ಮಹಿಳಾ ಸುರಕ್ಷತೆಗೆ ಒತ್ತು; ಪೋರ್ನ್ ವಿಡಿಯೋ ವೀಕ್ಷಿಸುವವರ ಮೇಲೆ ಪೊಲೀಸರ ಹದ್ದಿನ ಕಣ್ಣು!

2017 ರಲ್ಲಿ ಪೋರ್ನ್ ವೆಬ್‌ಸೈಟ್ ಪೋರ್ನ್‌ಹಬ್ ನೀಡಿರುವ ಮಾಹಿತಿ ಪ್ರಕಾರ ಆನ್ ಲೈನ್ ನಲ್ಲಿ ಪೋರ್ನ್ ವೀಕ್ಷಿಸುವರ ಸಂಖ್ಯೆಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ವೀಕ್ಷಿಸುತ್ತಾರೆಂಬ ವಿಷಯವನ್ನು ಬಹಿರಂಗಪಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಉತ್ತರಪ್ರದೇಶದ ಪೊಲೀಸರು ಮಹಿಳೆಯರ ಸುರಕ್ಷತೆಗಾಗಿ ಹೊಸದೊಂದು ತಂತ್ರ ರೂಪಿಸಿದ್ದಾರೆ. ಆನ್ ಲೈನ್ ನಲ್ಲಿ ಪೋರ್ನ್ ವಿಡಿಯೋ ವೀಕ್ಷಿಸುವ ಜನರ ಮೇಲೆ ಹದ್ದಿನ ಕಣ್ಣಿಡಲು ನಿರ್ಧರಿಸಿದ್ದಾರೆ. ಹೌದು, ಆನ್ ಲೈನ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುವವರ ಮೇಲೆ ನಿಗಾವಹಿಸಲು ಯುಪಿ ಪೊಲೀಸರು ಪ್ರತ್ಯೇಕ ತಂಡವೊಂದನ್ನು ರಚಿಸಿದ್ದಾರೆ. ಜಾಲತಾಣಗಳಲ್ಲಿ ಯಾರ್ಯಾರು ಅಶ್ಲೀಲ ವಿಷಯಗಳನ್ನು ಹುಡುಕುತ್ತಾರೋ ಅಂತಹವರ ಸರ್ಚ್ ಹಿಸ್ಟರಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದಂತಹ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ‘ಯುಪಿ ವುಮೆನ್ ಪವರ್‌ಲೈನ್ 1090’ ಎಂಬ ಹೊಸ ತಂಡ ರೂಪಿಸಿದ್ದು, ಯಾವುದೇ ಒಬ್ಬ ವ್ಯಕ್ತಿ ಅಂತರ್ಜಾಲದಲ್ಲಿ ಅಶ್ಲೀಲ ವಿಷಯಗಳನ್ನು ಹುಡುಕಿದ ತಕ್ಷಣ ಅದನ್ನು ಪತ್ತೆಹಚ್ಚಿ ತಿಳಿಸುವ ಜವಾಬ್ದಾರಿಯನ್ನು ಈ ತಂಡಕ್ಕೆ ನೀಡಲಾಗಿದೆ.

  ಇದರ ಅರ್ಥ ಏನು?
  ಅಂತರ್ಜಾಲದ ವಿಶ್ಲೇಷಣೆಯ ಬಗ್ಗೆ ಅಧ್ಯಯನ ಮಾಡಲು ಯುಪಿ ಪೊಲೀಸರು 'Oomuph'' ಎಂಬ ಕಂಪನಿಯನ್ನು ನೇಮಿಸಿಕೊಂಡಿದ್ದಾರೆ. ಡೇಟಾದ ಮೂಲಕ ಅಂತರ್ಜಾಲದಲ್ಲಿ ಏನನ್ನು ಹುಡುಕಲಾಗುತ್ತಿದೆ ಎಂಬುದರ ಮೇಲೆ ನಿಗಾ ಇಡುವ ಕಾರ್ಯವನ್ನು ಈ ಕಂಪನಿಗೆ ವಹಿಸಲಾಗಿದೆ. ಒಬ್ಬ ವ್ಯಕ್ತಿಯು ಅಶ್ಲೀಲ ಚಿತ್ರಗಳನ್ನು ನೋಡಿದ ತಕ್ಷಣವೇ ವಿಶ್ಲೇಷಣಾ ತಂಡವು ಅದರ ಬಗ್ಗೆ ಮಾಹಿತಿಯನ್ನು ಪಡೆಯುತ್ತದೆ. ಬಳಿಕ ಅಶ್ಲೀಲ ಚಿತ್ರಗಳನ್ನು ಹುಡುಕುವವರು ಎಚ್ಚರಿಕೆಯ ಸಂದೇಶವನ್ನು ಸ್ವೀಕರಿಸುತ್ತಾರೆ ಮತ್ತು ಈ ಮಾಹಿತಿಯನ್ನು ಪೊಲೀಸರು ಕೂಡ ಪಡೆದುಕೊಳ್ಳುತ್ತಾರೆ. ಮಹಿಳೆಯರ ಸುರಕ್ಷತೆಯ ಕಡೆಗೆ ಯುಪಿ ಪೊಲೀಸರು ನಡೆಸುತ್ತಿರುವ ಈ ಕಾರ್ಯ ಶ್ಲಾಘನೀಯವಾದರೂ, ಇದು ಎರಡು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

  ಪೋರ್ನ್ ವೀಕ್ಷಿಸುವ ಮಹಿಳೆಯರ ವಿಚಾರವೇನು?

  ಇದು ಭಾರತದಲ್ಲಿ ಅನೇಕರಿಗೆ ಆಶ್ಚರ್ಯವಾಗಬಹುದು. ಅನೇಕ ಮಹಿಳೆಯರು ಕೂಡ ಆನ್ ಲೈನ್ ನಲ್ಲಿ ಪೋರ್ನ್ ವಿಡಿಯೋ ವೀಕ್ಷಿಸುತ್ತಾರೆ. 2017 ರಲ್ಲಿ ಪೋರ್ನ್ ವೆಬ್‌ಸೈಟ್ ಪೋರ್ನ್‌ಹಬ್ ನೀಡಿರುವ ಮಾಹಿತಿ ಪ್ರಕಾರ ಆನ್ ಲೈನ್ ನಲ್ಲಿ ಪೋರ್ನ್ ವೀಕ್ಷಿಸುವರ ಸಂಖ್ಯೆಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ವೀಕ್ಷಿಸುತ್ತಾರೆಂಬ ವಿಷಯವನ್ನು ಬಹಿರಂಗಪಡಿಸಿದೆ.

  Viral Video: ಸಖತ್ ವೈರಲ್ ಆದ ಬೆಳ್ಳುಳ್ಳಿ ಬಿಡಿಸುವ ವಿಡಿಯೋ; ನೀವು ನೋಡಿ ಸಿಪ್ಪೆ ಬಿಡಿಸುವ ವಿಧಾನ

  ವಾಸ್ತವದಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ ವಿಷಯದಲ್ಲಿ ಭಾರತೀಯ ಮಹಿಳೆಯರು ಜಾಗತಿಕ ಸರಾಸರಿಯನ್ನೇ ಸೋಲಿಸಿದ್ದಾರೆ. ಅಮೆರಿಕ, ಕೆನಡಾ ಮತ್ತು ಇಂಗ್ಲೆಂಡ್ ನಂತಹ ದೇಶಗಳಿಗಿಂತ ಭಾರತದಲ್ಲಿಯೇ ಹೆಚ್ಚಿನ ಮಹಿಳೆಯರು ಪೋರ್ನ್ ವೀಕ್ಷಿಸುತ್ತಾರೆಂಬ ಅಂಶವನ್ನು ಪೋರ್ನ್‌ಹಬ್ ಕಂಡುಹಿಡಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಅದರ ಮುಂದಿನ ವರ್ಷ ಪೋರ್ನ್‌ಹಬ್ ನೀಡಿದ ವರದಿಯ ಪ್ರಕಾರ 2017ರಲ್ಲಿ ಪೋರ್ನ್ ನೋಡುವ ಮಹಿಳಾ ವೀಕ್ಷಕರ ಸಂಖ್ಯೆಯಲ್ಲಿ ಶೇ.129ರಷ್ಟು ಹೆಚ್ಚಾಗಿದೆ ಎಂದಿದೆ. ಇದೀಗ ಯುಪಿ ಪೊಲೀಸರು ಅಶ್ಲೀಲ ವಿಡಿಯೋ ವೀಕ್ಷಿಸುವ ಜನರ ಸರ್ಜ್ ಹಿಸ್ಟರಿ ಮೇಲೆ ನಿಗಾ ಇಡಲು ನಿರ್ಧರಿಸಿರುವುದರಿಂದ ಅನೇಕ ಮಹಿಳೆಯರು ಕೂಡ ಎಚ್ಚರಿಕೆ ಸಂದೇಶ ಪಡೆಯುವುದರಲ್ಲಿ ಯಾವುದೇ ಆಶ್ಚರ್ಯವೇನಿಲ್ಲ.

  ಪೋರ್ನ್ ಬ್ಯಾನ್ ಮಾಡಿದರೆ ಲೈಂಗಿಕ ಅಪರಾಧಗಳಿಗೆ ಕಡಿವಾಣ ಬೀಳುತ್ತದೆಯೇ?

  ಲೈಂಗಿಕ ಅಪರಾಧಗಳನ್ನು ತಡೆಗಟ್ಟಲು ಪೋರ್ನ್ ಬ್ಯಾನ್ ಮಾಡಲು ಅಥವಾ ನಿಯಂತ್ರಿಸಲು ಕೇಂದ್ರ ಸರ್ಕಾರ ನಿರ್ಧರಿಸುವುದು ಸುಲಭಸಾಧ್ಯವಲ್ಲ. ಏಕೆಂದರೆ ಪ್ರಪಂಚದಾದ್ಯಂತ ಅಧ್ಯಯನಗಳು ಪೋರ್ನ್ ಕಾನೂನುಬದ್ಧಗೊಳಿಸುವುದರಿಂದ ನೇರವಾಗಿ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯದ ಹೆಚ್ಚಳಕ್ಕೆ ಕಾರಣವಾಗುವುದಿಲ್ಲ ಎಂದು ಹೇಳಿವೆ. ಜೆಕ್ ಗಣರಾಜ್ಯದಲ್ಲಿ 2010ರಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ‘ಕೆನಡಾ, ಕ್ರೊಯೇಷಿಯಾ, ಡೆನ್ಮಾರ್ಕ್, ಜರ್ಮನಿ, ಫಿನ್ಲ್ಯಾಂಡ್, ಹಾಂಗ್ ಕಾಂಗ್, ಶಾಂಘೈ, ಸ್ವೀಡನ್ ಮತ್ತು ಅಮರಿಕ ಹೀಗೆ ಎಲ್ಲೆಡೆ ಅಧ್ಯಯನ ನಡೆಸಿದರೂ ಅತ್ಯಾಚಾರ ಮತ್ತು ಇತರ ಲೈಂಗಿಕ ಅಪರಾಧಗಳು ಹೆಚ್ಚಿಲ್ಲ ಎಂಬುದನ್ನು ಕಂಡುಕೊಳ್ಳಲಾಗಿದೆ.

  ಪೋರ್ನೋಗ್ರಫಿಯ ಲಭ್ಯತೆ ಮತ್ತು ಕಾನೂನು ಬದ್ಧತೆಯಿಂದ 1989 ರಿಂದೀಚೆಗೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಮಾಣ ಕಡಿಮೆಯಾಗಿದೆ ಎಂಬ ವಿವಾದಾತ್ಮಕ ಅಂಶವನ್ನು ಈ ಅಧ್ಯಯನ ಮುಂದುವರೆಸಿತು. ಅದೇ ಸಮಯದಲ್ಲಿ ಮಕ್ಕಳ ಪೋರ್ನೋಗ್ರಫಿಯು ಸುಲಭವಾಗಿ ಲಭ್ಯವಾಗುತ್ತಿತ್ತು. ಜಪಾನ್ ಮತ್ತು ಡೆನ್ಮಾರ್ಕ್ ನಲ್ಲಿಯೂ ಇದೇ ರೀತಿಯ ವಿದ್ಯಾಮಾನ ಗುರುತಿಸಲಾಗಿದೆ.

  10ನೇ ಕ್ಲಾಸಿನ ವಿದ್ಯಾರ್ಥಿನಿಯ ಮೇಲೆ ನಾಲ್ವರು ಬಾಲಕರು ಅತ್ಯಾಚಾರ ಎಸಗಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿ 2018ರಲ್ಲಿ ಭಾರತದಲ್ಲಿ ಪೋರ್ನ್ ವೆಬ್‌ಸೈಟ್‌ಗಳನ್ನು ನಿಷೇಧಿಸುವಂತೆ ಉತ್ತರಾಖಂಡ ಹೈಕೋರ್ಟ್ ಕೇಂದ್ರಕ್ಕೆ ಮನವಿ ಮಾಡಿದೆ. ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗುವ ಮುನ್ನ ಬಾಲಕರು ಅಶ್ಲೀಲ ವಿಡಿಯೋಗಳನ್ನು ನೋಡಿದ್ದರೆಂದು ನಂತರ ತಿಳಿದುಬಂದಿತ್ತು. ಈ ಆದೇಶವನ್ನು ಅನುಸರಿಸಿ 827 ಪೋರ್ನ್ ವೆಬ್‌ಸೈಟ್‌ಗಳನ್ನು ನಿಷೇಧಿಸುವಂತೆ ಕೇಂದ್ರವು ಐಎಸ್‌ಪಿಗಳಿಗೆ ನಿರ್ದೇಶನ ನೀಡಿತ್ತು.
  Published by:Latha CG
  First published: