HOME » NEWS » National-international » UP POLICE OFFICER WHO FED STRAY ANIMALS DURING LOCKDOWN AWARDED BY PETA STG LG

ಲಾಕ್‌ಡೌನ್‌ ಸಮಯದಲ್ಲಿ ಬೀದಿಬದಿ ಪ್ರಾಣಿಗಳ ಹಸಿವು ನೀಗಿಸಿದ ಪೊಲೀಸ್ ಅಧಿಕಾರಿಗೆ ಪ್ರಶಸ್ತಿ ನೀಡಿ ಗೌರವಿಸಿದ PETA

ಲಕ್ನೋದ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿಪಿ) ಚಿರಂಜೀವ್ ನಾಥ್ ಸಿನ್ಹಾ ಅವರಿಗೆ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಇಂಡಿಯಾ ಲಾಕ್ಡೌನ್ ಸಮಯದಲ್ಲಿ ಚಿರಂಜೀವ್ ಅವರ ಕಾರ್ಯವನ್ನು ಮೆಚ್ಚಿ ಪ್ರಶಸ್ತಿ ನೀಡಿದೆ.

news18-kannada
Updated:May 12, 2021, 3:51 PM IST
ಲಾಕ್‌ಡೌನ್‌ ಸಮಯದಲ್ಲಿ ಬೀದಿಬದಿ ಪ್ರಾಣಿಗಳ ಹಸಿವು ನೀಗಿಸಿದ ಪೊಲೀಸ್ ಅಧಿಕಾರಿಗೆ ಪ್ರಶಸ್ತಿ ನೀಡಿ ಗೌರವಿಸಿದ PETA
PETA
  • Share this:
ಹಣವಂತರಿಗೆ ಲಾಕ್‌ಡೌನ್‌ ಕುಟುಂಬದ ಜೊತೆಗೆ ಸಮಯ ಕಳೆಯಲು ಸಿಕ್ಕಿರುವ ಅದ್ಭುತ ಅವಕಾಶ. ಇನ್ನೊಂದೆಡೆ ಒಂದು ಹೊತ್ತಿನ ಊಟಕ್ಕೂ ದಿನದ ದುಡಿಮೆ ನಂಬಿಕೊಂಡಿರುವ ಅಶಕ್ತರಿಗೆ ಶಾಪ! ಆದರೆ ಇದೆಲ್ಲದರ ಹೊರತಾಗಿಯೂ ಇದರ ಅರಿವಿಲ್ಲದೇ ಮಂಕಾಗಿ ಮುಗ್ಧವಾಗಿ ಖಾಲಿ ರಸ್ತೆಗಳಲ್ಲಿ ಕೆದಕುತ್ತಾ, ಹಸಿದ ಒಡಲಿಗೆ ಏನೂ ದಕ್ಕದೇ ನಿತ್ರಾಣವಾಗುವ ಪ್ರಾಣಿಗಳಿಗೆ ಮನುಷ್ಯನ ದುಷ್ಟತನದ ಕೊಡುಗೆಯೇ ಲಾಕ್‌ಡೌನ್‌! ಈ ಸೂಕ್ಷ್ಮತೆಯನ್ನು ಅರಿತು ಅದೆಷ್ಟೋ ಜನರು ಬೀದಿಯಲ್ಲಿ ಹಸಿದು ಬಸವಳಿದಿರುವ ಪ್ರಾಣಿಗಳಿಗೆ ಊಟ ಹಾಕುವ ಮೂಲಕ ಸಹಜೀವನಕ್ಕೆ ಮಾದರಿಯಾಗಿದ್ದಾರೆ. ಅದರಲ್ಲೂ ಪೊಲೀಸ್ ಅಧಿಕಾರಿಯೊಬ್ಬರು ಈ ರೀತಿ ಬೀದಿ ಬಳಿಯ ಪ್ರಾಣಿಗಳಿಗೆ ಲಾಕ್‌ಡೌನ್‌ ಸಮಯದಲ್ಲಿ ಆಹಾರವನ್ನು ನೀಡುವ ಮೂಲಕ ಮಾನವೀಯತೆಯ ಅಸ್ಥಿತ್ವವನ್ನು ಉಳಿಸಿದ್ದಾರೆ. ದಕ್ಷ ಅಧಿಕಾರಿಯೊಳಗಿನ ಸೂಕ್ಷ್ಮ ಸಂವೇದನೆಯನ್ನು ಗುರುತಿಸಿರುವ ಪೆಟಾ( ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ) ಅವರ ಈ ಕಾರ್ಯವನ್ನು ಶ್ಲಾಘಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಲಕ್ನೋದ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿಪಿ) ಚಿರಂಜೀವ್ ನಾಥ್ ಸಿನ್ಹಾ ಅವರಿಗೆ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಇಂಡಿಯಾ ಲಾಕ್ಡೌನ್ ಸಮಯದಲ್ಲಿ ಚಿರಂಜೀವ್ ಅವರ ಕಾರ್ಯವನ್ನು ಮೆಚ್ಚಿ ಪ್ರಶಸ್ತಿ ನೀಡಿದೆ.

ಚಿರಂಜೀವಿ ನಾಥ್ ಸಿನ್ಹಾ ಮತ್ತು ಅವರ ಪೊಲೀಸ್ ತಂಡವು ಲಕ್ನೋದಲ್ಲಿ ಬೀದಿ ಬದಿಯ ಕೋತಿಗಳಿಗೆ ಮತ್ತು ಹಸುಗಳಿಗೆ ಬಾಳೆ ಹಣ್ಣು ಮತ್ತು ಕಡಲೆಯನ್ನು ನೀಡುತ್ತಿದ್ದರು. ಪೊಲೀಸ್ ತಂಡವು ಲಕ್ನೋದ ಕುಕರೇಲ್ ಪ್ರದೇಶದಲ್ಲಿ ಪ್ರಾಣಿಗಳಿಗೆ ಖುರ್ರಾಮ್ ನಗರದಲ್ಲಿ ಆಹಾರವನ್ನು ನೀಡಿದೆ. ಕಳೆದ ವರ್ಷ ಲಾಕ್‌ಡೌನ್‌ನಲ್ಲಿಯೂ ಸಹ ಆಹಾರಕ್ಕಾಗಿ ಪರಿತಪಿಸಿ ತಬ್ಬಿಬ್ಬಾಗಿ ದಾರಿ ತಪ್ಪಿದ ಪ್ರಾಣಿಗಳಿಗೆ, ಅದರಲ್ಲೂ ಕೋತಿಗಳಿಗೆ ಎಡಿಸಿಪಿ ಆಹಾರವನ್ನು ನೀಡಿದ್ದರು.

ಸಂಜೆ 6 ಗಂಟೆ ಬಳಿಕ ಆಫೀಸ್​ ಕೆಲಸಕ್ಕೆ ಸಂಬಂಧಿಸಿದ ಮಾತು ಬೇಡವೆಂದ ಸಿಇಒ ನಿತಿನ್ ಕಾಮತ್; ಟ್ವಿಟ್ಟರ್‌ನಲ್ಲಿ ಮೆಚ್ಚುಗೆಯ ಮಹಾಪೂರ

'ಲಾಕ್ಡೌನ್ ಹೇರಿಕೆಯಾದ ಸಂದರ್ಭದಲ್ಲಿ ಪ್ರಾಣಿಗಳಿಗೆ ಆಹಾರ ದೊರಕುವುದು ತ್ರಾಸದಾಯಕ. ಏಕೆಂದರೆ ನಾವು ತಿಂದು ಬಿಟ್ಟ ಆಹಾರವನ್ನು ಪ್ರಾಣಿಗಳು ಅವಲಂಬಿಸಿರುವುದರಿಂದ ಲಾಕ್​ಡೌನ್​ನಲ್ಲಿ ಆಹಾರ ಸಿಗುವುದು ಬಹಳ ಕಷ್ಟವೇ ಆಗಿದೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದರು.

ಪೆಟಾ ಇಂಡಿಯಾ ಸಿಇಒ ಡಾ. ಮನಿಲಾಲ್ ವಲ್ಲಿಯೇಟ್ ಬುಧವಾರ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. “ಆಹಾರದ ಅಗತ್ಯವಿರುವ ಪ್ರಾಣಿಗಳ ಸಹಾಯಕ್ಕೆ ನೆರವಾದ ಮತ್ತು ಪ್ರತಿಯೊಬ್ಬರೂ ಅನುಸರಿಸಲೇಬೇಕಾದ ಸಹಾನುಭೂತಿಯ ನಡವಳಿಕೆಯನ್ನು ಪ್ರದರ್ಶಿಸಿದ್ದಕ್ಕಾಗಿ ಗೌರವಾನ್ವಿತ ಅಧಿಕಾರಿಯವರನ್ನು ಪೆಟಾ ಇಂಡಿಯಾ ಗುರುತಿಸುತ್ತಿದೆ" ಎಂದು ಹೇಳಿದರು.

ಲಾಕ್‌ಡೌನ್‌ಗಳ ಸಮಯದಲ್ಲಿ ಸಮುದಾಯದ ಪ್ರಾಣಿಗಳಿಗೆ ಆಹಾರವನ್ನು ನೀಡುವುದನ್ನು ಮುಂದುವರಿಸಲು ಪೆಟಾ ಇಂಡಿಯಾ ಕರುಣಾಮಯಿ ಮನಸ್ಸುಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು. ಆದ್ದರಿಂದ ಸರ್ಕಾರದ ಎಲ್ಲಾ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಂತಾದ ನಿಯಮಗಳನ್ನು ಅನುಸರಿಸಿ ಪ್ರಾಣಿಗಳ ಹಸಿವನ್ನು ತಣಿಸುವ ಕೆಲಸದಲ್ಲಿ ತೊಡಗುವುದು ಒಳಿತು ಎಂದಿದ್ದಾರೆ.
Youtube Video

ಮಾತು ಬಾರದ ಮೂಕ ಪ್ರಾಣಿಗಳ ಹಸಿವನ್ನು ಅವುಗಳ ಕಂಬನಿಯಷ್ಟೇ ಪ್ರತಿಧ್ವನಿಸಬಲ್ಲವು. ಆದ್ದರಿಂದ ನಮ್ಮ ತಟ್ಟೆಯ ಜೊತೆಗೆ ಅವುಗಳ ಹೊಟ್ಟೆಯ ಬಗ್ಗೆಯೂ ಸಣ್ಣ ಸಂವೇದನೆಯನ್ನು ಬೆಳೆಸಿಕೊಳ್ಳೊಣ ಎನ್ನುವ ಒಳನೋಟವನ್ನು ಜೀವಿಸುವ ಇಂತಹ ಅಧಿಕಾರಿಗಳು ನಿಜಕ್ಕೂ ಸ್ಫೂರ್ತಿಯ ಬೆಳಕು.
Published by: Latha CG
First published: May 12, 2021, 3:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories