Viral Photo - ಮನಾಲಿ, ಆಗ್ರಾ, ಶಿಮ್ಲಾ, ಕುಲ್ಲು ಸಂಬಂಧವೇನು..? ಯುಪಿ ಪೊಲೀಸರ ವೈರಲ್ ಪೋಸ್ಟ್

ಮಾಸ್ಕ್ ಬಗ್ಗೆ ಜನರಿಗೆ ಅರಿವು ಮೂಡಿಸಲು ಉತ್ತರ ಪ್ರದೇಶದ ಪೊಲೀಸ್ ಇಲಾಖೆ ವಿಭಿನ್ನವಾದ ಜಾಹೀರಾತೊಂದನ್ನು ಟ್ವೀಟ್ ಮಾಡಿದೆ. ಅದರಲ್ಲಿ ಮಾಸ್ಕ್ ಅನ್ನು ಸಂಕೇತಿಸುವ ನಾಲ್ಕು ಪ್ರವಾಸಿ ತಾಣಗಳ ಹೆಸರುಗಳಿರುವ ಬೋರ್ಡ್ ಈ ಪೋಸ್ಟ್​ನಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಲಕ್ನೋ: ಕೋವಿಡ್‌-19 ಎರಡನೇ ಅಲೆಗೆ ಭಾರತ ಆಘಾತಗೊಂಡಿದೆ. ಅನೇಕ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಈ ನಡುವೆ, ಪ್ರಕರಣಗಳ ಸಂಖ್ಯೆ ಕಡಿಮೆಯಾದಂತೆ, ಪ್ರತಿಯೊಬ್ಬರೂ ಕೊರೊನಾ ಎಷ್ಟು ಅಪಾಯಕಾರಿ ಎಂಬುದನ್ನು ಮರೆತು ತಮ್ಮ ಮನೆಗಳಿಂದ ಹೊರಬಂದು ಮೈಮರೆತು ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಇದರಿಂದಾಗಿ ಅಗತ್ಯವಿರುವ ಎಲ್ಲ ಸುರಕ್ಷತಾ ನಿಯಮಗಳನ್ನು ಸರ್ಕಾರವು ಜಾರಿಗೊಳಿಸಿದೆ. ಆದರೂ, ಜನರು ಪ್ರವಾಸಗಳಿಗೆ ಹೋಗಲು ಯೋಜಿಸುತ್ತಿದ್ದಾರೆ. ಈ ನಡುವೆ ಯುಪಿ ಪೊಲೀಸರು ಟ್ವಿಟ್ಟರ್‌ನಲ್ಲಿ ಮಾಡಿದ ಒಂದು ಪೋಸ್ಟ್ ವೈರಲ್ ಆಗಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ.

ಇತ್ತೀಚೆಗೆ, ಪ್ರವಾಸಿಗರು ಹಿಲ್ ಸ್ಟೇಷನ್​ನಲ್ಲಿರುವ ಮನಾಲಿ, ಶಿಮ್ಲಾ ಮತ್ತು ನೈನಿತಾಲ್​ನಂತಹ ಜನಪ್ರಿಯ ರೆಸಾರ್ಟ್‌ಗಳಿಗೆ ಹೋಗಲು ಆರಂಭಿಸಿದ್ಧಾರೆ. ಇದು ಕೇವಲ ಬೇಸಿಗೆಯ ಸುಡುವ ಬಿಸಿಲಿನಿಂದ ಪಾರಾಗಲು ಮಾತ್ರವಲ್ಲ, ಕೆಲ ಸಮಯ ಕೋವಿಡ್‌ ಪ್ರತ್ಯೇಕತೆಯಿಂದ ದೂರವಿರುವುದಕ್ಕಾಗಿ ಜನರು ಪ್ರವಾಸಗಳಿಗೆ ತೆರಳುತ್ತಿದ್ದಾರೆ. ಈ ಕಾರಣದಿಂದಾಗಿ ಸುಂದರವಾದ ಪಟ್ಟಣಗಳಲ್ಲಿನ ಜನಪ್ರಿಯ ಪ್ರದೇಶಗಳಲ್ಲಿ ಇರುವ ಮಾಲ್ ರಸ್ತೆಗಳು ಭಾರಿ ಜನಸಂದಣಿ ಕಾಣುತ್ತಿವೆ.

ಮನಾಲಿ ಮತ್ತು ಮುಸ್ಸೂರಿಯ ಇತ್ತೀಚಿನ ಫೋಟೋಗಳು ಮತ್ತು ವಿಡಿಯೋಗಳು ಜನರು ಎಷ್ಟು ಅಸಡ್ಡೆ ಹೊಂದಿದ್ದಾರೆಂದು ತೋರಿಸುತ್ತದೆ. ಈ ಫೋಟೋಗಳು ಮತ್ತು ವೀಡಿಯೊಗಳಲ್ಲಿ ಜನರು ಮಾಸ್ಕ್‌ಗಳನ್ನು ಧರಿಸದಿರುವುದನ್ನು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಿಲ್ಲದಿರುವುದನ್ನು ಗಮನಿಸಬಹುದು. ಸಾಂಕ್ರಾಮಿಕ ರೋಗವು ಇನ್ನೂ ಇದೆ ಎಂಬುದನ್ನು ಜನರು ಮರೆತಿದ್ದಾರೆ. ಆದ್ದರಿಂದ, ಇತ್ತೀಚಿನ ಯುಪಿ ಪೋಲಿಸರ ಟ್ವಿಟ್ಟರ್‌ನಲ್ಲಿನ ಒಂದು ಪೋಸ್ಟ್ ಮಾಸ್ಕ್‌ನ ಪ್ರಾಮುಖ್ಯತೆಯನ್ನು ಹೊಸತನದ ರೀತಿಯಲ್ಲಿ ಜನರಿಗೆ ಮನವರಿಕೆ ಮಾಡಿಕೊಂಡುವಂತಿದೆ. ಚಿತ್ರದಲ್ಲಿ ಮನಾಲಿ, ಆಗ್ರಾ, ಶಿಮ್ಲಾ, ಮತ್ತು ಕುಲ್ಲು ಎಂಬ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಅವುಗಳ ನಡುವೆ ಸಾಮಾನ್ಯವಿರುವ ಸಂಗತಿಯನ್ನು ಅದು ವಿವರಿಸುತ್ತದೆ.

ಇದನ್ನೂ ಓದಿ: ZyCoV-D Vaccine - ಮಕ್ಕಳಿಗೆ ಕೋವಿಡ್ ಲಸಿಕೆ: ಅನುಮೋದನೆ ದೊರತೆರೆ ಮುಂದಿನ ತಿಂಗಳೇ ಸರಬರಾಜು

ಸುಳಿವು ಹೆಸರುಗಳಲ್ಲಿದೆ. ಒಮ್ಮೆ ನೋಡಿ.

ಈ ಪೋಸ್ಟ್ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. ಈ ನಾಲ್ಕು ಪ್ರಮುಖ ಪ್ರವಾಸಿ ಸ್ಥಳಗಳ ಹೆಸರಿನ ಮೊದಲ ಇಂಗ್ಲಿಷ್‌ ಅಕ್ಷರವನ್ನು ಒಟ್ಟುಗೂಡಿಸಿದರೆ ಮಾಸ್ಕ್ ರಚನೆಯಾಗಿರುವುದನ್ನು ನೀವು ಚಿತ್ರದಲ್ಲಿ ಗಮನಿಸಬಹುದು. ಈ ಚಿತ್ರವು ತುಂಬಾ ಆಕರ್ಷಕವಾಗಿದ್ದು ಜನರಿಗೆ ಅರಿವು ಮೂಡಿಸುವ ಸಂದೇಶವನ್ನು ಒಳಗೊಂಡಿದೆ. ಇದಕ್ಕೆ ನಾವು ಪೊಲೀಸರನ್ನು ಪ್ರಶಂಸಿಸಬೇಕು.

UP Police's viral post
ಉತ್ತರ ಪ್ರದೇಶ ಪೊಲೀಸರು ಟ್ವೀಟ್ ಮಾಡಿದ ಪೋಸ್ಟ್


"ನೀವು ಪ್ರವಾಸಿ ತಾಣಗಳನ್ನು ಅನ್ವೇಷಿಸುವಾಗ ನಿಮ್ಮ ಸುರಕ್ಷಿತ ಪ್ರಯಾಣದ ಒಡನಾಡಿಯನ್ನು ರಕ್ಷಿಸಿ..! ಕುಟುಂಬ ಮತ್ತು ಸ್ನೇಹಿತರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಾಗ ಮಾಸ್ಕ್‌ ಧರಿಸಿ" ಎಂಬ ಶೀರ್ಷಿಕೆ ಜೊತೆ ಯುಪಿ ಪೊಲೀಸರು ಈ ಚಿತ್ರವನ್ನು ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಸ್ಟ್‌ ಭಾರಿ ಜನರ ಮೆಚ್ಚುಗೆಯನ್ನು ಪಡೆದಿದೆ ಹಾಗೂ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್‌ ಆಗಿದೆ. ಸೋಷಿಯಲ್ ಮೀಡಿಯಾ ತಂಡವು ಅವರ ಹಾಸ್ಯದ ಪದಗಳ ಆಟಗಳನ್ನು ಪ್ರಶಂಸಿದೆ. "ಒಳ್ಳೆಯ ಸಂದೇಶ" ಎಂದು ಪೋಸ್ಟ್‌ಗೆ ಬಳಗೆದಾರರು ಕಾಮೆಂಟ್‌ ಅನ್ನು ನೀಡಿದ್ದಾರೆ. ಜನರು ಚಿತ್ರದಲ್ಲಿ ಸಂದೇಶವನ್ನು ಗಮನಿಸುವ ಬದಲು ಚಿತ್ರದಲ್ಲಿನ ಸ್ಥಳಗಳ ಜೊತೆ ನೈನಿತಾಲ್ ಹಾಗೂ ಊಟಿ ಹೋಗಲು ಯೋಜಿಸುತ್ತಿದ್ದಾರೆ ಎಂದು ಕಾಮೆಂಟ್‌ನಲ್ಲಿ ಹೇಳಿದ್ದಾರೆ. "ಉತ್ತಮ ಕೆಲಸ" ಮತ್ತು "ಉತ್ತಮ ಸಂದೇಶದಿಂದ" ತುಂಬಿದೆ. ಇದೇ ರೀತಿಯ ಇನ್ನೂ ಅನೇಕ ಕಾಮೆಂಟ್‌ಗಳನ್ನು ಈ ಪೋಸ್ಟ್‌ ನಲ್ಲಿ ನೀವು ನೋಡಬಹುದು. ಮುಂದಿನ ಕೆಲವು ತಿಂಗಳುಗಳಲ್ಲಿ ಮೂರನೇ ಅಲೆಯನ್ನು ನಿರೀಕ್ಷಿಸಲಾಗಿದೆ. ನಮ್ಮ ಭಾರತೀಯ ಸಾರ್ವಜನಿಕರು ಅದರ ವಿರುದ್ಧ ಹೋರಾಡಲು ಎಷ್ಟು ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂಬುದನ್ನು ಸಮಯ ಮಾತ್ರ ಹೇಳುತ್ತದೆ.

ಅನುವಾದ ಕೃಪೆ: ಅನುಷಾ, ಏಜೆನ್ಸಿ
Published by:Vijayasarthy SN
First published: