HOME » NEWS » National-international » UP POLICE GIVES SINGHAM MEME A PAWRI TWIST TO SEND A MESSAGE AGAINST HARASSERS STG MAK

ರೋಡ್ ರೋಮಿಯೋಗಳಿಗೆ ಬಿಸಿಮುಟ್ಟಿಸಲು ಕ್ರಮ: ನಗೆಯುಕ್ಕಿಸುತ್ತಿದೆ ಯುಪಿ ಪೊಲೀಸರ ವಿಡಿಯೋ ಮೀಮ್ಸ್

ಈ ವಿಡಿಯೋದಲ್ಲಿ ಅಜಯ್ ದೇವಗನ್ ಮತ್ತು ಕಾಜಲ್ ಅಗರ್‌ವಾಲ್ ಅಭಿನಯದ 2011ರ ಬ್ಲಾಕ್ ಬಸ್ಟರ್ ‘ಸಿಂಗಮ್’ ಚಿತ್ರದ ತುಣುಕುಗಳನ್ನು ಬಳಸಿ, ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವ ಪುಂಡುಪೋಕರಿಗಳಿಗೆ ಯುಪಿ ಪೊಲೀಸರು ಖಡಕ್ ಸಂದೇಶ ರವಾನಿಸಿದ್ದಾರೆ.

news18-kannada
Updated:February 19, 2021, 4:20 PM IST
ರೋಡ್ ರೋಮಿಯೋಗಳಿಗೆ ಬಿಸಿಮುಟ್ಟಿಸಲು ಕ್ರಮ: ನಗೆಯುಕ್ಕಿಸುತ್ತಿದೆ ಯುಪಿ ಪೊಲೀಸರ ವಿಡಿಯೋ ಮೀಮ್ಸ್
ಉತ್ತರಪ್ರದೇಶ ಪೊಲೀಸರ ಮೀಮ್ಸ್​.
  • Share this:
ಪುಂಡುಪೋಕರಿಗಳಿಗೆ ಬಿಸಿ ಮುಟ್ಟಿಸಲು, ರೌಡಿಗಳನ್ನು ಮಟ್ಟಹಾಕಲು, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳನ್ನು ತಡೆಗಟ್ಟಲು ಉತ್ತರಪ್ರದೇಶದ ಪೊಲೀಸರು ತೆಗೆದುಕೊಳ್ಳುತ್ತಿರುವ ಕ್ರಮ ಇಡೀ ದೇಶದ ಗಮನ ಸೆಳೆಯುತ್ತಿವೆ. ಅವರ ಕೆಲ ನಿಲುವುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತವೆ. ಯುಪಿ ಪೊಲೀಸರ ಅಂತಹ ನಡೆಯೊಂದು ಇದೀಗ ನೆಟಿಜನ್ ಗಳು ನಗೆಗಡಲಲ್ಲಿ ತೇಲುವಂತೆ ಮಾಡುತ್ತಿದೆ.

ಯುಪಿ ಪೊಲೀಸ್ ಇಲಾಖೆ ತನ್ನ ಟ್ವಿಟರ್ ಖಾತೆಯಲ್ಲಿ ಹಾಸ್ಯದ ವಿಡಿಯೋ ಇರುವ ಮೀಮ್ ವೊಂದನ್ನು ಹಂಚಿಕೊಂಡಿದೆ. ಅದಕ್ಕೆ Pawri With Police?(ಪೊಲೀಸರೊಂದಿಗೆ ಪಾರ್ಟಿ) ಎಂದು ಕ್ಯಾಪ್ಶನ್ ನೀಡಿ #PawriHoRaiHai ಅಂದರೆ ಪಾರ್ಟಿ ನಡೆಯುತ್ತಿದೆ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ. ಈ ವಿಡಿಯೋದಲ್ಲಿ ಅಜಯ್ ದೇವಗನ್ ಮತ್ತು ಕಾಜಲ್ ಅಗರ್‌ವಾಲ್ ಅಭಿನಯದ 2011ರ ಬ್ಲಾಕ್ ಬಸ್ಟರ್ ‘ಸಿಂಗಮ್’ ಚಿತ್ರದ ತುಣುಕುಗಳನ್ನು ಬಳಸಿ, ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವ ಪುಂಡುಪೋಕರಿಗಳಿಗೆ ಯುಪಿ ಪೊಲೀಸರು ಖಡಕ್ ಸಂದೇಶ ರವಾನಿಸಿದ್ದಾರೆ.

ಸಿಂಗಮ್ ಚಿತ್ರದ ಈ ವಿಡಿಯೋ ಕ್ಲಿಪ್ ನಲ್ಲಿ ಮೊದಲು ಕಾಜಲ್ ಅಗರ್‌ವಾಲ್ ಮೇಲೆ ಗೂಂಡಾಗಳು ಆಕ್ರಮಣ ಮಾಡಿ ಚುಡಾಯಿಸುವ, ಬಳಿಕ ಅಜಯ್ ದೇಗವನ್ ನಾಯಕಿಯನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ರೌಡಿಗಳತ್ತ ಹೋಗುವ ಹಾಗೂ ಕೊನೆಯ ದೃಶ್ಯದಲ್ಲಿ ಎಲ್ಲಾ ಗೂಂಡಾಗಳನ್ನು ಪೊಲೀಸರು ಹಿಡಿದಿರುವುದನ್ನು ಕಾಣಬಹುದಾಗಿದೆ. ‘ಇವರೆಲ್ಲಾ ರೋಡ್ ರೋಮಿಯೋಗಳು, ಮಹಿಳೆಯರನ್ನು ಚುಡಾಯಿಸಿದ ತಪ್ಪಿಗೆ ಈಗ ಪೊಲೀಸರೊಂದಿಗೆ ಅವರು ಪಾರ್ಟಿಗೆ ಹೋಗುತ್ತಿದ್ದಾರೆ’ ಎಂಬರ್ಥದ ಹ್ಯಾಸವುಳ್ಳ ಮೀಮ್ಸ್ ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಸಿಎಎ ವಿರೋಧಿ ಪ್ರತಿಭಟನೆ; 1500 ಪ್ರಕರಣಗಳನ್ನು ಕೈಬಿಟ್ಟ ತಮಿಳುನಾಡು ಸರ್ಕಾರ

‘ಪೊಲೀಸರೊಂದಿಗೆ ಪಾರ್ಟಿ?’ ಎಂಬ ಕ್ಯಾಪ್ಶನ್ ನೀಡಿ ಹಂಚಿಕೊಳ್ಳಲಾಗಿರುವ ಈ ವಿಡಿಯೋವನ್ನು ಬರೋಬ್ಬರಿ 27 ಸಾವಿರಕ್ಕೂ ಹೆಚ್ಚು ಟ್ವಿಟರ್ ಬಳಕೆದಾರರು ಇಷ್ಟಪಟ್ಟಿದ್ದಾರೆ. ಇದನ್ನು ವೀಕ್ಷಿಸಿದ ರಿತಿಕಾ ಎಂಬುವರು, ‘ಇದು ಮುಂದಿನ ಹಂತದ ಪಾರ್ಟಿ’ ಎಂದು ಪ್ರತಿಕ್ರಿಯಿಸಿದ್ದಾರೆ. ‘ಯುಪಿ ಪೊಲೀಸರು ಸಿದ್ಧಪಡಿಸಿರುವ ಈ ಹಾಸ್ಯವುಳ್ಳ ಹಾಗೂ ಗಂಭೀರ ಸಂದೇಶವುಳ್ಳ ಮೀಮ್ಸ್ ಅವರ ಸೃಜನಶೀಲತೆ ಮಟ್ಟ’ವನ್ನು ತಿಳಿಸುತ್ತದೆ ಎಂದು ಮತ್ತೊಬ್ಬರು ತಿಳಿಸಿದ್ದಾರೆ.
Youtube Video

ದೆಹಲಿ ಪೊಲೀಸ್ ಇನ್ಸ್‌ ಪೆಕ್ಟರ್ ಸೋನಮ್ ಜೋಶಿ ಅವರು ದೆಹಲಿಯ ಡಿಸಿಪಿ ಅವರಿಗೆ ಈ ವಿಡಿಯೋವನ್ನು ಟ್ಯಾಗ್ ಮಾಡಿದ್ದು, ‘ದೆಹಲಿ ಪೊಲೀಸರೊಂದಿಗೆ ಪಾರ್ಟಿ ಎಲ್ಲಿ’ ಎಂದು ಪ್ರಶ್ನಿಸಿದ್ದಾರೆ. ಪುಂಡುಪೋಕರಿಗಳಿಗೆ, ರೋಡ್ ರೋಮಿಗಳಿಗೆ ಖಡಕ್ ಸಂದೇಶ ನೀಡುವ ಈ ಹಾಸ್ಯವುಳ್ಳ ಮೀಮ್ಸ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಅನೇಕರು ಕಾಮೆಂಟ್ ಮಾಡುತ್ತಾ ಶೇರ್ ಮಾಡುತ್ತಿದ್ದಾರೆ.ಇತ್ತೀಚೆಗಷ್ಟೇ ಯುಪಿ ಪೊಲೀಸರು ‘ಕಾಲ್ 112’ ಸೇವೆಯನ್ನು ಶುರು ಮಾಡಿದ್ದರು. ತಡರಾತ್ರಿಯ ಪಾರ್ಟಿಗಳು ನಿಮಗೆ ತೊಂದರೆಯಾಗಿದ್ದರೆ ಕೂಡಲೇ ನೀವು 112 ಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಬಹುದು ಎಂದು ಇಲಾಖೆ ತಿಳಿಸಿತ್ತು.
Published by: MAshok Kumar
First published: February 19, 2021, 4:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories