ಐದು ವರ್ಷಗಳ ಓದು ವ್ಯರ್ಥ; ದಯಾಮರಣ ಕಲ್ಪಿಸಿ ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದ Medical Students

5 ವರ್ಷಗಳ ಕಾಲ ವೈದ್ಯಕೀಯ ಪದವಿ ಮುಗಿಸಿದ್ದೇವೆ. ಈಗ ನಮ್ಮ ಭವಿಷ್ಯ ಡೋಲಾಯಮಾನವಾಗಿದ್ದು, ನಮಗೆ ದಯಾಮರಣ ಕಲ್ಪಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.

ರಾಷ್ಟ್ರಪತಿ ರಮಾನಾಥ್ ಕೋವಿಂದ್

ರಾಷ್ಟ್ರಪತಿ ರಮಾನಾಥ್ ಕೋವಿಂದ್

 • Share this:
  ಉತ್ತರ ಪ್ರದೇಶದ ಸಹರಾನ್‌ಪುರದ (Saharanpur) ವೈದ್ಯಕೀಯ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ram Nath Kovind) ಅವರಿಗೆ ಪತ್ರ ಬರೆದು ದಯಾಮರಣಕ್ಕೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ. ಸಹರಾನ್‌ಪುರದ ಗ್ಲೋಕಲ್ ಮೆಡಿಕಲ್ ಕಾಲೇಜು (Glocal Medical College) 2016 ರಲ್ಲಿ ತನ್ನ ಎಂಬಿಬಿಎಸ್ ಕೋರ್ಸ್ (Medical Course)​​ ಆರಂಭಿಸಿ 66 ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿತು. ಈ ನಡುವೆ ಭಾರತೀಯ ವೈದ್ಯಕೀಯ ಮಂಡಳಿಯು ಮೂರು ತಿಂಗಳ ನಂತರ ಸಂಸ್ಥೆಯನ್ನು ಅಮಾನ್ಯಗೊಳಿಸಿದೆ. ಇದಾದ ಬಳಿಕವೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡದೆ ಕಾಲೇಜು ಆಡಳಿತ ಮಂಡಳಿ ಐದು ವರ್ಷಗಳ ಕಾಲ ಕೋರ್ಸ್ ಮುಂದುವರಿಸಿದೆ. ಈ ವಿಚಾರ ತಿಳಿಯದ ನಾವು ಅಲ್ಲಿಯೇ 5 ವರ್ಷಗಳ ಕಾಲ ವೈದ್ಯಕೀಯ ಪದವಿ ಮುಗಿಸಿದ್ದೇವೆ. ಈಗ ನಮ್ಮ ಭವಿಷ್ಯ ಡೋಲಾಯಮಾನವಾಗಿದ್ದು, ನಮಗೆ ದಯಾಮರಣ ಕಲ್ಪಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.

  ವಿದ್ಯಾರ್ಥಿಗಳ ಬೆಂಬಲಕ್ಕೆ ಇದ್ದೇವೆ ಎಂದ ಕುಲಪತಿ

  66 ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿಗಳು ರಾಷ್ಟ್ರಪತಿ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಗ್ಲೋಕಲ್ ಯೂನಿವರ್ಸಿಟಿ ಉಪಕುಲಪತಿ ಅಕೀಲ್ ಅಹ್ಮದ್, ಎಂಸಿಐ ನಮ್ಮ ಯೂನಿವರ್ಸಿಟಿಯನ್ನು ಅಮಾನ್ಯ ಮಾಡಿತು. ಆದರೆ, ನಾವು ನಮ್ಮ ವಿದ್ಯಾರ್ಥಿಗಳ ಪದವಿ ಪೂರ್ಣಗೊಳಿಸಲಿ ಎಂದುಕೊಂಡೆವು. ಈ ವಿದ್ಯಾರ್ಥಿಗಳ ಮನವಿ ಮೇರೆಗೆ ಎಂಸಿಐ ನಿರಾಕ್ಷೇಪಣಾ ಪತ್ರವನ್ನು ಕೂಡ ರದ್ದುಗೊಳಿಸಿತು. ವಿದ್ಯಾರ್ಥಿಗಳು ಹೈಕೋರ್ಟ್​​ನಲ್ಲಿ ರಿಟ್​ ಅರ್ಜಿ ಸಲ್ಲಿಸಿದರು. ಬಳಿಕ ಸುಪ್ರೀಂಕೋರ್ಟ್​ಗೆ ಹೋದರು. ಅಲ್ಲೆಲ್ಲ ಕಡೆಗಳಲ್ಲೂ ಅರ್ಜಿ ವಜಾಗೊಂಡಿದೆ. ಇಷ್ಟೆಲ್ಲ ಆದರೂ ನಾವು ನಮ್ಮ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದೇವೆ ಎಂದಿದ್ದಾರೆ.

  ಐದು ವರ್ಷಗಳ ಶ್ರಮ ವ್ಯರ್ಥ

  ಇದೀಗ ವಿದ್ಯಾರ್ಥಿಗಳು ಏಕಾಏಕಿ ತಮ್ಮ ವ್ಯಾಸಂಗವನ್ನು ಸ್ಥಗಿತಗೊಳಿಸಿದ್ದರಿಂದ ಕಂಗಾಲಾಗಿದ್ದಾರೆ. ಈ ಹಿನ್ನಲೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ವಿದ್ಯಾರ್ಥಿಗಳು ತಾವು ಅತೃಪ್ತರಾಗಿದ್ದು, ಅಲಹಾಬಾದ್ ಹೈಕೋರ್ಟ್‌ಗೆ ಹೋಗುವುದು ಸೇರಿದಂತೆ ಎಲ್ಲಾ ಕಾರ್ಯಸಾಧ್ಯವಾದ ಪಯತ್ನ ನಡೆಸಿದ್ದೇವು. ಆದರೆ ಯಾವುದೇ ಉಪಯೋಗ ವಾಗಿಲ್ಲ. ಹಲವು ಕನಸನ್ನು ಹೊತ್ತು ಐದು ವರ್ಷಗಳ ಕಾಲ ಹಗಲು ರಾತ್ರಿ ಓದಿ ವೈದ್ಯಕೀಯ ಪದವಿ ಪಡೆದಿದ್ದು ವ್ಯರ್ಥವಾಗಿದೆ. ನಮಗೆ ಈಗ ಯಾವುದೇ ಭರವಸೆ ಇಲ್ಲ. ತಮ್ಮ ಜೀವನವನ್ನು ಕೊನೆಗೊಳಿಸಲು ಬಯಸುತ್ತೇವೆ. ಇದಕ್ಕೆ ದಯಾ ಮರಣಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.

  ಕಳಪೆ ಮೂಲ ಸೌಕರ್ಯದಿಂದ ಅಮಾನ್ಯಗೊಂಡ ಕಾಲೇಜು

  ಗ್ಲೋಕಲ್ ಮೆಡಿಕಲ್ ಕಾಲೇಜ್ ಅನ್ನು ಅದರ ಕಳಪೆ ಮೂಲಸೌಕರ್ಯದಿಂದಾಗಿ ಮೆಡಿಕಲ್​ ಕೌನ್ಸಿಲ್​ ಆಫ್​ ಇಂಡಿಯಾ ಅಮಾನ್ಯ ಮಾಡಿದೆ. ಸೆಪ್ಟೆಂಬರ್ 2020 ರಲ್ಲಿ, ಯುಪಿ ಸರ್ಕಾರವು ಈ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳುನ್ನು ಇತರ ಕಾಲೇಜುಗಳಿಗೆ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ವರ್ಗಾಯಿಸಲು ಕೇಂದ್ರ ಆರೋಗ್ಯ ಸಚಿವಾಲಯದಿಂದ ನಿರ್ದೇಶನಗಳನ್ನು ಕೋರಿತ್ತು.

  ಇದನ್ನು ಓದಿ: ನಾನು ಹೇಮಮಾಲಿನಿಯಂತೆ ಆಗಬೇಕಿಲ್ಲ; ವಿವಾದ ಮೂಡಿಸಿದ ಜಯಂತ್​ ಚೌಧರಿ

  ಏನಿದು ದಯಾ ಮರಣ
  ದಯಾಮರಣ ಅಥವಾ ಕರುಣೆ-ಕೊಲ್ಲುವಿಕೆ ಎಂಬುದು ನೋವು ಇಲ್ಲದೆ ಇಚ್ಛೆಯಿಂದ ಸಾಯಲು ಬಯಸುವ ವ್ಯಕ್ತಿಯನ್ನು ಕೊಲ್ಲುವ ಮಾರ್ಗವಾಗಿದೆ. ಈ ಪದ್ಧತಿಯನ್ನು ಹೆಚ್ಚಿನ ದೇಶಗಳಲ್ಲಿ ಇದನ್ನು ನಿಷೇಧಿಸಲಾಗಿದೆ.

  ಇದನ್ನು ಓದಿ: 12 ಜನರಿಂದ ಅತ್ಯಾಚಾರ: ಆರೋಪಿಗಳ ಬದಲು ಸಂತ್ರಸ್ತೆಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

  ಭಾರತದಲ್ಲಿ ಮಾರ್ಚ್ 9, 2018 ರಂದು, ಸುಪ್ರೀಂ ಕೋರ್ಟ್ ದೇಶದಲ್ಲಿ ಈ ನಿಷ್ಕ್ರಿಯ ದಯಾಮರಣವನ್ನು ಅನುಮತಿಸುವ ಸಂಬಂಧ ಮಹತ್ವದ ಆದೇಶ ನೀಡಿತು.
  ಜೀವಂತವಾಗಿ ಇರಲು ಇಚ್ಛಿಸದ ವ್ಯಕ್ತಿಯು ಕೋಮಾವಸ್ಥೆಯಲ್ಲಿ ನರಳಬಾರದು. ಜೀವನದ ಹಕ್ಕು ಎಂದರೆ ಅದರಲ್ಲಿ ಚಿಕಿತ್ಸೆ ನಿರಾಕರಣೆ ಹಾಗೂ ಗೌರವದಿಂದ ಮರಣ ಅಪ್ಪುವುದು ಕೂಡ ಇರುತ್ತದೆ. ಪರೋಕ್ಷ ದಯಾಮರಣ ಹಾಗೂ ಜೀವಂತ ಉಯಿಲುಗಳು ಅನುಜ್ಞಾರ್ಹ ಎಂದು ನ್ಯಾಯಾಲಯ ತಿಳಿಸಿತು. ಈ ವಿಷಯವನ್ನು ಪರಿಹರಿಸಲು ಶಾಸನಗಳನ್ನು ಪರಿಚಯಿಸುವವರೆಗೆ ಅದರ ನಿಯಮಗಳು ಮತ್ತು ಸೂಚನೆಗಳು ಜಾರಿಯಲ್ಲಿರುತ್ತವೆ ಎಂದು ನ್ಯಾಯಾಲಯ ತಿಳಿಸಿದೆ.
  Published by:Seema R
  First published: