ಜಗತ್ತಿನಲ್ಲಿ ಏನು ಬೇಕಾದರೂ ಆಗಬಹುದು, ಇದು ಆಗೋದೇ ಇಲ್ಲ ಅಂತ ಹೇಳೋಕೇ ಆಗಲ್ಲ. ಎಂಥಾ ಅಪರಾಧ ಮಾಡಿದ್ದರೂ ಎಲ್ಲೇ ಅಡಗಿ ಕುಳಿತರೂ ಪೊಲೀಸರ (Police) ಕಣ್ತಪ್ಪಿಸಿ ಬಚಾವೋಗೋಕೆ ಆಗಲ್ಲ, ಇಂತಹುದೇ ಒಂದು ಪ್ರಕರಣವೊಂದು ಇದೀಗ ಭಾರೀ ಸುದ್ದಿಯಾಗುತ್ತಿದೆ. ಸುಮಾರು ಮೂರು ದಶಕಗಳ ನಂತರ ಉತ್ತರ ಪ್ರದೇಶದ (Uttar Pradesh) ಶಹಜಹಾನ್‌ಪುರದಲ್ಲಿ ಮಹಿಳೆಯೊಬ್ಬಳು ಕೇವಲ 12 ವರ್ಷದವಳಿದ್ದಾಗ ಇಬ್ಬರು ಸಹೋದರರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಪೊಲೀಸರು ತಪ್ಪಿಸಿಕೊಂಡ ಆರೋಪಿಗಳಲ್ಲಿ ಒಬ್ಬರಾದ 48 ವರ್ಷದ ಮೊಹಮ್ಮದ್ ರಾಜಿ ಎಂಬ ವ್ಯಕ್ತಿಯನ್ನು ಪೊಲೀಸರು ಬರೋಬ್ಬರಿ 3 ದಶಕದ ನಂತರ ಬಂಧಿಸಿದ್ದಾರೆ. ಅದೂ ಆರೋಪಿ ಬಂಧನವಾಗಲು ಕಾರಣ ಸ್ವಂತ ಮಗನೇ! ಇಂತಹ ಭಾರೀ ಶಾಕಿಂಗ್ ಸುದ್ದಿಯೊಂದು (Shocking News) ಇದೀಗ ಹೊರಬಿದ್ದಿದೆ.
ಈ ಪ್ರಕರಣದ ಸಂತ್ರಸ್ತೆಯು 12 ವರ್ಷದವಳಿದ್ದಾಗ ಸಹೋದರರು ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. 28 ವರ್ಷಗಳ ನಂತರ, ಸಂತ್ರಸ್ತೆಯ ಮಗನ ದೂರಿನ ಆಧಾರದ ಮೇಲೆ, ಶಹಜಹಾನ್‌ಪುರ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು.
ನಡೆಸಿದ ಪ್ರಯತ್ನಗಳು ಒಂದೆರಡಲ್ಲ
ಈ ಪ್ರಕರಣದ ಕುರಿತು ಮಾರ್ಚ್ 4, 2021 ರಂದು ಪ್ರಕರಣವನ್ನು ದಾಖಲಿಸಿ, ಪ್ರಕರಣದ ತನಿಖೆಯನ್ನು ಪ್ರಾರಂಭಿಸಿತು. ಸಾಕಷ್ಟು ಪ್ರಯತ್ನದ ನಂತರ ಪೊಲೀಸರು ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಕಂಪ್ಲೇಂಟ್ ಕೊಡಬೇಡ ಎಂದು ಬಲವಂತ
ಮಗುವಿನ ಜನನದ ನಂತರ ಆರೋಪಿಯು ಸಂತ್ರಸ್ತೆಯನ್ನು ತನ್ನ ಮಗನನ್ನು ದತ್ತು ನೀಡುವಂತೆ ಒತ್ತಾಯಿಸಿದ್ದ ಎನ್ನಲಾಗಿದೆ. ಅಲ್ಲದೇ ತನ್ನ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಡದಂತೆಯೂ ಸಂತ್ರಸ್ತರ ಮಹಿಳೆಯ ಮೇಲೆ ಬಲವಂತ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾಗಿ ವರದಿಯಾಗಿದೆ.
ಹುಟ್ಟಿದ ಮಗುವನ್ನು ಬೇರೆಒಬ್ಬರಿಗೆ ನೀಡಿದ್ದ ತಾಯಿ
ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಆರೋಪಿ ನಾಪತ್ತೆಯಾಗಿದ್ದ. ಇತ್ತ ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ್ದಳು. ಆಕೆಯ ಜೀವನವನ್ನು ಗಮನದಲ್ಲಿಟ್ಟುಕೊಂಡು ಬೇರೊಂದು ಊರಿಗೆ ಸ್ಥಳಾಂತರಗೊಂಡ ಸಂತ್ರಸ್ತೆಯ ಕುಟುಂಬ ನಂತರ ಆಕೆಗೆ ಬೇರೆ ವ್ಯಕ್ತಿಯ ಜೊತೆ ಮದುವೆ ಮಾಡಿತು. ಅಲ್ಲದೇ ಇಷ್ಟರಲ್ಲಿ ಅತ್ಯಾಚಾರದಿಂದ ಹುಟ್ಟಿದ್ದ ಮಗುವನ್ನು ಬೇರೆಯವರಿಗೆ ನೀಡಿದ್ದರು.
ಇತ್ತ ಮಗ ಬೇರೊಬ್ಬರ ಜೊತೆ ಬೆಳೆಯುತ್ತಿದ್ದ. ಒಂದಲ್ಲ ಒಂದು ದಿನ ತನ್ನನ್ನು ಬೆಳೆಸುತ್ತಿರುವವರು ತನ್ನ ನಿಜವಾದ ಅಪ್ಪ ಅಮ್ಮ ಅಲ್ಲ ಎಂದು ಗೊತ್ತಾಗಿದೆ. ಆಗಲೇ ಶುರುವಾದದದ್ದು ನೋಡಿ. ತನ್ನ ನಿಜವಾದ ಅಪ್ಪ ಅಮ್ಮನನ್ನು ಹುಡುಕಿ ಹೊರಟ ಆತ ಸಿಬಿಐ ಕೆಲಸವನ್ನೇ ಮಾಡಿದ್ದ.
ಇದನ್ನೂ ಓದಿ: ಜಿಲ್ಲಾಧಿಕಾರಿಯಾದ ಕೇವಲ ಆರೇ ದಿನಕ್ಕೆ IAS ಅಧಿಕಾರಿಗೆ ಗೇಟ್ಪಾಸ್, ಅಷ್ಟಕ್ಕೂ ಈ ಆಫೀಸರ್ ಯಾರು?
ಹಾಗೂ ಹೀಗೂ ತಾಯಿಯ ವಿಳಾಸ ಸಿಕ್ಕಿತ್ತು. ಆಕೆ ಬಳಿ ತನ್ನ ಹಳೆ ಕಥೆ ಕೇಳಿದಾಗ ಅತ್ಯಾಚಾರದ ಕಥೆ ಹೊರಬಿತ್ತು. ಹಾಗೇ ಅತ್ಯಾಚಾರ ಆರೋಪಿಗಳ ಮೇಲೆ ಕಂಪ್ಲೇಂಟ್ ಸಹ ಕೊಟ್ಟ ಮಗ ಇನ್ನಷ್ಟು ವಿಷಯಗಳನ್ನು ಹೊರಗೆಡವಿದ್ದಾನೆ.
ಡಿಎನ್ಎ ಪರೀಕ್ಷೆಯಲ್ಲಿ ಹೊರಬಿತ್ತು ಸತ್ಯ
ನಿಜವಾಗಿಯೂ ತನ್ನ ಅಪ್ಪ ಯಾರು ಎಂದು ತಿಳಿಯಲು ಕೋರ್ಟ್ ಒಪ್ಪಿಗೆ ಪಡೆದು ಡಿಎನ್ಎ ಪರೀಕ್ಷೆಯನ್ನೂ ಮಾಡಿಸಿದ್ದ. ಆಗಲೇ ಹೊರಬಿತ್ತು ಸತ್ಯಸಂಗತಿ. ಆಗಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಇದನ್ನೂ ಓದಿ: Kidnap Drama: ತನ್ನನ್ನು ತಾನೇ ಅಪಹರಿಸಿದ ಬಾಲಕ! ಎಷ್ಟು ಸ್ಮಾರ್ಟ್ ಅಂದ್ರೆ ಪೊಲೀಸರಿಗೂ ಗೊತ್ತಾಗಲಿಲ್ಲ
ಅಂತೂ ಇಂತೂ 28 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಅತ್ಯಾಚಾರದಿಂದ ಬದುಕುಳಿದ ಮಹಿಳೆಯೊಬ್ಬರು ಅತ್ಯಾಚಾರದಿಂದ ಜನಿಸಿದ ತನ್ನ ಮಗನ ಪ್ರಯತ್ನದಿಂದಾಗಿ ಅಂತಿಮವಾಗಿ ನ್ಯಾಯ ಪಡೆದುಕೊಂಡಿದ್ದಾರೆ. ಈ ಸುದ್ದಿ ಸದ್ಯ ಭಾರೀ ಸಂಚಲನ ಸೃಷ್ಟಿಸಿದ್ದು ತನ್ನ ತಾಯಿಗೆ ನ್ಯಾಯ ದೊರಕಿಸಲು ಪ್ರಯತ್ನಿಸಿ ಸಫಲನಾದ ಮಗನ ಬಗ್ಗೆ ಶ್ಲಾಘನೆಯೂ ವ್ಯಕ್ತವಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ