಲ್ಲಿ ಸಾಗುತ್ತಾರೆ ಮತ್ತು ಲಂಕೆ ಉರಿಯುವುದು ನಿಶ್ಚಿತ ಎಂದರು.
ಅಪರ್ಣಾ ಯಾದವ್ ಎಸ್ಪಿಗೆ ಸೇರ್ಪಡೆಯಾಗುವ ಬಗ್ಗೆ ಮಾತನಾಡಿದ ಶಿವಪಾಲ್, ಅವರು ಕುಟುಂಬಕ್ಕೆ ಸೊಸೆ ಮತ್ತು ಕುಟುಂಬದ ಸಂತೋಷ ಹಾಗೂ ದುಃಖದಲ್ಲಿ ಯಾವಾಗಲೂ ಭಾಗವಹಿಸುತ್ತಾರೆ ಎಂದು ಹೇಳಿದರು. ವರುಣ್ ಗಾಂಧಿ ಎಸ್ಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹದ ಕುರಿತು ಮಾತನಾಡಿದ ಯಾದವ್, ಭ್ರಷ್ಟ ಬಿಜೆಪಿ ಸರ್ಕಾರವನ್ನು ತೊಡೆದುಹಾಕಲು ಯಾರೇ ಬಂದರೂ ಸ್ವಾಗತ ಎಂದಿದ್ದಾರೆ.
ಇದನ್ನೂ ಓದಿ: Madrasa: ಉತ್ತರ ಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲಿಯೂ ರಚನೆಯಾಗುತ್ತಾ ಮದರಸಾ ಶಿಕ್ಷಣ ಮಂಡಳಿ?; ಇಂದು ಮಹತ್ವದ ಸಭೆ
ಇದನ್ನೂ ಓದಿ:
ಇನ್ನೊಂದೆಡೆ ಕಾಂಗ್ರೆಸ್ ನ ‘ಭಾರತ್ ಜೋಡೋ ಯಾತ್ರೆ’ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಆಯೋಜಿಸಿದ್ದ ವಿರೋಧ ಪಕ್ಷಗಳ ರ್ಯಾಲಿಯಲ್ಲಿ ಅಖಿಲೇಶ್ ಯಾದವ್ ಭಾಗವಹಿಸಿದ ಬಗ್ಗೆ ಉಲ್ಲೇಖಿಸಿ, ಎಸ್ಪಿಗೆ ರಾಹುಲ್ ಗಾಂಧಿಗೆ ಇಷ್ಟವಿಲ್ಲವೇ? ಎಂದು ಪ್ರಶ್ನಿಸಲಾಗಿದೆ. ಈ ಕುರಿತು ಮಾತನಾಡಿದ ಶಿವಪಾಲ್ ಯಾದವ್, “ರಾಹುಲ್ ಗಾಂಧಿಯವರಿಗೆ ಶುಭಾಶಯಗಳು. ಅವರದ್ದು ಪ್ರತ್ಯೇಕ ಪಕ್ಷ. ಶ್ರೀನಗರದಲ್ಲಿ ನಡೆಯಲಿರುವ ಕಾಂಗ್ರೆಸ್ ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕೇ ಎಂಬುದನ್ನು ಪಕ್ಷದ ನಾಯಕತ್ವ ನಿರ್ಧರಿಸಲಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ